ಹೊಸಂಗಡಿ ಸಿದ್ಧಾಪುರ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಒಂಟಿ ಸಲಗ

ಸಿದ್ಧಾಪುರ: ಇಂದು ಬೆಳಗಿನ ಜಾವ ಒಂಟಿ ಸಲಗವೊಂದು ಬಾಳೆಬರೆ ಘಾಟ್  ಹೊಸಂಗಡಿ ಸಿದ್ದಾಪುರ ಜನವಸತಿ  ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಸಲಗ ಸಂಚಾರ ಕಂಡು ಬರುತ್ತಿದ್ದಂತೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸಾರ್ವಜನಿಕರ, ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇಂದು ಸಿದ್ದಾಪುರ ಭಾಗದ ಶಾಲಾ ಕಾಲೇಜು ಅಂಗನವಾಡಿಗಳಿಗೆ ರಜೆ ಘೋಷಣೆ ಜತೆಗೆ ಸಿದ್ಧಾಪುರ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ.

ಹೊಸಂಗಡಿ ಸಿದ್ಧಾಪುರ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಒಂಟಿ ಸಲಗ Read More »

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ

ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ತನಕ ಭವ್ಯ ವಿಕ್ಟರಿ ಪರೇಡ್‌ ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಚಾಂಪಿಯನ್‌ ಆದ ಬಳಿಕ ಕರ್ನಾಟಕದಲ್ಲಿ ಸಂಭ್ರಮ ಮನೆಮಾಡಿದೆ. 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿಯ ಅದ್ದೂರಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಅಧಿಕೃತವಾಗಿ ಆರ್‌ಸಿಬಿ ಈ ವಿಚಾರವನ್ನು ತಿಳಿಸಿದ್ದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಯಾಗಲಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.

ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ

ಕೊಲೆಗೆ ಸಂಚು ರೂಪಿಸಿ, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೇ 1ರಂದು ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಮಾಡಲಾಗಿತ್ತು. ಬಂಧಿತ ವ್ಯಕ್ತಿಯ ಮೇಲೆ ಪ್ರಮುಖ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವಿದೆ. ಬಂಧಿತನನ್ನು ಮಂಗಳೂರು ಬಜ್ಪೆ ಶಾಂತಿಗುಡ್ಡೆಯ ಬದ್ರಿಯಾ ಜುಮಾ ಮಸೀದಿ ಬಳಿಯ

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಬಂಧನ Read More »

ಸರ್ಕಾರದ ನಡವಳಿಕೆಯಿಂದಲೇ ಕರಾವಳಿಯಲ್ಲಿ ಕಾನೂನು ಹಾಳು : ಬಿ.ವೈ. ವಿಜಯೇಂದ್ರ

ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡಲು ಕುತಂತ್ರ ಎಂದು ಆರೋಪ ಬೆಂಗಳೂರು: ಸರ್ಕಾರದ ನಡವಳಿಕೆಯಿಂದ ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ತಿದ್ದಿಕೊಳ್ಳದೆ ಪೊಲೀಸ್ ಮೂಲಕ ಗೂಂಡಾಗಿರಿ ಮಾಡಿದ್ದೇ ಆದರೆ, ಬಿಜೆಪಿ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ. ರಾಜ ಮಹಾರಾಜರು ಹಿಂದೆ ನಮ್ಮ ದೇಶವನ್ನು ಆಳಿದ್ದರು. ಆಗ ಪಾಳೇಗಾರರು ಇದ್ದ ಬಗ್ಗೆ ನಾವು ಕೇಳಿದ್ದೇವೆ. ಆ ಪಾಳೇಗಾರಿಕೆಯನ್ನು ಹಂಗಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ

ಸರ್ಕಾರದ ನಡವಳಿಕೆಯಿಂದಲೇ ಕರಾವಳಿಯಲ್ಲಿ ಕಾನೂನು ಹಾಳು : ಬಿ.ವೈ. ವಿಜಯೇಂದ್ರ Read More »

ಬೆಂಗಳೂರು ಮುಡಿಗೆ ಐಪಿಎಲ್‌ ಚಾಂಪಿಯನ್‌ ಕಿರೀಟ : ಎಲ್ಲೆಡೆ ಮುಗಿಲು ಮುಟ್ಟಿದ ಕನ್ನಡಿಗರ ಸಂಭ್ರಮ

18 ವರ್ಷಗಳ ಬಳಿಕ ಕಪ್‌ ಗೆದ್ದು ಬೀಗಿದ ಆರ್‌ಸಿಬಿ ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೧೮ ವರ್ಷಗಳ ಸತತ ನಿರೀಕ್ಷೆಯ ಬಳಿಕ ಕೊನೆಗೂ ಟ್ರೋಫಿ ಎತ್ತಿ ಹಿಡಿದಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಕಾದಾಟದಲ್ಲಿ ಆರ್​ಸಿಬಿ 6 ರನ್​ಗಳ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೇಯಸ್ ಪಡೆಗೆ ಗೆಲ್ಲಲು ಆರ್​ಸಿಬಿ 191 ರನ್​ಗಳ ಟಾರ್ಗೆಟ್ ನೀಡಿತ್ತು. ಆದರೆ ರಜತ್ ಪಡೆಯ

ಬೆಂಗಳೂರು ಮುಡಿಗೆ ಐಪಿಎಲ್‌ ಚಾಂಪಿಯನ್‌ ಕಿರೀಟ : ಎಲ್ಲೆಡೆ ಮುಗಿಲು ಮುಟ್ಟಿದ ಕನ್ನಡಿಗರ ಸಂಭ್ರಮ Read More »

ಘನ ವಾಹನಗಳಿಗೆ ತಡೆ : ಹಲವರ ವಿರುದ್ಧ ಪ್ರಕರಣ ದಾಖಲು

ವಿಟ್ಲ: ವಿಟ್ಲ: ಘನ ವಾಹನಗಳಿಗೆ ತಡೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಹಲವರ ಮೇಲೆ ಪ್ರಕರಣ  ದಾಖಲಿಸಿದ್ದಾರೆ. ಅಪಘಾತದ ಹಿನ್ನಲೆಯಲ್ಲಿ ರಿಯಾಝ್‌, ಸಮದ್‌,  ಕುಂಞಿಮೋನು, ರಹಿಮಾನ್‌, ಸುಲೈಮಾನ್‌ ಮತ್ತು ಇತರ 25 ರಿಂದ 30 ಜನರು ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿದ್ದರು. ಜೂ. 2ರಂದು ರಾತ್ರಿ ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ ಕೆಲವರು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ನಿಲ್ಲಿಸಿದ ಮಾಹಿತಿ ಬಂದ ಮೇರೆಗೆ, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ

ಘನ ವಾಹನಗಳಿಗೆ ತಡೆ : ಹಲವರ ವಿರುದ್ಧ ಪ್ರಕರಣ ದಾಖಲು Read More »

ಇಂದಿನಿಂದ ಹಿಂದೂಗಳ ಮನೆಗೆ ನುಗ್ಗಿ ದಮನಿಸುವ ಕೆಲಸ ಮಾಡಿದರೆ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ : ಅರುಣ್‍ ಕುಮಾರ್ ಪುತ್ತಿಲ | ರಾಜ್ಯ ಸರಕಾರದ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಗಡಿಪಾರು ಆದೇಶ ವಿರೋಧಿಸಿ ಬೃಹತ್‍ ಖಂಡನಾ ಸಭೆ

ಪುತ್ತೂರು: ನನ್ನ ಮೇಲೆ ಗಡಿಪಾರು ಆದೇಶ ಇದ್ದರೂ ಮುಂದಿನ ದಿನಗಳಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡಲಿದ್ದೇನೆ. ಇಂದಿನಿಂದ ರಾತ್ರಿ ಪೊಲೀಸ್ ಇಲಾಖೆ ಯಾವುದೇ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಅರುಣ್‍ ಕುಮಾರ್‍ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ನುಗ್ಗಿ ದರ್ಪ

ಇಂದಿನಿಂದ ಹಿಂದೂಗಳ ಮನೆಗೆ ನುಗ್ಗಿ ದಮನಿಸುವ ಕೆಲಸ ಮಾಡಿದರೆ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ : ಅರುಣ್‍ ಕುಮಾರ್ ಪುತ್ತಿಲ | ರಾಜ್ಯ ಸರಕಾರದ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಗಡಿಪಾರು ಆದೇಶ ವಿರೋಧಿಸಿ ಬೃಹತ್‍ ಖಂಡನಾ ಸಭೆ Read More »

ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ : ಚಾಲಕ ಶರತ್ ಕುಮಾರ್ ನಿಧನ

ಕೊಕ್ಕಡ: ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಸಮೀಪದ ಕೆಂಪಕೋಡಿನ ನಿವಾಸಿ ರಘುರಾಮ ಮಡಿವಾಳ ಅವರ ಪುತ್ರ  ಶರತ್ ಕುಮಾರ್ ಕೆ. (36) ಮೃತಪಟ್ಟವರು. ಶರತ್ ಕುಮಾರ್ ಇಂದು ಬೆಳಿಗ್ಗೆ ಸ್ವಂತ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಸ್ಥಳೀಯರು ಕೂಡಲೇ ಶರತ್‌ ರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದಾಗಲೇ ಅವರು ನಿಧನ ಹೊಂದಿದ್ದರು. ಮೃತರು

ಚಲಿಸುತ್ತಿದ್ದ ಆಟೋದಲ್ಲಿ ಹೃದಯಾಘಾತ : ಚಾಲಕ ಶರತ್ ಕುಮಾರ್ ನಿಧನ Read More »

ಸರಕಾರ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಗಡಿಪಾರು ಆದೇಶ | ಹಿಂದೂ ನಾಯಕರ ಮನೆಗಳಿಗೆ ತೆರಳಿ ಫೋಟೊ ತೆಗೆದು ಜಿಪಿಎಸ್‍ | ದ.ಕ. ದ ಹಿಂದೂ ನಾಯಕರ ಪ್ರಾಣಕ್ಕೆ ಅಪಾಯ ಉಂಟಾದರೆ  ಸರಕಾರ, ಪೊಲೀಸ್ ಇಲಾಖೆ ನೇರ ಹೊಣೆ : ರಾಜ್ಯ ಸರಕಾರ, ಪೊಲೀಸ್  ಇಲಾಖೆ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್‍ ಎಸ್‍, ಬಿಜೆಪಿ, ಸಂಘ ಪರಿವಾರ ಸಂಘಟನೆಯ ಮುಖಂಡರನ್ನು ಟಾರ್ಗೆಟ್ ಮಾಡಿ ಗಡಿಪಾರು ಮಾಡುವ ಜತೆಗೆ ರಾತ್ರಿ ಹೊತ್ತಿನಲ್ಲಿ ಹಿಂದೂ ಮುಖಂಡರ ಮನೆಗಳಿಗೆ ತೆರಳಿ ಫೋಟೊ ತೆಗೆದು ಜಿಪಿಎಸ್‍ ಮಾಡುತ್ತಿರುವ ಪ್ರಕರಣ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೊಣೆ. ನಿಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಸರಕಾರದ ಕುಮ್ಮಕ್ಕಿನಲ್ಲಿ ಪೊಲೀಸ್‍ ಇಲಾಖೆ ಮಾಡುತ್ತಿದೆ ಎಂದು ರಾಜ್ಯ ಸರಕಾರ ಹಾಗೂ

ಸರಕಾರ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಗಡಿಪಾರು ಆದೇಶ | ಹಿಂದೂ ನಾಯಕರ ಮನೆಗಳಿಗೆ ತೆರಳಿ ಫೋಟೊ ತೆಗೆದು ಜಿಪಿಎಸ್‍ | ದ.ಕ. ದ ಹಿಂದೂ ನಾಯಕರ ಪ್ರಾಣಕ್ಕೆ ಅಪಾಯ ಉಂಟಾದರೆ  ಸರಕಾರ, ಪೊಲೀಸ್ ಇಲಾಖೆ ನೇರ ಹೊಣೆ : ರಾಜ್ಯ ಸರಕಾರ, ಪೊಲೀಸ್  ಇಲಾಖೆ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ Read More »

ಹೇಳಿಕೆ ವಿವಾದ : ಕಮಲಹಾಸನ್‌ಗೆ ಕೋರ್ಟ್‌ ತರಾಟೆ

ಕ್ಷಮೆ ಕೇಳಲು ಆಗದಿದ್ದರೆ ಕರ್ನಾಟಕವನ್ನು ಬಿಟ್ಟುಬಿಡಿ ಭಾಷೆಯ ಬಗ್ಗೆ ಮಾತನಾಡಲು ನೀವು ಭಾಷಾ ತಜ್ಞರೆ? ಬೆಂಗಳೂರು: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ಕನ್ನಡಿಗರನ್ನು ಕೆಣಕಿರುವ ನಟ ಕಮಲಹಾಸನ್‌ ಅವರನ್ನು ನ್ಯಾಯಾಲಯ ಇಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ. ತನ್ನ ಥಗ್‌ಲೈಫ್‌ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಕಮಲಹಾಸನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ಹೈಕೋರ್ಟ್‌ ನ್ಯಾಯಾಧೀಶ ನಾಗಪ್ರಸನ್ನ ಅವರ ಪೀಠ ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ ಎಂದು

ಹೇಳಿಕೆ ವಿವಾದ : ಕಮಲಹಾಸನ್‌ಗೆ ಕೋರ್ಟ್‌ ತರಾಟೆ Read More »

error: Content is protected !!
Scroll to Top