ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯ ಫೋಟೋ ತೆಗೆದ ದುಷ್ಕರ್ಮಿ| ಆರೋಪಿ ವಿರುದ್ದ ದೂರು ದಾಖಲು

ಸುಳ್ಯ : ಇಲ್ಲಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿದ್ದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರ ಅಪರಿಚಿತ ವ್ಯಕ್ತಿ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಶೌಚಾಲಯದ  ಕಿಟಕಿಯ ಗ್ಲಾಸ್‍ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈ ವೇಳೆ ಮಹಿಳೆ ಗಾಭಾರಿಗೊಂಡು ಜೋರಾಗಿ ಕಿರುಚಿಕೊಂಡಾಗ ಆತ ಪರಾರಿಯಾಗಿದ್ದಾನೆ ಎಂದು  ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರಿನನ್ವಯ ತನಿಖೆ ಪ್ರಾರಂಭಿಸಿದ್ದಾರೆ. […]

ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯ ಫೋಟೋ ತೆಗೆದ ದುಷ್ಕರ್ಮಿ| ಆರೋಪಿ ವಿರುದ್ದ ದೂರು ದಾಖಲು Read More »

ಎಐ ಕ್ಯಾಮರಾ, ಫುಲ್‌ ಎಸಿ, ಡಿಜಿಟಲ್‌ ಸೂಚನಾ ಫಲಕ…

ಧರ್ಮಸ್ಥಳದಲ್ಲಿ ಇಂದು ಲೋಕಾರ್ಪಣೆಗೊಳ್ಳಲಿರುವ ಶ್ರೀ ಸಾನಿಧ್ಯ ಕಾಂಪ್ಲೆಕ್ಸ್‌ನಲ್ಲಿರುವ ವಿಶೇಷತೆಗಳ ಪೂರ್ಣ ಮಾಹಿತಿ ಇಲ್ಲಿದೆ ಧರ್ಮಸ್ಥಳ : ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಇನ್ನು ದೇವರ ದರ್ಶನಕ್ಕಾಗಿ ತಾಸುಗಟ್ಟಲೆ ಕಾಯುವ ಕಷ್ಟ ತಪ್ಪಲಿದೆ. ಇಂದು ಲೋಕಾರ್ಪಣೆಗೊಳ್ಳಲಿರುವ ಶ್ರೀ ಸಾನಿಧ್ಯ ನಿರೀಕ್ಷಣಾ ಕಾಂಪ್ಲೆಕ್ಸ್‌ನಲ್ಲಿ ಭಕ್ತರು ಆರಾಮವಾಗಿ ಹೋಗಿ ಒಂದರಿಂದ ಒಂದೂವರೆ ತಾಸಿನೊಳಗೆ ದೇವರ ದರ್ಶನ ಮಾಡಿಕೊಂಡು ಬರಬಹುದು. ಭಕ್ತರಿಗೆ ಸರ್ವ ರೀತಿಯಲ್ಲೂ ಅನುಕೂಲವಾಗುವಂತೆ ಶ್ರೀ ಸಾನಿಧ್ಯವನ್ನು ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.ಇಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್‌

ಎಐ ಕ್ಯಾಮರಾ, ಫುಲ್‌ ಎಸಿ, ಡಿಜಿಟಲ್‌ ಸೂಚನಾ ಫಲಕ… Read More »

ನಾಳೆ ಆರು ನಕ್ಸಲರಿಂದ ಶಸ್ತ್ರ ತ್ಯಾಗ?

ಮುಖ್ಯವಾಹಿನಿಗೆ ಬರಲಿಚ್ಚಿಸಿದ ಮುಂಡಗಾರು ಲತಾ ನೇತೃತ್ವದ ನಕ್ಸಲ್‌ ಟೀಮ್‌ ಬೆಂಗಳೂರು: ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಬಳಿಕ ಎದೆಗುಂದಿರುವ ಕೆಲವು ನಕ್ಸಲರು ಶರಣಾಗಲು ಬಯಸಿದ್ದು, ನಾಳೆ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಜ.8ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರ ಸಮ್ಮುಖದಲ್ಲಿ ಆರು ನಕ್ಸಲರು ಶಸ್ತ್ರತ್ಯಾಗ ಮಾಡಿ ಸಮಾಜದ ಮುಖ್ಯವಾಹಿನಿಗೆ ಸೇರಲಿದ್ದಾರೆ ಎನ್ನಲಾಗಿದೆ. ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಅಡಿಯಲ್ಲಿ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ವಿಕ್ರಂ

ನಾಳೆ ಆರು ನಕ್ಸಲರಿಂದ ಶಸ್ತ್ರ ತ್ಯಾಗ? Read More »

ಇಂದು ದಿಲ್ಲಿ ಚುನಾವಣಾ ದಿನಾಂಕ ಪ್ರಕಟ

ಕುತೂಹಲ ಕೆರಳಿಸಿದ ರಾಷ್ಟ್ರ ರಾಜಧಾನಿಯ ಮತ ಸಮರ ಹೊಸದಿಲ್ಲಿ: ದೇಶ ಇನ್ನೊಂದು ಚುನಾವಣೆ ಕದನ ಕುತೂಹಲಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಆಯೋಗ ಇಂದು ಮಧ್ಯಾಹ್ನ 2 ಗಂಟೆಗೆ ದಿಲ್ಲಿ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ರಾಷ್ಟ್ರ ರಾಜಧಾನಿಯಿರುವ ರಾಜ್ಯದ ಚುನಾವಣೆ ಆದ ಕಾರಣ ದಿಲ್ಲಿ ಸಮರ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಕುತೂಹಲ ಕೆರಳಿಸಿದೆ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಸಬೇಕಿದೆ. ಈಗಾಗಲೇ ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಆಮ್

ಇಂದು ದಿಲ್ಲಿ ಚುನಾವಣಾ ದಿನಾಂಕ ಪ್ರಕಟ Read More »

24 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಎಚ್‌ಎಂಪಿ ವೈರಸ್‌

ಪ್ರಕರಣಗಳ ಸಂಖ್ಯೆ 5ಕ್ಕೇರಿಕೆ; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ ಹೊಸದಿಲ್ಲಿ: ಚೀನದಲ್ಲಿ ಕಾಣಿಕೊಂಡು ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿಸಿ) ಹೊಸ ವೈರಸ್‌ ಅಲ್ಲ. 2001ರಲ್ಲೇ ಇದನ್ನು ಗುರುತಿಸಲಾಗಿತ್ತು ಮತ್ತು ಇದು ಅಪಾಯಕಾರಿಯಲ್ಲ ಎಂದು ಐಸಿಎಂಆರ್‌ ಹೇಳಿದೆ. 2001ರಲ್ಲಿ ಮೊದಲ ಬಾರಿಗೆ ಗುರುತಿಸಲಾದ ಈ ವೈರಸ್‌ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಎಂದು ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.ಕರ್ನಾಟಕದಲ್ಲಿ ಇಬ್ಬರು ಸೋಂಕಿತರು

24 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಎಚ್‌ಎಂಪಿ ವೈರಸ್‌ Read More »

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಅಮಾನವೀಯ ಆಕ್ರಮಣ | ಹಿಂದೂ ಜನಜಾಗೃತಿ ಸಮಿತಿಯಿಂದ ಬಿತ್ತಿಪತ್ರ ಹಿಡಿದು ಪ್ರತಿಭಟನೆ

ಪುತ್ತೂರು :ಹಿಂದೂ ಜನ ಜಾಗೃತಿ ಸಮಿತಿ ಪುತ್ತೂರು ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅಮಾನವೀಯ ಆಕ್ರಮಣವನ್ನ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಭಿತ್ತಿಪತ್ರ ಹಿಡಿದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.  ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ಅತ್ಯಂತ ಅಮಾನವೀಯವಾಗಿ ಆಕ್ರಮಣಗಳಾ ಗುತ್ತಿದ್ದು, ಹಿಂದೂಗಳನ್ನು ಅತ್ಯಂತ ಬರ್ಬರ ವಾಗಿ ಹತ್ಯೆ ಮಾಡುತ್ತಿದ್ದಾರೆ. ಹಿಂದೂ ಸ್ತ್ರೀಯರನ್ನು ಅತ್ಯಾಚಾರ ಮಾಡುವುದು, ಹಿಂದೂಗಳ ಅಸ್ತಿ ವಶ ಪಡಿಸಿಕೊಳ್ಳುವುದು ನಿರಂತರ ನಡೆಯುತ್ತಿದೆ. ಅನೇಕ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಅಮಾನವೀಯ ಆಕ್ರಮಣ | ಹಿಂದೂ ಜನಜಾಗೃತಿ ಸಮಿತಿಯಿಂದ ಬಿತ್ತಿಪತ್ರ ಹಿಡಿದು ಪ್ರತಿಭಟನೆ Read More »

ಕುತ್ಯಾರು ಸೂರ್ಯ ಚೈತನ್ಯ ಸಂಸ್ಥೆಯ ವಾರ್ಷಿಕೋತ್ಸವದ ಸಂಭ್ರಮ

ಪುತ್ತೂರು : ಆನೆಗುಂದಿ  ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆ, ಕುತ್ಯಾರು ಇದರ ವಾರ್ಷಿಕೋತ್ಸವ ನಡೆಯಿತು. ಆನೆಗುಂದಿ  ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆ, ಕುತ್ಯಾರು ಇದರ ವಾರ್ಷಿಕೋತ್ಸವವನ್ನು  ಪಡುಕುತ್ಯಾರು ಸರಸ್ವತಿ ಪೀಠದ  ಶ್ರೀ ಕಾಳಹಸ್ತೇಂದ್ರ  ಸರಸ್ವತಿ ಮಹಾ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಳಿಕ ಉಡುಪಿ ಕಲಾ ರಂಗ (ರಿ)ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಜರುಗಿದ ಯಕ್ಷಗಾನ ತರಗತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಗುರುಗಳಾದ  ರಾಮಕೃಷ್ಣ ನಂದಿಕೂರು ಇವರನ್ನು

ಕುತ್ಯಾರು ಸೂರ್ಯ ಚೈತನ್ಯ ಸಂಸ್ಥೆಯ ವಾರ್ಷಿಕೋತ್ಸವದ ಸಂಭ್ರಮ Read More »

Best Online Casinos Down Under: Top Aussie Wagering Sites 2024

Ricky Casino Australia Enjoy Online Pokies And Win Real Money Content Withdrawal Methods Ricky Casino Login Faq How To Sign Up In A Online Gambling Establishment In Australia Top 10 Ricky Casino Video Games For Australian Players 2024 What Are Usually The Most Widely Used Progressive Jackpot Games Throughout Ricky Casino? Features Of Primary Australian

Best Online Casinos Down Under: Top Aussie Wagering Sites 2024 Read More »

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಬಾನೋತ್ ದುರ್ಗಾ | ಅಪರೂಪದ ಹೆರಿಕೆ ಪ್ರಕರಣ

ಮಂಗಳೂರು: ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನನ ನೀಡಿರುವ ಅಪರೂಪದ ಘಟನೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ವರದಿಯಾಗಿದೆ. ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ಕು ಮಕ್ಕಳಿಗೆ ಜನನ ನೀಡಿದ ಮಹಾತಾಯಿ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ನಾಲ್ಕು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳು. 1.1, 1.2, 800, 900 ಗ್ರಾಂ ತೂಕ ಹೊಂದಿದೆ. ಆದರೆ 30

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಬಾನೋತ್ ದುರ್ಗಾ | ಅಪರೂಪದ ಹೆರಿಕೆ ಪ್ರಕರಣ Read More »

ಜ.11, 12, 13 : ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಕೃಷಿಮೇಳಕ್ಕೆ ಚಾಲನೆ

ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಬ ತಾಲೂಕಿನ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕೃಷಿ ಮೇಳದ ಉದ್ಘಾಟನಾ ಸಮಾರಂಭ ಜ.11, 12 ಹಾಗೂ 13 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್‍. ಉದನಡ್ಕ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ದ.ಕ.ಜಿಲ್ಲೆಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಚಾರ್ವಾಕ ಭಾಗದ ಅನೇಕ ಹಿರಿಯರು ಸೇರಿಕೊಂಡು ಉಪ್ಪಿನಂಗಡಿ ತಾಲೂಕು ಕೇಂದ್ರ ಆಗಿದ್ದ ಸಂದರ್ಭದಲ್ಲಿ

ಜ.11, 12, 13 : ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಕೃಷಿಮೇಳಕ್ಕೆ ಚಾಲನೆ Read More »

error: Content is protected !!
Scroll to Top