ಪಾನ್ ಶಾಪ್‍ ನಲ್ಲಿ ಚಾಕಲೇಟ್ ಮಾದರಿಯ ಮಾದಕ ಚಾಕಲೇಟ್‍ ಮಾರಾಟ : ಆರೋಪಿ ಬಂಧನ

ಮಂಗಳೂರು: ಪಾನ್ ಶಾಪ್ ನಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ಮಾದರಿಯ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಬಂಧಿತ ವ್ಯಕ್ತಿ. ಮಂಗಳೂರು ಪಂಪೈಲ್ ಹತ್ತಿರದಲ್ಲಿರುವ ಕೆನರಾ ಬ್ಯಾಂಕ್ ಮುಂದುಗಡೆ ಪಾನ್‍ ಶಾಪ್‍ ಹೊಂದಿದ್ದು, ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾ‌ರ್ ಹೆಸರಿನ ಮಾದಕ ದ್ರವ್ಯ ಸುವಾಸನೆಯುಳ್ಳ ಚಾಕಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ.  ಮಂಗಳೂರು ಉಪ […]

ಪಾನ್ ಶಾಪ್‍ ನಲ್ಲಿ ಚಾಕಲೇಟ್ ಮಾದರಿಯ ಮಾದಕ ಚಾಕಲೇಟ್‍ ಮಾರಾಟ : ಆರೋಪಿ ಬಂಧನ Read More »

ಜೂ.27 : ನಾಡಪ್ರಭು ಕೆಂಪೇಗೌಡ ಜಯಂತಿ | ಶಾಲಾ-ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಾಡಪ್ರಭು ಕೆಂಪೇಗೌಡರ ಕುರಿತು ವಿವಿಧ ಸ್ಪರ್ಧೆ

ಮಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಅರ್ಧಪೂರ್ಣವಾಗಿ ಆಚರಿಸಲು ಸೂಚನೆ ನೀಡಲಾಗಿದ್ದು, ಅದರಂತೆ ದ.ಕ.ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನಾಡಪ್ರಭು ಕೆಂಪೇಗೌಡರ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲು ಸೂಚಿಸಲಾಗಿದೆ. ಆದ್ದರಿಂದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳಲ್ಲಿ ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ, ಅಶು ಭಾಷಣ, ಕವನ ವಾಚನ, ಗಾಯನ ಸ್ಪರ್ಧೆಗಳಲ್ಲಿ ಯಾವುದಾದರೂ ಒಂದು ಸ್ಪರ್ಧೆಯನ್ನು ತಮ್ಮ ಹಂತದಲ್ಲಿ ಏರ್ಪಡಿಸಿ ಜೂ. 25  ರ ಒಳಗೆ ಸಹಾಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ

ಜೂ.27 : ನಾಡಪ್ರಭು ಕೆಂಪೇಗೌಡ ಜಯಂತಿ | ಶಾಲಾ-ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಾಡಪ್ರಭು ಕೆಂಪೇಗೌಡರ ಕುರಿತು ವಿವಿಧ ಸ್ಪರ್ಧೆ Read More »

ಜೂ.23 : ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ಸವಣೂರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ

ಸವಣೂರು: ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ದ ಜೂನ್ 23 ಸೋಮವಾರ ಸವಣೂರು ಗ್ರಾಮ ಪಂಚಾಯತ್‌ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ. ಆ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ಯುವ ಸಭಾಭವನದಲ್ಲಿ ಇಂದು ಸಂಜೆ 6.00 ಗಂಟೆಗೆ ಸರಿಯಾಗಿ ಬಿಜೆಪಿ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಶಕ್ತಿಕೇಂದ್ರದ ಸಭೆಯನ್ನು ಕರೆಯಲಾಗಿದೆ. ಸಭೆಗೆ ಶಕ್ತಿಕೇಂದ್ರದ ಪ್ರಮುಖರು ಬೂತ್‌ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಮಂಡಲದ ವಿವಿಧ ಪ್ರಮುಖರು, ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ

ಜೂ.23 : ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ಸವಣೂರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ Read More »

ಜು.6 : ಪುತ್ತೂರಿನಲ್ಲಿ ಮಿನಿ ಮ್ಯಾರಥಾನ್‍ ಓಟ ‘ಬಲೆ ಬಲಿಪುಗ’ | ದಿ ಪುತ್ತೂರು ಕ್ಲಬ್‍, ಬಾಬ್‍ ಕಾರ್ಡ್ ಸಹಯೋಗ

ಪುತ್ತೂರು: ದಿ ಪುತ್ತೂರು ಕ್ಲಬ್‍ವತಿಯಿಂದ ಬಾಬ್ ಕಾರ್ಡ್ ಸಹಕಾರದೊಂದಿಗೆ ಆಯೋಜಿಸುವ ಮಿನಿ ಮ್ಯಾರಥಾನ್‍ ಓಟ ‘ಬಲೆ ಬಲಿಪುಗ’ ಜುಲೈ 6 ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ದಿ ಪುತ್ತೂರು ಕ್ಲಬ್‍ ಅಧ್ಯಕ್ಷ ಡಾ.ದೀಪಕ್ ರೈ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಮ್ಯಾರಥಾನ್‍ಓಟ 21 ಕಿ.ಮೀ. ಹಾಲ್ಫ್‍ಓಟ, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಈ ಪೈಕಿ 21 ಕಿ.ಮೀ. 18ವರ್ಷ ಮೇಲ್ಪಟ್ಟವರಿಗೆ

ಜು.6 : ಪುತ್ತೂರಿನಲ್ಲಿ ಮಿನಿ ಮ್ಯಾರಥಾನ್‍ ಓಟ ‘ಬಲೆ ಬಲಿಪುಗ’ | ದಿ ಪುತ್ತೂರು ಕ್ಲಬ್‍, ಬಾಬ್‍ ಕಾರ್ಡ್ ಸಹಯೋಗ Read More »

ಜೂ. 21: ಆಂಧ್ರ ಪ್ರದೇಶದಲ್ಲಿ ಪ್ರಧಾನಿ ಮೋದಿ ಅವರಿಂದ ಯೋಗ ದಿನಾಚರಣೆ

ಅಮರಾವತಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ  ಆಂಧ್ರಪ್ರದೇಶದಲ್ಲಿ ಜೂನ್ 21 ರಂದು ಆಯೋಜನೆ ಮಾಡಲಾಗಿರುವ ಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ವಿಶಾಖಪಟ್ಟಣಂನ ಆರ್‌ ಕೆ ಬೀಚ್‌ ನಿಂದ ಭೋಗಪುರಂ ವರೆಗಿನ 26 ಕಿ ಮೀ ಕಾರಿಡಾರ್‌ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 6.30 ರಿಂದ ತೊಡಗಿ 8 ಗಂಟೆಯ ವರೆಗೆ ನಡೆಯಲಿರುವ ಈ ಯೋಗ ದಿನಾಚರಣೆ ಗಿನ್ನಿಸ್ ಸೇರಿದಂತೆ ಹಲವಾರು ದಾಖಲೆಗಳನ್ನು

ಜೂ. 21: ಆಂಧ್ರ ಪ್ರದೇಶದಲ್ಲಿ ಪ್ರಧಾನಿ ಮೋದಿ ಅವರಿಂದ ಯೋಗ ದಿನಾಚರಣೆ Read More »

ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಕುಡುಕ ಪತಿ

ಪತ್ನಿ ಮೊಬೈಲ್‌ ಅತಿಯಾಗಿ ಬಳಸುತ್ತಾಳೆಂದು ಜಗಳವಾಡಿ ಕೊಲೆ ಉಡುಪಿ : ಪತ್ನಿ ಅತಿಯಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂದು ಸಿಟ್ಟಿನಿಂದ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉಡುಪಿ ಸಮೀಪ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಆರೋಪಿ ಪತಿ ಗಣೇಶ್ ಪೂಜಾರಿಯು ತನ್ನ ಪತ್ನಿ ರೇಖಾಳನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ಪತ್ನಿ ರೇಖಾ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆ

ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಕುಡುಕ ಪತಿ Read More »

ಜೂ.22 : ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಸಮಾರಂಭ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮ ಜೂ.22 ಭಾನುವಾರ ಕುಂಬ್ರ ಕಿರಣ್‍ ಸಂಕೀರ್ಣದಲ್ಲಿ ನಡೆಯಲಿದೆ. ದಶಮಾನೋತ್ಸವದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಗಣಹೋಮ ಮತ್ತು ಲಕ್ಷ್ಮೀಪೂಜೆ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಜೂ.22 : ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಸಮಾರಂಭ Read More »

ಜೂ.21 : ಕುದ್ಮಾರು ಉನ್ನತೀಕರಿಸಿದ ಶಾಲೆಯಿಂದ ನಿವೃತ್ತಿಗೊಂಡಿರುವ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ. ಅವರಿಗೆ ವಿದಾಯ ಸಮಾರಂಭ | ನೂತನ ಧ್ವಜ ಕಟ್ಟೆಯ ಹಸ್ತಾಂತರ

ಕಡಬ: ಕುದ್ಮಾರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡಿರುವ ಕುಶಾಲಪ್ಪ ಬಿ. ಅವರಿಗೆ ಸನ್ಮಾನ ಹಾಗೂ ವಿದಾಯ ಸಮಾರಂಭ ಜೂ.21 ಶನಿವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಶಾಲಪ್ಪ ಬಿ. ಅವರು ಕೊಡುಗೆಯಾಗಿ ನೀಡಿರುವ ನೂತನ ಧ್ವಜ ಕಟ್ಟೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್‍ ಕುಮಾರ್ ಕೆಡೆಂಜಿ, ಎಸ್‍ ಡಿಎಂಸಿ ಅಧ್ಯಕ್ಷ ದೇವರಾಜ್‍ ನೂಜಿ ಹಾಗೂ

ಜೂ.21 : ಕುದ್ಮಾರು ಉನ್ನತೀಕರಿಸಿದ ಶಾಲೆಯಿಂದ ನಿವೃತ್ತಿಗೊಂಡಿರುವ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ. ಅವರಿಗೆ ವಿದಾಯ ಸಮಾರಂಭ | ನೂತನ ಧ್ವಜ ಕಟ್ಟೆಯ ಹಸ್ತಾಂತರ Read More »

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಮನೆ ಶೋಧಿಸಿದ ಪ್ರಕರಣ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ದಿನಗಳಲ್ಲಿ ಮಧ್ಯರಾತ್ರಿ ಹಿಂದು ಮುಖಂಡರ ಮನೆಗಳಿಗೆ ಹೋಗಿ ತಪಾಸಣೆ ಮಾಡಿದ್ದ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರ್​ಎಸ್​​ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಹೋಗಿ ಫೋಟೊ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿ ಅರುಣ್​ಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿ ಸೂಕ್ತ ದಾಖಲೆ

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌ Read More »

ಅಹಮದಾಬಾದ್‌ ವಿಮಾನ ದುರಂತ : 215 ಮೃತದೇಹಗಳ ಗುರುತು ದೃಢ

ಡಿಎನ್‌ಎ ಪರೀಕ್ಷೆ ವರದಿ ಬಂದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಅಹಮದಾಬಾದ್‌: ಇಲ್ಲಿ ಕಳೆದ ಗುರುವಾರ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಈವರೆಗೆ 215 ಮಂದಿಯ ಗುರುತು ಪತ್ತೆಯಾಗಿದ್ದು, 198 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ. ಒಟ್ಟು 215 ಡಿಎನ್‌ಎ ವರದಿಗಳು ಮ್ಯಾಚ್‌ ಆಗಿವೆ. 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್‌, 32 ಬ್ರಿಟಿಷ್‌ ಮತ್ತು ಕೆನಡಿಯನ್‌ ಪ್ರಜೆಗಳ

ಅಹಮದಾಬಾದ್‌ ವಿಮಾನ ದುರಂತ : 215 ಮೃತದೇಹಗಳ ಗುರುತು ದೃಢ Read More »

error: Content is protected !!
Scroll to Top