ಸರಕಾರಿ ಬಸ್‍ ಸ್ಕೂಟರ್ ಗೆ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು

ಬಂಟ್ವಾಳ : ಸರಕಾರಿ ಬಸ್‍ ಓವರ್ ಟೇಕ್‍ ಮಾಡುವ ಭರದಲ್ಲಿ ಸ್ಕೂಟರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ  ಪಾಣೆಮಂಗಳೂರಿನ ನೆಹರೂನಗರದಲ್ಲಿ ನಡೆದಿದೆ. ಮಂಗಳೂರು ನಿವಾಸಿ ಅಲಿಸ್ಮರ್ ಡಿಸೋಜ (24) ಅಪಘಾತದಿಂದ ಮೃತಪಟ್ಟವರು. ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರ ಜತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್ ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್‍ ಮಾಡುವ ಭರದಲ್ಲಿ, […]

ಸರಕಾರಿ ಬಸ್‍ ಸ್ಕೂಟರ್ ಗೆ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು Read More »

ಧರ್ಮಸ್ಥಳದ ಯುವತಿಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌

ಕೊಲೆಯಲ್ಲ ಆತ್ಮಹತ್ಯೆ ಎಂದ ಪೊಲೀಸರು ಮಂಗಳೂರು: ಪಂಜಾಬಿನಲ್ಲಿ ಧರ್ಮಸ್ಥಳದ ಯುವತಿಯ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳದ ಏರೋನಾಟಿಕ್ಸ್ ಇಂಜಿನಿಯರ್ ಯುವತಿ ಆಕಾಂಕ್ಷಾ ನಾಯರ್‌ ಎಂಬವರು ಪಂಜಾಬಿನಲ್ಲಿ ನಿಗೂಢವಾಗಿ ಸಾವಿಘಿಡಾಗಿರುವುದು ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು.ಯುವತಿ ಆಕಾಂಕ್ಷಾ ಎಸ್ ನಾಯರ್ (22) ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಂಜಾಬ್‌ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಧರ್ಮಸ್ಥಳದ ಬೊಳಿಯೂರು ನಿವಾಸಿಯಾಗಿರುವ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್. ನಾಯರ್

ಧರ್ಮಸ್ಥಳದ ಯುವತಿಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌ Read More »

ಖ್ಯಾತ ನಟಿ ಕೊಲೆ ಆರೋಪದಲ್ಲಿ ಸೆರೆ

ದೇಶಬಿಟ್ಟು ಹೋಗಲು ಯತ್ನಿಸಿದಾಗ ವಿಮಾನ ನಿಲ್ದಾಣದಲ್ಲಿ ಬಂಧನ ಢಾಕಾ : ದೇಶಭ್ರಷ್ಟ ಮಾಜಿ ಪ್ರಧಾನಿ ಶೇಖ್‌ ಹಸಿನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾದೇಶದ ಖ್ಯಾತ ನಟಿ ನುಸ್ರತ್ ಫಾರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯ ವಿರುದ್ಧ ವಿದ್ಯಾರ್ಥಿಯೊಬ್ಬನ ಹತ್ಯೆಗೆ ಯತ್ನಿಸಿದ ಆರೋಪ ಹೊರಿಸಲಾಗಿದೆ. ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನುಸ್ರತ್ ಫಾರಿಯಾ ಥಾಯ್ಲೆಂಡ್​ಗೆ ಹೋಗಲು ಯತ್ನಿಸುತ್ತಿದ್ದಾಗ ಈ ಬಂಧನ ಆಗಿದ್ದು, ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ನಟಿಯ ವಿರುದ್ಧ ಈ

ಖ್ಯಾತ ನಟಿ ಕೊಲೆ ಆರೋಪದಲ್ಲಿ ಸೆರೆ Read More »

ಹೈದರಾಬಾದ್‌ನಲ್ಲಿ ಬಾಂಬ್‌ ಸ್ಫೋಟಿಸಲು ಯತ್ನಿಸಿದ ಇಬ್ಬರು ಉಗ್ರರ ಸೆರೆ

ಸ್ಫೋಟಕಗಳನ್ನು ಸಂಗ್ರಹಿಸಿ ಬಾಂಬ್‌ ತಯಾರಿಸುತ್ತಿದ್ದ ಐಸಿಸ್‌ ಉಗ್ರರು ಹೈದರಾಬಾದ್‌: ಹೈದರಾಬಾದ್‌ ನಗರದಲ್ಲಿ ಬಾಂಬ್‌ ಸ್ಫೋಟಿಸುವ ಸಂಚನ್ನು ವಿಫಲಗೊಳಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ವಿಜಯನಗರಂನ ಸಿರಾಜ್‌ ಮತ್ತು ಹೈದರಾಬಾದ್‌ನ ಸಮೀರ್‌ ಸೆರೆಯಾಗಿರುವ ಉಗ್ರರು. ಸೌದಿ ಅರೇಬಿಯದ ಐಸಿಸ್‌ ಉಗ್ರರ ಸಂಘಟನೆಯ ಸೂಚನೆಯ ಮೇರೆಗೆ ಇವರಿಬ್ಬರು ಹೈದರಾಬಾದ್‌ ನಗರದಲ್ಲಿ ಬಾಂಬ್‌ ಸ್ಫೋಟಿಸಲು ಯೋಜನೆ ಹಾಕಿಕೊಂಡಿದ್ದರು. ಹೈದರಾಬಾದ್‌ ಮತ್ತು ತೆಲಂಗಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರ ಸಂಚು ವಿಫಲಗೊಂಡಿದೆ. ಸಿರಾಜ್‌ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡು ಬಾಂಬ್‌ ತಯಾರಿಸುವ

ಹೈದರಾಬಾದ್‌ನಲ್ಲಿ ಬಾಂಬ್‌ ಸ್ಫೋಟಿಸಲು ಯತ್ನಿಸಿದ ಇಬ್ಬರು ಉಗ್ರರ ಸೆರೆ Read More »

ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್‍ : ಬೈಕ್‍ ಸವಾರ ಮೃತ್ಯು

ಪುತ್ತೂರು: ಶಾಮಿಯಾನ ಲಾರಿಗೆ ಹಿಂದಿನಿಂದ ಬೈಕ್‍ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಸುದೀಪ್‍ ಚೊಕ್ಕಾಡಿ ಮೃತಪಟ್ಟ ಬೈಕ್‍ ಸವಾರ ಗಂಭೀರ ಗಾಯಗೊಂಡ ಸುದೀಪ್‍ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುದೀಪ್‍ ಮುರ ಸಮೀಪ ಆಯುರ್ವೇದಿಕ್‍ ಔಷಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್‍ : ಬೈಕ್‍ ಸವಾರ ಮೃತ್ಯು Read More »

ಮಾಸ್ಟರ್ ಮೈಂಡ್‍ ಲಷ್ಕರ್ ಎ ತೈಬಾ ಸಂಘಟನೆಯ ಉಗ್ರ ಸೈಫುಲ್ಲಾ ಖಾಲಿದ್ ಪಾಕಿಸ್ಥಾನದಲ್ಲಿ ಹತ್ಯೆ

ಭಾರತದಲ್ಲಿ ನಡೆದ ಮೂರು ಪ್ರಮುಖ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಘಟನೆಯ ಟಾಪ್ ಉಗ್ರನನ್ನು ಪಾಕಿಸ್ತಾನದ ಸಿಂಥ್ ಪ್ರಾಂತ್ಯದಲ್ಲಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೈಫುಲ್ಲಾ ಖಾಲಿದ್ ಮೋಸ್ಟ್ ವಾಂಟೆಡ್ ಆಗಿದ್ದ ಲಷ್ಕರ್ ಉಗ್ರರನನ್ನು ಸಿಂಥ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಟಿ ತಾಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ. 2001 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದ್ದ ಗುಂಡಿನ ದಾಳಿ ಹಾಗೂ

ಮಾಸ್ಟರ್ ಮೈಂಡ್‍ ಲಷ್ಕರ್ ಎ ತೈಬಾ ಸಂಘಟನೆಯ ಉಗ್ರ ಸೈಫುಲ್ಲಾ ಖಾಲಿದ್ ಪಾಕಿಸ್ಥಾನದಲ್ಲಿ ಹತ್ಯೆ Read More »

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 250000 ಮೊತ್ತದ ಚೆಕ್ ಹಸ್ತಾಂತರ | ದೇಶದ ರಕ್ಷಣೆಯ ತುಡಿತ ಪ್ರತಿ ಭಾರತೀಯನಲ್ಲಿ ಸದಾ ಇರಬೇಕು : ಚಂದಪ್ಪ ಮೂಲ್ಯ

ಉಪ್ಪಿನಂಗಡಿ : ಭಾರತದ ರಕ್ಷಣಾ ಬಲಕ್ಕೆ ಶಕ್ತಿ ತುಂಬುವ ಸಲುವಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ ರೂ.250000/- ಮೊತ್ತ ಚೆಕ್ ನ್ನು ನಿವೃತ್ತ ಸೈನ್ಯಾಧಿಕಾರಿ ಚಂದಪ್ಪ ಮೂಲ್ಯ ಅವರ ಮುಖಾಂತರ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಂದಪ್ಪ ಮೂಲ್ಯ, ನಿವೃತ್ತ ಸೈನಿಕನಾಗಿ ದೇಶದ ರಕ್ಷಣೆಗಾಗಿ  ಹೋರಾಟ ಮಾಡಲು ಸದಾ ಸಿದ್ಧ. ಭಾರತ ಜಗತ್ತಿನಲ್ಲಿ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಧುನಿಕ ಯುದ್ಧ ತಂತ್ರಜ್ಞಾನ ಬಳಕೆಯೊಂದಿಗೆ ಶತ್ರು ರಾಷ್ಟ್ರದೊಳಗೆ ನುಗ್ಗಿ ದಾಳಿ ಮಾಡುವಂತಹ

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 250000 ಮೊತ್ತದ ಚೆಕ್ ಹಸ್ತಾಂತರ | ದೇಶದ ರಕ್ಷಣೆಯ ತುಡಿತ ಪ್ರತಿ ಭಾರತೀಯನಲ್ಲಿ ಸದಾ ಇರಬೇಕು : ಚಂದಪ್ಪ ಮೂಲ್ಯ Read More »

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಅಧ್ಯಕ್ಷರ ಮೇಲಿನ ಇಲ್ಲಸಲ್ಲದ ಆರೋಪ ಖಂಡನೀಯ | ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್‍ ಕಾಂಗ್ರೆಸ್‍ ಹಾಗೂ ಸುಬ್ರಹ್ಮಣ್ಯ ಗ್ರಾಮ ಸಮಿತಿ ಹೇಳಿಕೆ | ಹೋರಾಟದ ಎಚ್ಚರಿಕೆ

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಈಗಾಗಲೇ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಹರೀಶ್‍ ಇಂಜಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅಧ್ಯಕ್ಷರಾದ ಹರೀಶ್‍ ಇಂಜಾಡಿಯವರು ರೌಶಿಡೀಟರ್‍ ಎಂಬ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದ್ದು, ಇದು ಸತ್ಯಕ್ಕೆ ದೂರವಾಗಿ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆಯಾದರೆ ನಾವು ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಕಡಬ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಅಭಿಲಾಷ್‍, ಸರಕಾರದ ಗ್ಯಾರಂಟಿ ಅನುಷ್ಠಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಅಧ್ಯಕ್ಷರ ಮೇಲಿನ ಇಲ್ಲಸಲ್ಲದ ಆರೋಪ ಖಂಡನೀಯ | ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್‍ ಕಾಂಗ್ರೆಸ್‍ ಹಾಗೂ ಸುಬ್ರಹ್ಮಣ್ಯ ಗ್ರಾಮ ಸಮಿತಿ ಹೇಳಿಕೆ | ಹೋರಾಟದ ಎಚ್ಚರಿಕೆ Read More »

ಡಿವೈಡರ್ ಏರಿದ ಕಾರು : ಚಾಲಕ ಅಪಾಯದಿಂದ ಪಾರು

ಪುತ್ತೂರು” ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‍ ಏರಿದ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯಲ್ಲಿ ನಡೆದಿದೆ. ಅಪಘಾತದಿಂದ ಕಾರು ಚಾಲಕ ಅಪಾಯದಿಂದ ಪಾರಾಗಿದ್ದು, ಕಾರಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಅದೇ ಮಾರ್ಗದಿಂದ ತೆರಳುತ್ತಿದ್ದ ಅರುಣ್‍ ಕುಮಾರ್‍ ಪುತ್ತಿಲ ಕಾರನ್ನು ಬದಿಗೆ ಸರಿಸುವಲ್ಲಿ ಸಹಕರಿಸಿದರು.

ಡಿವೈಡರ್ ಏರಿದ ಕಾರು : ಚಾಲಕ ಅಪಾಯದಿಂದ ಪಾರು Read More »

ಗುಲ್ಜಾರ್‌ ಹೌಸ್‌ನಲ್ಲಿ ಭೀಕರ ಅಗ್ನಿ ಅವಘಡ : 17 ಮಂದಿ ಜೀವಂತ ದಹನ

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ದುರಂತ ಹೈದರಾಬಾದ್: ಇಲ್ಲಿನ ಚಾರ್‌ಮಿನಾರ್ ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 17 ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ.ಮುಂಜಾನೆ 5.30ರ ಸುಮಾರಿಗೆ ಬೆಂಕಿಹತ್ತಿಕೊಂಡಿದೆ. ಗುಲ್ಜಾರ್ ಹೌಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಇರುವ ಶಂಕೆಯಿದ್ದು, ಬೆಂಕಿ ಅವಘಡದ ಪರಿಣಾಮ ಉಸಿರಾಟದ ತೊಂದರೆಯಿಂದಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜೇಂದ್ರ ಕುಮಾರ್ (67), ಅಭಿಷೇಕ್ ಮೋದಿ, ಸುಮಿತ್ರಾ, ಮುನ್ನಿಬಾಯ್, ಆರುಷಿ ಜೈನ್,

ಗುಲ್ಜಾರ್‌ ಹೌಸ್‌ನಲ್ಲಿ ಭೀಕರ ಅಗ್ನಿ ಅವಘಡ : 17 ಮಂದಿ ಜೀವಂತ ದಹನ Read More »

error: Content is protected !!
Scroll to Top