ಪುತ್ತೂರಿನ ಬಂದ್ ಮಾಡದ ಅಂಗಡಿಗಳ ವಿರುದ್ಧ ಹಿಂದೂ ಸಂಘಟನೆಗಳಿಂದ ಆಕ್ರೋಶ | ಪುತ್ತೂರು ಬಸ್‍ ನಿಲ್ದಾಣದ ಬಳಿ ಜಮಾಯಿಸಿದ ಹಿಂದೂ ಸಂಘಟನೆಗಳು

ಪುತ್ತೂರು: ಸುಹಾಸ್‍ ಶೆಟ್ಟಿ ಹತ್ಯೆ  ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಗೆ ಕರೆ ನೀಡಿದರೂ ಶುಕ್ರವಾರ ಪುತ್ತೂರಿನಲ್ಲಿ ಕೆಲವು ಅಂಗಡಿಗಳು ಬಂದ್‍ ಮಾಡದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು, ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ನಡೆದಿದೆ. 11 ಗಂಟೆ ಸುಮಾರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ, ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ಧ ಎಂದರು. ಮುರಳೀಕೃಷ್ಣ ಹಸಂತ್ತಡ್ಕ […]

ಪುತ್ತೂರಿನ ಬಂದ್ ಮಾಡದ ಅಂಗಡಿಗಳ ವಿರುದ್ಧ ಹಿಂದೂ ಸಂಘಟನೆಗಳಿಂದ ಆಕ್ರೋಶ | ಪುತ್ತೂರು ಬಸ್‍ ನಿಲ್ದಾಣದ ಬಳಿ ಜಮಾಯಿಸಿದ ಹಿಂದೂ ಸಂಘಟನೆಗಳು Read More »

ಸುಹಾಸ್‍ ಶೆಟ್ಟಿ ಹತ್ಯೆ ಹಿನ್ನಲೆ : ವಿಟ್ಲ ಸಂಪೂರ್ಣ ಬಂದ್

ವಿಟ್ಲ: ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್‍ ನೀಡಿ ಬಂದ್‍ ಕರೆಗೆ ವಿಟ್ಲ, ಮಾಣಿ ಸೂರಿಕುಮೇರು ನೇರಳಕಟ್ಟೆ ಸಹಿತವ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆ ವಿಟ್ಲ ದಲ್ಲಿ ಕೇರಳ ರಾಜ್ಯದ ಮತ್ತು ಕರ್ನಾಟಕದ ಕೆಎಸ್ ಆರ್ ಟಿ ಸಿ ಬಸ್ ಗಳ ಸಂಚಾರ ಮಾಡಿತ್ತು. ಬಳಿಕ ಸಂಚಾರ ಸಂಚಾರ ಸ್ಥಗಿತಗೊಳಿಸಿದೆ. ಖಾಸಗಿ ಬಸ್ ಗಳು ಬೆಳಿಗ್ಗೆನಿಂದಲೇ ರಸ್ತೆಗೆ ಇಳಿಯಲಿಲ್ಲ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಹಾಲಿನ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ

ಸುಹಾಸ್‍ ಶೆಟ್ಟಿ ಹತ್ಯೆ ಹಿನ್ನಲೆ : ವಿಟ್ಲ ಸಂಪೂರ್ಣ ಬಂದ್ Read More »

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ವಿಎಚ್‍ ಪಿ ಬಂದ್‍ ಕರೆಗೆ ಪುತ್ತೂರಿನಲ್ಲಿ ವ್ಯಾಪಕ ಬೆಂಬಲ

ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷದ್ ಕರೆ ನೀಡಿದ ಬಂದ್‍ ಗೆ ಪುತ್ತೂರಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್‍ ಕರೆ ನೀಡಿದ ಬೆನ್ನಲ್ಲೇ ಪುತ್ತೂರಿನ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ನ್ಯೂಸ್‍ ಪೇಪರ್‍ ಏಜೆನ್ಸಿ,ಹಾಲು, ಮೆಡಿಕಲ್‍, ಆಸ್ಪತ್ರೆ ಇನ್ನಿತರ ಪ್ರಮುಖ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಹೊಟೇಲ್ ಗಳು ಅರ್ಧ ತೆರೆದಿದ್ದಿರುವುದು ಕಂಡು ಬಂದಿದೆ. ಆಟೋ, ಕಾರು ಮುಂತಾದ ಖಾಸಗಿ ವಾಹನಗಳ ಓಡಾಟ ನಡೆಸುತ್ತಿದ್ದವು.

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ವಿಎಚ್‍ ಪಿ ಬಂದ್‍ ಕರೆಗೆ ಪುತ್ತೂರಿನಲ್ಲಿ ವ್ಯಾಪಕ ಬೆಂಬಲ Read More »

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ಬಂಟ್ವಾಳದಲ್ಲಿ ಅಂತ್ಯಕ್ರಿಯೆಗೆ ತಯಾರಿ

ಮಂಗಳೂರು: ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಿದ್ದು, ಅವರ ಅಂತ್ಯಕ್ರಿಯೆ ಬಂಟ್ವಾಳದಲ್ಲಿ ನಡೆಯಲಿದೆ. ಸುಹಾಸ್ ಶೆಟ್ಟಿ ಅವರ ಮೃತದೇಹ ಮೆರವಣಿಗೆ ಮೂಲಕ ತರಲಾಗುತ್ತಿದ್ದು, ಬಂಟ್ವಾಳ ದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹತ್ಯೆ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಶುಕ್ರವಾರ ದ.ಕ.ಜಿಲ್ಲಾದ್ಯಂತ ಬಂದ್‍ ಗೆ ಕರೆ ನೀಡಿದೆ. ಇಂದು ಬೆಳಿಗ್ಗೆ ಬಂದ್‍ ಗೆ ಕರೆ ನೀಡುತ್ತಿದ್ದಂತೆ ಮಂಗಳೂರಿನಲ್ಲಿ ಕೆಲವು ಬಸ್‍ ಗಳಿಗೆ ಕಲ್ಲು ತೂರಾಟ ನಡೆದ ಘಟನೆಯೂ ನಡೆಯಿತು.

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ಬಂಟ್ವಾಳದಲ್ಲಿ ಅಂತ್ಯಕ್ರಿಯೆಗೆ ತಯಾರಿ Read More »

ದೆಹಲಿಯಲ್ಲಿ ಭಾರಿ ಮಳೆಗೆ ಹಲವು ಅನಾಹುತ : ನಾಲ್ವರು ಸಾವು

100ಕ್ಕೂ ಹೆಚ್ಚು ವಿಮಾನಗಳು ವಿಳಂಬ, 40 ವಿಮಾನಗಳ ಮಾರ್ಗ ಬದಲು ನವದೆಹಲಿ: ರಾಜಧಾನಿ ದೆಹಲಿ ಎನ್​ಸಿಆರ್​ನಲ್ಲಿ ಇಂದು ಬೆಳಗ್ಗಿನಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಅನೇಕೆ ಅನಾಹುತಗಳು ಸೃಷ್ಟಿಯಾಗಿವೆ. ನಜಾಫ್‌ಗಢ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ. ದೆಹಲಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಚಾರ ವ್ಯವಸ್ಥೆಯನ್ನೂ ಮಳೆ

ದೆಹಲಿಯಲ್ಲಿ ಭಾರಿ ಮಳೆಗೆ ಹಲವು ಅನಾಹುತ : ನಾಲ್ವರು ಸಾವು Read More »

ಮಂಗಳೂರಿನಲ್ಲಿ ಅಹಿತಕರ ಘಟನೆ | ಮೇ 5 ರ ತನಕ ದ.ಕ. ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ

ಮಂಗಳೂರು: ಗುರುವಾರ ಸಂಜೆ ಮಂಗಳೂರಿನ ಬಜ್ಪೆ ಪರಿಸರ ಹಾಗೂ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೇ 5 ರ ತನಕ ನಿಷೇದಾಜ್ಞೆ ಜಾರಿ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿರುತ್ತಾರೆ. ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆಯಾದ ಬೆನ್ನಲ್ಲೆ ಉಳ್ಳಾಲದಲ್ಲಿ ಗುಂಪೊಂದು ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿತ್ತು. ಈ ಎರಡು ಪ್ರಕರಣದ ನಡೆದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಾಗಿ ನಿಷೇದಾಜ್ಞೆ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನಲ್ಲಿ ಅಹಿತಕರ ಘಟನೆ | ಮೇ 5 ರ ತನಕ ದ.ಕ. ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ Read More »

ಆರೋಪಿಗಳ ಸುಳಿವು ಪತ್ತೆ, ಕಾರುಗಳು ವಶ : ಎಡಿಜಿಪಿ ಆರ್.ಹಿತೇಂದ್ರ ಮಾಹಿತಿ

ತನಿಖೆಗೆ ವಿಶೇಷ ತಂಡ ರಚನೆ; ಶಾಂತಿ ಕಾಪಾಡಲು ಮನವಿ ಮಂಗಳೂರು: ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಪರಾರಿಯಾದ ಆರೋಪಿಗಳು ಯಾರು ಎಂದು ನಮಗೆ ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡುತ್ತೇವೆ. ಆರೋಪಿಗಳ ಸುಳಿವನ್ನು ಈಗಾಗಲೇ ಪತ್ತೆ ಹಚ್ಚಿಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಹಿತೇಂದ್ರ ಹೇಳಿದ್ದಾರೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇನ್ನು

ಆರೋಪಿಗಳ ಸುಳಿವು ಪತ್ತೆ, ಕಾರುಗಳು ವಶ : ಎಡಿಜಿಪಿ ಆರ್.ಹಿತೇಂದ್ರ ಮಾಹಿತಿ Read More »

ಮಾರ್ಚ್‌ನಲ್ಲೇ ಸುಹಾಸ್‌ ಶೆಟ್ಟಿ ಹತ್ಯೆಗೆ ಸ್ಕೆಚ್‌ : ಇನ್‌ಸ್ಟಾಗ್ರಾಂ ಪೋಸ್ಟರ್‌ನಿಂದ ಹುಟ್ಟಿದ ಅನುಮಾನ

ಹಂತಕರಿಗೆ ತಪ್ಪಿಸಿಕೊಳ್ಳಲು ಬುರ್ಖಾಧಾರಿ ಮಹಿಳೆಯರ ಸಹಾಯ? ಮಂಗಳೂರು: ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನಿಶ್’ ಅಂತ ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್​ ಆಗಿದ್ದು, ಸದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್‌ ಹಾಕಲಾಗಿತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅಂದೇ ಟಾರ್ಗೆಟ್ ಕಿಲ್ಲರ್-03 ಎಂಬ ಇನ್‌ಸ್ಟಾಗ್ರಾಂ

ಮಾರ್ಚ್‌ನಲ್ಲೇ ಸುಹಾಸ್‌ ಶೆಟ್ಟಿ ಹತ್ಯೆಗೆ ಸ್ಕೆಚ್‌ : ಇನ್‌ಸ್ಟಾಗ್ರಾಂ ಪೋಸ್ಟರ್‌ನಿಂದ ಹುಟ್ಟಿದ ಅನುಮಾನ Read More »

ಮಂಗಳೂರು: ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ

ಉಳ್ಳಾಲ: ನಿನ್ನೆ ರಾತ್ರಿ ಬಜಪೆ ಸಮೀಪ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯನ್ನು ಸಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರು ಧಗಧಗಿಸುತ್ತಿರುವಾಗಲೇ ಸಮೀಪದ ಉಳ್ಳಾಲದಲ್ಲಿ ಇನ್ನೊಂದು ಮರಣಾಂತಿಕ ಹಲ್ಲೆ ಸಂಭವಿಸಿದೆ. ಯುವಕನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಪರಿಣಾಮ ಆತನಿಗೆ ಗಂಭೀರವಾದ ಗಾಯವಾಗಿದೆ. ಈ ಘಟನೆ ತೊಕ್ಕೊಟ್ಟು ಒಳಪೇಟೆ ಬಳಿ ನಡೆದಿರುವುದು ವರದಿಯಾಗಿದೆ. ಗಾಯಗೊಂಡವನನ್ನು ಅಳೇಕಲ ನಿವಾಸಿ ಫೈಝಲ್ ಎಂದು ಗುರುತಿಸಲಾಗಿದೆ. ಫೈಝಲ್ ಕಲ್ಲಾಪು ಮಾರುಕಟ್ಟೆಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಗಳೂರು: ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ Read More »

ಎರಡು ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ : ಎಸ್‌ಎಂಎಸ್‌ನಲ್ಲೂ ಸಿಗುತ್ತದೆ ರಿಸಲ್ಟ್‌

ಅಧಿಕೃತ ವೆಬ್‌ಸೈಟ್‌ https://kseab.karnataka.gov.in ಅಥವಾ https://karresults.nic.in ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್ಎಸ್​​ಎಲ್​ಸಿ ಪರೀಕ್ಷೆ ವಿದ್ಯಾರ್ಥಿಗಳು ಫಲಿತಾಂಶವನ್ನು ಇಂದು ಮಧ್ಯಾಹ್ನ ಪ್ರಕಟಿಸಲಿದ್ದು, ಮಧ್ಯಾಹ್ನ 12.30ರ ಬಳಿಕ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಣೆಗೆ ಸಿಗುತ್ತದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ ಲಭ್ಯವಾಗಲಿದೆ. http://karresults.nic.in ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿದೆ. 8,96,447 ವಿದ್ಯಾರ್ಥಿಗಳು

ಎರಡು ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ : ಎಸ್‌ಎಂಎಸ್‌ನಲ್ಲೂ ಸಿಗುತ್ತದೆ ರಿಸಲ್ಟ್‌ Read More »

error: Content is protected !!
Scroll to Top