ಹತ್ಯೆಯಾದ ಸುಹಾಸ್‍ ಶೆಟ್ಟಿ ಮನೆಗೆ ಬಿ.ವೈ.ವಿಜಯೇಂದ್ರ, ಆರ್.ಅಶೋಕ್‍ ಭೇಟಿ | 25 ಲಕ್ಷ ರೂ. ಪರಿಹಾರ ಘೋಷಣೆ

ಮಂಗಳೂರು: ಬಜ್ಜೆಯಲ್ಲಿ ಕೊಲೆಯಾದ ರೌಡಿ ಶೀಟರ್ ಸುಹಾಶ್ ಶೆಟ್ಟಿ ಮನೆಗೆ ಶುಕ್ರವಾರ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಹಾಸ್ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಖಂಡನಾರ್ಹ. ಬಿಜೆಪಿಯು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುಹಾಸ್ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ಇಲ್ಲದಿರುವುದು ಪೊಲೀಸರ ವೈಫಲ್ಯ, […]

ಹತ್ಯೆಯಾದ ಸುಹಾಸ್‍ ಶೆಟ್ಟಿ ಮನೆಗೆ ಬಿ.ವೈ.ವಿಜಯೇಂದ್ರ, ಆರ್.ಅಶೋಕ್‍ ಭೇಟಿ | 25 ಲಕ್ಷ ರೂ. ಪರಿಹಾರ ಘೋಷಣೆ Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ ಮತ್ತು 16 ಡಿಸ್ಟಿಂಕ್ಷನ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 41 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು: ಸೃಜನ್.ಕೆ-618 (ಸುಧೀರ್ ಕೆ ಮತ್ತು ಸುಪ್ರಿಯ ಇವರ ಪುತ್ರ),  ಹೆಚ್.ಎಸ್.ಶ್ರುತ ಜೈನ್-617 (ಹೆಚ್ ಶ್ರೇಯಾಂಸ ಕುಮಾರ್ ಇಂದ್ರ ಮತ್ತು ಶ್ವೇತ ಬಿ ಎಸ್ ಇವರ ಪುತ್ರಿ), ಎಂ.ವೈಷ್ಣವಿ-616 (ಲಕ್ಷ್ಮೀಶ ಮತ್ತು ರಾಧಿಕ

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶ ಮತ್ತು 16 ಡಿಸ್ಟಿಂಕ್ಷನ್ Read More »

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಗೆ ನೂರು ಶೇಕಡಾ ಫಲಿತಾಂಶ

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು 2025 ಮಾರ್ಚ ನಲ್ಲಿ ಜರಗಿದ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳು  ಉತ್ತೀರ್ಣರಾಗಿ ನೂರು ಶೇಕಡ ಫಲಿತಾಂಶ ಬಂದಿರುತ್ತದೆ. ಸಂಸ್ಥೆಯ ಪರಮ ಪೋಷಕರಾದ ಪೂಜ್ಯ  ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಸೂರ್ಯ ಕುಮಾರ್ ಹಳೆಯಂಗಡಿ, ಕಾರ್ಯದರ್ಶಿ ಗುರುರಾಜ ಕೆ ಮಂಗಳೂರು ಮತ್ತು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಗೆ ನೂರು ಶೇಕಡಾ ಫಲಿತಾಂಶ Read More »

ಹಿಂದೂತ್ವವೇ ನನ್ನ ಸರ್ವಸ್ವ ಎಂದವನ ಉಸಿರು ನಿಲ್ಲಿಸಿದರು | ಸಹಾಸ್‍ ಶೆಟ್ಟಿ ತಾಯಿ ಸುಲೋಚನಾ

ನನ್ನ ಮಗ ಹಿಂದುತ್ವವನ್ನೇ ಉಸಿರಾಗಿಸಿಕೊಂಡು ಹಿಂದೂಗಳನ್ನು ಒಗ್ಗೂಡಿಸಿದ್ದ.  ಸದಾ ಹಿಂದುತ್ವವೇ ನನ್ನ ಉಸಿರು ಎನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಹತ್ಯೆಯಾದ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ನಿನ್ನೆ ನಾವೆಲ್ಲರೂ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದವು. ಇಲ್ಲದಿದ್ದರೆ ಪ್ರತಿದಿನದಂತೆ ನಿನ್ನೆಯೂ ಆತನಿಗೆ ಕರೆ ಮಾಡಬೇಕಿತ್ತು. ನಿನ್ನೆ ಮದುವೆ ಕೆಲಸದಲ್ಲಿ ಅವನಿಗೆ ಕರೆ ಮಾಡಲಾಗಲಿಲ್ಲ ಎಂದು ಅವರು ಹೇಳುತ್ತಾರೆ. ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಿಬೇಕು, ಇನ್ನೊಮ್ಮೆ ಇಂಥಾ ಘಟನೆಗಳು ನಡೆಯಬಾರದು ಎಂದು ಸುಹಾಸ್ ಶೆಟ್ಟಿ ತಾಯಿ

ಹಿಂದೂತ್ವವೇ ನನ್ನ ಸರ್ವಸ್ವ ಎಂದವನ ಉಸಿರು ನಿಲ್ಲಿಸಿದರು | ಸಹಾಸ್‍ ಶೆಟ್ಟಿ ತಾಯಿ ಸುಲೋಚನಾ Read More »

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ

ಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಇಡಿಯ ದೇಶದಲ್ಲೇ ನಡೆಸಲು ಉದ್ದೇಶಿಸಲಾಗಿರುವ ಹಿಂದೂ ಧರ್ಮ ಶಿಕ್ಷಣ ವ್ಯವಸ್ಥೆ ಮೊದಲು ಪುತ್ತೂರಿನಲ್ಲಿ ಜಾರಿಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಮಹೋನ್ನತ ಹಾಗೂ ಐತಿಹಾಸಿಕ ಘಟನೆಗೆ ಪುತ್ತೂರಿನ ನಾಗರಿಕ ಸಮಾಜ ಸಾಕ್ಷಿಯಾಗುತ್ತಿದೆ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಹೇಳಿದರು. ಅವರು ನಗರದ ತೆಂಕಿಲದಲ್ಲಿರುವ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಬ್ಬರ ಕೊಲೆಗೆ ಯತ್ನ

ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಯುವಕರು ಉಡುಪಿ: ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆದ ಬೆನ್ನಲ್ಲೇ ಉಡುಪಿ ಸಮೀಪ ಆತ್ರಾಡಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಅಬೂಬಕ್ಕರ್ ಹಲ್ಲೆಗೊಳಗಾದ ಮುಸ್ಲಿಂ ಯುವಕ. ಹಿರಿಯಡಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಮದು ಪೊಲೀಸರು ತಿಳಿಸಿದ್ದಾರೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿ ಬಂಧಿತ ಆರೋಪಿಗಳು. ನಿನ್ನೆ

ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಬ್ಬರ ಕೊಲೆಗೆ ಯತ್ನ Read More »

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆಗೆ ಒತ್ತಾಯಿಸಿ ಅಮಿತ್ ಶಾ ಗೆ ಪತ್ರ ಬರೆದ ಬ್ರಿಜೇಶ್ ಚೌಟ

ನಮ್ಮ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಭೀಕರ ಸಾರ್ವಜನಿಕ ಹತ್ಯೆಯು ಮತ್ತೊಮ್ಮೆ ಕರಾವಳಿಗರ ಹೃದಯದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ಆಘಾತ ಸೃಷ್ಟಿಸಿದೆ. ಇಂತಹ ನೋವು ಮೊದಲನೆಯದಲ್ಲ, ಹೊಸತೂ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಮ್ಮ ಭಾಗದ ಹಿಂದೂ ಕಾರ್ಯಕರ್ತರ ಗುರಿಯಾಗಿ ಹತ್ಯೆಗಳ ಪ್ರವೃತ್ತಿ ಹೆಚ್ಚಾಗುತ್ತವೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಗುರಿ ಇಟ್ಟು ನಡೆಸಿದ ಹತ್ಯೆಯ ರೀತಿಯಲ್ಲಿಯೇ ಈ ಘಟನೆಯು ನಡೆದಿದೆ. ಈ ರೀತಿಯ ಹತ್ಯೆಯು ಈ ಪ್ರದೇಶದಲ್ಲಿ ಪಿಎಫ್‌ಐ ನಂತಹ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆಗೆ ಒತ್ತಾಯಿಸಿ ಅಮಿತ್ ಶಾ ಗೆ ಪತ್ರ ಬರೆದ ಬ್ರಿಜೇಶ್ ಚೌಟ Read More »

ಸುಹಾಸ್‍ ಹತ್ಯೆ ಖಂಡಿಸಿ ಕಡಬದಲ್ಲಿ ಬೃಹತ್‍ ಪ್ರತಿಭಟನೆ | ಟಯರ್ ಹೊತ್ತಿಸಿ, ರಸ್ತೆಯಲ್ಲಿ ಕುಳಿತು ಪ್ರತಿಭಟನೆ

ಕಡಬ: ಸುಹಾಸ್‍ ಶೆಟ್ಟಿ ಹತ್ಯೆ ಖಂಡಿಸಿ ಕಡಬದಲ್ಲಿ ಬೃಹತ್‍ ಪ್ರತಿಭಟನೆ ಇಂದು ನಡೆದಿದೆ. ಬೆಳಿಗ್ಗೆ ರಸ್ತೆಯಲ್ಲಿ ಕುಳಿತು, ಟಯರ್‍ ಗಳಿಗೆ ಬೆಂಕಿ ಹತ್ತಿಸಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳು ಕೂಗಿದರು. ಈ ಸಂದರ್ಭದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಡಬ ಪೇಟೆಯಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‍ ಮಾಡಿದ್ದು, ಸಂಪೂರ್ಣ ಬಂದ್‍ ಆಗಿತ್ತು.

ಸುಹಾಸ್‍ ಹತ್ಯೆ ಖಂಡಿಸಿ ಕಡಬದಲ್ಲಿ ಬೃಹತ್‍ ಪ್ರತಿಭಟನೆ | ಟಯರ್ ಹೊತ್ತಿಸಿ, ರಸ್ತೆಯಲ್ಲಿ ಕುಳಿತು ಪ್ರತಿಭಟನೆ Read More »

ಎಸ್‌ಎಸ್‌ಎಲ್‌ಸಿ ಫಲಿತಾಂಶ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ

ಶೇ.62.34 ಮಕ್ಕಳು ತೇರ್ಗಡೆ; ಬಾಲಕಿಯರೇ ಮುಂದು ಬೆಂಗಳೂರು: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಶೇ.62.34 ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆ (91.12%) ಮೊದಲ ಸ್ಥಾನ ಗಳಿಸಿದೆ. ಉಡುಪಿ (89.96%) ಎರಡನೇ ಸ್ಥಾನ ಪಡೆದರೆ, ಉತ್ತರಕನ್ನಡ (83.19%) ಮೂರನೇ ಸ್ಥಾನ ಪಡೆದಿದೆ. ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ.22 ವಿದ್ಯಾರ್ಥಿಗಳು 625/625 ಅಂಕಗಳನ್ನು ಪಡೆದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ

ಎಸ್‌ಎಸ್‌ಎಲ್‌ಸಿ ಫಲಿತಾಂಶ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ Read More »

ಮಂಗಳೂರಿನಲ್ಲಿ ಮೇ 6ರ ತನಕ ನಿಷೇಧಾಜ್ಞೆ : ನಗರ ಸಂಪೂರ್ಣ ಸ್ತಬ್ಧ

ಕೆಲವು ಬಸ್‌ಗಳಿಗೆ ಕಲ್ಲುತೂರಾಟ; ಅಂಗಡಿ ಹೋಟೆಲ್‌ಗಳು ಬಂದ್‌ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಅನುಸರಿಸಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ತಕ್ಷಣದಿಂದಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಆದೇಶ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದ್ದು, ಮೇ 6 ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಈ ನಿಷೇಧಾಜ್ಞೆಯನ್ನು ತಕ್ಷಣದಿಂದಲೇ ಜಾರಿಗೆ

ಮಂಗಳೂರಿನಲ್ಲಿ ಮೇ 6ರ ತನಕ ನಿಷೇಧಾಜ್ಞೆ : ನಗರ ಸಂಪೂರ್ಣ ಸ್ತಬ್ಧ Read More »

error: Content is protected !!
Scroll to Top