ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ

ವಿಟ್ಲ: ಜಾರಿ ನಿರ್ದೇಶನಾಲಯದ ಅಧಿಕಾರಿಗಳಂತೆ ಸೋಗು ಹಾಕಿ ವಿಟ್ಲದ ಬೀಡಿ ಉದ್ಯಮಿಯೊಬ್ಬರ ಮನೆಯಿಂದ 30 ಲ.ರೂ. ದರೋಡೆ ಮಾಡಿದ ಘಟನೆ ಸಂಭವಿಸಿದೆ. ಬಂಟ್ವಾಳ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ತಮ್ಮನ್ನು ಇ.ಡಿ.ಅಧಿಕಾರಿಗಳೆಂದು ಪರಿಚಯಿಸಿಕೊಂಡಿದೆ. ಬಳಿಕ ಮನೆಯಲ್ಲಿ ಸುಮಾರು ಎರಡು ತಾಸು ಶೋಧ ನಡೆಸುವ ನಾಟಕವಾಡಿದೆ. […]

ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಯಿಂದ 30 ಲ.ರೂ. ದರೋಡೆ Read More »

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ

ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು (55) ನಿಧನ ಹೊಂದಿದರು. ಸಂಜೀವ ಪೂಜಾರಿ ಅವರು ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿ, ಮೃತ್ಯುಂಜೇಶ್ವರ ದೇವಸ್ಥಾನದ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ Read More »

ಉದ್ಯಮಿ ಮನೆಗೆ ದಾಳಿ ನಡೆಸಿದ ನಕಲಿ ಇಡಿ ಅಧಿಕಾರಿಗಳು | 30 ಲಕ್ಷ ರೂ. ಲೂಟಿ

ವಿಟ್ಲ: ನಕಲಿ ಇಡಿ ಅಧಿಕಾರಿಗಳು ಉದ್ಯಮಿಯೊಬ್ಬರ ಮನೆಗೆ ದಾಳಿ ನಡೆಸಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲ್ಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ಬಂದು ದಿಡೀರ್ ದಾಳಿ ನಡೆಸಿದೆ. ನಾವು ಇಡಿ ಅಧಿಕಾರಿಗಳು’ ಎಂದು ನಂಬಿಸಿ

ಉದ್ಯಮಿ ಮನೆಗೆ ದಾಳಿ ನಡೆಸಿದ ನಕಲಿ ಇಡಿ ಅಧಿಕಾರಿಗಳು | 30 ಲಕ್ಷ ರೂ. ಲೂಟಿ Read More »

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ

ಹೊಸವರ್ಷದ ಗ್ರೀಟಿಂಗ್‌ ಜೊತೆಗೆ ವಿಷಪೂರಿತ ಸಿಹಿತಿಂಡಿ ರವಾನಿಸಿದ ದುಷ್ಕರ್ಮಿಗಳು ಶಿವಮೊಗ್ಗ: ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಹಿತಿಂಡಿಗಳ ಬಾಕ್ಸ್‌ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್ ಸಹ ಒಬ್ಬರಾಗಿದ್ದಾರೆ. ಜನವರಿ 1ರಂದು ಅಜ್ಞಾತ ವ್ಯಕ್ತಿಗಳು ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, ಡಿಟಿಡಿಸಿ ಕೊರಿಯರ್ ಮೂಲಕ

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ Read More »

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ ಜ್ವರದ ಚಿಕಿತ್ಸೆ ಪಡೆಯಲು ಸಲಹೆ ಹೊಸದಿಲ್ಲಿ : ಚೀನದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ. ಎಲ್ಲ ಉಸಿರಾಟದ ಸೋಂಕುಗಳ ವಿರುದ್ಧ ತೆಗೆದುಕೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಹೇಳಿದೆ. ನಾವು ದೇಶದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ

ಎಚ್‌ಎಂಪಿವಿ ವೈರಸ್‌ ಸೋಂಕಿಗೆ ಸಾಮಾನ್ಯ ಎಚ್ಚರಿಕೆ ಸಾಕು : ಕೇಂದ್ರ ಮಾರ್ಗಸೂಚಿ Read More »

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ನೆಲ್ಯಾಡಿ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಪೇರಮಜಲು ಎಡಪ್ಪಾಟ್ ನಿವಾಸಿ ವರ್ಕಿ ಇ.ಪಿ. (59) ಮೃತಪಟ್ಟವರು. ವರ್ಕಿ ಅವರು ಅಡ್ಡಹೊಳೆ ಮಿತ್ತಮಜಲು ಎಂಬಲ್ಲಿರುವ ಸಹೋದರ ಜೋಯಿ ಇ.ಪಿ.ಎಂಬವರ ಮನೆಗೆ ಕೆಲಸಕ್ಕೆ ಹೋದವರು ಅಲ್ಲಿ ತೆಂಗಿನಮರ ಏರಿ ತೆಂಗಿನ ಕಾಯಿ ಕೀಳುತ್ತಿರುದ್ದ ವೇಳೆ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ನೆಲ್ಯಾಡಿ ಖಾಸಗಿ ಕರೆತರಲಾಯಿತಾದರೂ

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಪ್ರಕಾಶ್ಚಂದ್ರ ಹೇಮಳ ನಿಧನ

ಎಡಮಂಗಲ: ಗ್ರಾಮದ ಹೇಮಳ ದಿ. ಈಶ್ವರ ಗೌಡರ ಪುತ್ರ, ಬಂಟ್ವಾಳ ಬಿಇಒ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಪ್ರಕಾಶ್ಚಂದ್ರ ಹೇಮಳ (38) ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಅವರು ಆ ಬಳಿಕ ಬಂಟ್ವಾಳ ಬಿಇಒ ಕಚೇರಿಗೆ ವರ್ಗಾವಣೆಗೊಂಡಿದ್ದರು. ಹೇಮಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಸ್ವಾತಿ, ಪುತ್ರಿ ಗಹನ, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ

ಪ್ರಕಾಶ್ಚಂದ್ರ ಹೇಮಳ ನಿಧನ Read More »

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌

ಆಸ್ಪತ್ರೆ, ಸ್ಮಶಾನಗಳು ತುಂಬಿ ತುಳುಕುತ್ತಿರುವ ವೀಡಿಯೊಗಳು ವೈರಲ್‌ ಬೀಜಿಂಗ್‌ : ಇಡೀ ಜಗತ್ತಿಗೆ ಕೊರೊನ ವೈರಸ್‌ ಹರಡಿ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲಿ ಐದು ವರ್ಷಗಳ ಬಳಿಕ ಇದೇ ಮಾದರಿಯ ಇನ್ನೊಂದು ವೈರಸ್‌ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಎಕ್ಸ್‌, ಫೇಸ್‌ಬುಕ್‌, ವಾಟ್ಸಪ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿ ಈ ವೈರಸ್‌ ಕುರಿತು ಚರ್ಚೆಯಾಗುತ್ತಿದೆ. ಕೆಲವರು ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ, ಸ್ಮಶಾನಗಳಲ್ಲಿ ಸಾಲಾಗಿ ಹೆಣಗಳನ್ನು ಇಟ್ಟಿರುವ ವೀಡಿಯೊಗಳನ್ನು ಹಂಚಿಕೊಂಡು ಇದು ಕೊರೊನ

ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿ ವೈರಸ್‌ Read More »

ಶ್ರೀ ರಾಮ ಭಜನಾ ತಂಡದ ಭಜನಾ ಕೀರ್ತನ ಸಂಭ್ರಮ | ಭಕ್ತಿ-ಭಾವ ಕುಣಿತದ ಸಮ್ಮಿಲನ

ಪುತ್ತೂರು : ಶ್ರೀ ರಾಮ ಭಜನಾ ತಂಡ ಆನಡ್ಕ, ಪುತ್ತೂರು ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಭಜನಾ ಕೀರ್ತನ ಸಂಭ್ರಮ, ಭಕ್ತಿ-ಭಾವ- ಕುಣಿತದ ಸಮ್ಮಿಲನವು ಜ.5 ರಂದು ಆನಡ್ಕದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮ ಸಂಜೆ 7ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಡ್ಕದ ಶ್ರೀ ರಾಮ ಭಜನಾ ತಂಡ ಅಧ್ಯಕ್ಷ ಗುರುಪ್ರಸಾದ್‍ ವಾಲ್ತಾಜೆ, ಮುಖ್ಯ ಅತಿಥಿಯಾಗಿ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್‍ ಕೊಡಂಕಿರಿ, ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‍

ಶ್ರೀ ರಾಮ ಭಜನಾ ತಂಡದ ಭಜನಾ ಕೀರ್ತನ ಸಂಭ್ರಮ | ಭಕ್ತಿ-ಭಾವ ಕುಣಿತದ ಸಮ್ಮಿಲನ Read More »

ದೂರು ನೀಡಲು ಬಂದ ಮಹಿಳೆ ಜೊತೆ ಡಿವೈಎಸ್‌ಪಿ ಅಸಭ್ಯ ವರ್ತನೆ

ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದ ಘಟನೆ ತುಮಕೂರು : ದೂರು ನೀಡಲು ಕಚೇರಿಗೆ ಬಂದ ಮಹಿಳೆಯ ಜೊತೆ ಡಿವೈಎಸ್‌ಪಿ ದರ್ಜೆಯ ಪೊಲೀಸ್‌ ಅಧಿಕಾರಿಯೇ ಅಸಭ್ಯವಾಗಿ ವರ್ತಿಸಿದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪೊಲೀಸ್‌ ಇಲಾಖೆ ತಲೆ ತಗ್ಗಿಸುವಂತಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್‌ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ಮಧುಗಿರಿ ಉಪವಿಭಾಗದ ಡಿವೈಎಸ್​​ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದು, ವೀಡಿಯೊ ವೈರಲ್‌ ಆದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ. ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು

ದೂರು ನೀಡಲು ಬಂದ ಮಹಿಳೆ ಜೊತೆ ಡಿವೈಎಸ್‌ಪಿ ಅಸಭ್ಯ ವರ್ತನೆ Read More »

error: Content is protected !!
Scroll to Top