ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 79ನೇ ಸ್ವಾತಂತ್ರ್ಯೋತ್ಸವ | ಸ್ವಾತಂತ್ರ್ಯೋತ್ಸವ ಕೇವಲ ಆಚರಣೆಯಲ್ಲ ಬದಲಾಗಿ ಸಂಕಲ್ಪದ ದಿನವಾಗಿದೆ : ಸ್ಟೆಲ್ಲಾ ವರ್ಗೀಸ್

ಪುತ್ತೂರು: ಹಿರಿಯರ ತ್ಯಾಗ ಬಲಿದಾನ ಶೌರ್ಯದ ಸಂಕೇತವಾಗಿ ನಾವಿಂದು ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದು, ಇದು ಕೇವಲ ಆಚರಣೆಯ ದಿನವಲ್ಲ. ಸಂಕಲ್ಪದ ದಿನವಾಗಿದೆ. ಸ್ವಾತಂತ್ರ್ಯದ ಬೆಲೆಯನ್ನು ಅರಿತು ಅದನ್ನುಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು. ಅವರು ಕಿಲ್ಲೆ ಮೈದಾನದ ಮಂಗಲ್ ಪಾಂಡೆ ಚೌಕಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ತಾಲೂಕು ಮಟ್ಟದ 79ನೇ ಸ್ವಾತಂತ್ರ್ಯೋತ್ಸವ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿ ಸಂದೇಶ ನೀಡಿದರು. ಪ್ರಗತಿಯಲ್ಲಿ ಭಾರತವು […]

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 79ನೇ ಸ್ವಾತಂತ್ರ್ಯೋತ್ಸವ | ಸ್ವಾತಂತ್ರ್ಯೋತ್ಸವ ಕೇವಲ ಆಚರಣೆಯಲ್ಲ ಬದಲಾಗಿ ಸಂಕಲ್ಪದ ದಿನವಾಗಿದೆ : ಸ್ಟೆಲ್ಲಾ ವರ್ಗೀಸ್ Read More »

ರೋಟರಿ ಕ್ಲಬ್ ಪುತ್ತೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ – ನಂಬಿಕೆಯೇ ಸ್ವಾತಂತ್ರ್ಯದ ಜೀವಾಳ – ಸೀತಾರಾಮ ಕೇವಳ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಸಾಪ್ತಾಹಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸ ನೀಡಿದ ಸೀತಾರಾಮ ಕೇವಳ ಇವರು ‘ರಾಷ್ಟ್ರೀಯ ಭಾವೈಕ್ಯತೆ’ ವಿಚಾರವಾಗಿ ವಿಶೇಷ ಉಪನ್ಯಾಸ ನೀಡಿದರು. ಪಠ್ಯಕ್ಕೆ ಸೀಮಿತಾವಾಗಿರದೆ ರಾಷ್ಟ್ರೀಯ ಭಾವೈಕ್ಯತೆ ಎಂಬುದು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಸಂಗತಿ ಎಂದ ಅವರು ನಂಬಿಕೆ ಆತ್ಮೀಯತೆ ಮತ್ತು ಸಹಿಷ್ಣುತೆ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬಹುದಾದ ಅತ್ಯಂತ ಮಹತ್ವದ ಸಂಗತಿಗಳು ಎಂದು ಅಭಿಪ್ರಾಯ ಪಟ್ಟರು. ಸಭಾಧ್ಯಕ್ಷತೆಯನ್ನು ವಹಿಸಿದ ಕ್ಲಬ್ಬಿನ ಅಧ್ಯಕ್ಷ Rtn Dr. ಶ್ರೀಪ್ರಕಾಶ್ ಬಂಗಾರಡ್ಕ ಅವರು ಸ್ವಾತಂತ್ರ್ಯೋತ್ಸವ ಮತ್ತು ಕೃಷ್ಣ

ರೋಟರಿ ಕ್ಲಬ್ ಪುತ್ತೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ – ನಂಬಿಕೆಯೇ ಸ್ವಾತಂತ್ರ್ಯದ ಜೀವಾಳ – ಸೀತಾರಾಮ ಕೇವಳ Read More »

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ನಗರದ ಬಾವುಟ ಗುಡ್ಡೆಯಲ್ಲಿರುವ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು .ಶಾಸಕ ವೇದವ್ಯಾಸ ಕಾಮತ್ ಸಮರವೀರ ರಾಮಯ್ಯರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು. ತುಳು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಅವರು ರಾಮಯ್ಯ ಗೌಡರ ವೀರ ಮರಣದ ವಿಚಾರವನ್ನು ತಿಳಿಸಿದರು.ಅತಿಥಿಗಳಾಗಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ರಿ. ಮಂಗಳೂರು ಇದರ ಅದ್ಯಕ್ಷೆ ಸೌಮ್ಯ ಸುಕುಮಾರ್ ಬಾಗವಹಿಸಿದರು.ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಡಿ. ಬಿ. ಬಾಲಕೃಷ್ಣ,

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ Read More »

ಹರ್ ಘರ್ ತಿರಂಗಾ ಅಭಿಯಾನ: ಬಿಜೆಪಿ ಯುವ ಮೋರ್ಚಾದಿಂದ ರಾಷ್ಟ್ರ ಧ್ವಜ ವಿತರಣೆ

ಪುತ್ತೂರು: ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲ ಪುತ್ತೂರು ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಆ. 14 ರಂದು ರಾಷ್ಟ್ರ ಧ್ವಜ ವಿತರಣೆ ನಡೆಯಿತು. ಬ್ರಹ್ಮನಗರ ಕಾಲೋನಿ, ಕೋರ್ಟ್ ರೋಡ್, ಪ್ರಗತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಕಡೆಗಳಲ್ಲಿ 500 ಕ್ಕೂ ಹೆಚ್ಚು ರಾಷ್ಟ್ರಧ್ವಜ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಮಂಡಲದ ಅಧ್ಯಕ್ ಶಿವಾನಂದ್ ಕಳ್ಳಿಮಾರ್, ಯುವ ಮೋರ್ಚಾ

ಹರ್ ಘರ್ ತಿರಂಗಾ ಅಭಿಯಾನ: ಬಿಜೆಪಿ ಯುವ ಮೋರ್ಚಾದಿಂದ ರಾಷ್ಟ್ರ ಧ್ವಜ ವಿತರಣೆ Read More »

ಧರ್ಮಸ್ಥಳ ಕ್ಷೇತ್ರ ಅಪವಿತ್ರ ಮಾಡಲು ಬಿಡುವುದಿಲ್ಲ: ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅಪವಿತ್ರಗೊಳಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದಾರೆ. ಆನಂದಪುರದಲ್ಲಿ ‌ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಕ್ತಾದಿಗಳ ನಂಬಿಕೆಯ ಕ್ಷೇತ್ರ ಧರ್ಮಸ್ಥಳ. ಅಂತಹ ಕ್ಷೇತ್ರವನ್ನು ಅಪವಿತ್ರ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಅನಾಮಿಕ ದೂರುದಾರ ‌ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ SIT ತಂಡವನ್ನು ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರ ರಚನೆ ಮಾಡಿದೆ. ಆದರೆ ಆತ ಗುರುತಿಸಿದ ಯಾವ ಸ್ಥಳದಲ್ಲೂ ಕುರುಹುಗಳು ಸಿಕ್ಕಿಲ್ಲ. ಧರ್ಮಸ್ಥಳ ಎಂಬ ಪವಿತ್ರ

ಧರ್ಮಸ್ಥಳ ಕ್ಷೇತ್ರ ಅಪವಿತ್ರ ಮಾಡಲು ಬಿಡುವುದಿಲ್ಲ: ಬೇಳೂರು ಗೋಪಾಲಕೃಷ್ಣ Read More »

ಶತಮಾನ ಕಂಡ RSS: ಪ್ರಧಾನಿ ಮೋದಿ ಹರ್ಷ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಅವರು 100 ವರ್ಷಗಳ ಸೇವೆಯನ್ನು ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಶ್ಲಾಘಿಸಿದ್ದಾರೆ. ಶತಮಾನಗಳ ಇತಿಹಾಸ ಹೊಂದಿದ RSS ದೇಶ ಕಟ್ಟುವಲ್ಲಿ ಸಲ್ಲಿಸಿದ ಸೇವೆ ಅಪಾರವಾದುದು ಎಂದು ತಿಳಿಸಿದ್ದಾರೆ. ಈ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಉಲ್ಲೇಖಿಸಲು ನಾನು ಹೆಮ್ಮೆ ಪಡುತ್ತೇನೆ. ನೂರು ವರ್ಷಗಳಿಂದ ಸಲ್ಲಿಸುತ್ತಿರುವುದು ಹೆಮ್ಮೆಯ ಮತ್ತು ಸುವರ್ಣ ಅಧ್ಯಾಯವಾಗಿದೆ. ವ್ಯಕ್ತಿ‌ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಸಂಕಲ್ಪ ಮತ್ತು ಭಾರತದ ಕಲ್ಯಾಣ ಗುರಿಗಳ ಜೊತೆಗೆ

ಶತಮಾನ ಕಂಡ RSS: ಪ್ರಧಾನಿ ಮೋದಿ ಹರ್ಷ Read More »

ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ‌ಗೌರವಾರ್ಪಣೆ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಸಿ, ಭಾರತದ ಸಶಸ್ತ್ರ ಸಂಘರ್ಷಗಳಲ್ಲಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವಾರ್ಪಣೆ ಮಾಡಿದರು. ಈ‌ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌, ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ರಾಷ್ಚ್ರಪತಿಗಳ ಜೊತೆಗಿದ್ದರು. ವಾಯುಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಮಾಲಾರ್ಪಣೆ ಮಾಡಿದರು. ರಕ್ಷಣಾ

ರಾಷ್ಟ್ರಪತಿ ಮುರ್ಮು ಅವರಿಂದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ‌ಗೌರವಾರ್ಪಣೆ Read More »

ನನ್ನ ರಾಜೀನಾಮೆಗೆ ಮೂವರು ಪಿತೂರಿ ಮಾಡಿದ್ದಾರೆ: ಕೆ. ಎನ್.‌ರಾಜಣ್ಣ

ಬೆಂಗಳೂರು: ನಾನು ರಾಜೀನಾಮೆ ನೀಡುವಂತಾಗಲು ದೆಹಲಿಯಲ್ಲಿ ಮೂರು ಜನರು ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಕೆ. ಎನ್. ರಾಜಣ್ಣ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ‌ನನ್ನ ಸಚಿವ ಸ್ಥಾನ ಹೋಗುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಆದರೆ ಮೂವರು ಸೇರಿ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಹೈಕಮಾಂಡ್ ಮನವೊಲಿಸಲು ಸಿಎಂ ‌ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇರುವಾಗ ರಾಹುಲ್ ಗಾಂಧಿ ಕರೆ ಮಾಡಿದ್ದರು. ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ಹೇಳಿಕೆ ಅಲ್ಲ, ಸತ್ಯ ವಿಷಯ ಎಂದು

ನನ್ನ ರಾಜೀನಾಮೆಗೆ ಮೂವರು ಪಿತೂರಿ ಮಾಡಿದ್ದಾರೆ: ಕೆ. ಎನ್.‌ರಾಜಣ್ಣ Read More »

ಪ್ರಧಾನಿ ಮೋದಿ ಅವರ ಭಾಷಣವನ್ನು ಕೊಂಡಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಈ ಭಾಷಣ ರಾಷ್ಟ್ರೀಯ ಪ್ರಗತಿ, ಭದ್ರತಾ ಯೋಜನೆಗಳು ಮತ್ತು ವೀಕ್ಷಿತ್ ಭಾರತ್ ಸಾಧಿಸಲು ಮಾರ್ಗಗಳನ್ನು ಎತ್ತಿ ತೋರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ಭಾಷಣ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ. ಈ ಭಾಷಣದಲ್ಲಿ ಹಲವಾರು ವಿಷಯಗಳ

ಪ್ರಧಾನಿ ಮೋದಿ ಅವರ ಭಾಷಣವನ್ನು ಕೊಂಡಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ Read More »

ರೈತರ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ

ನವದೆಹಲಿ: ಭಾರತವನ್ನು ಸ್ವಾವಲಂಬಿಯಾಗಿ ಮಾಡಿದ ರೈತರ ಹಿತಾಸಕ್ತಿಯ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಮೆರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಅವರಿಗೆ ಇದು ನನ್ನ ನೇರ ಸಂದೇಶ ಎಂದು ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಪ್ರತಿಯೊಬ್ಬರಿಗೂ ಆಹಾರ ಒದಗಿಸುವುದು ಸವಾಲಿನ ಕೆಲಸವಾಗಿತ್ತು. ಆ ಸಂದರ್ಭದಲ್ಲಿ ದೇಶಕ್ಕೆ ಆಹಾರ ಒದಗಿಸುವ ಕೆಲಸ ಮಾಡಿದ್ದು ರೈತರು. ಅವರು ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ‌‌. ಹಾಗಾಗಿ ನನ್ನ ನಿರ್ಧಾರ ಅಚಲವಾಗಿದ್ದು,

ರೈತರ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ Read More »

error: Content is protected !!
Scroll to Top