ಅರಣ್ಯಾಧಿಕಾರಿ ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು

ಉಳ್ಳಾಲ: ಅರಣ್ಯಾಧಿಕಾರಿಯ ಬಾಡಿಗೆ ಮನೆಯಿಂದ ಕಳ್ಳರು ನಗ, ನಗದು ದೋಚಿದ ಘಟನೆ ಅಂಬಿಕಾರೋಡ್‌ನ ಕಾಪಿಕಾಡು ಎಂಬಲ್ಲಿ ನಡೆದಿದೆ. ಕೋಟೆಕಾರು ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರು ಹತ್ತೂವರೆ ಲಕ್ಷ ರೂ ಹಣ, 181 ಗ್ರಾಂ ಚಿನ್ನ, ಬೆಳ್ಳಿಯನ್ನು ‌ಮತ್ತು ಒಂದು ಬೈಕ್ ಅನ್ನು ಹೊತ್ತೊಯ್ದಿದ್ದಾರೆ. ಅವರು ತಮ್ಮ ಹುಟ್ಟೂರು ಕೊಪ್ಪಳಕ್ಕೆ ತೆರಳಿದ್ದ ‌ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೆಹಬೂಬ್ ಸಾಬ್ ಇಂದು ತಮ್ಮ ಬಾಡಿಗೆ ಮನೆಗೆ ವಾಪಾಸ್ಸಾದ […]

ಅರಣ್ಯಾಧಿಕಾರಿ ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು Read More »

ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ‌ಸಿಲುಕಿದ್ದ 50 ಮಂದಿ ಕನ್ನಡಿಗರು ಮರಳಿ ತಾಯ್ನೆಲಕ್ಕೆ

ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಕಾರಣವಾದ ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಕಾರಣದಿಂದ ದುಬೈ‌ನಲ್ಲಿ ‌ಸಿಲುಕಿ ಸಂಕಷ್ಟದಲ್ಲಿದ್ದ 50 ಮಂದಿ ಕನ್ನಡಿಗರು ಶಾಸಕ ಬಿ. ನಾಗೇಂದ್ರ ಅವರ ಸಹಕಾರದಿಂದ ಮತ್ತೆ ತಾಯ್ನಾಡಿಗೆ ಮರಳುವಂತಾಗಿದೆ. ಬಳ್ಳಾರಿಯ 35 ಮಂದಿ , ಚಿತ್ರದುರ್ಗದ 15 ಜನರು ಸೇರಿ 246 ಮಂದಿ ಕನ್ನಡಿಗರು ಮಾ. 4 ರಂದು ಶಾರ್ಜಾದಿಂದ ಕೊಚ್ಚಿನ್‌ಗೆ ಬಂದಿಳಿದಿದ್ದರು. ರಾಜ್ಯದ 50 ಜನರಿಗೆ ಅಲ್ಲಿಂದ ಬೆಂಗಳೂರಿಗೆ ಬರಲು ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಬೆಂಗಳೂರಿಗೆ ಅವರೆಲ್ಲರೂ

ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ‌ಸಿಲುಕಿದ್ದ 50 ಮಂದಿ ಕನ್ನಡಿಗರು ಮರಳಿ ತಾಯ್ನೆಲಕ್ಕೆ Read More »

ಮೌಲ್ವಿಗಳ ಮೇಲೆ ಹಲ್ಲೆ, ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ಕಲ್ಲು ತೂರಾಟ: ಆರೋಪಿಗಳಲ್ಲಿ ಕೆಲವರು ಅಂದರ್

ಬೀದರ್: ಅನ್ಯ ಕೋಮಿನ ವ್ಯಕ್ತಿಗಳು ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 49 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಅವರಲ್ಲಿ 10 ಮಂದಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಾಗ ಬಸವ ಕಲ್ಯಾಣ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು, ಘಟನೆ ಎಷ್ಟು ಭೀಕರತೆಯಿಂದ ಕೂಡಿದೆ ಎಂಬುದಕ್ಕೆ ಸಾಕ್ಷ್ಯ ಹೇಳುವಂತಿತ್ತು. ಕಲ್ಲು ತೂರಾಟದ ಕಾರಣಕ್ಕೆ ಪೊಲೀಸ್ ವಾಹನ ಸಹ ಹಾನಿಗೊಳಗಾಗಿದೆ. ಅಕ್ರಮ ಆಸ್ತಿ ಪಾಸ್ತಿ ಹಾಗೂ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ

ಮೌಲ್ವಿಗಳ ಮೇಲೆ ಹಲ್ಲೆ, ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ಕಲ್ಲು ತೂರಾಟ: ಆರೋಪಿಗಳಲ್ಲಿ ಕೆಲವರು ಅಂದರ್ Read More »

ನಾಳೆ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ ಮಂಡನೆ

ಅನುದಾನ, ಅಭಿವೃದ್ಧಿಗಾಗಿ ಕಾದು ಕುಳಿತಿದ್ದಾರೆ ಕರುನಾಡ ಜನ ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಗ್ಯಾರಂಟಿಯಿಂದ ಸದುರಾಗಿರುವ ಆರ್ಥಿಕ ಸವಾಲುಗಳ ನಡುವೆ ತನ್ನ ದಾಖಲೆಯ 17ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅನೇಕ ವಸ್ತು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿ ಭಾರಿ ಟೀಕೆಗೆ ಗುರಿಯಾಗಿರುವ ಸಿದ್ದರಾಮಯ್ಯನವರು ದಾಖಲೆಯ 17ನೇ ಬಜೆಟ್‌ನಲ್ಲಿ ಯಾವ ಕರಾಮತ್ತು ತೋರಿಸಲಿದ್ದಾರೆ ಎಂಬ ನಿರೀಕ್ಷೆ ಬಹಳ ಇದೆ. ಒಂದೆಡೆ ಗ್ಯಾರಂಟಿಯಿಂದಾಗಿ ಬೊಕ್ಕಸ ಬರಿದಾಗಿದೆ ಎಂಬ ಟೀಕೆ, ಇನ್ನೊಂದೆಡೆ ಅಭಿವೃದ್ಧಿ

ನಾಳೆ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ ಮಂಡನೆ Read More »

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ : ಮೂವರ ಬಂಧನ, ಐದು ಕೋಳಿ ವಶ

ಬಜತ್ತೂರು ಗ್ರಾಮದ ಮಾಣಿಕ್ಕಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಪುತ್ತೂರು : ಬಜತ್ತೂರು ಗ್ರಾಮದ ಮಾಣಿಕ್ಕಳದಲ್ಲಿ ಅನುಮತಿಯಿಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕದ ಮೇಲೆ ಉಪ್ಪಿನಂಗಡಿ ಪೊಲೀಸರು ಮಂಗಳವಾರ ದಾಳಿ ನಡೆಸಿ ಮೂವರನ್ನು ಬಂಧಿಸಿ ಐದು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಕೊಯಿಲ ಗ್ರಾಮದ ಸಬಲೂರು ನಿವಾಸಿ ಸತೀಶ್ (38), ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಮುರಳಿ (30) ಮತ್ತು ವಳಲು ಕುಡತ್ತಡ್ಕ ನಿವಾಸಿ ಮೋನಪ್ಪ ಕೆ.(36) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಉಪ್ಪಿನಂಗಡಿ ಎಸ್‌ಐ ಸುತೇಶ್ ಕೆ.ಪಿ ಮತ್ತು

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ : ಮೂವರ ಬಂಧನ, ಐದು ಕೋಳಿ ವಶ Read More »

ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿದ ಯುವಕ ಸೆರೆ

ಕಾರು ಚಾಲಕನನ್ನು ಅಡ್ಡಗಟ್ಟಿ ಪಿಸ್ತೂಲು ತೋರಿಸಿ ಬೆದರಿಸಿದ್ದ ಯುವಕ ಪುತ್ತೂರು: ಪುತ್ತೂರಿನ ರಿಲಯನ್ಸ್ ಮಾಲ್ ಬಳಿ ಕಾರು ಚಾಲಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ, ಗುಂಡು ಹಾರಿಸಲು ಯತ್ನಿಸಿದ 19 ವರ್ಷದ ಯುವಕನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್‌ ಎಂದು ಗುರುತಿಸಲಾಗಿದೆ. ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ನೀಡಿದ ದೂರಿನ ಪ್ರಕಾರ, ಮಾರ್ಚ್ 2ರ ಮಧ್ಯಾಹ್ನ ಹಕೀಂ ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಹೆಲ್ಮೆಟ್ ಧರಿಸದ

ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿದ ಯುವಕ ಸೆರೆ Read More »

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬಾಗಿಲು ತೆರೆಯದೆ ಎರಡು ತಾಸು ಲೋಕಾಯುಕ್ತ ಅಧಿಕಾರಿಗಳನ್ನು ಸತಾಯಿಸಿದ ಎಇಇ ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ಬೆಂಗಳೂರಿನ 4 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಕೆಆರ್‌ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ. ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಒ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಒ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ,

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ Read More »

ನದಿಯಲ್ಲಿ ತೇಲಿ ಬಂತು ರಾಶಿ ರಾಶಿ ಆಧಾರ್‌ ಕಾರ್ಡ್‌!

ನಾನಾ ರೀತಿಯ ಅನುಮಾನಗಳಿಗೆ ಕಾರಣವಾದ ನದಿಯಲ್ಲಿ ಸಿಕ್ಕಿದ ಆಧಾರ್‌ ಬಂಟ್ವಾಳ: ರಾಶಿ ರಾಶಿ ಆಧಾರ್‌ ಕಾರ್ಡ್‌ ನೇತ್ರಾವತಿ ನದಿಯಲ್ಲಿ ತೇಲಿ ಬಂದು ಬಂಟ್ವಾಳದ ಫರಂಗಿಪೇಟೆ ಸಮೀಪ ದಡಕ್ಕೆ ಬಿದ್ದಿರುವದು ಕಂಡು ಬಂದಿದ್ದು, ಈ ವಿದ್ಯಮಾನ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಹೆಚ್ಚಿನೆಲ್ಲ ಆಧಾರ್‌ ಕಾರ್ಡ್‌ಗಳು ಪುದು ಗ್ರಾಮದ ನಿವಾಸಿಗಳ ವಿಳಾಸಗಳನ್ನು ಹೊಂದಿವೆ. ಯಾರು, ಯಾಕಾಗಿ ಈ ಆಧಾರ್‌ ಕಾರ್ಡ್‌ಗಳನ್ನು ನದಿಗೆ ಎಸೆದಿದ್ದಾರೆ ಎಂಬ ಅನುಮಾನ ಉಂಟಾಗಿದೆ. ಮಂಗಳವಾರ ಸಂಜೆ ಹೊತ್ತು ನದಿ ದಡದಲ್ಲಿ ರಾಶಿ ರಾಶಿ ಅಧಾರ್‌

ನದಿಯಲ್ಲಿ ತೇಲಿ ಬಂತು ರಾಶಿ ರಾಶಿ ಆಧಾರ್‌ ಕಾರ್ಡ್‌! Read More »

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಉಡುಪಿಯಲ್ಲಿ ನರ್ಸಿಂಗ್‌ ಕಲಿಯುತ್ತಿದ್ದ ವಿದ್ಯಾರ್ಥಿನಿ ಉಡುಪಿ : ವೈಯಕ್ತಿಕ ಕಾರಣದಿಂದ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕಡಬ ರೆಂಜಿಲಾಡಿಯ ಲಾರೆನ್ಸ್ ಎಂಬವರ ಮಗಳು ಸ್ವೀಟಿ (18) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಸ್ಪತ್ರೆಯ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಫೆ.25ರಂದು ರಾತ್ರಿ ವಸತಿ ನಿಲಯದಲ್ಲಿರುವಾಗ ಇಲಿ ಪಾಷಣ ಸೇವಿಸಿದ್ದು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು.

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ Read More »

ಇರಾನ್‌ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ : 80ಕ್ಕೂ ಅಧಿಕ ಮಂದಿ ಸಾವು

ಭಾರತದಲ್ಲಿ ಸಮರಾಭ್ಯಾಸ ಮಾಡಿ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಜಲಾಂತರ್ಗಾಮಿಯಿಂದ ದಾಳಿ ವಾಷಿಂಗ್ಟನ್‌ : ಶ್ರೀಲಂಕಾದ ಕರಾವಳಿ ಸಮೀಪ ಇರಾನ್​ ಯುದ್ಧನೌಕೆಯನ್ನು ಮುಳುಗಿಸಿದ್ದು ನಾವೇ ಎಂದು ಅಮೆರಿಕ ಹೇಳಿಕೊಂಡಿದೆ. ಜಲಾಂತರ್ಗಾಮಿಯ ಮೂಲಕ ನೌಕಾ ಸ್ಫೋಟಕ ಬಳಸಿ ಹೊಡೆದು ಮುಳುಗಿಸಿದ್ದೇವೆ. ಅಂತಾರಾಷ್ಟ್ರೀಯ ಜಲ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್‌ನ ಐಆರ್​ಐಎಸ್ ದೇನಾವನ್ನು ಹಿಂದೂ ಮಹಾಸಾಗರದಲ್ಲಿ ಮುಳುಗಿಸಿದ್ದೇವೆ ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿಕೊಂಡು ಯುದ್ಧನೌಕೆಯನ್ನು ಹೊಡೆದುರುಳಿಸಿ ಮುಳುಗಿಸಿದ ಕಾರ್ಯಾಚರಣೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಾಗರದಲ್ಲಿ

ಇರಾನ್‌ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ : 80ಕ್ಕೂ ಅಧಿಕ ಮಂದಿ ಸಾವು Read More »

error: Content is protected !!
Scroll to Top