ಕೆಟ್ಟ ರಸ್ತೆಗಳಿಂದ ಬೆನ್ನು ನೋವು : 50 ಲ.ರೂ. ಪರಿಹಾರ ಕೋರಿ ಪಾಲಿಕೆಗೆ ನೋಟಿಸ್‌

ಮೂಲಸೌಕರ್ಯ ಒದಗಿಸಲು ವಿಫಲವಾಗಿರುವ ಬಿಬಿಎಂಪಿ ಅನಾರೋಗ್ಯಕ್ಕೆ ಹೊಣೆ ಎಂದ ತೆರಿಗೆದಾರ ಬೆಂಗಳೂರು: ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ನಿರಂತರ ದೈಹಿಕ ಯಾತನೆ ಅನುಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತೆರಿಗೆದಾರರೊಬ್ಬರು 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ರಿಚ್ಮಂಡ್ ಟೌನ್ ನಿವಾಸಿಯಾಗಿರುವ ದಿವ್ಯಕಿರಣ್ ಎಂಬವರು ಕಳುಹಿಸಿದ ನೋಟಿಸ್‌ನಲ್ಲಿ, ನಾನು ತೆರಿಗೆ ಪಾವತಿಸುವ ನಾಗರಿಕನಾಗಿದ್ದೇನೆ. ಆದರೆ ಬಿಬಿಎಂಪಿ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಇದರಿಂದ ನಾನು ದೈಹಿಕ ಮತ್ತು ಮಾನಸಿಕ ಯಾತನೆಯನ್ನು ನಿರಂತರವಾಗಿ ಎದುರಿಸುತ್ತಿದ್ದೇನೆ. ಕೆಟ್ಟ ರಸ್ತೆಯಿಂದ […]

ಕೆಟ್ಟ ರಸ್ತೆಗಳಿಂದ ಬೆನ್ನು ನೋವು : 50 ಲ.ರೂ. ಪರಿಹಾರ ಕೋರಿ ಪಾಲಿಕೆಗೆ ನೋಟಿಸ್‌ Read More »

19ರ ಕೆಳಗಿನ ಜಿಲ್ಲಾ ತಂಡಕ್ಕೆ ತೇಜಸ್ ಎಸ್‍. ಕೈಕಂಬ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ತೇಜಸ್ ಸುಬ್ಬಪ್ಪ ಕೈಕಂಬ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್’ ನ 19ರ ವಯೋಮಾನದ ಕೆಳಗಿನ ವಿಭಾಗದ ಅಂತರ್ಜಿಲ್ಲಾ ಕ್ರಿಕೆಟ್ ಪಂದ್ಯಾಟದ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ ಪುತ್ತೂರು ಜಿಡೆಕಲ್ಲಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಅವರ ಸುಪುತ್ರನಾದ ತೇಜಸ್ ಅವರು ಹರೀಶ್, ಕಿರಣ್ ಮತ್ತು ನವೀನ್ ಅವರ ಬಳಿ ತರಬೇತಿ ಪಡೆದಿದ್ದು ಪ್ರಸ್ತುತ ಇಲ್ಯಾಸ್ ಪಿಂಟೋ ಅವರಿಂದ ತರಬೇತಿ

19ರ ಕೆಳಗಿನ ಜಿಲ್ಲಾ ತಂಡಕ್ಕೆ ತೇಜಸ್ ಎಸ್‍. ಕೈಕಂಬ ಆಯ್ಕೆ Read More »

ಅಮರ್ ಲೈಟಿಂಗ್ಸ್ ಮಾಲಕ ರವೀಂದ್ರ ನಿಧನ

ಪುತ್ತೂರು: ಅಮರ್ ಲೈಟಿಂಗ್ಸ್ ನ ಮಾಲಕ, ನೆಲ್ಲಿಕಟ್ಟೆ ನಿವಾಸಿ ರವೀಂದ್ರ ಅನಾರೋಗ್ಯದಿಂದ ಸೋಮವಾರ ನಿಧನರಾದರು. ನೆಲ್ಲಿಕಟ್ಟೆಯಲ್ಲಿ ಅಮರ್ ಲೈಟಿಂಗ್ಸ್ ಸಂಸ್ಥೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅವರು, ನೆಲ್ಲಿಕಟ್ಟೆ  ಮಿತ್ರ ಮಂಡಲದ  ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಅಮರ್ ಲೈಟಿಂಗ್ಸ್ ಮಾಲಕ ರವೀಂದ್ರ ನಿಧನ Read More »

ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು

ಆಂಧ್ರ: ನಾಲ್ವರು ಪುಟ್ಟಮಕ್ಕಳು ಆಟ ಆಡಲು ಕಾರಿನೊಳಗೆ ಹೋಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಚಾರುಮತಿ (8), ಚರಿಷ್ಮಾ (6), ಮನಸ್ಸಿನಿ (6) ಹಾಗೂ ಉದಯ್ (8) ಮೃತ ಪುಟ್ಟ ಕಂದಮ್ಮಗಳು. ಬೆಳಗ್ಗೆಯೇ ಆಟ ಆಡೋದಕ್ಕೆ ಹೋದ ಮಕ್ಕಳು ಎಷ್ಟು ಹೊತ್ತಾದ್ರೂ ಮನೆಗೆ ವಾಪಸ್‌ ಬರಲಿಲ್ಲ. ತಕ್ಷಣ ಪೋಷಕರು ಮಕ್ಕಳನ್ನು ಹುಡುಕುವ ಪ್ರಯತ್ನ ಮಾಡಿದ್ರು. ಹುಡುಕುತ್ತಾ ಹೊರಟವರಿಗೆ ಸಿಕ್ಕ ಕಾರಿನಲ್ಲಿ ತಮ್ಮದೇ ಕಂದಮ್ಮಗಳ ಮೃತ ದೇಹ ಕಂಡಿದ್ದಾರೆ. ದ್ವಾರವೂಡಿಯ ಸರ್ಕಾರಿ ಕಛೇರಿ

ಆಟವಾಡಲು ಕಾರು ಹತ್ತಿದ ನಾಲ್ವರು ಪುಟ್ಟ ಕಂದಮ್ಮಗಳು | ಉಸಿರುಗಟ್ಟಿ ಮೃತ್ಯು Read More »

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ನಿರ್ಲಕ್ಷ್ಯ : ಪೊಲೀಸರ ಅಮಾನತು

ವಿದೇಶದಲ್ಲಿ ನೌಕರಿ ಕೊಡಿಸುವ ಆಮಿಷದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟಿಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವ ಕಂಪನಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ತನಿಖೆ ಮಾಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ವಂಚನೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ. ನಕಲಿ ಸಂಸ್ಥೆಯ ಬಗ್ಗೆ ಆಫೀಸ್ ಪ್ರೊಟೆಕ್ಟರ್

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ನಿರ್ಲಕ್ಷ್ಯ : ಪೊಲೀಸರ ಅಮಾನತು Read More »

ಕಾಂಗ್ರೆಸ್‌-ಬಿಜೆಪಿ ಸಿಂಧೂರ ಜಟಾಪಟಿ : ಆರೋಪಗಳಿಗೆ ತಿರುಗೇಟು

ರಾಹುಲ್‌ ಗಾಂಧಿ ಪಾಕಿಸ್ಥಾನ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕೆ ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಸೇನೆ ಮತ್ತು ಸರಕಾರವನ್ನು ದೂಷಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ ಒಂದು ಮಾತನ್ನು ಹಿಡಿದುಕೊಂಡು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪವನ್‌ ಖೇರ ಮುಂತದವರು ವಾಗ್ದಾಳಿ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿಯಂತೂ ಯುದ್ಧದಲ್ಲಿ ಭಾರತ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ಲೆಕ್ಕ ಕೇಳುತ್ತಿದ್ದಾರೆ. ವಿದೇಶಾಂಗ ಸಚಿವರನ್ನು ಪಾಕಿಸ್ಥಾನದ ಪರವಾಗಿರುವವರು ಎಂದು ಕೂಡ

ಕಾಂಗ್ರೆಸ್‌-ಬಿಜೆಪಿ ಸಿಂಧೂರ ಜಟಾಪಟಿ : ಆರೋಪಗಳಿಗೆ ತಿರುಗೇಟು Read More »

ಬಾಡಿಗೆ ಮನೆಯಲ್ಲಿ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ

ಮಂಗಳೂರು: ನಗರ ಹೊರವಲಯದ ಕುಡುಪು ಗ್ರಾಮದ ಪಾಲ್ದನೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಲ್ಲವಿ ಎಂಬ ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದೆ. ಪಲ್ಲವಿಯ ಪತಿ ನವೀನ್ ಹಾಗೂ ಅತ್ತೆ ಶಾಂತಾ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಭಾನುವಾರ ಶವ ಪತ್ತೆಯಾಗಿದ್ದು, ಘಟನೆಯ ಬಳಿಕ ನವೀನ್ ತಲೆಮರೆಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲ್ದನೆಯ ಕರುಣಾಕರ ಶೆಟ್ಟಿಯ ಮನೆಯ

ಬಾಡಿಗೆ ಮನೆಯಲ್ಲಿ ಮಹಿಳೆಯ ಶವ ಪತ್ತೆ : ಕೊಲೆ ಶಂಕೆ Read More »

ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವು

ರಾಜಧಾನಿಯಲ್ಲಿ ಅವಾಂತರಗಳ ಸರಮಾಲೆ ಸೃಷ್ಟಿಸಿದ ಮಳೆ ಬೆಂಗಳೂರು : ಬೆಂಗಳೂರಿನಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚುರುಕಾಗಿರುವ ಮಳೆ ಗುಡುಗು, ಮಿಂಚು ಸಹಿತ ಸುರಿಯುತ್ತಿದೆ. ಮೊನ್ನೆ ಸುರಿದ ಮಳೆಯ ಅವಾಂತರ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಾಗಲೇ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಬರೋಬ್ಬರಿ 135 ಮಿಲಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ನಗರಾದ್ಯಂತ ಇಂದು ಬೆಳಗ್ಗೆ ಸುರಿದ ಮಳೆ ವಿವರ ಹೀಗಿದೆ: ಬೆಂಗಳೂರಿನಲ್ಲಿ ರಾಜರಾಜೇಶ್ವರಿ

ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವು Read More »

ಕರಾವಳಿಯಲ್ಲಿ ಬೇಸಿಗೆಯಲ್ಲೇ ಮಳೆಗಾಲದ ಪರಿಸ್ಥಿತಿ: ಎಲ್ಲೆಡೆ ಧಾರಾಕಾರ ಮಳೆ

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನಿನ್ನೆಯಿಂದೀಚೆಗೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಹಲವೆಡೆ ನೀರು ಜಮೆಯಾಗಿ ಜನರು ಸಮಕಷ್ಟಕ್ಕೀಡಾದರು. ಮೇ 20ರಿಂದ 22ರ ತನಕ ಅತಿಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನಲೆ ಭಾರತ

ಕರಾವಳಿಯಲ್ಲಿ ಬೇಸಿಗೆಯಲ್ಲೇ ಮಳೆಗಾಲದ ಪರಿಸ್ಥಿತಿ: ಎಲ್ಲೆಡೆ ಧಾರಾಕಾರ ಮಳೆ Read More »

ಮಂಗಳೂರು ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ : ಓರ್ವನಿಗೆ ಗಾಯ

ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡ ವಿಚಾರಣಾಧೀನ ಕೈದಿಗಳು ಮಂಗಳೂರು : ಮಂಗಳೂರು ಸೆಂಟ್ರಲ್‌ ಜೈಲಿನಲ್ಲಿ ನಿನ್ನೆ ಕೊಲೆ ಆರೋಪಿ ಚೊಟ್ಟೆ ನೌಷದ್‌ ಮೇಲೆ ಹಲ್ಲೆಯಾದ ಬೆನ್ನಿಗೆ ಕೈದಿಗಳ ನಡುವೆ ಹೊಡೆದಾಟ ನಡೆದ ಘಟನೆ ಸಂಭವಿಸಿದೆ. ಸಂಜೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ವಾಗ್ವಾದ ನಡೆದಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮಾರಾಮಾರಿಯಲ್ಲಿ ಓರ್ವ ಒಬ್ಬ ಕೈದಿಗೆ ಗಾಯವಾಗಿದೆ. ಜೈಲಿನ ಅದಿಕಾರಿಗಳು ಗಲಭೆ ಕುರಿತು ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.ಸಂಜೆ 6.40ರ ಸುಮಾರಿಗೆ ಜೈಲಿನ ಕ್ವಾರಂಟೈನ್ ಸೆಲ್ ವಿಭಾಗದಲ್ಲಿ ಮಾರಾಮಾರಿ

ಮಂಗಳೂರು ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ : ಓರ್ವನಿಗೆ ಗಾಯ Read More »

error: Content is protected !!
Scroll to Top