ಕೆಂಪು ಕೋಟೆಯ ಸ್ವಾತಂತ್ರ್ಯ ದಿನಕ್ಕೆ ರಾಹುಲ್, ಖರ್ಗೆ ಗೈರು

ನವದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಗೆ ವಿಪಕ್ಷ ‌ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಗೈರು ‌ಹಾಜರಿಯ ಬಗ್ಗೆ ಈ ಇಬ್ಬರು ನಾಯಕರು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಕಳೆದ ವರ್ಷದ ಆಸನ ವ್ಯವಸ್ಥೆಯ ಅಸಮಾಧಾನದಿಂದ ಈ ಬಾರಿ ಗೈರಾಗಿರಬಹುದು ಎಂದು ಹೇಳಲಾಗುತ್ತಿದೆ. ಖರ್ಗೆ ‌ಮತ್ತು ರಾಹುಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ‌ದೇಶದ ಜನರಿಗೆ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾರೆ. ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ […]

ಕೆಂಪು ಕೋಟೆಯ ಸ್ವಾತಂತ್ರ್ಯ ದಿನಕ್ಕೆ ರಾಹುಲ್, ಖರ್ಗೆ ಗೈರು Read More »

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ  ಆಶ್ರಯದಲ್ಲಿ 79 ನೇ  ಸ್ವಾತಂತ್ರ್ಯೋತ್ಸವ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ಕಾಲೇಜಿನ   ಅಧ್ಯಕ್ಷರಾದ ಶ್ರೀಯುತ ಜಯಂತ್  ನಡು  ಬೈಲ್     ಧ್ವಜಾರೋಹಣ  ನೆರವೇರಿಸಿ ಸಮಾರಂಭದಲ್ಲಿ  ಸಭೆಯನ್ನು ಉದ್ದೇಶಿಸಿ ಮಾತನಾಡಿದರು.  ಸ್ವಾತಂತ್ರ್ಯಹೋರಾಟದಲ್ಲಿ   ಭಾಗಿಯಾಗಿ  ತಮ್ಮ   ಜೀವನವನ್ನು ತ್ಯಾಗ ,   ಬಲಿದಾನ ಮಾಡಿದ    , ಭಗತ್ ಸಿಂಗ್, ವೀರ ಸಾವರ್ಕರ್   , ಸುಭಾಷ್ ಚಂದ್ರ ಬೋಸ್, ಅಹಿಂಸಾ  ತತ್ವದಲ್ಲಿ ಅನೇಕ ಚಳುವಳಿಗಳ ಮೂಲಕ  ಸ್ವಾತಂತ್ರ್ಯ ಸಂಗ್ರಾಮ ದ  ಚುಕ್ಕಾಣಿ ಹಿಡಿದ ರಾಷ್ಟ್ರ ಪಿತ   ಮಹಾತ್ಮ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ  ಆಶ್ರಯದಲ್ಲಿ 79 ನೇ  ಸ್ವಾತಂತ್ರ್ಯೋತ್ಸವ Read More »

ಲಿಟ್ಲ್ ಫ್ಲವರ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಕುಮಾರ್, ನಿಯೋಜಿತ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯ ವಂದಿಸಿ, ಸಾತ್ವಿಕ ಕಾರ್ಯಕ್ರಮ ನಿರೂಪಿಸಿದರು.

ಲಿಟ್ಲ್ ಫ್ಲವರ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ Read More »

ಪುತ್ತೂರು ತಾಲೂಕು ಪಂಚಾಯತಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಭಾರತ ಸ್ವಾತಂತ್ರ್ಯ ಅನೇಕಾ ಬಲಿದಾನಗಳ ಪ್ರತೀಕ. ಅಷ್ಟೇ ಅಲ್ಲದೆ ಸಂವಿಧಾನದ ಮೂಲಕ ದೇಶ ಪ್ರಜೆಗಳು ಪಾಲಿಸಬೇಕಾದ ಕರ್ತವ್ಯವನ್ನು ಸ್ಪಷ್ಟವಾಗಿ ನೀಡಲಾಗಿದೆ. ಆದರೆ ಸ್ವಚ್ಛತೆ, ಭ್ರಾತೃತ್ವ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕು ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.ಅವರು ಪುತ್ತೂರು ತಾಲೂಕು ಪಂಚಾಯಿತಿ ಆವರಣದಲ್ಲಿ 79 ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ದೇಶದ ವೈಶಿಷ್ಟ್ಯತೆಗಳನ್ನು, ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶವನ್ನು

ಪುತ್ತೂರು ತಾಲೂಕು ಪಂಚಾಯತಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ Read More »

ಕೊಪ್ಪ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

ಕಾಣಿಯೂರು : ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ ದಿನಾಚರಣೆಯನ್ನು ಸಡಗರದಿಂದ ಶುಕ್ರವಾರ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪರವರು ಧ್ವಜಾರೋಹಣಗೈದು ಶುಭ ಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಕುಂಟ್ಯಾನರವರು ಮಾತನಾಡಿ, ಸ್ವಾತಂತ್ರ್ಯಕ್ಕೆ ಹೋರಾಡಿದ ಅದೆಷ್ಟೋ ಮಹಾನ್ ವೀರರಿದ್ದಾರೆ. ಆದರೆ ಇಂದು ಕೆಲವೇ ವ್ಯಕ್ತಿಗಳ ಹೆಸರು ಮಾತ್ರ ನಮಗೆ ತಿಳಿದಿದೆ. ಸ್ಥಳೀಯವಾಗಿ ಹೋರಾಡಿದ ಕೆದಂಬಾಡಿ ರಾಮಯ್ಯ ಗೌಡ ರಂಥ ಮಹನೀಯರ ಕಥೆಗಳನ್ನು ಇಂದಿನ

ಕೊಪ್ಪ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ Read More »

ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಲರಾಮ ಆಚಾರ್ಯರವರು ಧ್ವಜಾರೋಹಣ ನೆರವೇರಿಸಿ ಮಾತಾನಾಡಿ, ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತಿಳಿಸಿದರು. ಈ ಸಂಧರ್ಭದಲ್ಲಿ ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಬಿ. ಆಚಾರ್ಯ, ವೇದ ಲಕ್ಷ್ಮೀಕಾಂತ್ ಆಚಾರ್ಯ, ಸುಧಾನ್ವ ಬಿ. ಆಚಾರ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ Read More »

ನೆಹರೂನಗರದ ಹೊಟೇಲ್ ಶ್ರೀ ಕೃಷ್ಣ ಭವನದಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ನೆಹರೂನಗರದ ಪಟ್ಲ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಹೋಟೆಲ್ ಶ್ರೀ ಕೃಷ್ಣ ಭವನದಲ್ಲಿ ಸಂಭ್ರಮದ 79ನೇ ಸ್ವಾತಂತ್ರೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಹೋಟೆಲ್ ಮಾಲಕರಾದ ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೆಹರೂನಗರದ ಹೊಟೇಲ್ ಶ್ರೀ ಕೃಷ್ಣ ಭವನದಲ್ಲಿ 79ನೇ ಸ್ವಾತಂತ್ರ್ಯೋತ್ಸವ Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕರ ದಿನಾಚರಣೆ | “ಶೀಂಟೂರು ಸ್ಮೃತಿ-2025

ಪುತ್ತೂರು: ಐಎಎಸ್ ಐಪಿಎಸ್ ನಂತಹ ಹುದ್ದೆಗಳಲ್ಲಿ ಜಿಲ್ಲೆಯ ಅತೀ ಕಡಿಮೆ ಜನರಿದ್ದಾರೆ. ಇಂತಹ ಹುದ್ದೆಗಳನ್ನು ಪಡೆಯಬೇಕಾದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಕನಸು ಬಿತ್ತುವ ಕೆಲಸದ ಜತೆಗೆ ಮೌಲ್ಯಗಳನ್ನು ತುಂಬುವ ಚಿಂತನೆ ಹೆಚ್ಚಾಗಬೇಕಾಗಿದೆ. ಬಡತನ ಎಂಬುವುದು ಯಾವ ವಿಶ್ವವಿದ್ಯಾಲಯದಲ್ಲೂ ಕಲಿಸದ ಪಾಠಗಳನ್ನು ಕಲಿಸುತ್ತದೆ ಎಂದು ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್ ಅಭಿಪ್ರಾಯಪಟ್ಟರು. ಗುರುವಾರ ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ೧೪ನೇ ವರ್ಷದ ಸ್ಥಾಪಕರ ದಿನಾಚರಣೆ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕರ ದಿನಾಚರಣೆ | “ಶೀಂಟೂರು ಸ್ಮೃತಿ-2025 Read More »

ಧರ್ಮಸ್ಥಳ ಪ್ರಕರಣ : ಸೋಮವಾರ ಬಯಲಾಗುತ್ತಾ ರಹಸ್ಯ?

ಸಂಚಲನ ಹುಟ್ಟಿಸಿದ ಷಡ್ಯಂತ್ರ ನಡೆದಿದೆ ಎಂಬ ಡಿಕೆಶಿ ಹೇಳಿಕೆ ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣ ಖಾಲಿ ಡಬ್ಬ ಅದರಲ್ಲಿ ಏನೂ ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿರುವುದು ಸಂಚಲನ ಉಂಟುಮಾಡಿದೆ. ನಿನ್ನೆ ಸದನದಲ್ಲಿ ಧರ್ಮಸ್ಥಳ ವಿಚಾರವಾಗಿ ತೀವ್ರ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಡಿಕೆಶಿ, ಸೋಮವಾರ ಗೃಹ ಮಂತ್ರಿಗಳು ಎಲ್ಲ ವಿವರಗಳನ್ನು ತರಿಸಿಕೊಂಡು ಏನು ಹೇಳಬೇಕೋ ಅದನ್ನು ಹೇಳುತ್ತಾರೆ. ಹಿಂದೂ ಧರ್ಮ ಮಾತ್ರವಲ್ಲ ಯಾವುದೇ ಧರ್ಮದ ಭಾವನಗೆ

ಧರ್ಮಸ್ಥಳ ಪ್ರಕರಣ : ಸೋಮವಾರ ಬಯಲಾಗುತ್ತಾ ರಹಸ್ಯ? Read More »

ರಾಹುಲ್ ಗಾಂಧಿ ವಿರುದ್ಧ ಚು. ಆಯೋಗ ಗರಂ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮತಗಳ್ಳತನ, ಚುನಾವಣಾ ಅಕ್ರಮ ನಡೆದಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಯೋಗ ಆಕ್ರೋಶ‌ ವ್ಯಕ್ತಪಡಿಸಿದೆ. ವೋಟ್ ‌ಚೋರಿ ಮೊದಲಾದ ಕೊಳಕು ಭಾಷೆಗಳನ್ನು ಬಳಕೆ ಮಾಡುವುದಲ್ಲ. ಸುಳ್ಳು ನಿರೂಪಣೆಗಳನ್ನು ಮಾಡುವ ಬದಲು ಅದಕ್ಕೆ ಪೂರಕ ದಾಖಲೆ ಒದಗಿಸುವಂತೆ ಹೇಳಿದೆ. ಒಬ್ಬ ವ್ಯಕ್ತಿಗೆ ಒಂದು ಮತ ಎನ್ನುವ ಕಾನೂನು ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಯಾವ ಸಾಕ್ಷ್ಯವೂ ಇಲ್ಲದ ಭಾರತದ ಮತದಾರರನ್ನು ಕಳ್ಳರು ಎಂದು ಹೇಳುವುದಲ್ಲ.

ರಾಹುಲ್ ಗಾಂಧಿ ವಿರುದ್ಧ ಚು. ಆಯೋಗ ಗರಂ Read More »

error: Content is protected !!
Scroll to Top