ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಿಸುತ್ತಿದ್ದ 4 ಲಾರಿಗಳು ವಶ

ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಭಾನುವಾರ ನಡೆದಿದೆ. ಮಿಂಚಪದವಿನಿಂದ ಸುಳ್ಯದ ಕಡೆ ಬರುತ್ತಿದ್ದ ಲಾರಿಗಳಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಲಾರಿಗಳನ್ನು ವಶಪಡಿಸಿದ್ದು ಸುಳ್ಯ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ : ಕೆಂಪುಕಲ್ಲು ಅಕ್ರಮವಾಗಿ ಸಾಗಿಸುತ್ತಿದ್ದ 4 ಲಾರಿಗಳು ವಶ Read More »

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌

ವಿಡಿಯೋ ಭಾರಿ ವೈರಲ್‌ ಧರ್ಮಸ್ಥಳ : ಧರ್ಮಸ್ಥಳ ವಿರುದ್ಧ ನಡೆಸುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಗಿರೀಶ್‌ ಮಟ್ಟಣ್ಣನವರ್‌ ಕೊಲೆ ಆರೋಪಿಯನ್ನು ತನ್ನ ಜೊತೆ ಇಟ್ಟುಕೊಂಡು ಆತನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯಿಸಿದ ವಿಡಿಯೋ ಒಂದು ನಿನ್ನೆಯಿಂದ ವೈರಲ್‌ ಆಗಿದ್ದು, ಅವರು ನಡೆಸುತ್ತಿರುವ ಹೋರಾಟದ ಸಾಚಾತನವನ್ನು ಬಯಲುಗೊಳಿಸಿದೆ. ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರೌಡಿಶೀಟರ್‌ ಒಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌ Read More »

ಇಂದು ಮತ್ತೆ ನಡೆಯಲಿದೆ ಯೂಟ್ಯೂಬರ್‌ ಸಮೀರ್‌ ವಿಚಾರಣೆ

ಪೊಲೀಸರ ಪ್ರಶ್ನೆಗಳ ಬಾಣದಿಂದ ಕಂಗಾಲಾದ ಸುಳ್ಳು ಸುದ್ದಿಕೋರ ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ರೇಪ್ ಮತ್ತು ಮರ್ಡರ್ ಆಗಿದೆ ಎಂದು ಎಐ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್ದ ಯೂಟ್ಯೂಬರ್‌ ಮಹಮ್ಮದ್‌ ಸಮೀರ್ ಬೆಳ್ತಂಗಡಿ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿದ್ದ. ಅಧಿಕಾರಿಗಳು ಆತನನ್ನು ಸುಮಾರು 4.30 ತಾಸುಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದಾರೆ. ಸೋಮವಾರ ಕೂಡ ಸಮೀರ್‌ ವಿಚಾರಣೆ ನಡೆಯಲಿದೆ. ಸೋಮವಾರ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಜೊತೆ ಬರಬೇಕೆಂದು ಪೊಲೀಸರು ಹೇಳಿದ್ದಾರೆ. ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ

ಇಂದು ಮತ್ತೆ ನಡೆಯಲಿದೆ ಯೂಟ್ಯೂಬರ್‌ ಸಮೀರ್‌ ವಿಚಾರಣೆ Read More »

ವಿದ್ಯಾ ಸಮೃದ್ಧಿ ಲೋಕಾರ್ಪಣೆ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಲು ಸಜ್ಜಾಗಿರುವ ಆಪ್ (APP) ವಿದ್ಯಾ ಸಮೃದ್ಧಿಯಲ್ಲಿ ಪ್ರಸಾರವಾಗಲಿರುವ 10ನೆ ತರಗತಿಯ ಪಾಠಗಳ ವಿಡಿಯೋ ಚಿತ್ರೀಕರಣಕ್ಕೆ ಇಂದು ನ್ಯೂಸ್ ಪುತ್ತೂರು ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಜಂಟಿಯಾಗಿ ದೀಪ ಬೆಳಗಿ ಉದ್ಘಾಟನೆಗೈದ shree ಪುಟ್ಟಣ್ಣ ಮತ್ತು ಶ್ರೀ ಶ್ರೀನಿವಾಸ್ ಅವರು ಶುಭ ಹಾರೈಸಿದರು. ಪ್ರೊ. ಪದ್ಮನಾಭ ಅವರು ಆಪ್’ನ ಆಶಯವನ್ನು ವಿಶದಪಡಿಸಿದರು. ಅಕ್ಟೋಬರ್ 20ಕ್ಕೆ ಆಪ್ ಲಭ್ಯವಿದ್ಯಾ ಸಮೃದ್ಧಿ ಆಪ್’ನ ನಿರ್ಮಾಣ ಈಗಾಗಲೇ ಆರಂಭವಾಗಿದ್ದು ಅಕ್ಟೋಬರ್ 20ಕ್ಕೆ ಅದು ವಿದ್ಯಾರ್ಥಿಗಳ ಉಪಯೋಗಕ್ಕೆ

ವಿದ್ಯಾ ಸಮೃದ್ಧಿ ಲೋಕಾರ್ಪಣೆ Read More »

ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಗೌರವ ಪ್ರಶಸ್ತಿ ಪ್ರಕಟ

ಪ್ರೊ. ಕೆ. ಚಿನ್ನಪ್ಪ ಗೌಡ, ನಾ. ದಾಮೋದರ ಶೆಟ್ಟಿ ಆಯ್ಕೆ ಮಂಗಳೂರು: ಜಾನಪದ ವಿದ್ವಾಂಸ, ನಿವೃತ್ತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮತ್ತು ಸಾಹಿತಿ, ರಂಗಕರ್ಮಿ ನಾ. ದಾಮೋದರ ಶೆಟ್ಟಿ ಅವರು ಸಾಹಿತಿ, ಸಹಕಾರಿ ಕ್ಷೇತ್ರದ ಮುಖಂಡ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಹಿನ್ನೆಲೆ ನೀಡುವ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆ. 28 ರಂದು ಬಂಟ್ವಾಳ ಸಮೀಪದ ಏರ್ಯ ಬೀಡುವಿನಲ್ಲಿ ‌ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಪ್ರೊ. ಹಂಪ ‌ನಾಗರಾಜಯ್ಯ ಕಾರ್ಯಕ್ರಮದ

ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಗೌರವ ಪ್ರಶಸ್ತಿ ಪ್ರಕಟ Read More »

ಪರವಾನಗಿ ಭೂಮಾಪಕರ ದ.ಕ.ಜಿಲ್ಲೆ, ತಾಲೂಕು ಸಮಿತಿಗಳ ಪದಾಧಿಕಾರಿಗಳ ಪದಪ್ರದಾನ

ಪುತ್ತೂರು: ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ತೆಂಕಿಲದಲ್ಲಿರುವ ದರ್ಶನ ಕಲಾ ಮಂದಿರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ನಾಗ ವಿ., ಉಪಾಧ್ಯಕ್ಷರಾಗಿ ಪ್ರಶಾಂತ್ ಕೆ ಪೂಜಾರಿ, ಕಾರ್ಯದರ್ಶಿಯಾಗಿ ಬಸವಲಿಂಗೇಗೌಡ ಹೆಚ್.ಜೆ., ಖಜಾಂಜಿಯಾಗಿ ಮಣಿಪ್ರಸಾದ್ ಅವರು ಪದಪ್ರದಾನ ಸ್ವೀಕರಿಸಿದರು. ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಪೂರ್ಣೇಶ್ ಡಿ.ಎಂ. ಹಾಗೂ ಕಾರ್ಯದರ್ಶಿಯಾಗಿ ಮಧು ಬಿ.ಎಂ. ಅಧಿಕಾರ ಸ್ವೀಕರಿಸಿದರು. ಬೆಳ್ತಂಗಡಿ ತಾಲೂಕು ಸಮಿತಿ

ಪರವಾನಗಿ ಭೂಮಾಪಕರ ದ.ಕ.ಜಿಲ್ಲೆ, ತಾಲೂಕು ಸಮಿತಿಗಳ ಪದಾಧಿಕಾರಿಗಳ ಪದಪ್ರದಾನ Read More »

ಟ್ರಸ್ಟ್, ಸಹಕಾರ ಸಂಘ ಜನರ ಆರೋಗ್ಯದ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ: ಭಾಗೀರಥಿ ಮುರುಳ್ಯ | ನಿಂತಿಕಲ್ಲಿನ ಸಾಧನಾ ಸಹಕಾರ ಸೌಧದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್, ಎಣ್ಮೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಜಂಟಿ ಸಹಯೋಗ

ಪುತ್ತೂರು: ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ನಿಂತಿಕಲ್ಲು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ (ರಿ.) ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆ ದೇರಳಕಟ್ಟೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಸಾಧನಾ’ ಸಹಕಾರ ಸೌಧ ನಿಂತಿಕಲ್ಲಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತಿರುವುದು ಅಭಿನಂದನೀಯ.

ಟ್ರಸ್ಟ್, ಸಹಕಾರ ಸಂಘ ಜನರ ಆರೋಗ್ಯದ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ: ಭಾಗೀರಥಿ ಮುರುಳ್ಯ | ನಿಂತಿಕಲ್ಲಿನ ಸಾಧನಾ ಸಹಕಾರ ಸೌಧದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್, ಎಣ್ಮೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಜಂಟಿ ಸಹಯೋಗ Read More »

ಎಲ್ಲ ರೀತಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

ದಿಢೀರ್‌ ಎಂದು ನಿವೃತ್ತಿ ಘೋಷಿಸಿದ ಪರಿಪೂರ್ಣ ಟೆಸ್ಟ್‌ ಬ್ಯಾಟ್ಸ್‌ಮನ್‌ ಮುಂಬೈ: ಪರಿಪೂರ್ಣ ಟೆಸ್ಟ್‌ ಆಟದ ಕೊನೆಯ ಕೊಂಡಿ ಎಂದೇ ಅರಿಯಲ್ಪಡುತ್ತಿದ್ದ ಪ್ರತಿಭಾವಂತ ಟೆಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿ ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಈ ವರ್ಷ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವಿಚಂದ್ರನ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ದಿಢೀರ್‌ ಎಂದು ನಿವೃತ್ತಿ ಘೋಷಿಸಿದ್ದಾರೆ. ಈ

ಎಲ್ಲ ರೀತಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ Read More »

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ

ಎಡಿಆರ್‌ ಪ್ರಕಟಿಸಿದ ಪಟ್ಟಿಯಲ್ಲಿದೆ ಮುಖ್ಯಮಂತ್ರಿಗಳ ಸಂಪತ್ತಿನ ಕುತೂಹಲಕಾರಿ ಮಾಹಿತಿ ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದೇಶದ ಮೂರನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಮಾಹಿತಿಯಿದೆ. ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಹಾಲಿ ಮುಖ್ಯಮಂತ್ರಿಗಳ ಆಸ್ತಿ ಮಾಹಿತಿ ಇದರಲ್ಲಿದೆ. ಮುಖ್ಯಮಂತ್ರಿಗಳು ಚುನಾವಣೆ ಸಮಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲೇ ಅಸೋಸಿಯೇಷನ್ ಫಾರ್

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ Read More »

ಮುಂದಿನ ತಿಂಗಳು ಸಂಭವಿಸಲಿದೆ ಎರಡು ಗ್ರಹಣ

ಸೆ.7ಕ್ಕೆ ಚಂದ್ರ ಗ್ರಹಣ; ಸೆ.21ಕ್ಕೆ ಸೂರ್ಯ ಗ್ರಹಣ ಬೆಂಗಳೂರು : ಸೆಪ್ಟೆಂಬರ್ ತಿಂಗಳು ಖಗೋಳ ವಿಜ್ಞಾನ ಆಸಕ್ತರಿಗೆ ಬಹಳ ವಿಶೇಷವಾಗಿರಲಿದೆ. ಒಂದೇ ತಿಂಗಳಲ್ಲಿ ಎರಡು ದೊಡ್ಡ ಗ್ರಹಣಗಳು ಸಂಭವಿಸಲಿವೆ. ಸೆಪ್ಟೆಂಬರ್ 7ರಂದು ಚಂದ್ರ ಗ್ರಹಣ ಮತ್ತು ಸೆಪ್ಟೆಂಬರ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಸೆ. 7ರಂದು ಸಂಭವಿಸಲಿರುವ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. 2025ರ ಎರಡನೇ ಸೂರ್ಯ ಗ್ರಹಣ ಸೆಪ್ಟೆಂಬರ್ 21ರ ರಾತ್ರಿ 11 ಗಂಟೆಗೆ ಪ್ರಾರಂಭವಾಗಿ ಸೆಪ್ಟೆಂಬರ್ 22ರ ಬೆಳಗ್ಗೆ 3.24ಕ್ಕೆ ಕೊನೆಗೊಳ್ಳುತ್ತದೆ. ಇದು ಭಾಗಶಃ

ಮುಂದಿನ ತಿಂಗಳು ಸಂಭವಿಸಲಿದೆ ಎರಡು ಗ್ರಹಣ Read More »

error: Content is protected !!
Scroll to Top