ಹೆಲ್ಮೆಟ್ ಹಾಕಿದ್ದರೂ ತಲೆಗೇ ಬಲವಾದ ಪೆಟ್ಟು ಬಿದ್ದು ಮೃತ್ಯು | ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅಂತಿಮ ದರ್ಶನ
ಪುತ್ತೂರು: ಎನ್.ಐ.ಎ. ತಂಡಕ್ಕೆ ಬೆಂಗಾವಲು ವಾಹನವಾಗಿ ಸಾಗುತ್ತಿದ್ದ ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ, ಆರ್ಲಪದವಿನ ಪಾಣಾಜೆ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ನಾಯ್ಕ್ (48) ಅವರ ಮೃತದೇಹದ ಅಂತಿಮ ದರ್ಶನ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಿತು. ಬಳಿಕ ಸ್ವಗೃಹ ಕೋಟೆಯಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆರ್ಲಪದವಿಗೆ ತರಲಾಯಿತು. ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು […]










