ತೆಕ್ಕಟ್ಟೆಯಲ್ಲಿ ತಂದೆ, ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ | ಸ್ಥಳೀಯರಿಂದ ತಾಯಿಯ ರಕ್ಷಣೆ

ಉಡುಪಿ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆಯನ್ನು ರಕ್ಷಿಸಿದ ಘಟನೆ ತೆಕಟ್ಟೆಯಲ್ಲಿ ಇಂದು ಮುಂಜಾನೆ ನಡೆದಿದೆ. ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಅಗ್ನಿಶಾಮಕ ದಳ ಪೊಲೀಸರು ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿ ಶವವನ್ನು ಮೇಲೆತ್ತಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ತೆಕ್ಕಟ್ಟೆಯಲ್ಲಿ ತಂದೆ, ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ | ಸ್ಥಳೀಯರಿಂದ ತಾಯಿಯ ರಕ್ಷಣೆ Read More »

ಮಣಿಪುರ : 10 ಉಗ್ರರು ಎನ್‌ಕೌಂಟರ್‌ನಲ್ಲಿ ಸಾವು

ಅಪಾರ ಶಸ್ತ್ರಾಸ್ತ್ರ ವಶ; ಮುಂದುವರಿದ ಕಾರ್ಯಾಚರಣೆ ಇಂಫಾಲ: ಮಣಿಪುರದ ಚಾಂದೆಲ್‌ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಘಟಕದ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 10 ಉಗ್ರರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಾಂದೆಲ್ ಜಿಲ್ಲೆಯ ಖೆಂಗ್‌ಜಾಯ್ ತಹಸಿಲ್‌ನ ನ್ಯೂ ಸಮ್ತಾಲ್ ಗ್ರಾಮದ ಬಳಿ ಸಶಸ್ತ್ರ ಹೊಂದಿದ್ದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಸ್ಪಿಯರ್ ಕಾರ್ಪ್ಸ್ ಅಡಿಯಲ್ಲಿ ಅಸ್ಸಾಂ ರೈಫಲ್ಸ್ ಘಟಕ ಮೇ 14ರಂದು

ಮಣಿಪುರ : 10 ಉಗ್ರರು ಎನ್‌ಕೌಂಟರ್‌ನಲ್ಲಿ ಸಾವು Read More »

ಇನ್ನೋರ್ವ ಉಗ್ರನ ಬಲಿ : ನಸುಕಿನ ಹೊತ್ತು ನಡೆದ ಎನ್‌ಕೌಂಟರ್‌

ಮೂವರು ಭಯೋತ್ಪಾದಕರ ಬೇಟೆಗೆ ತೀವ್ರ ಕಾರ್ಯಾಚರಣೆ ಶ್ರೀನಗರ : ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಇನ್ನೋರ್ವ ಉಗ್ರನನ್ನು ಬೇಟೆಯಾಡಿವೆ. ಗುರುವಾರ ನಸುಕಿನ ಹೊತ್ತು ನಡೆದ ಗುಂಡಿನ ಕಾಳದಗದಲ್ಲಿ ಓರ್ವ ಉಗ್ರ ಸತ್ತಿದ್ದು, ಹೋರಾಟ ನಡೆಯುತ್ತಿದೆ. ಪುಲ್ವಾಮ ಜಿಲ್ಲೆಯ ತ್ರಾಲ್‌ನ ನಾದಿರ್‌ ಎಂಬಲ್ಲಿ ಎನ್‌ಕೌಂಟರ್‌ ನಡೆಯುತ್ತಿದೆ. ಜೈಶ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಮೂವರು ಉಗ್ರರು ಇಲ್ಲಿ ಅಡಗಿರುವ ಮಾಹಿತಿ ಸಿಕ್ಕಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಓರ್ವ ಸತ್ತಿದ್ದು, ಇನ್ನಿಬ್ಬರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಇನ್ನೋರ್ವ ಉಗ್ರನ ಬಲಿ : ನಸುಕಿನ ಹೊತ್ತು ನಡೆದ ಎನ್‌ಕೌಂಟರ್‌ Read More »

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳ ಬಂಧನ

ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳು ಮಂಗಳೂರು: ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಕಳವಾರು ನಿವಾಸಿ ಅಜರುದ್ದೀನ್ ಅಲಿಯಾಸ್​ ಅಜರ್ ಅಲಿಯಾಸ್​ ಅಜ್ಜು(29), ಬಜಪೆ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್​ ನೌಫಲ್(24), ವಾಮಂಜೂರು ನಿವಾಸಿ ನೌಷದ್ ಅಲಿಯಾಸ್​ ವಾಮಂಜೂರು ನೌಷದ್ ಅಲಿಯಾಸ್​ ಚೊಟ್ಟೆ ನೌಷದ್(39) ಬಂಧಿತರು. ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ ಮೂರು ಕಳವು

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳ ಬಂಧನ Read More »

ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

ಪುತ್ತೂರು: ಪಡೀಲ್‌ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ ನ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ತಿಳಿದು ಬಂದಿದೆ. ಪುತ್ತೂರು ಪಡೀಲ್‌ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ ನಲ್ಲಿ ಅಡುಗೆ ತಯಾರಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಲ್ಲಡ್ಕ ಸಮೀಪದ ಬಾಳಿಲ ಗ್ರಾಮದ ಪೂರ್ಲಿಪ್ಪಾಡಿ ನಿವಾಸಿ ಪದ್ಮನಾಭ(42ವ) ಎಂಬವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.   ಮೃತರು ಮೇ.13ರಂದು ಕಲ್ಲಡ್ಕ ಸಮೀಪ ಪೂರ್ಲಿಪ್ಪಾಡಿ ಮನೆಗೆ ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು. ಮೇ.14ರಂದು ಮನೆಗೆ

ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ Read More »

ಹೋಟೆಲ್ ಪಾರ್ಕಿಂಗ್’ಗೆ ಪೊಲೀಸ್ ಬ್ಯಾರಿಕೇಡ್

ಪುತ್ತೂರು: ಪುತ್ತೂರು ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ  ಹೋಟೆಲ್‍ ಪಾರ್ಕಿಂಗಿಗೆ ಪೊಲೀಸ್‍ ಬ್ಯಾರಿಕೇಡ್‍ ಇಡಲಾಗಿದೆ. ಪೊಲೀಸ್ ಬ್ಯಾರಿಕೇಡ್ ಇಟ್ಟಿರುವುದು ಇದೀಗ ಚರ್ಚೆಗೆ ದಾರಿ ಮಾಡಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಪೊಲೀಸ್ ಬ್ಯಾರಿಕೇಡ್ ಬಳಕೆಯಾಗುವುದು ಎಲ್ಲಿ? ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕ ಬಳಕೆಗಾಗಿ. ಆದರೆ ಇಲ್ಲಿ ಖಾಸಗಿ ಸಂಸ್ಥೆಯೊಂದರ ಪಾರ್ಕಿಂಗ್’ಗೆ ಬ್ಯಾರಿಕೇಡ್ ಬಳಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಇಲಾಖೆಯೇ ಈ ಬ್ಯಾರಿಕೇಡ್ ಇಟ್ಟಿದೆಯೋ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೇ ಈ ಬ್ಯಾರಿಕೇಡ್

ಹೋಟೆಲ್ ಪಾರ್ಕಿಂಗ್’ಗೆ ಪೊಲೀಸ್ ಬ್ಯಾರಿಕೇಡ್ Read More »

ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ ಎನ್. ಗುಲಾಬಿ ಶೆಟ್ಟಿ ಕಂಪ ನಿಧನ

ಪುತ್ತೂರು: ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕಿಯಾದ ಎನ್. ಗುಲಾಬಿ ಶೆಟ್ಟಿ ಕಂಪ ಅನಾರೋಗ್ಯದಿಂದ ಇಂದು ಬೆಳಗ್ಗೆ ಮೃತ ಪಟ್ಟಿದ್ದಾರೆ. ಇವರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತೆ ಹಾಗೂ ದಾನಿ ಸ್ವಭಾವುಳ್ಳವರಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯ ಕಾರಣದಿಂದ ನಿಧನರಾದರು. ಇವರು ದಿ. ನಾರಾಯಣ ಶೆಟ್ಟಿ ಕಂಪ ಅವರ ಧರ್ಮಪತ್ನಿ

ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ ಎನ್. ಗುಲಾಬಿ ಶೆಟ್ಟಿ ಕಂಪ ನಿಧನ Read More »

ಬಿಎಸ್‍ಎಫ್‍ ಯೋಧ ಪೂರ್ಣಂ ಶಾ ಭಾರತಕ್ಕೆ ಹಸ್ತಾಂತರ | ಪಾಕ್ ವಶದಲ್ಲಿದ್ದ ಯೋಧ

ನವದೆಹಲಿ : ಏ.23 ರಂದು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆ ದಾಟಿದ ವಿಚಾರವಾಗಿ ಪಾಕ್ ಸೇನೆ ಸೆರೆಹಿಡಿದು ಪಾಕ್‍ ನಲ್ಲಿ ಬಂದಿಸಲಾಗಿತ್ತು. ಇದೀಗ ಬಂಧಿತರಾಗಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಶಾ ಅವರನ್ನು ಪಾಕಿಸ್ತಾನ ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಮುಂಭಾಗದ ಮೂಲಕ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಸೇನಾಪಡೆ ತಿಳಿಸಿದೆ. ಬುಧವಾರ ಬೆಳಿಗ್ಗೆ 10.30ಕ್ಕೆ ಪಾಕಿಸ್ತಾನದ ರೇಂಜರ್‌ಗಳು ಸಾಹು ಅವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹಸ್ತಾಂತರವನ್ನು ಶಾಂತಿಯುತವಾಗಿ, ಶಿಷ್ಟಾಚಾರಗಳಿಗೆ ಅನುಸಾರವಾಗಿ ನಡೆಸಲಾಯಿತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರು

ಬಿಎಸ್‍ಎಫ್‍ ಯೋಧ ಪೂರ್ಣಂ ಶಾ ಭಾರತಕ್ಕೆ ಹಸ್ತಾಂತರ | ಪಾಕ್ ವಶದಲ್ಲಿದ್ದ ಯೋಧ Read More »

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್‍ ಬುಕ್‍ ನಲ್ಲಿ ಅವಹೇಳನಕಾರಿ ಪೋಸ್ಟ್ | ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರ ವಿರುದ್ಧ ಬಿಜೆಪಿಯಿಂದ ನಗರ ಠಾಣೆಗೆ ದೂರು

ಪುತ್ತೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗ ತೆರಳಿ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ದೂರು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್‍ ಬುಕ್‍ ನಲ್ಲಿ ಅವಹೇಳನಕಾರಿ ಪೋಸ್ಟ್ | ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರ ವಿರುದ್ಧ ಬಿಜೆಪಿಯಿಂದ ನಗರ ಠಾಣೆಗೆ ದೂರು Read More »

ವಿಎಚ್‍ ಪಿ, ಬಜರಂಗಳದಿಂದ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ  ವಿಶ್ವ ಹಿಂದೂ ಪರಿಷತ್. ಬಜರಂಗದಳ  ಹಿಂದೂ  ಸಂಘಟನೆ ಸೇವೆ ಎಂಬ  ಯಜ್ಞದಲ್ಲಿ ಕಳೆದ  ಹಲವು  ದಶಕಗಳಿಂದ  ಬಡ  ಕುಟುಂಬಗಳಿಗೆ ಸಹಾಯಹಸ್ತ ನೀಡುತ್ತಿದ್ದು ಇದೀಗ ಕೊಡಿಮರದ ಕುಸುಮ ಬಾಲಕೃಷ್ಣ ಪೂಜಾರಿ ಅವರಿಗೆ ಸಹಾಯಹಸ್ತ ಹಸ್ತಾಂತರಿಸಲಾಯಿತು. ಕುಸುಮ ಬಾಲಕೃಷ್ಣ ಪೂಜಾರಿ ಅವರ  ವೈದ್ಯಕೀಯ  ಚಿಕಿತ್ಸೆಗೆ  28000 ಧನ  ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖರಾದ ಗಣೇಶ್‍ ಕೈಲಾಜೆ, ಯತಿನ್‍ ಕೋರ್ತಾಜೆ ಮತ್ತಿತರರು ಉಪಸ್ಥಿತರಿದ್ದರು.

ವಿಎಚ್‍ ಪಿ, ಬಜರಂಗಳದಿಂದ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ Read More »

error: Content is protected !!
Scroll to Top