ಸುಹಾಸ್‌ ಶೆಟ್ಟಿ ಹತ್ಯೆ ಆರೋಪಿ ನೌಷದ್‌ ಮೇಲೆ ಜೈಲಿನಲ್ಲಿ ಹಲ್ಲೆ

ಪೊಲೀಸರ ಎದುರೇ ಕಲ್ಲು ಎಸೆದ ದಾಳಿ ಮಾಡಿದ ಕೈದಿಗಳು ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್ ಮೇಲೆ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ಎದುರೇ ಇತರ ಕೈದಿಗಳು ದಾಳಿ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ನೌಷಾದ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವನನ್ನು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಚೊಟ್ಟೆ ನೌಷಾದ್ ಮೇಲೆ ಮಂಗಳೂರು ಸೆಂಟ್ರಲ್‌ ಜೈಲಿನ ಬಿ ಬ್ಯಾರಕ್‌ನ ಹಲವು ಸಹಕೈದಿಗಳು ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ.ಚೊಟ್ಟೆ ನೌಷಾದ್‌ನ […]

ಸುಹಾಸ್‌ ಶೆಟ್ಟಿ ಹತ್ಯೆ ಆರೋಪಿ ನೌಷದ್‌ ಮೇಲೆ ಜೈಲಿನಲ್ಲಿ ಹಲ್ಲೆ Read More »

ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಕೊಡಗು: ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಉಗೂರು ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ ನಡೆದಿದೆ. ಮಧು ಅಲಿಯಾಸ್ ಅಶೋಕ್ ಆತ್ಮಹತ್ಯೆ ಮಾಡಿಕೊಂಡವರು. ಮದ್ಯ ಸೇವಿಸಿ ಬಳಿಕ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಮೂರು ವರ್ಷದ ಮಗಳಿಗೆ ಅನಾರೋಗ್ಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿ ವಾರದ ಹಿಂದೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ನಿನ್ನ ಮಧು ಅವರ ತಾಯಿ ಕೂಡ ಬೆಂಗಳೂರಿಗೆ ಆಗಮಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದ್ಯ

ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ Read More »

ಕೆಎಸ್‌ಆರ್‌ಟಿಸಿ ಬಸ್‍ – ಲಾರಿಯ ನಡುವೆ ಭೀಕರ ಅಪಘಾತ | ಬಸ್‍ ಚಾಲಕ ಸೇರಿ ನಾಲ್ವರಿಗೆ ಗಾಯ

ಗುಂಡ್ಯ:  ಕೆಎಸ್‌ಆರ್‌ಟಿಸಿ ಬಸ್‍ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬಸ್ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ನಡೆದಿದೆ. ಬಸ್ಸು ಚಾಲಕ  ಧರ್ಮಸ್ಥಳ ಬೆಳಾಲು ನಿವಾಸಿ ಶ್ರೀನಿವಾಸ, ನೆಲಮಂಗಲ ನಿವಾಸಿ ಸಿದ್ದಲಿಂಗಪ್ಪ, ಉಜಿರೆ ತಾಕಿಬೆಟ್ಟು ನಿವಾಸಿ, ಪ್ರಣಯ್ ಮತ್ತು ಶನಕಪುರ ನಿವಾಸಿ ಮಂಜುನಾಥ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು

ಕೆಎಸ್‌ಆರ್‌ಟಿಸಿ ಬಸ್‍ – ಲಾರಿಯ ನಡುವೆ ಭೀಕರ ಅಪಘಾತ | ಬಸ್‍ ಚಾಲಕ ಸೇರಿ ನಾಲ್ವರಿಗೆ ಗಾಯ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ’ರಿಸರ್ಚ್ ಇನ್ಫೋರ್ಮೇಟಿಕ್ಸ್: ಸಂಶೋಧನಾ ವಿಧಾನಕ್ರಮ, ಸಂಶೋಧನಾ ಬರಹ’ ಕಾರ್ಯಗಾರ

ಪುತ್ತೂರು: ’ರಿಸರ್ಚ್‌ ಇನ್ಫೋರ್ಮೇಟಿಕ್ಸ್ :  ಸಂಶೊಧನಾ ವಿಧಾನಶಾಸ್ತ್ರ ಮತ್ತು ಸಂಶೋಧನಾ ಬರಹ’ ವಿಷಯದಲ್ಲಿ ಒಂದು ದಿವಸದ ಕಾರ್ಯಗಾರವ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ  ರಿಸರ್ಚ್‌ಡೆವಲಪ್ ಮೆಂಟ್ಟ್ ಸೆಲ್ಲ್, ಇನ್ಸ್ಟಿಟ್ಯೂಶನ್ ಇನ್ನೋವೇಸನ್ ಕೌನ್ಸಿಲ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸಹಯೋಗದಲ್ಲಿ ಹೊಸ ಸಂಶೋಧಕರನ್ನುಉತ್ತೇಜಿಸುವ ಹಾಗೂ ಅದ್ಯಾಪಕರ ಸಂಶೋಧನಾ ಕೌಸಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಚಾರ್ಯ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ತಯಾರಾಗದೆ ಇದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು

ಸಂತ ಫಿಲೋಮಿನಾ ಕಾಲೇಜಿನಲ್ಲಿ’ರಿಸರ್ಚ್ ಇನ್ಫೋರ್ಮೇಟಿಕ್ಸ್: ಸಂಶೋಧನಾ ವಿಧಾನಕ್ರಮ, ಸಂಶೋಧನಾ ಬರಹ’ ಕಾರ್ಯಗಾರ Read More »

ಶ್ರೀ ಮಹಾಭಾರತ ಸರಣಿ ಯಕ್ಷ ಪ್ರಶ್ನೆ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿ ಯಲ್ಲಿ 76ನೇ ಕಾರ್ಯಕ್ರಮವಾಗಿ ಕವಿ ಶ್ರೀ ಶ್ರೀಧರ ಡಿ. ಯಸ್  ರಚಿತ    ಯಕ್ಷಪ್ರಶ್ನೆ    ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.           ಭಾಗವತರಾಗಿ ಪದ್ಮನಾಭ ಕುಲಾಲ್,  ಸುರೇಶ್ ರಾವ್. ಬಿ,  ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪರೀಕ್ಷಿತ್. ಯಚ್, ಅರ್ಥಧಾರಿಗಳಾಗಿ    ಪಾತಾಳ ಅಂಬಾಪ್ರಸಾದ್ (ಧರ್ಮರಾಯ, ಕೃತ್ಯ )ದಿವಾಕರ ಆಚಾರ್ಯ ಗೇರುಕಟ್ಟೆ(ಶಕುನಿ, ಯಕ್ಷ), ಜಿನೇಂದ್ರ ಜೈನ್ ಬಳ್ಳಮಂಜ(ಮಂತ್ರವಾದಿ), ರವೀಂದ್ರ ದರ್ಬೆ

ಶ್ರೀ ಮಹಾಭಾರತ ಸರಣಿ ಯಕ್ಷ ಪ್ರಶ್ನೆ ತಾಳಮದ್ದಳೆ Read More »

ರೈಲಿನಲ್ಲಿ ಹೃದಯಘಾತವಾಗಿ ವ್ಯಕ್ತಿ ಮೃತ್ಯು

ಮಂಗಳೂರು : ರೈಲಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಹೃದಯಘಾತವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೇ.17ರ ಮಧ್ಯಾಹ್ನ 3:30ರ ಸುಮಾರಿಗೆ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‍ ನ ಜನರಲ್ ಕೋಚ್ ನಲ್ಲಿ ಕುಳಿತಿದ್ದ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಹೃದಯಾಘಾತವಾಗಿದೆ. ತಕ್ಷಣ  ಆರ್‍ಪಿಎಫ್‍ ಇನ್ಸ್‍ಪೆಕ್ಟರ್‍ ಮನೋಜ್‍ ಕುಮಾರ್‍ ಯಾದವ್‍ ಮತ್ತು ಸಿಬ್ಬಂದಿಗಳು ವ್ಯಕ್ತಿಗೆ ಸಿಪಿ ಆರ್‍ ಕೊಡಿಸಿ ಸರ್ಕಾರಿ ವೆನ್ಲಾಕ್‍ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ  ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೈಲಿನಲ್ಲಿ ಹೃದಯಘಾತವಾಗಿ ವ್ಯಕ್ತಿ ಮೃತ್ಯು Read More »

ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ : ಬಿಜೆಪಿ ಮಾಜಿ ಕಾರ್ಪೋರೇಟರ್‌ ವಿರುದ್ಧ ಕೇಸ್‌

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಆಕ್ಷೇಪಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಮಾಜಿ ಕಾರ್ಪೋರೇಟರ್ ಶ್ವೇತಾ ಪೂಜಾರಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವೇತಾ ಪೂಜಾರಿ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ ಗುಂಡುರಾವ್ ಇವರ ಭಾವ ಚಿತ್ರದ ಕೆಳಗಡೆ ಅವಹೇಳನಕಾರಿ ಪೋಸ್ಟ್, ಮಾಡಿರುವ ಆಧಾರದಲ್ಲಿ ಸುರತ್ಕಲ್

ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ : ಬಿಜೆಪಿ ಮಾಜಿ ಕಾರ್ಪೋರೇಟರ್‌ ವಿರುದ್ಧ ಕೇಸ್‌ Read More »

ಪಾಕ್‌ ಪರ ಗೂಢಚಾರಿಕೆ : ಉತ್ತರ ಪ್ರದೇಶದ ಉದ್ಯಮಿ ಬಂಧನ

ವ್ಯಾಪಾರದ ನೆಪದಲ್ಲಿ ಪಾಕ್‌ಗೆ ಪ್ರಯಾಣಿಸಿ ಮಾಹಿತಿ ನೀಡುತ್ತಿದ್ದ ಪಾತಕಿ ಲಖನೌ: ಪಾಕಿಸ್ಥಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್‌ ಜ್ಯೋತಿ ಬಂಧನ ಬಳಿಕ ದೇಶಾದ್ಯಂತ ಬೇಹಾಗಾರಿಕೆ ನಡೆಸುತ್ತಿರುವವರ ಹುಡುಕಾಟ ನಡೆಯುತ್ತಿದ್ದು, ಇದೇ ಆರೋಪದಲ್ಲಿ ಉದ್ಯಮಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ಥಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿಯ ನಂತರ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮೊರಾದಾಬಾದ್‌ನಲ್ಲಿ ಆರೋಪಿ ಶಹಜಾದ್‌ನನ್ನು ಬಂಧಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ

ಪಾಕ್‌ ಪರ ಗೂಢಚಾರಿಕೆ : ಉತ್ತರ ಪ್ರದೇಶದ ಉದ್ಯಮಿ ಬಂಧನ Read More »

ನಿಲ್ಲಿಸಿದ ಕಾರಿನೊಳಗೆ ಉಸಿರುಕಟ್ಟಿ ನಾಲ್ವರು ಮಕ್ಕಳು ಸಾವು

ಆಟವಾಡುತ್ತಾ ಕಾರಿನೊಳಗೆ ಹೋದ ಮಕ್ಕಳ ದುರಂತ ಅಂತ್ಯ ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಎಷ್ಟು ಹೊತ್ತಾದರೂ ಮಕ್ಕಳು ಬಾರದ ಕಾರಣ ಪೋಷಕರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಕಾರಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ. ಬಳಿಕ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರಗೆ ತಂದಿದ್ದಾರೆ. ಕೂಡಲೇ

ನಿಲ್ಲಿಸಿದ ಕಾರಿನೊಳಗೆ ಉಸಿರುಕಟ್ಟಿ ನಾಲ್ವರು ಮಕ್ಕಳು ಸಾವು Read More »

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಬಹಿಷ್ಕರಿಸಿದ ಟೀಮ್‌ ಇಂಡಿಯಾ

ಪಾಕಿಸ್ಥಾನ ಇರುವ ಐಸಿಸಿಯ ಯಾವುದೇ ಟೂರ್ನಿಯಲ್ಲಿ ಆಡದಿರಲು ನಿರ್ಧಾರ ಮುಂಬಯಿ: ಭಾರತ-ಪಾಕಿಸ್ಥಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಏಷ್ಯಾಕಪ್‌ ಟೂರ್ನಿಯಿಂದ ಹಿಂದೆ ಸರಿಯಲು ಬಿಸಿಸಿಐ ನಿರ್ಧರಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಎಲ್ಲ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. ಶ್ರೀಲಂಕಾದಲ್ಲಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಬಹಿಷ್ಕರಿಸಿದ ಟೀಮ್‌ ಇಂಡಿಯಾ Read More »

error: Content is protected !!
Scroll to Top