ಹನಿಮೂನ್‌ನಲ್ಲಿದ್ದ ದಂಪತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌

ಥ್ರಿಲ್ಲರ್‌ ಸಿನಿಮಾ ಮಾದರಿ ಇದೆ ಈ ಪ್ರಕರಣ ಶಿಲ್ಲಾಂಗ್: ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ ಬಳಿಕ ದಂಪತಿ ನಾಪತ್ತೆಯಾಗಿದ್ದ ಪ್ರಕರಣ ಥ್ರಿಲ್ಲರ್‌ ಸಿನಿಮಾ ಮಾದರಿ ಟ್ವಿಸ್ಟ್‌ ಪಡೆದುಕೊಂಡಿದ್ದು, ಪತಿಯನ್ನು ನವವಿವಾಹಿತ ಪತ್ನಿಯೇ ಕೊಲ್ಲಿಸಿರುವುದು ಬಯಲಾಗಿದೆ. ಹತ್ಯೆ ಆರೋಪದಲ್ಲಿ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ಇಂದೋರ್‌ನ ದಂಪತಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ ಬಳಿಕ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ದೇಶದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಟೂರಿಸ್ಟ್‌ ಗೈಡ್‌ ನೀಡಿದ್ದ ಸಣ್ಣ ಸುಳಿವೊಂದು ಇಡೀ ಪ್ರಕರಣವನ್ನು ಬಯಲೆಗೆಳೆಯಲು ಪೊಲೀಸರಿಗೆ ನೆರವಾಗಿದೆ. ಪತಿಯ ಕೊಲೆಗೆ ಸಂಚು […]

ಹನಿಮೂನ್‌ನಲ್ಲಿದ್ದ ದಂಪತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌ Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಕರಾಟೆ ತರಬೇತಿ ಉದ್ಘಾಟನೆ

ಪುತ್ತೂರು: ಪಿಎಂಶ್ರೀ ಶಾಲೆ ವೀರಮಂಗಲ ದಲ್ಲಿ ಕರಾಟೆ ತರಬೇತಿ ಉದ್ಘಾಟಿಸಲಾಯಿತು. ಕರಾಟೆ ತರಬೇತಿಯನ್ನು ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿ,  ಹೆಣ್ಣು ಮಕ್ಕಳ ಸ್ವ-ರಕ್ಷಣೆಗಾಗಿ ಕರಾಟೆ ಶಿಕ್ಷಣ ಪಿಎಂಶ್ರೀ ಯೋಜನೆಯ ಮಹತ್ತರ ಕಾರ್ಯಕ್ರಮವಾಗಿದ್ದು, ಕಳೆದ ಎರಡು ವರ್ಷಗಳಿಂದ 6 ಮತ್ತು 7 ನೇ ತರಗತಿಯ ಹೆಣ್ಣುಮಕ್ಕಳಿಗೆ ಮತ್ತು ಗಂಡು‌ ಮಕ್ಕಳಿಗೆ  ತರಬೇತಿ ನೀಡಲಾಗುತ್ತಿದೆ. ಇಲ್ಲಿ ಮಕ್ಕಳು ತಾಳ್ಮೆ, ಸಹನೆಯನ್ನು ಹಾಗೂ ಆತ್ಮರಕ್ಷಣಾ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಕರಾಟೆ ತರಬೇತಿ ಉದ್ಘಾಟನೆ Read More »

ಚಲಿಸುತ್ತಿದ್ದ ಕಾರು ತಡೆದು ಹಲ್ಲೆ : ಪ್ರಕರಣ ದಾಖಲು

ಪುತ್ತೂರು: ಚಲಿಸುತ್ತಿದ್ದ ಕಾರನ್ನು ನಿಲ್ಲಿಸಿ ಹಲ್ಲೆ ನಡೆಸಿದ ಘಟನೆ ಕೆದಿಲ ಗ್ರಾಮದ ಗಾಂಧಿನಗರದಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಗಿದೆ. ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶಿಕ್ (28) ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ತನ್ನ ಕಾರಿನಲ್ಲಿ ಮಾರಿಪಳ್ಳ ಎಂಬಲ್ಲಿಗೆ ಹೋಗಿ ಬರುತ್ತಿದ್ದ ಸಂದರ್ಭ ಕೆದಿಲ ಗ್ರಾಮದ ಗಾಂಧಿನಗರದಲ್ಲಿ ಶಾಫಿ ಗಡಿಯಾರ ಮತ್ತು ಜೆಸಿಬಿ ಸಿದ್ಧಿಕ್ ಎಂಬವರು ಕಾರನ್ನು ತಡೆದ ನಿಲ್ಲಿಸಿ. ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ಅಬೂಬಕ್ಕರ್ ರಾಶಿಕ್ ಪುತ್ತೂರು

ಚಲಿಸುತ್ತಿದ್ದ ಕಾರು ತಡೆದು ಹಲ್ಲೆ : ಪ್ರಕರಣ ದಾಖಲು Read More »

ಆ.8 : ಪುತ್ತಿಲ ಪರಿವಾರ ಸೇವಾ ಟ್ರಸ್ಟ್‍, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ | ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಆಶ್ರಯದಲ್ಲಿ ಆ.:8 ಶುಕ್ರವಾರ ನಡೆಯಲಿರುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸುಭದ್ರಾ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು. ವರಮಹಾಲಕ್ಷ್ಮಿ ಪೂಜೆಯ ಸಮಿತಿ ಗೌರವಾಧ್ಯಕ್ಷರಾಗಿ ರಜತಾ ಗಿರೀಶ್ ಭಟ್, ಗೌರವ ಸಲಹೆಗಾರರಾಗಿ ಶಾರದಾ ಪ್ರಭು, ಕಿಶೋರಿ ಕಿಶೋರ್, ಸಂಚಾಲಕರಾಗಿ ಪುಷ್ಪ ರಾಜೇಶ್, ಅಧ್ಯಕ್ಷರಾಗಿ ಪ್ರೇಮಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಅನ್ನಪೂರ್ಣ ಬಲ್ಲಾಳ್, ಉಪಾಧ್ಯಕ್ಷರಾಗಿ ಪವಿತ್ರ, ವೀಣಾ, ಸ್ಮಿತಾ, ಪ್ರೇಮ ಮುಂಡೂರು,

ಆ.8 : ಪುತ್ತಿಲ ಪರಿವಾರ ಸೇವಾ ಟ್ರಸ್ಟ್‍, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ | ಪದಾಧಿಕಾರಿಗಳ ಆಯ್ಕೆ Read More »

ಮೂರೂ ಕೊಲೆ ಪ್ರಕರಣಗಳ ಎನ್‌ಐಎ ತನಿಖೆ : ಮುಂಜುನಾಥ ಭಂಡಾರಿ ಆಗ್ರಹ

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬೇಡ ಎಂದು ಹೇಳಿಕೆ ಮಂಗಳೂರು: ದ.ಕ. ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿದ್ದು, ಈ ಮೂರು ಕೊಲೆ ಪ್ರಕರಣಗಳ ಎನ್‌ಐಎ ತನಿಖೆಯಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ. ಬೆನ್ನುಬೆನ್ನಿಗೆ ನಡೆದ ಈ ಮೂರು ಕೊಲೆಗಳು ಇಡೀ ಕರಾವಳಿಯಲ್ಲಿ ಆತಂಕ ಮೂಡಿಸಿವೆ. ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಿದರೆ ದುಷ್ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ಮಂಜುನಾಥ್

ಮೂರೂ ಕೊಲೆ ಪ್ರಕರಣಗಳ ಎನ್‌ಐಎ ತನಿಖೆ : ಮುಂಜುನಾಥ ಭಂಡಾರಿ ಆಗ್ರಹ Read More »

ಪುತ್ತೂರು: ‘ನಿಧಿ ಫುಡ್ಸ್’ನ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಎಗ್ಸಲೆನ್ಸ್ ಪ್ರಶಸ್ತಿ

ಪುತ್ತೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ಬೆಂಗಳೂರಿನ ಹೆಸರಘಟ್ಟದಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ದಡಿಯಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಪುತ್ತೂರಿನ ಮುಕ್ವೆಯಲ್ಲಿ ಕಾರ್ಯಾಚರಿಸುತ್ತಿರುವ ನಿಧಿ ಫುಡ್ಸ್’ನ ಮ್ಹಾಲಕ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ‘ ‘ಇನೋವೇಟಿವ್ ಎಂಟ್ರೆಪ್ರೆನ್ಯೂರ್ – ಅವಾರ್ಡ್ ಆಫ್ ಎಗ್ಸಲೆನ್ಸ್’ ಪ್ರಶಸ್ತಿ ಲಭಿಸಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಘ್ ಚೌಹಾಣ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 700 ಜಿಲ್ಲೆಗಳ 2,000ಕ್ಕೂ ಅಧಿಕ ವಿಜ್ಞಾನಿಗಳು ಭಾಗವಹಿಸಿದ್ದ ಈ ಬೃಹತ್

ಪುತ್ತೂರು: ‘ನಿಧಿ ಫುಡ್ಸ್’ನ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಎಗ್ಸಲೆನ್ಸ್ ಪ್ರಶಸ್ತಿ Read More »

ಸುಹಾಸ್‌ ಶೆಟ್ಟಿ ಹತ್ಯೆಯ ಎನ್‌ಐಎ ತನಿಖೆ : ಹಿಂದೂ ನಾಯಕರ ಸ್ವಾಗತ

ರಾಜ್ಯ ಸರ್ಕಾರದ ತನಿಖೆಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇರಲಿಲ್ಲ ಎಂದ ಕ್ಯಾ.ಬ್ರಿಜೇಶ್‌ ಚೌಟ ಮಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿರುವುದನ್ನು ಬಿಜೆಪಿ ಸಂಸದರು, ಶಾಸಕರು ಮತ್ತು ಮುಖಂಡರು ಸ್ವಾಗತಿಸಿ ಇದರಿಂದ ನೈಜ ಆರೋಪಿಗಳು ಸೆರೆಯಾಗಿ ನ್ಯಾಯ ಸಿಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಹಾಸ್ ಶೆಟ್ಟಿ ಅವರನ್ನು ಬಜಪೆಯಲ್ಲಿ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಮೇ

ಸುಹಾಸ್‌ ಶೆಟ್ಟಿ ಹತ್ಯೆಯ ಎನ್‌ಐಎ ತನಿಖೆ : ಹಿಂದೂ ನಾಯಕರ ಸ್ವಾಗತ Read More »

ವಿಧಾನ ಪರಿಷತ್‌ ನಾಮನಿರ್ದೇಶಿತ ಸದಸ್ಯರ ಆಯ್ಕೆಗೆ ಕೈ ಹೈಕಮಾಂಡ್‌ ತಡೆ

ಕೆಪಿಸಿಸಿ ಕಳುಹಿಸಿದ್ದ ನಾಲ್ಕು ಹೆಸರುಗಳನ್ನು ತಡೆಹಿಡಿದ ಹೈಕಮಾಂಡ್‌ ಬೆಂಗಳೂರು: ವಿಧಾನ ಪರಿಷತ್‌ನ ಖಾಲಿಯಾಗಿರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ಕಾಂಗ್ರೆಸ್‌ ಶಿಫಾರಸ್ಸು ಮಾಡಿದ್ದ 4 ಹೆಸರುಗಳಿಗೆ ಕಾಂಗ್ರೆಸ್‌ ಹೈಕಮಾಂಡ್‌ ಕೊನೇಕ್ಷಣದಲ್ಲಿ ತಾತ್ಕಾಲಿಕ ತಡೆ ನೀಡಿದೆ. ಹೀಗಾಗಿ ರಾಜ್ಯ ಕಾಂಗ್ರಸ್‌ ಆಯ್ಕೆ ಮಾಡಲುದ್ದೇಶಿಸಿರುವ ನಾಲ್ಕು ಮಂದಿಯಲ್ಲಿ ಯಾರದ್ದಾದರೂ ಹೆಸರನ್ನು ಕೈಬಿಡುವ ಸಾಧ್ಯತೆ ಇದೆಯೇ ಎಂಬ ಕುತೂಹಲ ಕೆರಳಿದೆ. ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಖಾಲಿ ಸ್ಥಾನಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌

ವಿಧಾನ ಪರಿಷತ್‌ ನಾಮನಿರ್ದೇಶಿತ ಸದಸ್ಯರ ಆಯ್ಕೆಗೆ ಕೈ ಹೈಕಮಾಂಡ್‌ ತಡೆ Read More »

ಕಾಲ್ತುಳಿತ ಘಟನೆಯ ತಪ್ಪೆಲ್ಲ ಪೊಲೀಸರದ್ದೇ : ಸಿದ್ದರಾಮಯ್ಯ

ನಾವು ತಪ್ಪೇ ಮಾಡಿಲ್ಲ, ಹೀಗಾಗಿ ಕಪ್ಪುಚುಕ್ಕೆ ಇಲ್ಲ ಎಂದು ಸಮರ್ಥನೆ ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಸಂಪೂರ್ಣ ಹೊಣೆ ಪೊಲೀಸರದ್ದೇ, ಸರ್ಕಾರ ತಪ್ಪೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಘಟನೆಯಲ್ಲಿ ಸರ್ಕಾರ ತಪ್ಪೇ ಮಾಡಿಲ್ಲ, ಪೊಲೀಸರು ತಪ್ಪು ಮಾಡಿದ್ದಾರೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರಿಂದಲೇ ತಪ್ಪು ನಡೆದಿದೆ. ಕಾರ್ಯಕ್ರಮಕ್ಕೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್‌

ಕಾಲ್ತುಳಿತ ಘಟನೆಯ ತಪ್ಪೆಲ್ಲ ಪೊಲೀಸರದ್ದೇ : ಸಿದ್ದರಾಮಯ್ಯ Read More »

ಮೊಬೈಲ್‍ ಕಳ್ಳನ ಬಂಧನ

ಪುತ್ತೂರು: ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನೊಬ್ಬನನ್ನು ಪೊಲೀಸರು ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಫೋನ್ ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆತನನ್ನು ಬೆನ್ನಟ್ಟಿ ಅರುಣಾ ಚಿತ್ರ ಮಂದಿರದ ಬಳಿ ಹಿಡಿದಿದ್ದಾರೆ. ಸದ್ಯ ಆತನನ್ನು ಪುತ್ತೂರು ಠಾಣೆಗೆ ಕರೆದೊಯ್ದಿದ್ದಾರೆ.

ಮೊಬೈಲ್‍ ಕಳ್ಳನ ಬಂಧನ Read More »

error: Content is protected !!
Scroll to Top