ಗಾಯಾಳುಗಳಿಗೆ ಬಸ್‌ ಮಾಲೀಕನಿಂದ ಪರಿಹಾರ ಕೊಡಿಸಿದ್ದ ಹಿಂದೂ ಮುಖಂಡ ಸೆರೆ

8 ತಿಂಗಳ ಹಿಂದೆ ಇತ್ಯರ್ಥವಾಗಿದ್ದ ಅಪಘಾತ ವಿವಾದ ಸಂಬಂಧ ಈಗ ಕ್ರಮ ಮಂಗಳೂರು: ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಬಸ್ಸು ಮಾಲೀಕನಿಂದ ಗಾಯಾಳುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸುವಲ್ಲಿ ಮುಂಚೂಣಿಯಲ್ಲಿ ಇದ್ದು ಹೋರಾಟ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡನನ್ನು ಮೂಡುಬಿದಿರೆ ಪೊಲೀಸರು ಘಟನೆ ನಡೆದ 8 ತಿಂಗಳ ಬಳಿಕ ಬಂಧಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಬಂಧಿತ. ಕಾರ್ಕಳ ಅನಂತಶಯನ ದೇವಳ ರಸ್ತೆಯ ವ್ಯಾಪಾರ ಸಂಕೀರ್ಣವೊಂದರಲ್ಲಿ ಮೂಡುಬಿದಿರೆ ಪೊಲೀಸರ ತಂಡ ಗುರುವಾರ ಸಮಿತ್‌ರಾಜ್‌ ಅವರನ್ನು […]

ಗಾಯಾಳುಗಳಿಗೆ ಬಸ್‌ ಮಾಲೀಕನಿಂದ ಪರಿಹಾರ ಕೊಡಿಸಿದ್ದ ಹಿಂದೂ ಮುಖಂಡ ಸೆರೆ Read More »

ಮಲೆಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳ ಸಾವು

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಮಾನವೀಯ ಘಟನೆ ಬೆಂಗಳೂರು: ಚಾಮರಾಜನಗರದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಹುಲಿಗಳ ಸಂರಕ್ಷಣೆಯಲ್ಲಿ ದೇಶದಲ್ಲೇ ಎರಡಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಒಂದೇ ಸಲ ಐದು ಹುಲಿಗಳು ಸಾವಿಗೀಡಾಗಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ದಿನಗಳಲ್ಲಿ ಐದು ಹುಲಿಗಳನ್ನು ವಿಷವಿಕ್ಕಿ ಕೊಂದಿರುವುದು ಆಘಾತವುಂಟುಮಾಡಿದೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿಗಳು ನಿನ್ನೆ ಅಸಹಜ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿತ್ತುಯ. ಹೂಗ್ಯಂ ಅರಣ್ಯ ವಲಯದ ಮೀಣ್ಯಂ

ಮಲೆಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳ ಸಾವು Read More »

ತಾಯಿಯನ್ನು ಜೀವಂತ ದಹಿಸಿ ಕೊಂದ ಮಗ ಬೈಂದೂರಿನಲ್ಲಿ ಸೆರೆ | ಸೋದರತ್ತೆಯನ್ನೂ ದಹಿಸಿ ಕೊಲ್ಲಲು ಯತ್ನಿಸಿದ್ದ ಆರೋಪಿ

ಮಂಗಳೂರು : ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಹೆತ್ತ ತಾಯಿಯನ್ನು ಬೆಂಕಿಹಚ್ಚಿ ಕೊಂದ ಕಟುಕ ಪುತ್ರನನ್ನು ಪೊಲೀಸರು ಉಡುಪಿಯ ಬೈಂದೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಮಗ ಮೆಲ್ವಿನ್ ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಬಳಿಕ ಕಾಡಿನೊಳಗೆ ಎಳೆದೊಯ್ದು ಬೆಂಕಿ ಹಚ್ಚಿ ಸುಟ್ಟಾಕ್ಕಿದ್ದ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಆತ ಪಕ್ಕದ ಮನೆಯಲ್ಲಿದ್ದ ಅತ್ತೆಯನ್ನು ಕರೆದು ಕೊಲೆ ಮಾಡಲು ಯತ್ನಿಸಿದ್ದ. ಮೆಲ್ವಿನ್ ಮೊಂತೇರೊ ತಾಯಿಯ ವರ್ಕಾಡಿಯಲ್ಲಿ ತಾಯಿ 60 ವರ್ಷದ ಹಿಲ್ಡಾ ಜೊತೆ ಈ ವಾಸವಿದ್ದ. ತಂದೆ

ತಾಯಿಯನ್ನು ಜೀವಂತ ದಹಿಸಿ ಕೊಂದ ಮಗ ಬೈಂದೂರಿನಲ್ಲಿ ಸೆರೆ | ಸೋದರತ್ತೆಯನ್ನೂ ದಹಿಸಿ ಕೊಲ್ಲಲು ಯತ್ನಿಸಿದ್ದ ಆರೋಪಿ Read More »

ಖೈದಿಗಳ ನಡುವೆ ಹೊಡೆದಾಟ : ಓರ್ವ ಆಸ್ಪತ್ರೆಗೆ ದಾಖಲು

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಓರ್ವನಿಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳ್ಳಾಲದ ರೌಡಿ ಮುಖ್ತರ್ ಮತ್ತು ಇತರ ಖೈದಿಗಳ ನಡುವೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ರೌಡಿ  ಮುಖ್ತರ್ ಅಕ್ಷಯ್ ಕಲ್ಲೇಗ ಕೊಲೆ ಆರೋಪಿ ಕೇಶವ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಕೇಶವನನ್ನು ವೆನ್ಲಾಕ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಖೈದಿ ಗಾಯಾಳು ಕೇಶವ ಅಕ್ಷಯ್ ಕಲ್ಲೇಗ ಹತ್ಯೆಯ

ಖೈದಿಗಳ ನಡುವೆ ಹೊಡೆದಾಟ : ಓರ್ವ ಆಸ್ಪತ್ರೆಗೆ ದಾಖಲು Read More »

ಕನ್ವರ್ ಯಾತ್ರೆ : ಸಿಎಂ ಯೋಗಿ ಸರ್ಕಾರದಿಂದ ಖಡಕ್ ಸೂಚನೆ

ಲಕ್ನೋ: ವಾರ್ಷಿಕವಾಗಿ ನಡೆಯುವ ಕನ್ವರ್ ಯಾತ್ರೆಗೂ ಮೊದಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕನ್ವರ್ ಯಾತ್ರೆಯ ದಾರಿಯಲ್ಲಿ ಮದ್ಯ, ಮಾಂಸ ಮಾರಾಟವಾಗದಂತೆ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ತಮ್ಮ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಜೊತೆಗೆ ದಾರಿ ಮಧ್ಯೆ ಭಕ್ತರ ಧಾರ್ಮಿಕ ಭಾವನೆಯನ್ನು ಗೌರವಿಸುವಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಿಳಿಸಲಾಗಿದೆ. ಆದರೆ ಯಾತ್ರೆಯ ನಡುವೆ ಭಕ್ತರ ಮಧ್ಯೆ ಸಮಾಜಘಾತುಕ ಶಕ್ತಿಗಳು ಶಾಂತಿ ಕದಡುವ ಸಾಧ್ಯತೆಗಳಿದ್ದು, ಎಚ್ಚರದಿಂದಿರಲು ಸೂಚಿಸಲಾಗಿದೆ. ಧಾರ್ಮಿಕ

ಕನ್ವರ್ ಯಾತ್ರೆ : ಸಿಎಂ ಯೋಗಿ ಸರ್ಕಾರದಿಂದ ಖಡಕ್ ಸೂಚನೆ Read More »

ಶ್ರೀ ಕ್ಷೇತ್ರ ಬಾರ್ಯ ಆಡಳಿತ ಸೇವಾ ಟ್ರಸ್ಟಿನ ಸಭೆ

ಬಾರ್ಯ: ಶ್ರೀ ಮಹಾವಿಷ್ಣುಮೂರ್ತಿ ದೇವರ ಮತ್ತು ಪರಿವಾರದೈವಗಳ ಆಡಳಿತ ಸೇವಾ ಟ್ರಸ್ಟ್ ನ ದ್ವಿತೀಯ ಸಾಮಾನ್ಯ ಸಭೆ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ  ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಬಾರ್ಯದಲ್ಲಿ ಜರಗಿತು. ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಪ್ರಥಮ ಬಾರಿ ಜರಗಿದ ಶ್ರೀ ಮಹಾವಿಷ್ಣುಯಾಗದ ಫಲ ಶ್ರುತಿಯ ಬಗ್ಗೆ, ದೇವಾಲಯ ಪರಿಸರದ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಯಿತು.ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು.  ಸಭೆಯಲ್ಲಿ ಉಪಾಧ್ಯಕ್ಷ ನಾರಾಯಣಗೌಡ, ಕೋಶಾಧಿಕಾರಿ ಸೇಸಪ್ಪ

ಶ್ರೀ ಕ್ಷೇತ್ರ ಬಾರ್ಯ ಆಡಳಿತ ಸೇವಾ ಟ್ರಸ್ಟಿನ ಸಭೆ Read More »

ಪುತ್ತೂರು ತಾಲೂಕು ತುಳುವ ಮಹಾಸಭೆಗೆ ತುಳು ಲಿಪಿಯ ಹರಿಕಾರಿಣಿ : ಶ್ರೀಶಾವಾಸವಿ ತುಳುನಾಡ್ ಸಂಚಾಲಕಿಯಾಗಿ ಆಯ್ಕೆ

ಪುತ್ತೂರು : ತುಳುನಾಡಿನ ಭಾಷಾ, ಸಾಹಿತ್ಯ, ಲಿಪಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಬಹುಮುಖ ಪ್ರತಿಭೆ ಶ್ರೀಶಾವಾಸವಿ ತುಳುನಾಡ್ (ವಿದ್ಯಾಶ್ರೀ ಎಸ್) ಅವರನ್ನು ಪುತ್ತೂರು ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ. ಪವಿತ್ರ ಪಡುಮಲೆಯ ಪುಣ್ಯ ಭೂಮಿಯಲ್ಲಿ ಜನಿಸಿ, B.Sc. in Multimedia Technology ಪದವಿ ಪಡೆದಿರುವ ಶ್ರೀಶಾವಾಸವಿ, ತಮ್ಮ ತಾಯ್ನಾಡು ತುಳುನಾಡಿನ ಭಾಷೆ ಹಾಗೂ ಲಿಪಿಯ ವೈಭವವನ್ನು ಅರಿತು ಅದನ್ನು ಜನಮಾನಸದಲ್ಲಿ ಉಜ್ವಲಗೊಳಿಸಲು ನಿತ್ಯ ಶ್ರಮಿಸುತ್ತಿದ್ದಾರೆ. 2013ರಿಂದ ತುಳು ಲಿಪಿಯ ಅಭ್ಯಾಸ

ಪುತ್ತೂರು ತಾಲೂಕು ತುಳುವ ಮಹಾಸಭೆಗೆ ತುಳು ಲಿಪಿಯ ಹರಿಕಾರಿಣಿ : ಶ್ರೀಶಾವಾಸವಿ ತುಳುನಾಡ್ ಸಂಚಾಲಕಿಯಾಗಿ ಆಯ್ಕೆ Read More »

ಪೈಪ್‍ ಲೈನ್‍ ಕೊರೆದು ಕೋಟ್ಯಾಂತರ ಮೌಲ್ಯದ ಪೆಟ್ರೋಲ್‍ ಕಳ್ಳತನ | ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ರಾಜ್ಯದಲ್ಲೇ ಅತೀ ದೊಡ್ಡ ಪೆಟ್ರೋಲ್‍  ಕಳ್ಳತನ ಮಾಡಿದ್ದ ತಂಡವೊಂದು ಮತ್ತೆ ಕಳ್ಳತನ ಸಾಹಸಕ್ಕೆ ಕೈಹಾಕಿದ್ದು ಇದೀಗ ಸಿಕ್ಕಿಬಿದ್ದಿದ್ದು ಪೊಲೀಸರ ಅತಿಥಿಯಾಗಿದೆ. 2011 ರಲ್ಲಿ ಪೆಟ್ರೋನೆಟ್ ಕಂಪನಿಯ ಪೈಪ್ ಕೊರೆದು ರಾಜ್ಯದಲ್ಲೇ ಅತಿದೊಡ್ಡ  ಪೆಟ್ರೋಲ್ ಕಳ್ಳತನ ಮಾಡಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಕೋಟ್ಯಂತರ ರೂ. ಮೌಲ್ಯದ ಪೆಟ್ರೋಲ್ ಕಳ್ಳತನ ಘಟನೆ ನಡೆದಿದೆ. ಇದರಲ್ಲಿ ಪೆಟ್ರೋನೆಟ್ ಸಿಬ್ಬಂದಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪೈಪ್‍ ಲೈನ್‍ ಕೊರೆದು ಕೋಟ್ಯಾಂತರ ಮೌಲ್ಯದ ಪೆಟ್ರೋಲ್‍ ಕಳ್ಳತನ | ಇಬ್ಬರು ಆರೋಪಿಗಳ ಬಂಧನ Read More »

ಛತ್ತೀಸ್‍ಘಡ್‌ದಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಯಮಪುರಕ್ಕಟ್ಟಿದ ಭದ್ರತಾ ಪಡೆಗಳು

ಛತ್ತೀಸ್‍ಘಡ್: ನಾರಾಯಣಪುರದಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲ್ ಮಹಿಳೆಯರು ಮೃತಪಟ್ಟಿದ್ದಾಗಿ ‌ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆ ಅಭುಜ್‌ಮಾದ್ ಪ್ರದೇಶದ ಕೊಹ್ಕಮೆಟಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಕ್ಸಲರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆ ಈ ಕಾರ್ಯಾಚರಣೆಯನ್ನು ಜಂಟಿಯಾಗಿ ನಡೆಸಿರುವುದಾಗಿದೆ. ನಾರಾಯಣಪುರ ಮತ್ತು ಕೊಂಡಗಾಂವ್‌ಗಳಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿ ಸಹ

ಛತ್ತೀಸ್‍ಘಡ್‌ದಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಯಮಪುರಕ್ಕಟ್ಟಿದ ಭದ್ರತಾ ಪಡೆಗಳು Read More »

ಹೆತ್ತ ತಾಯಿಯನ್ನೇ ಬೆಂಕಿಹಚ್ಚಿ ಜೀವಂತ ದಹಿಸಿದ ಮಗ

ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಅಮಾನವೀಯ ಕೃತ್ಯ ಕಾಸರಗೋಡು: ಮಗನೇ ಹೆತ್ತ ತಾಯಿಯನ್ನು ಬೆಂಕಿ ಹಚ್ಚಿ ಜೀವಂತ ದಹಿಸಿ ಕೋಮದ ಅಮಾನವೀಯ ಘಟನೆ ಮಂಜೇಶ್ವರ ಸಮೀಪ ವರ್ಕಾಡಿ ಎಂಬಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ವರ್ಕಾಡಿ ನಲ್ಲಂಗಿಯ ದಿ.ಲೂಯಿಸ್ ಮೊಂತೆರೋ ಎಂಬವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ನೆರೆಮನೆಯ ಲೋಲಿಟಾ (30) ಎಂಬವರು ಗಂಭೀರ ಸುಟ್ಟ ಗಾಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲಗಿದ್ದ ಮಹಿಳೆಗೆ ಬೆಂಕಿ ಹಚ್ಚಿದ್ದು, ಬಳಿಕ ತಾಯಿಗೆ ಹುಷಾರಿಲ್ಲ

ಹೆತ್ತ ತಾಯಿಯನ್ನೇ ಬೆಂಕಿಹಚ್ಚಿ ಜೀವಂತ ದಹಿಸಿದ ಮಗ Read More »

error: Content is protected !!
Scroll to Top