ಮನೆಗೆ ಕರೆಸಿ ಬಲವಂತವಾಗಿ ದೈಹಿಕ ಸಂಪರ್ಕ | ಮಗುವಿಗೆ ಜನ್ಮ ನೀಡಿದ ಯುವತಿ | ಪತ್ರಿಕಾಗೋಷ್ಠಿಯಲ್ಲಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದ ಸಂತ್ರಸ್ತೆಯ ತಾಯಿ

ಪುತ್ತೂರು: ನಮಗೆ ನ್ಯಾಯ ದೊರಕಿಸಿಕೊಡುವಂತೆ ಹಿಂದೂ ಮುಖಂಡರು ಸೇರಿದಂತೆ ಪುತ್ತೂರು ಮಹಿಳಾ ಠಾಣೆಗೂ ನಾವು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮಗಳಿಗೆ ಆದ ಅನ್ಯಾಯಕ್ಕೆ ಯಾರು ತಲೆಕೆಡಿಸುತ್ತಿಲ್ಲ. ನಮಗೆ ನ್ಯಾಯ ದೊರೆಯದಿದ್ದಲ್ಲಿ ನಾವು ಯಾವುದೇ ಆಮಿಷಗಳಿಗೆ ಬಗ್ಗುವುದಿಲ್ಲ, ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರ ಪುತ್ರನಿಂದ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂ ಮುಖಂಡರೊಬ್ಬರು 10 ಲಕ್ಷ ರೂ. […]

ಮನೆಗೆ ಕರೆಸಿ ಬಲವಂತವಾಗಿ ದೈಹಿಕ ಸಂಪರ್ಕ | ಮಗುವಿಗೆ ಜನ್ಮ ನೀಡಿದ ಯುವತಿ | ಪತ್ರಿಕಾಗೋಷ್ಠಿಯಲ್ಲಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದ ಸಂತ್ರಸ್ತೆಯ ತಾಯಿ Read More »

ಲಾರಿ-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು

ಬಂಟ್ವಾಳ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ಇಂದು ನಡೆದಿದೆ. ಶಂಭೂರು ಕೊಪ್ಪಳ ನಿವಾಸಿ ಚಿದಾನಂದ( 50) ಮೃತಪಟ್ಟ ದ್ವಿಚಕ್ರ ಸವಾರ. ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚಿದಾನಂದ ಅವರು

ಲಾರಿ-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು Read More »

ಗೋವಿನ ರುಂಡ ನಡುರಸ್ತೆಯಲ್ಲಿ ಎಸೆದ ಕಟುಕರು : ಹಿಂದೂ ಸಂಘಟನೆಗಳಿಂದ ಆಕ್ರೋಶ

ಉಡುಪಿ ಸಮೀಪ ಬ್ರಹ್ಮಾವರದ ಕುಂಜಾಲಿನಲ್ಲಿ ನಡೆದ ಘಟನೆ ಉಡುಪಿ: ಜಿಲ್ಲೆಯ ಬ್ರಹ್ಮಾವರ ಕುಂಜಾಲು ಮುಖ್ಯರಸ್ತೆಯಲ್ಲಿ ದನವನ್ನು ಕಡಿದು ರುಂಡ ಎಸೆದು ಹೋಗಿರುವ ಅಮಾನವೀಯ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮತ್ತು ಹಲವು ಹಿಂದೂ ಮುಖಂಡರು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 11.30 ಸಮಯದಲ್ಲಿ ಗೋವಿನ ರುಂಡ ಹಾಗೂ ದೇಹದ ಭಾಗಗಳು ಬ್ರಹ್ಮಾವರ ಕುಂಜಾಲು ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಲು

ಗೋವಿನ ರುಂಡ ನಡುರಸ್ತೆಯಲ್ಲಿ ಎಸೆದ ಕಟುಕರು : ಹಿಂದೂ ಸಂಘಟನೆಗಳಿಂದ ಆಕ್ರೋಶ Read More »

ಹಾಸನದಲ್ಲಿ ಕಳವಳಕಾರಿಯಾಗಿ ಹೆಚ್ಚುತ್ತಿರುವ ಹೃದಯಾಘಾತ : ಮತ್ತೆ ಮೂವರು ಬಲಿ

40 ದಿನಗಳಲ್ಲಿ 21 ಯುವಕ-ಯುವತಿಯರನ್ನು ಬಲಿತೆಗೆದುಕೊಂಡ ಹೃದಯಾಘಾತ ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ನಿನ್ನೆ ಮತ್ತೆ ಒಂದೇ ದಿನದಲ್ಲಿ ಮೂವರು ಇದೇ ಕಾರಣದಿಂದ ಮೃತಪಟ್ಟಿರುವುದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಸಂಸದ ಡಾ.ಸಿ.ಎನ್‌. ಮಂಜುನಾಥ ಅವರು ಹಾಸನದ ಸರಣಿ ಹೃದಯಾಘಾತದ ಕಳವಳಕಾರಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇನೆ ಎಂದು ಹೇಳಿದ ದಿನವೇ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ಕಳೆದ 40 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಹಾಸನದಲ್ಲಿ ಕಳವಳಕಾರಿಯಾಗಿ ಹೆಚ್ಚುತ್ತಿರುವ ಹೃದಯಾಘಾತ : ಮತ್ತೆ ಮೂವರು ಬಲಿ Read More »

ಅಮರನಾಥ ಯಾತ್ರಿಕರಿಗೆ ಭದ್ರತೆ ಒದಗಿಸಲು ಸೂಕ್ತ ಕ್ರಮ

ಶ್ರೀನಗರ: ಅಮರನಾಥ ಯಾತ್ರೆ ಜುಲೈ 3 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ಬಿಗಿ ಭದ್ರತೆ ಆಯೋಜಿಸಲಾಗಿದ್ದು, ತಪಾಸಣೆಗಾಗಿ ಚೆಕ್ ಪೋಸ್ಟ್ ‌ಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲ ಸಮಯದ ಹಿಂದೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರ ದಾಳಿಯ ಬಳಿಕ ಅಮರಾನಾಥ ಯಾತ್ರಿಕರ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ತೆಗೆದುಕೊಂಡಿರುವುದಾಗಿದೆ. ಭಕ್ತರಿಗೆ ಸುಗಮ ಯಾತ್ರೆಯ ಅನುಕೂಲ ಒದಗಿಸಿ ಕೊಡಲು ಅರೆಸೇನಾ ಪಡೆಗಳು ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿರುವುದಾಗಿದೆ. 24*7 ರೀತಿಯಲ್ಲಿ ಯಾತ್ರಿಕರಿಗೆ ರಕ್ಷಣೆ ಒಗದಗಿಸಲು

ಅಮರನಾಥ ಯಾತ್ರಿಕರಿಗೆ ಭದ್ರತೆ ಒದಗಿಸಲು ಸೂಕ್ತ ಕ್ರಮ Read More »

ಇನ್ನು ಮುಂದೆ ಪ್ರಯಾಣದ 8 ತಾಸು ಮೊದಲೇ ರೈಲ್ವೆ ಚಾರ್ಟ್‌ ಪ್ರಕಟ

ವೈಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾವಣೆ ನವದೆಹಲಿ: ಟಿಕೆಟ್‌ ಬುಕ್ಕಿಂಗ್‌ ಪ್ರಕ್ರಿಯೆಯನ್ನು ಇನ್ನಷ್ಟು ಪ್ರಯಾಣಿಕಸ್ನೇಹಿಯಾಗಿಸಲು ಮುಂದಾಗಿರುವ ರೈಲ್ವೆ ರಿಸರ್ವೇಷನ್‌ ಚಾರ್ಟ್‌ ತಯಾರಿಯನ್ನು ಬದಲಾಯಿಸಲಿದೆ. ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಚಾರ್ಟ್‌ ಬಿಡುಗಡೆ ಮಾಡಲಾಗುತ್ತದೆ ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ. ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಜುಲೈ 1ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಚಾರ್ಟ್‌ ಬಿಡುಗಡೆಯಾಗಲಿದೆ. ಇದರಿಂದ ಮುಖ್ಯವಾಗಿ ವೈಟಿಂಗ್‌ ಲಿಸ್ಟ್‌ನಲ್ಲಿರುವ

ಇನ್ನು ಮುಂದೆ ಪ್ರಯಾಣದ 8 ತಾಸು ಮೊದಲೇ ರೈಲ್ವೆ ಚಾರ್ಟ್‌ ಪ್ರಕಟ Read More »

ನಕ್ಸಲರ ಜೊತೆ ಮಾತುಕತೆ ನಡೆಸುವಂತೆ ಕಾಂಗ್ರೆಸ್ ಹೇಳುತ್ತದೆ: ಅಮಿತ್ ಶಾ

ಹೈದರಾಬಾದ್: ಶಸ್ತ್ರಧಾರಿಗಳಾದ ನಕ್ಸಲರ ಜೊತೆಗೆ ಯಾವ ರೀತಿಯ ಮಾತುಕತೆಯನ್ನೂ ‌ನಾವು ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಶಸ್ತ್ರ ಹಿಡಿದ ನಕ್ಸಲರು ಅದನ್ನು ತೊರೆದು ಪೊಲೀಸರ ಮುಂದೆ ಬಂದು ಶರಣಾಗಲಿ. ಅವರು ಸಮಾಜದ ಮುಖ್ಯ ಭೂಮಿಕೆಗೆ ಬರಲಿ ಎಂದು ಶಾ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷ, ನಕ್ಸಲರ ಜೊತೆಗೆ ಮಾತನಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರುತ್ತದೆ. ಆದರೆ ನಮ್ಮ ಸರ್ಕಾರದ ನೀತಿ ನಾವು ಶಸ್ತ್ರ ಹಿಡಿದ ಯಾರೊಂದಿದೂ ಮಾತುಕತೆಗೆ ಸಿದ್ಧರಿಲ್ಲ ಎನ್ನುವುದಾಗಿದೆ. ಒಂದು ವೇಳೆ

ನಕ್ಸಲರ ಜೊತೆ ಮಾತುಕತೆ ನಡೆಸುವಂತೆ ಕಾಂಗ್ರೆಸ್ ಹೇಳುತ್ತದೆ: ಅಮಿತ್ ಶಾ Read More »

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ನೆನಪಿಸಿಕೊಳ್ಳಬೇಕು: ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನವನ್ನು ಹತ್ಯೆ ಮಾಡುವ ಜೊತೆಗೆ ನ್ಯಾಯಾಂಗ ವ್ಯವಸ್ಥೆಯನ್ನು ಸಹ ಕೈಗೊಂಬೆಯನ್ನಾಗಿ ಮಾಡಿದ್ದರು. ಇಂತಹ ವಿರುದ್ಧ ಹೋರಾಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ತಿಂಗಳ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಅವರು, ಇಪ್ಪತ್ತೊಂದು ತಿಂಗಳ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರಿಗೆ ಹಿಂಸೆ ನೀಡಲಾಯಿತು. ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಯಿತು. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುವುದಾಗಿ ಅವರು ತಿಳಿಸಿದ್ದಾರೆ. ಭಾರತ ಟ್ರಕೋಮಾ ಮುಕ್ತ ದೇಶ

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ನೆನಪಿಸಿಕೊಳ್ಳಬೇಕು: ಪ್ರಧಾನಿ ಮೋದಿ Read More »

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ 4 ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಕುರಿತು ಭಾನುವಾರ ಬೆಳಗ್ಗೆ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ ಎಂದು ವರದಿಯಾಗಿದೆ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಗೆ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಈ ಬಗ್ಗೆ ಪೊಲೀಸರು ಭದ್ರತೆಯ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ Read More »

ಕಲ್ಲುಗುಂಡಿಯಲ್ಲಿ ಕೆಎಸ್‍ ಆರ್ ಟಿಸಿ ಬಸ್‍ ಅಪಘಾತ : ಪ್ರಯಾಣಿಕರು ಅಪಾಯದಿಂದ ಪಾರು

ಸುಳ್ಯ: ಕೆಎಸ್‍ ಆರ್‍ ಟಿಸಿ ಬಸ್‍ ಅಪಘಾತಕ್ಕೀಡಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಸಮೀಪ ಕಡವಾಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್‍ ಚಾಲಕನ ನಿಯಂತ್ರಣ ತಪ್ಪಿದ ಬಸ್‍ ರಸ್ತೆ ಬದಿಯ ಚರಂಡಿಗೆ ಇಳಿದು ಬರೆಗೆ ವಾಲಿ ನಿಂತಿದೆ. ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲುಗುಂಡಿಯಲ್ಲಿ ಕೆಎಸ್‍ ಆರ್ ಟಿಸಿ ಬಸ್‍ ಅಪಘಾತ : ಪ್ರಯಾಣಿಕರು ಅಪಾಯದಿಂದ ಪಾರು Read More »

error: Content is protected !!
Scroll to Top