ಬಂಟ್ವಾಳ : ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೋದಾಮಿಗೆ ದಾಳಿ

ಕಲ್ಲಡ್ಕ ಪಟ್ಟೆಕೋಡಿಯಲ್ಲಿ 25 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ವಶ ಬಂಟ್ವಾಳ : ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಾಸಗಿ ಗೋದಾಮಿನಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ಆಹಾರ ಇಲಾಖಾಧಿಕಾರಿಗಳು ಶನಿವಾರ ದಾಳಿ ನಡೆಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳದ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಗೋದಾಮಿನಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂದಿಸಿ ಕಲ್ಲಡ್ಕ ನಿವಾಸಿಗಳಾದ ಗೋದಾಮು ನಿರ್ವಾಹಕ ಉಮ್ಮರಬ್ಬ ಯಾನೆ ಪುತ್ತುಮೋನು (47) ಹಾಗೂ ಕೆಲಸಗಾರ ರಫೀಕ್ (42) ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. […]

ಬಂಟ್ವಾಳ : ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೋದಾಮಿಗೆ ದಾಳಿ Read More »

ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ : ಅಪರಾಧಿಗೆ 20 ವರ್ಷ ಜೈಲು

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಯುವಕ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ರ ವಯಸ್ಸಿನ ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ (20) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂ. ದಂಡ ವಿಧಿಸಿದೆ. ನ್ಯಾಯಾಧೀಶ ಮಾನು ಕೆ.ಎಸ್. ಶನಿವಾರ ಈ ತೀರ್ಪು ನೀಡಿದ್ದಾರೆ. ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯ ಕಾಡಿನ ಬಿಜಾಪುರ ಕಾಲನಿ ನಿವಾಸಿ ಸಮೀರ್ ಎಂಬಾತ ಅಪ್ರಾಪ್ತ ಯುವತಿಯ

ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ : ಅಪರಾಧಿಗೆ 20 ವರ್ಷ ಜೈಲು Read More »

ಶಿವ ರುದ್ರತಾಂಡವದ ಫೋಟೊ ಅಪ್‌ಲೋಡ್‌ ಮಾಡಿದ ಧರ್ಮಸ್ಥಳ ದೇಗುಲ

ಅಪಪ್ರಚಾರ ಮಾಡಿದವರಿಗೆ ಧರ್ಮವೇ ಗೆಲ್ಲುತ್ತದೆ ಎಂಬ ಸಂದೇಶ ಮಂಗಳೂರು: ನೂರಾರು ಶವ ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ತಲೆಬುರುಡೆ ಸಮೇತ ಪೊಲೀಸರ ಬಳಿ ಬಂದಿದ್ದ ಮುಸುಕುಧಾರಿ ಚಿನ್ನಯ್ಯ ಎಂಬಾತನ ಬಂಧನವಾಗಿ ಬುರುಡೆ ಹಿಂದಿನ ಮುಸುಕು ಒಂದೊಂದಾಗಿ ಸರಿಯಲು ತೊಡಗಿದಂತೆ ಧರ್ಮಸ್ಥಳ ದೇವಸ್ಥಾನದ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೊ ಒಂದನ್ನು ಅಪ್ಲೋಡ್‌ ಮಾಡಿ ಕೊನೆಯ ಗೆಲುವು ಎಂದಿದ್ದರೂ ಧರ್ಮಕ್ಕೆ ಎನ್ನುವುದನ್ನು ಸೂಚಿಸಲಾಗಿದೆ. ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ ಫೋಟೊ

ಶಿವ ರುದ್ರತಾಂಡವದ ಫೋಟೊ ಅಪ್‌ಲೋಡ್‌ ಮಾಡಿದ ಧರ್ಮಸ್ಥಳ ದೇಗುಲ Read More »

ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು?

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣದ ಪ್ರಮುಖ ವ್ಯಕ್ತಿ ದೂರುದಾರ ‌ಮಾಸ್ಕ್‌ಮ್ಯಾನ್ ಚೆನ್ನಯ್ಯನ ಬಂಧನವನ್ನು ಗಿರೀಶ್ ಮಟ್ಟಣ್ಣನವರ್ ಸ್ವಾಗತಿಸಿದ್ದಾರೆ. ಚೆನ್ನಯ್ಯನ ಬಂಧನ ಉತ್ತಮ ಬೆಳವಣಿಗೆ. ಆತನನ್ನು ಬಂಧಿಸಿದಕೆ ಸಾಲದು. ಆತನ ಮಂಪರು ಪರೀಕ್ಷೆ ಸಹ ಮಾಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಎಲ್ಲಾ ಷಡ್ಯಂತ್ರಗಳ ಉತ್ತರವನ್ನು SIT ಅಧಿಕಾರಿಗಳೇ ಕೊಡುತ್ತಾರೆ. ಇಲ್ಲಿ ನನ್ನ ಹೆಸರೂ ಸಹ ಬರಬಹುದು. SIT ಅಧಿಕಾರಿಗಳು ಕರೆದರೆ ನಾನು ಅವನ ಮತ್ತು ನನ್ನ ನಡುವೆ ಏನು ಸಂಬಂಧ ಇದೆ

ಮಾಸ್ಕ್‌ಮ್ಯಾನ್ ಬಂಧನ: ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು? Read More »

ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು

ಬಳ್ಳಾರಿ: ಧರ್ಮಸ್ಥಳಕ್ಕೆ ಅಪಚಾರ ಎಸಗಿದ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್‌‌ಗೆ ನೊಟೀಸ್ ನೀಡಲಾಗಿದ್ದು, ಆತನ ಬಳ್ಳಾರಿಯಲ್ಲಿರುವ ಮನೆಗೆ ಪೊಲೀಸರು ನೊಟೀಸ್ ಹಚ್ಚಿ ಬಂದಿದ್ದಾರೆ. ಈ ನೊಟೀಸ್‌ನಲ್ಲಿ ಬೆಳ್ತಂಗಡಿ ಪೊಲೀಸರು ಸಮೀರ್‌ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಮೀರನ ಆಧಾರ್ ಕಾರ್ಡ್‌ನಲ್ಲಿ ಸಮೀರನ ವಿಳಾಸ ಬಳ್ಳಾರಿ ಎಂದು ನಮೂದಾಗಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಬೆಂಗಳೂರು ಮನೆಗೆ ನೊಟೀಸ್ ನೀಡಿದ್ದಾರೆ.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು Read More »

ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಬಿ.ಎಲ್. ಸಂತೋಷ್ ಅವರನ್ನು ಅವಹೇಳನ ಮಾಡಿದ ಆರೋಪದಲ್ಲಿ ‌ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಆ ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈಗ ಜಾಮೀನು ಅರ್ಜಿ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತಿಮರೋಡಿ ಅವರ ಆರೋಗ್ಯದ ಹಿನ್ನೆಲೆ ಅವರಿಗೆ

ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು Read More »

ಒಂದೊಂದೇ ಸತ್ಯಗಳು ಹೊರ ಬರುತ್ತಿವೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ದೇಗುಲದ ಸೋಷಿಯಲ್ ಮೀಡಿಯಾದಲ್ಲಿ ‌ಶಿವ ರುದ್ರತಾಂಡವ ಚಿತ್ರ ಅಪ್ಲೋಡ್ ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ SIT ದೂರುದಾರ ಮುಸುಕುಧಾರಿ ‌ಚೆನ್ನಯ್ಯನನ್ನೇ ಬಂಧಿಸಿದ್ದು, ಆತನಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿದ್ದು, ಈ ಪ್ರಕರಣ SIT ತನಿಖೆಯಲ್ಲಿದ್ದು, ಹೆಚ್ಚೇನು ‌ಮಾತನಾಡುವುದಿಲ್ಲ. ಒಂದೊಂದೇ ಸತ್ಯಗಳು ಹೊರ ಬರುತ್ತಿದ್ದು, ಇದು ಸಂತಸ ನೀಡಿದೆ ಎಂದಿದ್ದಾರೆ. ಎಲ್ಲಾ ಆರೋಪಗಳು ಈಗ

ಒಂದೊಂದೇ ಸತ್ಯಗಳು ಹೊರ ಬರುತ್ತಿವೆ: ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ದಲಿತ ಸಮುದಾಯದ ಕಲಾವಿದನಿಗೆ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ- ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ದಲಿತ ಸಂಘಟನೆ.

ಪುತ್ತೂರು: ರವಿ ರಾಮಕುಂಜ ಅವರು ನಮ್ಮ ದಲಿತ ಸಮುದಾಯಕ್ಕೆ ಸೇರಿದ ಹುಡುಗನಾಗಿದ್ದು, ಆತನ ಬೆಳವಣಿಗೆಯನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ತೇಜೋವಧೆ ಮತ್ತು ಷಡ್ಯಂತ್ರ ನಡೆಯುತ್ತಿದೆ. ಇದನ್ನು ಮುಂದುವರಿಸಿದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಅಂಬೇಡ್ಕ‌ರ್ ಆಪದ್ಭಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಹೇಳಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಪಂಚನಾಡಿಯಲ್ಲಿ ನಡೆದ ಹಾಸ್ಯ ಪ್ರಹಸನ ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಅವರು ಮಾಡಿದ ಪಾತ್ರದಲ್ಲಿ ಶ್ರೀ ಕೃಷ್ಣ ದೇವರಿಗೆ ಅವಮಾನ ಆಗಿದೆ ಎಂದು

ದಲಿತ ಸಮುದಾಯದ ಕಲಾವಿದನಿಗೆ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ- ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ದಲಿತ ಸಂಘಟನೆ. Read More »

ಮಾಸ್ಕ್ ಮ್ಯಾನ್ ಚೆನ್ನಯ್ಯ ಬಂಧನ, ನಿಜ ರೂಪ ದರ್ಶನ: 10 ದಿನ SIT ಕಸ್ಟಡಿಗೆ

ಧರ್ಮಸ್ಥಳ: ನೂರಾರು ಶವಗಳನ್ನು ‌ಹೂತಿದ್ದಾಗಿ ಹೇಳಿದ ಅನಾಮಿಕ ದೂರುದಾರ ಮಾಸ್ಕ್‌ಮ್ಯಾನ್ ಯಾರು ಎನ್ನುವ ಸತ್ಯ ಬಯಲಾಗಿದ್ದು, ಇದು ಧರ್ಮಸ್ಥಳದ ಅಭಿಮಾನಿಗಳಿಗೆ ಸಂತಸ ನೀಡಿದೆ. ಮುಸುಕುಧಾರಿಯ ಹೆಸರು ಚೆನ್ನಯ್ಯ ಯಾನೆ ಚೆನ್ನನನ್ನು ‌ಸುಳ್ಳು ದೂರು ನೀಡಿದ ಆರೋಪ ಮತ್ತು ಮೊದಲ ಬುರುಡೆಯನ್ನು ‌ಎಲ್ಲಿಂದ ತಂದ ಎನ್ನುವ ಮಾಹಿತಿ ನೀಡದ ಆರೋಪದಡಿ SIT ಅಧಿಕಾರಿಗಳು ಬಂಧಿಸಿರುವುದಾಗಿದೆ. ಈತ ಕಟ್ಟಿದ ಬುರುಡೆ ಕಥೆ, ನೂರಾರು ಹೆಣಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣ ಇಡೀ ದೇಶವನ್ನೇ ಧರ್ಮಸ್ಥಳದತ್ತ ‌ತಿರುಗುವಂತೆ ಮಾಡಿತ್ತು. ಅಲ್ಲದೆ ಈ ವರೆಗೆ

ಮಾಸ್ಕ್ ಮ್ಯಾನ್ ಚೆನ್ನಯ್ಯ ಬಂಧನ, ನಿಜ ರೂಪ ದರ್ಶನ: 10 ದಿನ SIT ಕಸ್ಟಡಿಗೆ Read More »

ತನಿಖೆ ಮುಗಿಯದೆ ಏನನ್ನೂ ಹೇಳಲಾಗದು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಿ. ಪರಮೇಶ್ವರ್ ಮಾತು

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರುದಾರ ಮುಸುಕುಧಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಉಡುಪಿಯಲ್ಲಿ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, SIT ತನಿಖೆ ಆಂತ್ಯವಾಗುತ್ತದೆ ಎಂದು ಹೇಳಲಾಗದು. ಈ ಪ್ರಕರಣದ ಹಿಂದಿನ ಜಾಲವನ್ನು ಪತ್ತೆ ಮಾಡಲಾಗುವುದು. SIT ತನಿಖೆಯ ಅಂತಿಮ ವರದಿ ಬರುವವರೆಗೆ ಏನನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ. ಸುಜಾತ ಭಟ್ ಪ್ರಕರಣ

ತನಿಖೆ ಮುಗಿಯದೆ ಏನನ್ನೂ ಹೇಳಲಾಗದು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಿ. ಪರಮೇಶ್ವರ್ ಮಾತು Read More »

error: Content is protected !!
Scroll to Top