ಕಾಂಕ್ರಿಟ್‍  ಮಿಕ್ಸಿಂಗ್‍ ವಾಹನದಡಿ ಬಿದ್ದು ಮಹಿಳೆ ಮೃತ್ಯು | ಕೆಲಸ ಮಾಡುತ್ತಿದ್ದ ವೇಳೆ ಘಟನೆ

ಪುತ್ತೂರು: ಮಹಿಳೆಯೊಬ್ಬರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ವೇಳೆ ಕಾಂಕ್ರೀಟ್ ಮಿಕ್ಸಿಂಗ್ ವಾಹನದಡಿಗೆ ಬಿದ್ದು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಸಮೀಪ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮಾಳ ಗ್ರಾಮದ ಬಸವರಾಜರವರ ಪತ್ನಿ ಗೌರಮ್ಮ (28) ಮೃತಪಟ್ಟವರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರೆಂಜದಿಂದ ಬಿಲ್ವಗಿರಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಕೆಲಸ ಮಾಡುತ್ತಿರುವ […]

ಕಾಂಕ್ರಿಟ್‍  ಮಿಕ್ಸಿಂಗ್‍ ವಾಹನದಡಿ ಬಿದ್ದು ಮಹಿಳೆ ಮೃತ್ಯು | ಕೆಲಸ ಮಾಡುತ್ತಿದ್ದ ವೇಳೆ ಘಟನೆ Read More »

ಭಾರಿ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ : ಸಂಚಾರ ಬಂದ್‌

ಕುಮಟಾ – ಶಿರಸಿ ಸಂಪರ್ಕ ಕಡಿತ ಕಾರವಾರ: ಕಳೆದ ಕೆಳ ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿದ್ದು ಕುಮಟಾ–ಶಿರಸಿ ಸಂಪರ್ಕ ಕಡಿತಗೊಂಡಿದೆ. ಕಳೆದ ಒಂದು ವರ್ಷದಿಂದ 766ಇ ಹೆದ್ದಾರಿ ಕಾಮಗಾರಿ ನಡೆಯುತಿತ್ತು. ಶುಕ್ರವಾರ ಸುರಿದ ಭಾರಿ ಮಳೆಗೆ ರಸ್ತೆಯೇ ಕೊಚ್ಚಿಹೋಗಿದೆ. ಅಬ್ಬರದ ಮಳೆಯಿಂದ ಬೆಣ್ಣೆಹೊಳೆ ಹಳ್ಳದ ನೀರು ಹರಿದು ಬಂದು ಹೆದ್ದಾರಿಯ ಬದಿಯಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ನಾಶವಾಗಿದೆ.ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿದ್ದರಿಂದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕುಮಟಾ ಮೂಲಕ ದೇವಿಮನೆ

ಭಾರಿ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ : ಸಂಚಾರ ಬಂದ್‌ Read More »

ಮೇ 26: ಪುತ್ತೂರು ಜಿಡೆಕಲ್ಲು ಸ. ಪ್ರ.ದ. ಕಾಲೇಜು ವಾರ್ಷಿಕೋತ್ಸವ

ಪುತ್ತೂರು: ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಸ. ಪ್ರ.ದ. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಮೇ 26 ಸೋಮವಾರ ನಡೆಯಲಿದೆ. ಪೂರ್ವಾಹ್ನ ಗಂಟೆ 10ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಿದ್ಧಕಟ್ಟೆ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಎ. ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 26: ಪುತ್ತೂರು ಜಿಡೆಕಲ್ಲು ಸ. ಪ್ರ.ದ. ಕಾಲೇಜು ವಾರ್ಷಿಕೋತ್ಸವ Read More »

ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ  15ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಆನೆಗುಂದಿ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 15ನೇ ವರ್ಧಂತ್ಯುತ್ಸವದ ಸಮಾರಂಭದಲ್ಲಿ ಶಿಕ್ಷಣ,ಸಾಹಿತ್ಯ,ಸಂಶೋಧನೆ, ಪಂಚಶಿಲ್ಪಕ್ಷೇತ್ರದ ಕ್ರಿಯಾಶೀಲ ಸಾಧಕರಿಗೆ ಕಟಪಾಡಿ ಪಡುಕುತ್ಯಾರು ಗುರುಪೀಠದಲ್ಲಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಆನೆಗುಂದಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕೆ ಪ್ರಭಾಕರ್ ಆಚಾರ್ಯ ಕೋಟೆಕಾರು ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆ ಎಸ್ ಕೆ ಎಫ್ ಸಂಸ್ಥೆಯ ಜಿ ರಾಮಕೃಷ್ಣ ಆಚಾರ್, ಮೈಸೂರು ವಿ.ವಿಯ ಡಾ. ಬಿ ಶ್ರೀಕಂಠಚಾರ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ

ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರ  15ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ | ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ Read More »

ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶಿವಂ’ ಸಭಾಂಗಣ ಉದ್ಘಾಟನೆ | ಸಾಮೂಹಿಕ ಕುಂಕುಮಾರ್ಚನೆ, ಲಲಿತ ಸಸ್ರನಾಮ ಪಾರಾಯಣ

ಪುತ್ತೂರು: ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಶಿವಂ” ಸಭಾಂಗಣದ ಉದ್ಘಾಟನೆ ಪ್ರಯುಕ್ತ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣ ದೇವಾಲಯ ಸಂವರ್ಧನ ಸಮಿತಿ ಶ್ರೀ ಪಾರ್ವತಿ ಬಳಗದಿಂದ ನೆರವೇರಿಸಲಾಯಿತು. ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಯವರು ಉಪಸ್ಥಿತರಿದ್ದರು. 25 ಮಂದಿ ಮಹಿಳೆಯರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಕೃಷ್ಣ ವೇಣಿ ಪ್ರಸಾದ್ ಮುಳಿಯ ಅವರು ದೇವಿ ಅಪರಾಧ ಕ್ಷಮಾಪಣ ಸ್ತೋತ್ರವನ್ನು ಹೇಳಿಕೊಡುವುದರೊಂದಿಗೆ, ಅರ್ಚನೆಯ ವಿಷೇಶತೆಯನ್ನು ತಿಳಿಸಿದರು, ಪ್ರಭಾವತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು, 

ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶಿವಂ’ ಸಭಾಂಗಣ ಉದ್ಘಾಟನೆ | ಸಾಮೂಹಿಕ ಕುಂಕುಮಾರ್ಚನೆ, ಲಲಿತ ಸಸ್ರನಾಮ ಪಾರಾಯಣ Read More »

ಶ್ರೀ ರಾಘವೇಂದ್ರ ಸ್ಟೋರ್ಸ್‍ ನಲ್ಲಿ ಏಷಿಯನ್ ಪೈಂಟ್ಸ್ ಕಂಪೆನಿಯವರ ‘ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್’ ನೂತನ ವ್ಯವಸ್ಥೆ ಆರಂಭ

ಪುತ್ತೂರು: ಕಳೆದ 35 ವರ್ಷಗಳಿಂದ ಪೈಂಟ್ ಗಳ ಸೇವೆಯಲ್ಲಿ ಮನೆ ಮಾತಾಗಿರುವ ಏಳ್ಮುಡಿಯಲ್ಲಿರುವ ಶ್ರೀ ರಾಘವೇಂದ್ರ ಸ್ಟೋ ರ್ಸ್‍ ನಲ್ಲಿ ಏಷಿಯನ್ ಪೈಂಟ್ಸ್ ಕಂಪೆನಿಯವರ ‘ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್’ ಎಂಬ ವಿನೂತನ ವ್ಯವಸ್ಥೆ ಗುರುವಾರ ಪ್ರಾರಂಭಗೊಂಡಿತು. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬದಲಾದ ಕಾಲ ಘಟ್ಟದಲ್ಲಿ ಜನರ ಬಳಿಗೆ ಸೇವೆಯನ್ನು ಜನರ ಬಳಿಗೆ ವಿಸ್ತರಿಸಬೇಕಾಗಿರುವುದೇ ಇಂದಿನ ಮಾರುಕಟ್ಟೆಯ ತಂತ್ರವಾಗಿದೆ. ಯಾವುದೇ ಸಾಮಾಗ್ರಿಗಳು ಮನೆ ಬಾಗಿಲಿಗೆ

ಶ್ರೀ ರಾಘವೇಂದ್ರ ಸ್ಟೋರ್ಸ್‍ ನಲ್ಲಿ ಏಷಿಯನ್ ಪೈಂಟ್ಸ್ ಕಂಪೆನಿಯವರ ‘ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್’ ನೂತನ ವ್ಯವಸ್ಥೆ ಆರಂಭ Read More »

ಪತ್ನಿಯ ಸೀಮಂತದಂದೇ ಕುಸಿದು ಬಿದ್ದು ಪತಿ ಮೃತ್ಯು

ವಿಟ್ಲ: ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ಚಾಲಕ ಸತೀಶ್‍ (33) ಮೃತಪಟ್ಟವರು. ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

ಪತ್ನಿಯ ಸೀಮಂತದಂದೇ ಕುಸಿದು ಬಿದ್ದು ಪತಿ ಮೃತ್ಯು Read More »

ಜೂ.1 : ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಮಹಾ ಅಧಿವೇಶನ, ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಸರ್ವ ಸದಸ್ಯರುಗಳ ಪ್ರಥಮ ಮಹಾ ಅಧಿವೇಶನ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ.1 ಭಾನುವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ 2024 ರ ಆಗಸ್ಟ್ ನಲ್ಲಿ ನೋಂದಾವಣೆಗೊಂಡು ಅಸ್ತಿತ್ವಕ್ಕೆ ಬಂದಿದೆ. ನೋಂದಾವಣೆಗೊಂಡು ಒಂದು ವರ್ಷದ

ಜೂ.1 : ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಮಹಾ ಅಧಿವೇಶನ, ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ Read More »

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ

ಬೆಳ್ತಂಗಡಿ : ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಘಟನಾ ಕುರಿತು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ. ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ಧಾರೆ. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ Read More »

ನೀರು ಕೊಡದಿದ್ದರೆ ಉಸಿರು ನಿಲ್ಲಿಸುತ್ತೇವೆ : ಪಾಕ್‌ ಮಿಲಿಟರಿ ವಕ್ತಾರನ ಗೊಡ್ಡು ಬೆದರಿಕೆ

ಸಿಂಧು ನದಿ ನೀರಿಗಾಗಿ ಪರಿತಪಿಸುತ್ತಿರುವ ಪಾಕಿಸ್ಥಾನ ಇಸ್ಲಾಮಾಬಾದ್:‌ ಕದನ ವಿರಾಮಕ್ಕೆ ಅಂಗಲಾಚಿದ್ದ ಪಾಕಿಸ್ತಾನ ಪರಿಸ್ಥಿತಿ ತುಸು ಸಹಜ ಸ್ಥಿತಿ ಬರುತ್ತಿರುವಂತೆಯೇ ತನ್ನ ಕಂತ್ರಿ ಬುದ್ಧಿ ತೋರಿಸಲಾರಂಭಿಸಿದೆ. ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಯೋತ್ಪಾದಕ ಹಫೀಜ್ ಸಯೀದ್‌ನಂತೆ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಭಾರತ ನೀರು ನೀಡದಿದ್ದರೆ ನಾವು ಅವರ ಉಸಿರು ನಿಲ್ಲಿಸುತ್ತೇವೆ ಎಂಬ ಗೊಡ್ಡು ಬೆದರಿಕೆ ಹಾಕಿದ್ದಾನೆ. ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ

ನೀರು ಕೊಡದಿದ್ದರೆ ಉಸಿರು ನಿಲ್ಲಿಸುತ್ತೇವೆ : ಪಾಕ್‌ ಮಿಲಿಟರಿ ವಕ್ತಾರನ ಗೊಡ್ಡು ಬೆದರಿಕೆ Read More »

error: Content is protected !!
Scroll to Top