ಪುತ್ತೂರಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ ಗಾನಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆಯಲ್ಲಿ. ಅಂತರಾಜ್ಯ ಮಟ್ಟದ ”ಕೃಷಿ ರತ್ನ ಪ್ರಶಸ್ತಿ” ಪ್ರಧಾನ.

ಪೆರ್ನಾಜೆ:ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ).ಪಾಂಬಾರ್ ಇದರ ವತಿಯಿಂದ  ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ  ಮಂದಿರ ಪುತ್ತೂರಲ್ಲಿ ಜೂನ್ 15 ರಂದು ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು. ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ […]

ಪುತ್ತೂರಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ ಗಾನಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆಯಲ್ಲಿ. ಅಂತರಾಜ್ಯ ಮಟ್ಟದ ”ಕೃಷಿ ರತ್ನ ಪ್ರಶಸ್ತಿ” ಪ್ರಧಾನ. Read More »

ಸೈನಿಕರು ಬಲಿಷ್ಠವಾಗಿದ್ದರಷ್ಟೇ ದೇಶ ಬಲಿಷ್ಠ : ರಾಜನಾಥ್ ಸಿಂಗ್

ಉಧಂಪುರ: ಮುಂದಿನ ದಿನಗಳಲ್ಲಿ ಭಾರತ ಎಂದಿಗೂ ಭಯೋತ್ಪಾದನೆಗೆ ಬಲಿಯಾಗುವುದಿಲ್ಲ. ಉಗ್ರ ಶಕ್ತಿಗಳ ವಿರುದ್ಧ ಶಕ್ತಿ ಮತ್ತು ಕಾರ್ಯ ತಂತ್ರಗಳ ಮೂಲಕ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉಧಂಪುರ ಉತ್ತರ ಕಮಾಂಡ್‌ನಲ್ಲಿ ಸೈನಿಕರ ಜೊತೆಗೆ ಸಂವಾದ ನಡೆಸಿದ ಅವರು ಉಗ್ರವಾದದ ವಿರುದ್ದ ಭಾರತದ ಬಲವಾದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪಾಕ್ ಮತ್ತು ಪಿಒಕೆ‌ಯಲ್ಲಿ ಉಗ್ರರ ಮೂಲಸೌಕರ್ಯಗಳನ್ನು ನಾಶ ಮಾಡುವ ಕಾರ್ಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸಮನ್ವಯತೆ, ನಿಖರತೆ ಮತ್ತು

ಸೈನಿಕರು ಬಲಿಷ್ಠವಾಗಿದ್ದರಷ್ಟೇ ದೇಶ ಬಲಿಷ್ಠ : ರಾಜನಾಥ್ ಸಿಂಗ್ Read More »

ವಸತಿ ಇಲಾಖೆ ಭ್ರಷ್ಟಾಚಾರದಿಂದ ಮುಜುಗರಕ್ಕೀಡಾದ ಸರ್ಕಾರ

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ರಂಗಕ್ಕಿಳಿದ ಸಚಿವರು ಬೆಂಗಳೂರು: ಪದೇ ಪದೆ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಈಗ ವಸತಿ ಇಲಾಖೆಯಲ್ಲಿ ಕೇಳಿಬಂದಿರುವ ಭಾರಿ ಭ್ರಷ್ಟಾಚಾರದ ಆರೋಪ ಮತ್ತಷ್ಟು ಮುಜುಗರವನ್ನುಂಟುಮಾಡಿದೆ. ದಿನೇಶ್‌ ಗುಂಡೂರಾವ್‌, ಈಶ್ವರ ಖಂಡ್ರೆ ಸೇರಿದಂತೆ ಹಲವು ಸಚಿವರು ಈಗ ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನಕ್ಕೆ ಮುಂದಾಗಿದ್ದಾರೆ. ದೇಶದ ಎಲ್ಲ ಕಡೆ ಭ್ರಷ್ಟಾಚಾರ ಇದೆ. ಎಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಎನ್ನುವುದಕ್ಕಾಗಲ್ಲ. ಇ.ಡಿ., ಐಟಿ ದಾಳಿಯಲ್ಲೂ ಭ್ರಷ್ಟಾಚಾರ ಇರುತ್ತದೆ. ಹಣ ತೆಗೆದುಕೊಂಡು ಬಿಟ್ಟುಬಿಡುತ್ತಾರೆ. ವಸತಿ

ವಸತಿ ಇಲಾಖೆ ಭ್ರಷ್ಟಾಚಾರದಿಂದ ಮುಜುಗರಕ್ಕೀಡಾದ ಸರ್ಕಾರ Read More »

ಕನಸಿನಲ್ಲಿ ಬಂದ ಆಂಜನೇಯ : ಹಿಂದೂ ಧರ್ಮಕ್ಕೆ ಮರಳಿದ ಇಡೀ ಕುಟುಂಬ

ಕೆಲ ವರ್ಷಗಳ ಹಿಂದೆ ಮತಾಂತರಗೊಂಡಿದ್ದ ಕುಟುಂಬ ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಕನಸಿನಲ್ಲಿ ಹನುಮಾನ್‌ ಬಂದ ಬಳಿಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗಿರಿನಗರ ಕಾಲೊನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಎಂಬವರು ತಮ್ಮ ಕುಟುಂಬದ ಸಮೇತ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಇದೀಗ ಮರಳಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಂಜನೇಯ. ಕನಸಿನಲ್ಲಿ ಆಂಜನೇಯ ಪ್ರತ್ಯಕ್ಷನಾಗಿ ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದು ಇದೇ ಕಾರಣಕ್ಕೆ ಮರಳಿ ಬಂದಿದ್ದಾಗಿ

ಕನಸಿನಲ್ಲಿ ಬಂದ ಆಂಜನೇಯ : ಹಿಂದೂ ಧರ್ಮಕ್ಕೆ ಮರಳಿದ ಇಡೀ ಕುಟುಂಬ Read More »

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರು ಅಪಘಾತ

ಮೂರು ಕಾರುಗಳು ಸರಣಿ ಡಿಕ್ಕಿ ; ಶಾಸಕರು ಪಾರು ಶಿವಮೊಗ್ಗ : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಗುರುರಾಜ ಗಂಟಿಹೊಳೆ ಉಡುಪಿ ಕಡೆಗೆ ತೆರಳುವ ವೇಳೆ ಅಪಘಾತ ನಡೆದಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರು ಸೇರಿ ಮೂರು ಕಾರುಗಳು ಶುಕ್ರವಾರ ಸಂಜೆ ಕೋಡೂರು ಬಳಿ ಅಪಘಾತಕ್ಕೀಡಾಗಿವೆ. ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರು ಅಪಘಾತ Read More »

ವಿಶ್ವದ ಕೋಟ್ಯಂತರ ಜೀವನ ಶೈಲಿ ಬದಲಿಸಿದ ಯೋಗ : ನರೇಂದ್ರ ಮೋದಿ

ವಿಶಾಖಪಟ್ಟಣಂನಲ್ಲಿ 3 ಲಕ್ಷ ಜನರ ಜೊತೆ ಪ್ರಧಾನಿ ಯೋಗ ವಿಶಾಖಪಟ್ಟಣಂ : ಯೋಗ ಇಂದು ವಿಶ್ವವನ್ನು ಒಗ್ಗೂಡಿಸಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಶೀರ್ಷಿಕೆಯಡಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯೋಗ ವಿಶ್ವಾದ್ಯಂತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಆಂಧ್ರಪ್ರದೇಶದ

ವಿಶ್ವದ ಕೋಟ್ಯಂತರ ಜೀವನ ಶೈಲಿ ಬದಲಿಸಿದ ಯೋಗ : ನರೇಂದ್ರ ಮೋದಿ Read More »

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿ ಎಣಿಕೆಯಲ್ಲಿ ಲೋಪ | ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಮುಜರಾಯಿ ಇಲಾಖೆಗೆ  ದೂರು ನೀಡಲಾಗುವುದು : ಸುಬ್ರಹ್ಮಣ್ಯ ಶಬರಾಯ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳೇ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಸೌತಡ್ಕದ, ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ದಿನವೊಂದರಲ್ಲಿ, ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು ಲಕ್ಷಾಂತರ ರೂ.ಕಾಣಿಕೆ ಸಂದಾಯವಾಗುತ್ತಿದೆ. ಕಾಣಿಕೆ ರೂಪದಲ್ಲಿ ಭಕ್ತರಿಂದ ಸಂದಾಯವಾಗುವ ಹಣಗಳ ಎಣಿಕೆ ಪ್ರತಿ ತಿಂಗಳೂ ನಡೆಯುತ್ತದೆ. ಎಣಿಕೆ ಮಾಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ ವೊಂದರ ಕೊಕ್ಕಡ ಶಾಖೆಯಲ್ಲಿ ಜಮೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಬ್ಯಾಂಕ್‌ ಸಿಬ್ಬಂದಿಗಳ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿ ಎಣಿಕೆಯಲ್ಲಿ ಲೋಪ | ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಮುಜರಾಯಿ ಇಲಾಖೆಗೆ  ದೂರು ನೀಡಲಾಗುವುದು : ಸುಬ್ರಹ್ಮಣ್ಯ ಶಬರಾಯ Read More »

ಹಳಿ ಮೇಲೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ

ಸಕಲೇಶಪುರ ಬಳಿ ಹಳಿಗೆ ಬಿದ್ದು ಭಾರಿ ಗಾತ್ರದ ಬಂಡೆ ಮಂಗಳೂರು: ಭಾರಿ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದು, ಬೆಂಗಳೂರಿನಿಂದ ಕರಾವಳಿಗೆ ಬರುವ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಡೆಕುಮರಿ ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಕಿಲೋಮೀಟರ್ ಸಂಖ್ಯೆ 74 ಮತ್ತು 75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮರಿ ಮಧ್ಯೆ ಭಾಗದಲ್ಲಿ ರೈಲ್ವೆ ಹಳಿ ಮೇಲೆ ಭೂಕುಸಿತವಾಗಿದೆ. ಭಾರಿ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ.

ಹಳಿ ಮೇಲೆ ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ Read More »

ಬಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೂ ಬೆಸ್ಟ್ ಸೊಲ್ಯೂಶನ್ ಯೋಗ

ಇಂದು ಅಂತಾರಾಷ್ಟ್ರೀಯ ಯೋಗ ದಿನ ಯೋಗ ಮನುಷ್ಯನ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಮೇಲೆಯೂ ಧನಾತ್ಮಕ ಪರಿಣಾಮ ಬೀರುವ ಒಂದು ಸಂಗತಿ. ಭಾರತ ಪರಂಪರೆಯಲ್ಲೇ ಯೋಗಕ್ಕೆ ವಿಶೇಷ ಮಾನ್ಯತೆ ಇರುವುದು ಅದರ ಪ್ರಾಚೀನತೆಗೆ ಮತ್ತು ನಮ್ಮ ಪೂರ್ವಜರ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ಯೋಗ ಬಲ್ಲವನಿಗೆ ರೋಗದ ಭಯ ಇಲ್ಲ ಎನ್ನುವ ಮಾತು ಸತ್ಯ. ದೇಹಕ್ಕೆ ಬಾಧಿಸುವ ಹಲವಾರು ರೋಗಗಳನ್ನು ಬಾರದಂತೆ ತಡೆಯುವ, ಬಂದರೂ ಅದನ್ನು ಶಮನ ಮಾಡುವ ಶಕ್ತಿ ಯೋಗಕ್ಕೆ ಇದೆ. ಇದಕ್ಕೆ ನಾವು ಅಳವಡಿಸಿಕೊಳ್ಳಬೇಕಾದ ಕ್ರಮ ಎಂದರೆ

ಬಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೂ ಬೆಸ್ಟ್ ಸೊಲ್ಯೂಶನ್ ಯೋಗ Read More »

ಅಂತರರಾಷ್ಟ್ರೀಯ ಯೋಗ ದಿನಾಚರಣೆ

‘ಒಂದು ಭೂಮಿ ಒಂದು ಆರೋಗ್ಯ’ ಎಂಬ ರಾಷ್ಟ್ರೀಯ ಘೋಷ ವಾಕ್ಯದೊಂದಿಗೆ ನಮ್ಮ ಭಾರತದ ನೇತೃತ್ವದಲ್ಲಿ ವಿಶ್ವಾದ್ಯಂತ ನಡೆಯಲಿರುವ ಯೋಗ ದಿನಾಚರಣೆ, ಯೋಗ ಸಂಗಮದ ವಾರ್ಷಿಕ ವಸಂತಕಾಲ ಮತ್ತೆ ಕೂಡಿಬಂದಿದೆ, ಇಂದು 21 ಜೂನ್ 2025ರಂದು. ಮೊದಲ ಯೋಗ ಶಿಕ್ಷಕ ಆದಿ ಯೋಗಿ ಶಿವ ಯೋಗ ವಿಜ್ಞಾನದ ಮೊದಲ ಶಿಕ್ಷಕ  ಯೋಗಿ ಶಿವ ಎಂದು ಹೇಳಲಾಗುತ್ತದೆ. ಶಿವಾನುಗ್ರಹದ ಯೋಗ ವಿದ್ಯೆಯನ್ನು ಮಹರ್ಷಿ ಪತಂಜಲಿ ಲೋಕಾರ್ಪಣೆಗೊಳಿಸಿದರು. ಈ ಮಹಾವಿದ್ಯೆಯು ಜಾತಿ, ಮತ, ದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ ಸರ್ವರಿಗೂ ಸಲ್ಲುವಂತಹ

ಅಂತರರಾಷ್ಟ್ರೀಯ ಯೋಗ ದಿನಾಚರಣೆ Read More »

error: Content is protected !!
Scroll to Top