ನಾಳೆ (ಮೇ. 13) : ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ – ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ
ಪುತ್ತೂರು : ಮುಳಿಯದ ಹೊಸ ವಿನೂತನ ಶೋರೂಮ್ ಉದ್ಘಾಟನಾ ಸಮಾರಂಭದ ಅಂಗವಾಗಿ ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಇವರಿಂದ ಮೇ 13 ರಂದು ಸಂಜೆ .6.30 ಕ್ಕೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬೊಂಬೆಯಾಟ ನಡೆಯಲಿದೆ . ಗೊಂಬೆಯಾಟ ಅತೀ ಪುರಾತನ ಜಾನಪದ ಕಲೆಯಾಗಿದೆ. ನೂರು ವರ್ಷಗಳ ಹಿಂದೆ ನಮ್ಮ ಕರಾವಳಿಯಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ಬೊಂಬೆಯಾಟ ತಂಡಗಳಿದ್ದುವು. ಆದರೆ ಆಧುನಿಕ ಮಾಧ್ಯಮಗಳ ಹಾವಳಿಯಿಂದ ಈ ಜಾನಪದ ಕಲೆಯೂ ಅವನತಿಯ ಅಂಚಿನತ್ತ ಧಾವಿಸುತ್ತಿದೆ. ಇಂದು ಕೇವಲ ಎರಡು ತಂಡಗಳು […]