ಮಡಪ್ಪಾಡಿಗೆ ಕೊನೆಗೂ ಸಿಕ್ಕಿತು ಸರ್ಕಾರಿ ಹಾಲ್ಟ್ ಬಸ್ ಸೇವೆ

ಊರವರ ಬಹುಕಾಲದ ಬೇಡಿಕೆ ಈಡೇರಿಕೆ ; ಬಸ್‌ಗೆ ಸಂಭ್ರಮದ ಸ್ವಾಗತ ಸುಳ್ಯ: ತಾಲೂಕಿನ ಮಡಪ್ಪಾಡಿಯಲ್ಲಿ ರಾತ್ರಿ ಹಾಲ್ಟ್‌ ಆಗುವ ಸರ್ಕಾರಿ ಬಸ್‌ ಸೇವೆ ಆರಂಭವಾಗಿದ್ದು, ಈ ಮೂಲಕ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದೆ. 2019-20ರಲ್ಲಿ ಕೊರೋನ ಸಾಂಕ್ರಾಮಿಕ ಬಾಧಿಸಿದ ಸಂದರ್ಭ ಸ್ಥಗಿತಗೊಂಡಿದ್ದ ಮಡಪ್ಪಾಡಿಯ ಸರಕಾರಿ ಬಸ್ ಇದೀಗ ಪುನರಾರಂಭಗೊಂಡಿದೆ. ಮಡಪ್ಪಾಡಿ ಸುಮಾರು 1600 ಜನಸಂಖ್ಯೆ ಇರುವ ಈ ಊರು. ಈ ಊರಿಗೆ ಸಾರಿಗೆಯದ್ದೇ ದೊಡ್ಡ ಸವಾಲು. ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸಾಯಂಕಾಲ 6.30ಕ್ಕೆ ಸುಳ್ಯದಿಂದ […]

ಮಡಪ್ಪಾಡಿಗೆ ಕೊನೆಗೂ ಸಿಕ್ಕಿತು ಸರ್ಕಾರಿ ಹಾಲ್ಟ್ ಬಸ್ ಸೇವೆ Read More »

ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೂಟ್‌ ಪೇ ಅಭಿಯಾನ

ಶಾಲಾ ಮಕ್ಕಳಿಗೆ ಶೂ ಕೊಡಿಸಲು ದಾನಿಗಳ ಮೊರೆ ಹೋಗಿರುವುದಕ್ಕೆ ಲೇವಡಿ ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ ನಡೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಗ್ಯಾರಂಟಿ ಕೊಟ್ಟು ದಿವಾಳಿಯಾಗಿರುವ ಸರ್ಕಾರದ ಬಳಿ ಶಾಲಾ ಮಕ್ಕಳಿಗೆ ಬೂಟು ಕೊಡಲು ಕೂಡ ಗತಿಯಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಬಿಜೆಪಿ ಬೂಟ್‌ ಪೇ ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದೆ. ಮಕ್ಕಳ ಶೂ ಮೇಲೆ ಬೂಟ್ ಪೇ ಎಂದು ಬರೆದು ಕ್ಯೂಆರ್ ಸ್ಕ್ಯಾನ್‌ ಪೋಸ್ಟರ್ ಮೂಲಕ ಬಿಜೆಪಿ

ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೂಟ್‌ ಪೇ ಅಭಿಯಾನ Read More »

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ

ಐದು ಕಡೆ ಎನ್‌ಐಎ ದಾಳಿ; ಉಗ್ರ ಜಾಲದ ಮಹತ್ವದ ಸುಳಿವು ಪತ್ತೆ ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬೆಂಗಳೂರು, ಕೋಲಾರದಲ್ಲಿ ಒಟ್ಟು ಐದು ಕಡೆ ದಾಳಿ ಮಾಡಿ ಉಗ್ರರಿಗೆ ನೆರವಾಗುತ್ತಿದ್ದ ಮೂವರನ್ನು ಬಂಧಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಆಗಿದ್ದ ಚಾಂದ್ ಪಾಷಾ ಅನೀಸ್ ಹಾಗೂ ಫಾತಿಮಾ ಎನ್ನುವವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಮೂವರನ್ನು

ಉಗ್ರರಿಗೆ ನೆರವು ನೀಡುತ್ತಿದ್ದ ವೈದ್ಯ, ಎಎಸ್‌ಐ ಬಂಧನ Read More »

ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಜು.16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ಜಾರಿ

ಪಾಸ್‌ಪೋರ್ಟ್‌ ಕಿತ್ತುಕೊಂಡು ಕಾಟ ಕೊಡುತ್ತಿದ್ದ ಯೆಮೆನ್‌ ಪಾಲುದಾರನನ್ನು ಕೊಂದ ಪ್ರಕರಣ ನವದೆಹಲಿ : ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ. 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಎಂಬವರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್‌ನಲ್ಲಿ

ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಜು.16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ಜಾರಿ Read More »

ನನ್ನ ಜೀವ ಇರುವುದೇ ಬಿಜೆಪಿಯಲ್ಲಿ : ಈಶ್ವರಪ್ಪ | ಹಲವು ಪಕ್ಷದವರು ನನಗೆ ಈಗಾಗಲೇ ಆಫರ್ ನೀಡಿದ್ದಾರೆ | ಬಿಜೆಪಿ ಬಿಟ್ಟು ಬೇರೆ ಪಕ್ಷಗಳನ್ನು ಸೇರುವ ಮಾತೇ ಇಲ್ಲ

ಬಳ್ಳಾರಿ: ಮಾಧ್ಯಮ ಗಳ ಮೂಲಕ ನನ್ನನ್ನು ಬಿಜೆಪಿಗೆ ‌ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುವುದನ್ನು ನೋಡಿದ್ದೇನೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ನಡೆದ ವಿದ್ಯಮಾನದ ಬಗ್ಗೆ ಮಾಜಿ ಡಿ.ಸಿ.ಎಂ. ಕೆ. ಎಸ್. ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವ ಇರುವುದೇ ಬಿಜೆಪಿಯಲ್ಲಿ. ಭಾರತೀಯ ಜನತಾ ಪಕ್ಷವನ್ನು ಬಿಟ್ಟು ನಾನೆಲ್ಲಿ ಹೋಗಲಿ ಎಂದು ಹೇಳಿದ್ದಾರೆ. ನನಗೆ ಬೇರೆ ಪಕ್ಷಗಳಿಂದಲೂ ಆಫರ್ ಬಂದಿತ್ತು. ಸಮಾಜವಾದಿ ಪಕ್ಷದ ಅಖಿಲೀಶ್ ಆರದವ್

ನನ್ನ ಜೀವ ಇರುವುದೇ ಬಿಜೆಪಿಯಲ್ಲಿ : ಈಶ್ವರಪ್ಪ | ಹಲವು ಪಕ್ಷದವರು ನನಗೆ ಈಗಾಗಲೇ ಆಫರ್ ನೀಡಿದ್ದಾರೆ | ಬಿಜೆಪಿ ಬಿಟ್ಟು ಬೇರೆ ಪಕ್ಷಗಳನ್ನು ಸೇರುವ ಮಾತೇ ಇಲ್ಲ Read More »

ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಸ್ಥಗಿತ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರ್ಕಾರದ ನಡೆಯನ್ನು ‌ಪ್ರಶ್ನೆ ಮಾಡಿ 16 ಜನರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಐ‌. ಅರುಣ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಹಾಗೆಯೇ ಮುಂದಿನ ವಿಚಾರಣೆಯ ವರೆಗೂ ಅರ್ಜಿದಾರರ ಜನೌಷಧ ಕೇಂದ್ರ ಸ್ಥಗಿತ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಈ ಸಂಬಂಧ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು,

ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚದಂತೆ ಹೈಕೋರ್ಟ್ ಮಧ್ಯಂತರ ಆದೇಶ Read More »

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಪುತ್ತೂರು: ಅಪ್ರಾಪ್ತ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಪುತ್ತೂರು ಹೊರವಲಯದ ನೆಹರು ನಗರದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಬೆಳಗ್ಗೆ  ತನ್ನ ತಾಯಿಯೊಂದಿಗೆ  ನೆಹರೂ ನಗರ ಜಂಕ್ಷನ್ ನಲ್ಲಿ  ಬಸ್ಸಿಗಾಗಿ ಕಾಯುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಂದು  ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ರ: 53/2025 ಕಲಂ: 126(2), 74, 115(2),

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ Read More »

ಅನ್ನಭಾಗ್ಯ ಪಡಿತರ ‌ಸಾಗಾಟ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಲಾರಿ‌ ಚಾಲಕ – ಮಾಲಕರಿಂದ ಮುಷ್ಕರ ವಾಪಸ್

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಟ ಲಾರಿಗಳಿಗೆ ನೀಡಲು ಬಾಕಿ ಇದ್ದ 244 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಐದಾರು ತಿಂಗಳುಗಳಿಂದ ಅನ್ನಭಾಗ್ಯ ಪಡಿತರ ಸಾಗಾಟ ವಾಹನಗಳಿಗೆ ನೀಡಬೇಕಾಗಿದ್ದ ಹಣವನ್ನು ಪಾವತಿ ಮಾಡದ ಸರ್ಕಾರದ ನಡೆಗೆ ಪ್ರತಿಭಟನೆಯ ಬಿಸಿ ಮುಟ್ಚಿಸಲು ಲಾರಿ ಚಾಲಕ ಮಾಲಕರು ಮುಂದಾಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಬಾಕಿ ಇದ್ದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿರುವುದಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಲಾರಿ

ಅನ್ನಭಾಗ್ಯ ಪಡಿತರ ‌ಸಾಗಾಟ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಲಾರಿ‌ ಚಾಲಕ – ಮಾಲಕರಿಂದ ಮುಷ್ಕರ ವಾಪಸ್ Read More »

ಐಶ್ವರ್ಯ ಗೌಡ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಡಿ.ಕೆ. ಸುರೇಶ್

ED ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ ಬೆಂಗಳೂರು: ನನಗೆ ಮತ್ತು ಐಶ್ವರ್ಯ ಗೌಡ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಹೇಳಿದ್ದಾರೆ. ನಗರದಲ್ಲಿರುವ ED ಕಚೇರಿಗೆ ವಿಚಾರಣೆಗೆ ಹಾಜರಾಗಿ ಬಳಿಕ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾದವರು ಕೊಟ್ಟ ಮಾಹಿತಿಯ ಬಗ್ಗೆ ನನಗೆ ತಿಳಿದಿಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದಕ್ಕೆ ಬಂದು ಹೇಳಿಕೆ ನೀಡಿದ್ದೇನೆ. ನನ್ನ ವೈಯಕ್ತಿಕ ಆಸ್ತಿ, ದಾಖಲೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಅದನ್ನು ನೀಡಿದ್ದೇನೆ ಎಂದಿದ್ದಾರೆ. ಯಾರು

ಐಶ್ವರ್ಯ ಗೌಡ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಡಿ.ಕೆ. ಸುರೇಶ್ Read More »

ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಬ್ರಿಕ್ಸ್ ‌ಶೃಂಗಸಭೆಯಲ್ಲಿ ಮಾನವೀಯತೆಗೆ ಪ್ರಥಮ ಆದ್ಯತೆ: ಪ್ರಧಾನಿ ಮೋದಿ

ರಿಯೋ ಡಿ ಜನೈರೋ: ಬ್ರೆಜಿಲ್‌ನಲ್ಲಿ ನಡೆದ ಬ್ರಿಕ್ಸ್ ‌ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಹವಮಾನ ಬದಲಾವಣೆ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮುಂದಿನ ವರ್ಷ ಬ್ರಿಕ್ಸ್ ಶೃಂಗಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆ ಸಂದರ್ಭದಲ್ಲಿ ಮಾನವೀಯತೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಜಿ-20 ಅಧ್ಯಕ್ಷತೆಯ ಕಾರ್ಯಸೂಚಿಯಂತೆ ಬ್ರಿಕ್ಸ್ ‌ಶೃಂಗಸಭೆಯಲ್ಲೂ ಮಾನವೀಯತೆ ಭಾರತದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ತಾಂತ್ರಿಕ ವಿಷಯಗಳ ವರ್ಗಾವಣೆ ಮತ್ತು ಆರ್ಥಿಕ ನೆರವಿನ ವಿನಃ

ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಬ್ರಿಕ್ಸ್ ‌ಶೃಂಗಸಭೆಯಲ್ಲಿ ಮಾನವೀಯತೆಗೆ ಪ್ರಥಮ ಆದ್ಯತೆ: ಪ್ರಧಾನಿ ಮೋದಿ Read More »

error: Content is protected !!
Scroll to Top