ಡಿನ್ನರ್‌ ಮೀಟಿಂಗ್‌ ರದ್ದು : ಪರಮೇಶ್ವರ ಗರಂ

ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ ಎಂದು ಸ್ಪಷ್ಟನೆ ಬೆಂಗಳೂರು : ತಾನು ಕರೆದ ಡಿನ್ನರ್‌ ಮೀಟಿಂಗ್‌ ರದ್ದುಪಡಿಸಲು ಹೈಕಮಾಂಡ್‌ ಸೂಚಿಸಿರುವುದರಿಂದ ಗೃಹ ಸಚಿವ ಜಿ.ಪರಮೇಶ್ವರ್‌ ಕೆಂಡಾಮಂಡಲ ಆಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ನ ಬಣ ಜಗಳ ಮತ್ತೊಮ್ಮೆ ಬೀದಿಗೆ ಬಂದಿದೆ. ಮುಖ್ಯಮಂತ್ರಿ ರೇಸ್‌ನಲ್ಲಿರುವ ಪರಮೇಶ್ವರ್‌ಗೆ ಹೈಕಮಾಂಡ್‌ ನಡೆಯಿಂದ ಅವಮಾನ ಆಗಿದೆ ಎನ್ನಲಾಗಿದೆ. ವಿದೇಶದಿಂದ ಬಂದ ಕೂಡಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಯಕರು ಒಬ್ಬೊಬ್ಬರಾಗಿ ಪ್ರತ್ಯೇಕ ಸಭೆ ನಡೆಸುವುದಕ್ಕೆ ಕಡಿವಾಣ ಹಾಕಬೇಕೆಂದು ಹೈಕಮಾಂಡ್‌ಗೆ ತಾಕೀತು ಮಾಡಿದ್ದರು. ಅದರಂತೆ ನಿನ್ನೆ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ […]

ಡಿನ್ನರ್‌ ಮೀಟಿಂಗ್‌ ರದ್ದು : ಪರಮೇಶ್ವರ ಗರಂ Read More »

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು

ಪೊಲೀಸ್ ಸಮವಸ್ತ್ರ ಧರಿಸಿ ವೀಡಿಯೊ ಕಾಲ್‌ ಮಾಡಿದ್ದ ಆರೋಪಿ ಕಾರ್ಕಳ : ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಮಹಿಳೆಗೆ 24 ಲಕ್ಷ ರೂ. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ. ಪ್ರೀಮ ಶರಿಲ್ ಡಿಸೋಜ ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಜ. 7ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ದಿಲ್ಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬರ್‌ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು Read More »

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವಿರೋಧ ಆಯ್ಕೆ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಮುಂದಿನ 5 ವರ್ಷಗಳ ಕಾಲ  ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಶಶಿಕುಮಾರ್ ರೈ ಬಾಲ್ಯೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ರವರ ಉಪಸ್ಥಿತಿಯಲ್ಲಿ ಜ.6ರಂದು ಈ ಆಯ್ಕೆ ನಡೆಯಿತು. ಯೂನಿಯನ್ ಉಪಾಧ್ಯಕ್ಷರಾಗಿ ನೀಲಯ್ಯ ಅಗರಿ ಆಯ್ಕೆಯಾದರು. ಚುನಾವಣಾ ರಿಟರ್ನಿಂಗ್ ಅಧಿಕಾರಿ

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವಿರೋಧ ಆಯ್ಕೆ Read More »

ಯಾವ ಮಾನದಂಡದ ಮೇಲೆ ನಕ್ಸಲರಿಗೆ ಪ್ಯಾಕೇಜ್‌? ಸುನಿಲ್‌‌ ಕುಮಾರ್‌ ಪ್ರಶ್ನೆ

ನಕ್ಸಲರ ಶರಣಾಗತಿ ಪ್ರಹಸನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಾಸಕ ಕಾರ್ಕಳ : ಶರಣಾಗುವ ಆರು ಮಂದಿ ನಕ್ಸಲರಿಗೆ ಸರಕಾರ ಪರಿಹಾರದ ಪ್ಯಾಕೇಜ್‌ ನೀಡುತ್ತಿರುವುದಕ್ಕೆ ಕಾರ್ಕಳ ಶಾಸಕ, ಮಾಜಿ ಸಚಿವ ಸುನಿಲ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು ಯಾವ ಮಾನದಂಡದ ಮೇಲೆ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಆರು ಮಂದಿ ನಕ್ಸಲರಿಗೆ ರಾಜ್ಯ ಸರಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಯಾವ ಮಾನದಂಡದ ಮೇಲೆ ಸರ್ಕಾರ ಈ

ಯಾವ ಮಾನದಂಡದ ಮೇಲೆ ನಕ್ಸಲರಿಗೆ ಪ್ಯಾಕೇಜ್‌? ಸುನಿಲ್‌‌ ಕುಮಾರ್‌ ಪ್ರಶ್ನೆ Read More »

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌

ನಕ್ಸಲರ ಪುನರ್‌ವಸತಿಗಾಗಿ ಲಕ್ಷಗಟ್ಟಲೆ ವ್ಯಯಿಸಲಿದೆ ಸರಕಾರ ಬೆಂಗಳೂರು: ಆರು ನಕ್ಸಲರು ಇಂದು ಶಸ್ತ್ರತ್ಯಾಗ ಮಾಡಿ ಶರಣಾಗುವುದು ಬಹುತೇಕ ಖಚಿತವಾಗಿದ್ದು, ಶರಣಾಗತಿಗಾಗಿ ಚಿಕ್ಕಮಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದು ನಕ್ಸಲರು ಶರಣಾದರೆ ಅದು ರಾಜ್ಯದ ನಕ್ಸಲ್‌ ನಿಗ್ರಹ ಹೋರಾಟದ ಇತಿಹಾದಲ್ಲೇ ಒಂದು ಮೈಲುಗಲ್ಲು ಆಗಲಿದೆ. ಶರಣಾಗುವ ನಕ್ಸಲರಿಗೆ ಸರಕಾರ ಏನೆಲ್ಲ ಸೌಲಭ್ಯ ಕೊಡಲಿದೆ ಎಂಬ ಕುತೂಹಲ ಇದೆ. ಶರಣಾಗಲು ಬಯಸಿರುವ ನಕ್ಸಲರು ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಸರಕಾರ

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌ Read More »

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ

ಪುತ್ತೂರು: ಬೈಕ್‍ ಹಾಗೂ ಕೆಎಸ್ ಆರ್ ಟಿ ಸಿ ಬಸ್  ಡಿಕ್ಕಿ ಹೊಡೆದ ಘಟನೆ ಪುತ್ತೂರು ಕೊಡಿಮರ ರಸ್ತೆಯ ಕೊಲ್ಯ ಎಂಬಲ್ಲಿ ನಡೆದಿದೆ. ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸವಾರರು ಗಂಭೀರ ಗಾಯಗೊಂಡಿದ್ದು ಗಾಯಗೊಂಡವರನ್ನು ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ Read More »

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ ನಿಧನ

ವಿಟ್ಲ : ನಿವೃತ್ತ ಅಧ್ಯಾಪಕ , ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ (77) ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಾಂ ಭಟ್‍ ಅವರು ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಯಕ್ಷಗಾನ ಅರ್ಥದಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ ನಿಧನ Read More »

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು

ಕಣ್ಣೂರು: ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಓಡಿದ ಬಾಲಕ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣ್ಣೂರು ತೂವ್ವಕುನ್ನ್ ನಲ್ಲಿ ನಡೆದಿದೆ. ಚೇಲಕ್ಕೋಡ್ ಜುಮ್ಮಾ ಮಸೀದಿ ಬಳಿಯ ಉಸ್ಮಾನ್ ಎಂಬವರ ಪುತ್ರ, ತೂವ್ವಕುನ್ನ್ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿ ಮೊಹಮ್ಮದ್ ಫಸಲ್ (9)) ಮೃತಪಟ್ಟ ಬಾಲಕ. ಮೊಹಮ್ಮದ್ ಫಸಲ್ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ‌ ಬೀದಿ ನಾಯಿ ಅವರತ್ತ ಓಡಿ ಬಂದಿದೆ. ಮಕ್ಕಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ಫಸಲ್ ನಾಪತ್ತೆಯಾಗಿದ್ದ. ಮೊಹಮ್ಮದ್ ಫಸಲ್

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು Read More »

ಪರಮೇಶ್ವರ್‌ ಶಕ್ತಿ ಪ್ರದರ್ಶನಕ್ಕೆ ಹೈಕಮಾಂಡ್‌ ತಣ್ಣೀರು

ಸದ್ಯಕ್ಕೆ ಡಿನ್ನರ್‌ ಮೀಟಿಂಗ್‌ ನಡೆಸದಂತೆ ಸೂಚನೆ ಬೆಂಗಳೂರು: ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಗುಂಪು ರಾಜಕೀಯ ಜೋರಾಗಿದೆ. ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದಿದ್ದ ಡಿನ್ನರ್‌ ಮೀಟಿಂಗ್‌ ತೀವ್ರ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ ತನ್ನ ಶಕ್ತಿ ಪ್ರದರ್ಶಿಸಲು ಇಂದು ಡಿನ್ನರ್ ಸಭೆ ಕರೆದಿದ್ದರು. ಆದರೆ ಈ ಡಿನ್ನರ್‌ ಮೀಟಿಂಗ್‌ಗೆ ಹೈಕಮಾಂಡ್ ತಡೆ ಹಾಕಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಕಾಂಗ್ರೆಸ್ ಮುಖಂಡರು, ಸಚಿವರು ಮತ್ತು ಶಾಸಕರ ಡಿನ್ನರ್ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ಸೂಚನೆಯ

ಪರಮೇಶ್ವರ್‌ ಶಕ್ತಿ ಪ್ರದರ್ಶನಕ್ಕೆ ಹೈಕಮಾಂಡ್‌ ತಣ್ಣೀರು Read More »

ಶಬರಿಮಲೆ : ಇಂದಿನಿಂದ 5 ಸಾವಿರ ಭಕ್ತರಿಗೆ ಮಾತ್ರ ಸ್ಪಾಟ್‌ ಬುಕ್ಕಿಂಗ್‌

ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಶಬರಿಮಲೆ: ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು (ಮಕರ ವಿಳಕ್ಕು) ಕಣ್ತುಂಬಿಕೊಳ್ಳಲು ಅಯ್ಯಪ್ಪ ಭಕ್ತರ ದಂಡೇ ಆಗಮಿಸುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆ ದರ್ಶನಕ್ಕೆ ಬರುವ ಭಕ್ತರಿಗೆ ಸ್ಪಾಟ್‌ ಬುಕಿಂಗ್‌ ಅನ್ನು ಇಂದಿನಿಂದ 5,000ಕ್ಕೆ ಮಿತಿಗೊಳಿಸಲಾಗಿದೆ. ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಕ್ತಾದಿಗಳ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನದನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ಇಂದಿನಿಂದ ಜ.15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

ಶಬರಿಮಲೆ : ಇಂದಿನಿಂದ 5 ಸಾವಿರ ಭಕ್ತರಿಗೆ ಮಾತ್ರ ಸ್ಪಾಟ್‌ ಬುಕ್ಕಿಂಗ್‌ Read More »

error: Content is protected !!
Scroll to Top