ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ
ಪುತ್ತೂರು: ಸಮಾಜ ಸೇವಕಿ, ಧಾರ್ಮಿಕ ಮುಂದಾಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನರಿಮೊಗರಿನ ಮುಂಡೂರು ಗ್ರಾಮದ ಕೆರೆಮನೆ ನಿವಾಸಿ ನಳಿನಿ ಲೋಕಪ್ಪ ಗೌಡ(74) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಮುಂಡೂರು ಮೃತ್ಯುಂಜಯೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಅವರ ಪತ್ನಿ. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ Read More »










