ಜೂ.6 ರಿಂದ 8 : ನವತೇಜಸ್ ಸಂಘಟಿಸುವ 7ನೇ ವರ್ಷದ ‘ಹಲಸು ಹಣ್ಣು ಮೇಳ’

ಪುತ್ತೂರು: ನವತೇಜಸ್ ಪುತ್ತೂರು ಸಂಘಟಿಸುವ 7ನೇ ವರ್ಷದ ಹಲಸು-ಹಣ್ಣು ಮೇಳ ಜೂ. 6 ರಿಂದ 8ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಳಿಯ ಪ್ರಾಪರ್ಟೀಸ್‍, ದ್ವಾರಕಾ ಕಾರ್ಪೋರೇಶನ್‍ ಪ್ರೈ.ಲಿ., ಕ್ಯಾಂಪ್ಕೋ ಮಂಗಳೂರು, ಗ್ರಾಮಜನ್ಯ, ಎಸ್‍ ಆರ್‍ ಕೆ. ಲ್ಯಾಡರ್ಸ್‍, ವಿಜಯ ಸೋಲಾರ್, ಕೊಕನಟ್‍ ಫಾರ್ಮಲ್‍ ಪ್ರೊಡ್ಯೂಸರ್ ಪ್ರೈ. ಲಿ., ಪಶುಪತಿ ಇಲೆಕ್ಟ್ರಾನಿಕ್ಸ್‍, ಹಾಗೂ ರಾಧಾಸ್ ಸಹಯೋಗದಲ್ಲಿ ಹಲಸು […]

ಜೂ.6 ರಿಂದ 8 : ನವತೇಜಸ್ ಸಂಘಟಿಸುವ 7ನೇ ವರ್ಷದ ‘ಹಲಸು ಹಣ್ಣು ಮೇಳ’ Read More »

ಆಪರೇಷನ್‌ ಸಿಂದೂರ ಮಾಹಿತಿ ರವಾನಿಸಿದ್ದ ಪಾಕ್‌ ಗೂಢಚಾರ ಸೆರೆ

ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮಾಹಿತಿ ರವಾನಿಸುತ್ತಿದ್ದ ಗೂಢಚಾರ ನವದೆಹಲಿ: ಇನ್ನೋರ್ವ ಪಾಕಿಸ್ತಾನಿ ಗೂಢಚಾರ ಸೆರೆಯಾಗಿದ್ದಾನೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಯುತ್ತಿರುವಾಗ ಪಾಕಿಸ್ತಾನದ ಐಎಸ್​ಐ ಜತೆ ಸೇನೆಯ ಚಲನವಲನದ ಹಂಚಿಕೊಂಡಿದ್ದ ಗೂಢಚಾರನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಐಎಸ್‌ಐ ಜೊತೆ ಬಲವಾದ ಸಂಪರ್ಕ ಹೊಂದಿರುವ ಆರೋಪದ ಮೇಲೆ ಗೂಢಚಾರ ಗಗನ್‌ದೀಪ್ ಸಿಂಗ್​​ನನ್ನು ಬಂಧಿಸಲಾಗಿದೆ. ಆತ ಖಲಿಸ್ತಾನಿ ಉಗ್ರ ಗೋಪಾಲ್ ಸಿಂಗ್ ಚಾವ್ಲಾನೊಂದಿಗೂ ಸಂಬಂಧ ಹೊಂದಿದ್ದಾನೆ. ಆರೋಪಿಯು ಆಪರೇಷನ್ ಸಿಂದೂರ ಸೇರಿದಂತೆ ಗಡಿಯಾಚೆಗಿನ ಏಜೆಂಟರೊಂದಿಗೆ ಸೇನಾ ಚಲನವಲನಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ

ಆಪರೇಷನ್‌ ಸಿಂದೂರ ಮಾಹಿತಿ ರವಾನಿಸಿದ್ದ ಪಾಕ್‌ ಗೂಢಚಾರ ಸೆರೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ | ಗಳಿಕೆಯ ಜತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು : ನಿವೇದಿತಾ ಕಾಮತ್‍

ಪುತ್ತೂರು: ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುರಿ ಇರುತ್ತದೆ, ಅದನ್ನು ತಲುಪುವಲ್ಲಿ ಅಪಾರವಾದ ಶ್ರದ್ಧೆ ಮತ್ತು ಅವಿರತವಾದ ಶ್ರಮದ ಆವಶ್ಯಕತೆ ಇದೆ ಎಂದು ಎಸ್‌ ಎಪಿ ಲ್ಯಾಬ್ ಇಂಡಿಯಾದ ಡೆವೆಲಪ್‌ಮೆಂಟ್ ಎಕ್ಸ್ ಪರ್ಟ್ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿನಿ ನಿವೇದಿತಾ ಕಾಮತ್ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಸಮಾಜ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ | ಗಳಿಕೆಯ ಜತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು : ನಿವೇದಿತಾ ಕಾಮತ್‍ Read More »

ಗ್ಯಾರಂಟಿಗಳನ್ನು ಸರಿಯಾಗಿ ಕೊಡದಿದ್ದರೂ ಅನುಷ್ಠಾನ ಸಮಿತಿಯಲ್ಲಿರುವವರಿಗೆ ಮುಂಗಡ ಹಣ ಬಿಡುಗಡೆ

ಸರ್ಕಾರದ ನಡೆಗೆ ತೀವ್ರ ಟೀಕೆ ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಜನರಿಗೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೂ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಕ್ಲಪ್ತವಾಗಿ 7.65 ಕೋಟಿ ರೂ. ಹಣ ಬಿಡುಗಡೆ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆ ಆಗುತ್ತಿಲ್ಲ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದ್ದು, ಟಿಕೆಟ್ ದರ ಏರಿಕೆ ಮಾಡಿ ಬರೆ

ಗ್ಯಾರಂಟಿಗಳನ್ನು ಸರಿಯಾಗಿ ಕೊಡದಿದ್ದರೂ ಅನುಷ್ಠಾನ ಸಮಿತಿಯಲ್ಲಿರುವವರಿಗೆ ಮುಂಗಡ ಹಣ ಬಿಡುಗಡೆ Read More »

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌

ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಆಕ್ರೋಶ ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಸರಣಿ ಪ್ರಶ್ನೆ ಮಾಡಿರುವ ಅವರು,

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌ Read More »

ಕಂಟೈನರ್ ನಲ್ಲಿ ಅಕ್ರಮ ದನ ಸಾಗಾಟ : ಓರ್ವ ಆರೋಪಿ ಬಂಧನ

ಕೇರಳ : ಕಂಟೈನರ್‌ ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿಸುತ್ತಿದ್ದ 24 ದನಗಳನ್ನು ರಕ್ಷಿಸಿದ ಸಿಸಿಬಿ ಪೊಲೀಸರು ಕಂಟೈನರ್ ಲಾರಿಯನ್ನು ವಶಕ್ಕೆ ಪಡೆದುಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಚಾಲಕ ಉತ್ತರ ಪ್ರದೇಶ ಮುಜಾಫರ್ ನಗರದ ಆಸಿಫ್ (25) ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಬಂದ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ. ಶರಣಪ್ಪ ಭಂಡಾರಿ ನೇತೃತ್ವದ ತಂಡ ಜು. 1ರ ನಸುಕಿನ ಜಾವ ತಲಪಾಡಿ

ಕಂಟೈನರ್ ನಲ್ಲಿ ಅಕ್ರಮ ದನ ಸಾಗಾಟ : ಓರ್ವ ಆರೋಪಿ ಬಂಧನ Read More »

ಇಂದು (ಜು.3) : ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಬೃಹತ್ ಖಂಡನಾ ಸಭೆ

ಪುತ್ತೂರು: ಹಿಂದೂ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಅರುಣ್‍ ಕುಮಾರ್ ಪುತ್ತಿಲ ಗಡಿಪಾರು ಆದೇಶ ವಿರೋಧಿಸಿ ಬೃಹತ್‍ ಖಂಡನಾ ಸಭೆ ಇಂದು (ಜೂ.3) ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ನಡೆಯಲಿದೆ. ಸಂಜೆ 5 ಗಂಟೆಗೆ ಖಂಡನಾ ಸಭೆ ನಡೆಯಲಿದೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು (ಜು.3) : ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಬೃಹತ್ ಖಂಡನಾ ಸಭೆ Read More »

ಅಕ್ಷರ ದೇಗುಲಕ್ಕೆ ಮೊದಲ ಹೆಜ್ಜೆ ಇಟ್ಟ ಪುಟಾಣಿಗಳಿಗೆ ಅಕ್ಕರೆಯ ಆರತಿ | ವೀರಮಂಗಲ ಪಿಎಂಶ್ರೀ ಶಾಲಾ ಆರಂಭೋತ್ಸವ

ಪುತ್ತೂರು: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಮಕ್ಕಳ ಕಲರವ. ಅಕ್ಷರ ದೇಗುಲಕ್ಕೆ ನೂತನವಾಗಿ ಕಾಲಿಡುವ ಭಾರತದ ಭವಿತವ್ಯದ ಕನಸುಗಳಿಗೆ ಅಕ್ಕರೆಯ ಆರತಿ . ತಲೆಗೊಂದು ಅಕ್ಷರ ಕಿರೀಟ, ಕೈಲೊಂದು ಬಲೂನ್, ಬ್ಯಾಂಡ್ ವಾಲಗದ ನಾದಕ್ಕೆ ಹೆಜ್ಜೆ ಇಡುತ್ತಾ ಬಂದ ಮಕ್ಕಳ ಮೊಗದಲ್ಲಿ  ಸಂಭ್ರಮದ ಕಲೆ.  ಹಸಿರು ಅಂಗಿ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಸಾಗಿ ಬಂದ ದೃಶ್ಯವನ್ನು ಸಂಭ್ರಮಿಸುವ ಕ್ಷಣಕ್ಕೆ ಪೋಷಕರು,ಶಿಕ್ಷಕರು ಸಾಕ್ಷಿಯಾದರು.  ಇಂದು ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಶಾಲೆ

ಅಕ್ಷರ ದೇಗುಲಕ್ಕೆ ಮೊದಲ ಹೆಜ್ಜೆ ಇಟ್ಟ ಪುಟಾಣಿಗಳಿಗೆ ಅಕ್ಕರೆಯ ಆರತಿ | ವೀರಮಂಗಲ ಪಿಎಂಶ್ರೀ ಶಾಲಾ ಆರಂಭೋತ್ಸವ Read More »

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ

36 ಮಂದಿಯ ಗಡಿಪಾರು ಪ್ರಕ್ರಿಯೆ ಶುರು; ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ಮಂಗಳೂರು : ಸರಣಿ ಹತ್ಯೆಗಳು ಮತ್ತು ಪ್ರಚೋದನಕಾರಿ ಭಾಷಣಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿಂದು ಮುಖಂಡ ಅರುಣ್‌ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್‌ ಕೊಟ್ಟ ಬೆನ್ನಲ್ಲೇ ಇದೇ ಮಾದರಿಯಲ್ಲಿ ಇನ್ನೂ 36 ಜನರಿಗೆ ನೋಟಿಸ್‌ ನೀಡಲಾಗಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ 36 ಜನರ ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ Read More »

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ

ದುರುದ್ದೇಶದಿಂದ ಎಫ್​ಐಆರ್​ ದಾಖಲಿಸಲಾಗಿದೆ ಎಂದು ವಾದ ಮಂಗಳೂರು: ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾ‌.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠ ಆದೇಶ ಹೊರಡಿಸಿ ಜೂನ್ 10ಕ್ಕೆ ವಿಚಾರಣೆ ಮುಂದೂಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಎಫ್‌ಐಆರ್‌ ದಾಖಲಾದ ಬಳಿಕ ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ನಿನ್ನೆಯೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಭಾಷಣ ಮಾಡಿದ ಹಲವು

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ Read More »

error: Content is protected !!
Scroll to Top