ರಾಷ್ಟ್ರೀಯ ಟೆನಿಸ್‌ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ತಂದೆ

ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂಬ ಕುಹಕಕ್ಕೆ ಬೇಸತ್ತು ಕೃತ್ಯ ನವದೆಹಲಿ: ರಾಷ್ಟ್ರೀಯ ಟೆನ್ನಿಸ್‌ ಆಟಗಾರ್ತಿಯನ್ನು ಅವರ ತಂದೆಯ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಗುರುಗಾಂವ್‌ನಲ್ಲಿ ಸಂಭವಿಸಿದೆ. ರಾಧಿಕಾ ಯಾದವ್‌ (25) ಅವರನ್ನು ತಂದೆ ದೀಪಕ್‌ ಯಾದವ್‌ ಗುಂಡಿಕ್ಕಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಊರಿನ ಜನ ಮಗಳ ದುಡಿಮೆಯಲ್ಲಿ ಬದುಕುತ್ತಿದ್ದಾನೆ ಎಂದು ಜನರು ಕುಹಕವಾಡುತ್ತಿರುವುದರಿಂದ ಬೇಸತ್ತು ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ರಾಧಿಕಾ ಯಾದವ್‌ ಟೆನ್ನಿಸ್‌ ಅಕಾಡೆಮಿಯೊಂದನ್ನು ನಡೆಸುತ್ತಿದ್ದು, ಊರವರ ಚುಚ್ಚುನುಡಿಗಳಿಂದ ಬೇಸತ್ತ ದೀಪಕ್‌ ಯಾದವ್‌ […]

ರಾಷ್ಟ್ರೀಯ ಟೆನಿಸ್‌ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ತಂದೆ Read More »

ವಜ್ರತೇಜಸ್ ಸೇವಾ ತಂಡದಿಂದ ಆನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಪುತ್ತೂರು: ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಹೃದಯಿ ಸದಸ್ಯರಿಂದ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು. ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ಕಷ್ಟದಲ್ಲಿ ಇರುವ ಬಲ್ನಾಡು ನಿವಾಸಿ ನಾಗಪ್ಪ ಮಡಿವಾಳ ಎಂಬವರಿಗೆ ವಜ್ರತೇಜಸ್ ತಂಡದಿಂದ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ವಜ್ರತೇಜಸ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಕೋಶಾಧಿಕಾರಿ ಗಣೇಶ್ ಕಾಮತ್, ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಸಹ ಕಾರ್ಯದರ್ಶಿ

ವಜ್ರತೇಜಸ್ ಸೇವಾ ತಂಡದಿಂದ ಆನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ Read More »

ಸರಕಾರಿ ಆಸ್ಪತ್ರೆಯ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ

ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಆಡಳಿತ  ವೈಧ್ಯಾಧಿಕಾರಿ ಆಶಾಜ್ಯೋತಿ , ದಂತ ತಜ್ಞರಾದ ಡಾ. ಜಯದೀಪ್ , ಅರಿವಳಿಕೆ ತಜ್ಞರಾದ ಡಾ. ಜಯಕುಮಾರಿ , ಡಾ. ಶ್ವೇತಾ ಅವರಿಗೆ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಬೀಳ್ಕೋಡುಗೆ ಸಮಾರಂಭ ವೈಧ್ಯಾಧಿಕಾರಿ ಕಛೇರಿಯಲ್ಲಿ ಗುರುವಾರ ನಡೆಯಿತು.  ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್ , ಸುದೇಶ್ ಶೆಟ್ಟಿ ಶಾಂತಿನಗರ , ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಮುಖೇಶ್ ಕೆಮ್ಮಿಂಜೆ ಶುಭ ಹಾರೈಸಿ ಮಾತನಾಡಿದರು. ಸದಸ್ಯರಾದ ವಿಕ್ಟರ್ ಪಾಯಿಸ್ ಹಾಗು

ಸರಕಾರಿ ಆಸ್ಪತ್ರೆಯ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ Read More »

ಮಂಗಳೂರು: ಲಂಚ ಸ್ವೀಕರಿಸಿದ ಐವರು ಪೊಲೀಸರು ಅಮಾನತು

ಅಪಘಾತವಾದ ಕಾರನ್ನು ಬಿಡುಗಡೆ ಮಾಡಲು 50 ಸಾವಿರ ಲಂಚ ಕೇಳಿದ್ದ ಪೊಲೀಸರು ಮಂಗಳೂರು: ವಾಹನ ಪರವಾನಗಿ ಮರಳಿ ನೀಡಲು 50 ಸಾವಿರ ರೂ. ಲಂಚದ ಬೇಡಿಕೆಯಿರಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲೀಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.ತಸ್ಲೀಂ ಮತ್ತು ವಿನೋದ್ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ

ಮಂಗಳೂರು: ಲಂಚ ಸ್ವೀಕರಿಸಿದ ಐವರು ಪೊಲೀಸರು ಅಮಾನತು Read More »

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ನಮಗೆ ದಾರಿ ತೋರಿಸುವವರು ಹಾಗೂ ನಮ್ಮ ತಪ್ಪುಗಳನ್ನು ತಿದ್ದಿ ಸರಿಯಾದ ದಾರಿಗೆ ಕರೆದುಕೊಂಡು ಹೋಗುವವರು ಗುರು, ಅದಕ್ಕಾಗಿ ಗುರುಹಿರಿಯರಿಗೆ ಗೌರವ ಕೊಟ್ಟು ಸನ್ಮಾರ್ಗದಲ್ಲಿ ನಡೆಯಿರಿ ಎಂದರು. ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಗುರು ಎಂದರೆ ಜ್ಞಾನ. ಜ್ಞಾನ ಎಂದರೆ ಬೆಳಕು. ಮನಸ್ಸಿನ ಕಲ್ಮಶವನ್ನು ತೆಗೆದಾಗ ಜ್ಞಾನವನ್ನು ಪಡೆಯಲು ಸಾಧ್ಯ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿ

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ Read More »

ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರದ ಮಹತ್ವದ ನಿರ್ಧಾರ ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳ ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು

ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ Read More »

ಗುರುಪೂರ್ಣಿಮೆ ದಿನ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಗುರುಪೂರ್ಣಿಮೆಯ ಪವಿತ್ರ ದಿನದಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು “ಗುರು” ಪರಂಪರೆಯ ಘನತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ಮೊದಲು ಪುತ್ತೂರಿನ ನೆಕ್ಕಿಲಾಡಿಯಲ್ಲಿರುವ “ಬಲ್ಲಿ ಆಯುರ್‌ಗ್ರಾಮ” ಆಯುರ್ವೇದ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವನ್ನು ಸ್ಥಾಪಿಸಿರುವ ಸುಪ್ರೀತ್ ಲೋಬೋ ಅವರ ಮಾದರಿಯಾದ ಸೇವಾ ಮನೋಭಾವನೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 91 ವರ್ಷದ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಉಪ್ಪಿನಂಗಡಿ ಅವರನ್ನು ಗೌರವಿಸಲಾಯಿತು. ಇವರು ದಶಕಗಳ ಕಾಲ

ಗುರುಪೂರ್ಣಿಮೆ ದಿನ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು Read More »

ಜಾಹೀರಾತು ಬ್ಯಾನರ್ ಗೆ ಬೆಂಕಿ | ಆರೋಪಿ ಬಂಧನ

ಗುರುವಾಯನಕೆರೆ: ದಿನಸಿ ಅಂಗಡಿಯೊಂದರ ಎದುರಿನಲ್ಲಿರಿಸಿದ ಜಾಹೀರಾತು ಬ್ಯಾನರ್ ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಸಾಲವನ್ನು ಹಿಂತಿರುಗಿಸಲು ತಿಳಿಸಿದ ಎಂಬ ಕಾರಣಕ್ಕಾಗಿ ಅಂಗಡಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ದಿನಸಿ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫಲಕದ ಬ್ಯಾನರ್ ಗೆ ಜು. 10 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ವ್ಯಕ್ತಿಯೊರ್ವ ಬೆಂಕಿ ಹಚ್ಚಿ ಓಡಿಹೋಗಿದ್ದ. ಅಂಗಡಿಯವರು ಬೆಳಗ್ಗೆ

ಜಾಹೀರಾತು ಬ್ಯಾನರ್ ಗೆ ಬೆಂಕಿ | ಆರೋಪಿ ಬಂಧನ Read More »

ಎವಿಜಿ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ

ಪುತ್ತೂರು: ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೇದವ್ಯಾಸರ ಜನ್ಮದಿನವಾದ ಗುರು ಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು. ನಿವೃತ್ತ ಪಂಚಾಯತ್ ಅಧಿಕಾರಿ ಸುಂದರ ಗೌಡ ಕಳುವಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ದಿನದ ಮಹತ್ವದ ಸಂದೇಶ ನೀಡಿ, ಆಧ್ಯಾತ್ಮಿಕ ಗುರುವಾದ ವೇದವ್ಯಾಸರು ವೇದವನ್ನು ವಿಭಾಗ ಮಾಡಿ ಅವುಗಳಿಗೆ ಪ್ರಸರಣ ಕೊಟ್ಟು ಆ ಜ್ಞಾನವನ್ನು ಲೋಕಕ್ಕೆ ಸಮರ್ಪಿಸಿದರು. ಅವರ ಜ್ಞಾನ ಅನುಪಮ ಮತ್ತು ಮಹತ್ವದ್ದಾಗಿದೆ. ಇಂದು ಎಲ್ಲಾ ಲೌಕಿಕ ಗುರುಗಳಿಗೆ ಆದರ್ಶ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ

ಎವಿಜಿ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ Read More »

ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಸೆರೆ

ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಿ ಉಡುಪಿ: ಉಡುಪಿ ಭಾಗದಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಕುಖ್ಯಾತ ಗರುಡ ಗ್ಯಾಂಗಿನ ಓರ್ವ ಸದಸ್ಯನನ್ನು ಪೊಲೀಸರು ಬಂಧಿಸಿ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದರು. ಕುಖ್ಯಾತ ಗರುಡ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿರುವ ಕಬೀರ್ 2005ರಿಂದ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು,

ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಸೆರೆ Read More »

error: Content is protected !!
Scroll to Top