ಮಂಗಳೂರು: ಟ್ಯಾಂಕರ್‌ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸಹಸವಾರ ಮೃತ್ಯು

ಮಂಗಳೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸಹಸವಾರ ಟ್ಯಾಂಕರ್‌ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಸುರತ್ಕಲ್ ಕಾನ ಜನತಾ ಕಾಲನಿ‌ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದ್ದು, ಮುಲ್ಕಿ ಕೊಲ್ನಾಡು ನಿವಾಸಿ ಮುಹಮ್ಮದ್ ಶರೀಫ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಶ್ರಫ್ ಮತ್ತು ಶರೀಫ್ ಮಂಗಳೂರು ಕಡೆಯಿಂದ ಸುರತ್ಕಲ್‌ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಹಾಸನದಿಂದ […]

ಮಂಗಳೂರು: ಟ್ಯಾಂಕರ್‌ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸಹಸವಾರ ಮೃತ್ಯು Read More »

ಆಗಸ್ಟ್‌ 15ರಿಂದ ದೇವಸ್ಥಾನಗಳು ಪ್ಲಾಸ್ಟಿಕ್‌ಮುಕ್ತ

ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲು ಸೂಚನೆ ಬೆಂಗಳೂರು : ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ನೀರಿನ ಬಾಟಲ್‌ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ ಮಾಡಿದ್ದಾರೆ. ಆಗಸ್ಟ್ 15ರಿಂದ ಪ್ಲಾಸ್ಟಿಕ್‌ ಮುಕ್ತ ದೇವಾಲಯ ಅಭಿಯಾನ ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂದು ಹೇಳಿದ್ದಾರೆ. ಈ ಆದೇಶ ಜಾರಿಗೆ 2 ತಿಂಗಳು ಸಮಯಾವಕಾಶ ಕೊಡಲಾಗಿದ್ದು, ಈಗಾಗಲೇ

ಆಗಸ್ಟ್‌ 15ರಿಂದ ದೇವಸ್ಥಾನಗಳು ಪ್ಲಾಸ್ಟಿಕ್‌ಮುಕ್ತ Read More »

ಹಡಗಿನಲ್ಲಿ ಭೀಕರ ಅಗ್ನಿ ಅವಘಡ : ನಾಲ್ಕು ಸಿಬ್ಬಂದಿ ನಾಪತ್ತೆ; 18 ಮಂದಿಯ ರಕ್ಷಣೆ

ಗಾಯಗೊಂಡವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಂಗಳೂರು : ಕೇರಳದ ಕೊಚ್ಚಿ ಕರಾವಳಿ ತೀರದಿಂದ ಸುಮಾರು 78 ನಾಟಿಕಲ್‌ ಮೈಲು ದೂರದಲ್ಲಿ ಸರಕು ಸಾಗಿಸುವ ಹಡಗಿಗೆ ಬೆಂಕಿ ಹತ್ತಿಕೊಂಡು ಭಾರಿ ದುರಂತ ಸಂಭವಿಸಿದೆ. ಸಿಂಗಾಪುರ ಮೂಲದ ಹಡಗಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಹಡಗಿನ 18 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಅಝಿಕ್ಕಲ್ ಮತ್ತು ಕೊಚ್ಚಿಯ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ. ಸಿಂಗಾಪುರ ಮೂಲದ ಕಂಟೇನರ್ ಹಡಗಿನ ಎಂವಿ ವಾನ್ ಹೈ 503ನಲ್ಲಿದ್ದ 22

ಹಡಗಿನಲ್ಲಿ ಭೀಕರ ಅಗ್ನಿ ಅವಘಡ : ನಾಲ್ಕು ಸಿಬ್ಬಂದಿ ನಾಪತ್ತೆ; 18 ಮಂದಿಯ ರಕ್ಷಣೆ Read More »

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್‍ | ಪೊಲೀಸ್‍ ದೌರ್ಜನ್ಯದ ಕುರಿತು ಬಿಜೆಪಿಯಿಂದ ಮಾಹಿತಿ ಸಂಗ್ರಹ ಸಭೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿರುವುದು ಮತ್ತು ಗಡಿಪಾರು ನೋಟಿಸ್ ನೀಡಿರುವುದು ಹಾಗೂ ಪೊಲೀಸ್ ದೌರ್ಜನ್ಯದ ಕುರಿತು ಮಾಹಿತಿ ಸಂಗ್ರಹ ಸಭೆ ಇಂದು ನಡೆಯಿತು. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿ ಪಕ್ಷ ನಾಯಕರಾದ ಆರ್‍.ಅಶೋಕ್‍, ಚಲವಾದಿ ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ  ಸಹಿ ಸಂಗ್ರಹ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್‍ ಕುಂಪಲ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕರಾದ ಅರವಿಂದ ಬೆಲ್ಲದ, ಎನ್‍.ರವಿ ಕುಮಾರ್‍,

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್‍ | ಪೊಲೀಸ್‍ ದೌರ್ಜನ್ಯದ ಕುರಿತು ಬಿಜೆಪಿಯಿಂದ ಮಾಹಿತಿ ಸಂಗ್ರಹ ಸಭೆ Read More »

ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ

ಬೆಳ್ತಂಗಡಿ: ವಾಗೀಶ್ ವಿ 68 ಅಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಜೂನ್ 8 ಭಾನುವಾರದಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾಗಿದೆ. ಸಮಾಜ ಸೇವಕ ,ಆಪತ್ಬಾಂದವ ಈಶ್ವರ್ ಮಲ್ಪೆ ಇವರು ಮೋಕೆದ ತಿರ್ಲ್ ಕಿರು ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಮೋಕೆದ ತಿರ್ಲ್ [True love (Fake love) =? ಎಂಬ ಕುತೂಹಲಕಾರಿಯಾದ ಸಿನಿಮಾ ಇದಾಗಿದೆ. ಈ ಸಸ್ಪೆನ್ಸ್ ತುಳು ಲವ್ ಸ್ಟೋರಿಯ ಬಿಡುಗಡೆ ಯ

ವಾಗೀಶ್ ವಿ 68 ಆಫೀಷಿಯಲ್ ಅರ್ಪಿಸುವ ಸಸ್ಪೆನ್ಸ್ ಲವ್ ಸ್ಟೋರಿಯ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ Read More »

ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ವೈದ್ಯ

ಚೆನ್ನೈ: ಯುವ ವೈದ್ಯನೋರ್ವ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ಬೆಳಕಿಗೆ ಬಂದಿದೆ. ದಿಂಡಿಗಲ್ ಜಿಲ್ಲೆಯ ವೇದಚಂದೂರಿನ ಡಾ. ಜೋಶುವಾ ಸಾಮ್ರಾಜ್ ಆತ್ಮಹತ್ಯೆ ಮಾಡಿಕೊಂಡವರು. ಜೋಶುವಾ ಅವರು ವೈದ್ಯಕೀಯ ಪದವಿ ಪೂರ್ಣಗೊಳಿಸಿ ತಮಿಳುನಾಡಿನಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಸದ್ಯ ಡಾ. ಜೋಶುವಾ ಸಾಮ್ರಾಜ್ ಸೇಲಂನಲ್ಲಿ (ಡಾಕ್ಟರ್ ಆಫ್ ಮೆಡಿಸಿನ್) ವ್ಯಾಸಂಗ ಮಾಡುತ್ತಿದ್ದು, ಮಧುರೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಜೋಶುವಾ ನಾಪತ್ತೆಯಾಗಿದ್ದರು

ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ವೈದ್ಯ Read More »

ಅನುಚಿತವಾಗಿ ವರ್ತಿಸಿದ ಓರ್ವನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅನುಚಿತವಾಗಿ ವರ್ತಸಿದ ಹಿನ್ಲೆಯಲ್ಲಿ ಪೊಲೀಸರು ವಿಚಾರಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಓರ್ವ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟ ಮೇರೆಗೆ ಓರ್ವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮಹಮ್ಮದ್ ಕಲಂದರ್ ಶಾಫಿ (24) ವಿರುದ್ಧ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಸ್.ಐ ಆಂಜನೇಯ ರೆಡ್ಡಿಯವರು ಸಿಬ್ಬಂದಿಗಳ ಜೊತೆ ಕೆದಿಲ ಗ್ರಾಮದ ಸತ್ತಿಕಲ್ಲು ಸ್ಥಳಕ್ಕೆ ಹೋಗಿ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ವರ್ತಿಸಿರುವ ಕುರಿತು ವಿಚಾರಿಸಿ ಅವರನ್ನು

ಅನುಚಿತವಾಗಿ ವರ್ತಿಸಿದ ಓರ್ವನ ವಿರುದ್ಧ ಪ್ರಕರಣ ದಾಖಲು Read More »

ಮುಂಬಯಿ : ಲೋಕಲ್‌ ರೈಲಿನಿಂದ ಬಿದ್ದು 8 ಮಂದಿ ಸಾವು

ದಾರುಣ ಅಂತ್ಯ ಕಂಡ ರೈಲಿನ ಬಾಗಿಲಲ್ಲಿ ನೇತಾಡುತ್ತಿದ್ದ ಪ್ರಯಾಣಿಕರು ಮುಂಬಯಿ: ಮಹಾನಗರದ ಲೋಕಲ್‌ ರೈಲಿನಿಂದ ಬಿದ್ದು 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗ್ಗಿನ ಹೊತ್ತು ಕಿಕ್ಕಿರಿದು ತುಂಬಿದ್ದ ಬಾಗಿಲಲ್ಲಿ ನೇತಾಡುತ್ತಿದ್ದ ಸುಮಾರು 12-15 ಮಂದಿ ಹಳಿ ಮೇಲೆ ಬಿದ್ದಿದ್ದಾರೆ. ಈ ಪೈಕಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಸರಾದಿಂದ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನಿಂದ ಹೋಗುತ್ತಿದ್ದ ಫಾಸ್ಟ್‌ ರೈಲಿನಲ್ಲಿ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ

ಮುಂಬಯಿ : ಲೋಕಲ್‌ ರೈಲಿನಿಂದ ಬಿದ್ದು 8 ಮಂದಿ ಸಾವು Read More »

ಆರ್‌ಸಿಬಿ ಭವಿಷ್ಯಕ್ಕೂ ಕಪ್ಪುಚುಕ್ಕೆಯಾದ ಕಪ್‌ ಸಂಭ್ರಮದ ದುರಂತ

ಐಪಿಎಲ್‌ನಿಂದ ಬೆಂಗಳೂರು ತಂಡವನ್ನು ನಿಷೇಧಿಸುವ ಸಾಧ್ಯತೆ ಬೆಂಗಳೂರು: ಹದಿನೆಂಟು ವರ್ಷಗಳ ಬಳಿಕ ಕಪ್‌ ಗೆದ್ದುಕೊಂಡ ಆರ್‌ಸಿಬಿ ತಂಡದ ಪಾರಮ್ಯ ಈ ವರ್ಷಕ್ಕೆ ಮುಗಿದು ಹೋಯಿತಾ? ಗೆಲುವಿನ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿದ ಬಳಿಕ ಕರ್ನಾಟಕ ಸರ್ಕಾರದ ಜೊತೆಗೆ ಆರ್‌ಸಿಬಿ ತಂಡಕ್ಕೆ ಕೂಡ ಕಪ್ಪುಚುಕ್ಕೆ ಅಂಟಿಕೊಂಡಿದೆ. ಈ ನಡುವೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026ರಿಂದ ಬ್ಯಾನ್ ಆಗಲಿದೆ ಎಂಬ ಪುಕಾರೊಂದು ಹುಟ್ಟಿಕೊಂಡಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೀಡಿರುವ

ಆರ್‌ಸಿಬಿ ಭವಿಷ್ಯಕ್ಕೂ ಕಪ್ಪುಚುಕ್ಕೆಯಾದ ಕಪ್‌ ಸಂಭ್ರಮದ ದುರಂತ Read More »

ಮೋದಿ ಸರ್ಕಾರ 3.0ಗೆ ಒಂದು ವರ್ಷ ಪೂರ್ಣ

ಸಾಧನೆ, ಸವಾಲುಗಳ ನಡುವೆ ಮೋದಿ ಜನಪ್ರಿಯತೆ ಅಬಾಧಿತ ನವದೆಹಲಿ: ಅನೇಕ ಸವಾಲು ಮತ್ತು ಸಾಧನೆಗಳ ನಡುವೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಯ ಒಂದನೇ ವರ್ಷವನ್ನು ಪೂರ್ಣಗೊಳಿಸಿದೆ. ಒಂದು ವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಎನ್‌ಡಿಎ ಮತ್ತು ಮೋದಿ ಸತತ 11 ವರ್ಷ ಆಳ್ವಿಕೆ ನಡೆಸಿದಂತಾಗಿದೆ. ಈ ಹನ್ನೊಂದು ವರ್ಷಗಳಲ್ಲಿ ಮೋದಿ ಜನಪ್ರಿಯತೆ ಅಬಾಧಿತವಾಗಿ ಮುಂದುವರಿಯುತ್ತಿದೆ ಎನ್ನುವುದು ವಿಶೇಷ. ಲೋಕಸಭಾ ಚುನಾವಣೆಯಲ್ಲಿ

ಮೋದಿ ಸರ್ಕಾರ 3.0ಗೆ ಒಂದು ವರ್ಷ ಪೂರ್ಣ Read More »

error: Content is protected !!
Scroll to Top