ದಸರಾ ಆಚರಣೆಯ ವಿಷಯದಲ್ಲಿ ರಾಜಕೀಯ: ಪ್ರಮೋದಾ ದೇವಿ ಒಡೆಯರ್ ಬೇಸರ

ಮೈಸೂರು: ರಾಜ್ಯ ಸರ್ಕಾರ ಆಯೋಜಿಸಿರುವ ದಸರಾ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತ ನಡೆದ ರಾಜಕೀಯ ತೀವ್ರ ಬೇಸರ ಮೂಡಿಸಿದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಈ ರೀತಿಯ ಬೆಳವಣಿಗೆ ಕಳವಳಕಾರಿಯಾಗಿದೆ. ಆದ್ದರಿಂದ ಪತ್ರ ಬರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ವರ್ಷದ ನಾಡಹಬ್ಬ (ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆ ಸಂಘರ್ಷದ ಅಭಿಪ್ರಾಯಗಳಿಗೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಸಂವೇದನಾರಹಿತ ಹೇಳಿಕೆ ಅನಗತ್ಯವಾಗಿತ್ತು. ಅದು ಹಿಂದೂ ದೇವಸ್ಥಾನ ಅಲ್ಲದಿದ್ದರೆ, ಅದನ್ನು ಎಂದಿಗೂ […]

ದಸರಾ ಆಚರಣೆಯ ವಿಷಯದಲ್ಲಿ ರಾಜಕೀಯ: ಪ್ರಮೋದಾ ದೇವಿ ಒಡೆಯರ್ ಬೇಸರ Read More »

ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ನ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ ಎರಡನೇ ಹಂತದ ಜಿಲ್ಲಾಮಟ್ಟದ ತಂಡಗಳ ತಾಳಮದ್ದಳೆಯು ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಜರಗಿತು. ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಸನ್ನ ಕುಮಾರ್ ಪೆರಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕಾಳಿಕಾಂಬ ಯಕ್ಷ ಕಲಾಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಕೃಷ್ಣಾಷ್ಟಮಿ ಸಮಿತಿ ಅಧ್ಯಕ್ಷ ಸುರೇಶ ಅತ್ರಮಜಲು,

ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ Read More »

ಪುತ್ತೂರು ಶ್ರೀ ದೇವತಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದಲ್ಲಿ ಏಳು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಚಾಲನೆ

ಪುತ್ತೂರು: ಶ್ರೀ ದೇವತಾ ಸಮಿತಿ ವತಿಯಿಂದ 68ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬುಧವಾರ ಕಿಲ್ಲೇ ಮೈದಾನದಲ್ಲಿ ಚಾಲನೆ ನೀಡಲಾಯಿತು. ಬೆಳಿಗ್ಗೆ 11 ಗಂಟೆಗೆ ಕೋರ್ಟಿರೋಡಿನಲ್ಲಿರುವ ವಿಶ್ವ ಸಂಕೀರ್ಣದಿಂದ ಶ್ರೀ ಗಣಪತಿಯ ವಿಗ್ರಹ ಮೆರವಣಿಗೆ ಮೂಲಕ ಹೊರಟು ಕಿಲ್ಲೇ ಮೈದಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮಧ್ಯಾಹ್ನ  ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆಯಾಯಿತು. ಬಳಿಕ ಅನ್ನಸಂತರ್ಪಣೆ ಜರಗಿತು. ಸೆ.2 ರ ತನಕ ಏಳು ದಿನಗಳ ಕಾಲ ಶ್ರೀ ಗಣೇಶೋತ್ಸವ ನಡೆಯಲಿದೆ.

ಪುತ್ತೂರು ಶ್ರೀ ದೇವತಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದಲ್ಲಿ ಏಳು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಚಾಲನೆ Read More »

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗಣೇಶೋತ್ಸವ ಆಚರಣೆ | ಕಾರ್ಯಕ್ರಮಕ್ಕೆ ಮೆರುಗು ನೀಡಿದ ವಿದ್ಯಾರ್ಥಿ ರೂಪಿತ ಗಣೇಶ ವಿಗ್ರಹಗಳು

ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಸ್ಥಳಶುದ್ಧಿ, ವಿಗ್ರಹ ಪ್ರತಿಷ್ಠಾಪನಾ ಕಾರ್ಯ ನಡೆದು, ಗಣಪತಿ ಹವನವೇ ಮೊದಲಾದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು. ವಿದ್ಯಾರ್ಥಿಗಳಿಂದ ಭಜನೆ, ನಾಟ್ಯವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿ ಮಧ್ಯಾಹ್ನ ನಂತರ ಶ್ರೀ ಮಹಾಗಣಪತಿ ವಿಗ್ರಹದ ವಿಸರ್ಜನಾ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೂ ನೆರವೇರಿದವು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗಣೇಶೋತ್ಸವ ಆಚರಣೆ | ಕಾರ್ಯಕ್ರಮಕ್ಕೆ ಮೆರುಗು ನೀಡಿದ ವಿದ್ಯಾರ್ಥಿ ರೂಪಿತ ಗಣೇಶ ವಿಗ್ರಹಗಳು Read More »

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ

ನವದೆಹಲಿ: RSS ಸಾಧನೆಗಳು, ಸೇವಾ ಮನೋಭಾವದಿಂದ ನಾವೆಲ್ಲರೂ ಸ್ಪೂರ್ತಿ ಪಡೆಯಬೇಕು ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯ ಭಾಷೆ ಮೌನ, ಇದನ್ನು ನಾನು RSS ನಿಂದ ಕಲಿತಿದ್ದೇನೆ. ಮೌನದಿಂದಲೇ ದೇಶ ಸೇವೆ ಮಾಡುವುದು, ಜನ ಸೇವೆ ಮಾಡುವುದಕ್ಕಿಂತ ದೊಡ್ಡ ಪವಿತ್ರವಾದ ಕಾರ್ಯ ಬೇರೊಂದಿಲ್ಲ. ಈ ವೇದಿಕೆಗೆ ನಾನು ಒಬ್ಬ ಭಾರತೀಯನಾಗಿ, ಕಲಾವಿದನಾಗಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’, ‘ದಿ ತಾಷ್ಕೆಂಟ್

RSS ಸೇವಾ ಮನೋಭಾವ ಎಲ್ಲರಿಗೂ ಸ್ಪೂರ್ತಿ: ವಿವೇಕ್ ಅಗ್ನಿಹೋತ್ರಿ Read More »

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT

ಧರ್ಮಸ್ಥಳ: ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತ ಭಟ್ ಅವರು ಇಂದು SIT ತನಿಖೆಗೆ ಹಾಜರಾಗಿದ್ದಾರೆ‌. ಆ. 27 ರಂದು ಸುಜಾತ ಭಟ್ ಅವರನ್ನು SIT ಅಧಿಕಾರಿಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30 ರ ವರೆಗೆ ವಿಚಾರಣೆ ನಡೆಸಿದ್ದರು. SIT ಅಧಿಕಾರಿಗಳು ಕಳೆದ ಮೂರು ದಿನಗಳಿಂದಲೂ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇದರಿಂದ ಬೇಸತ್ತ ಅವರು ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿಯೂ ಹೇಳಿದ್ದಾರೆ. ಆದರೆ SIT ಅಧಿಕಾರಿಗಳು

ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT Read More »

ಅಕ್ಷಯ ಕಾಲೇಜಿ ನಲ್ಲಿ ಅದ್ವಯ ಸಾಹಿತ್ಯ ಸಂಘದಿಂದ  “ಸಾಹಿತ್ಯ ಮತ್ತು  ಸಾಮಾಜಿಕ ಬದ್ಧತೆ” ವಿಚಾರ ಧಾರೆ 

ಪುತ್ತೂರು:  ಅಕ್ಷಯ ಎಜುಕೇಶನಲ್j ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ  ಪದವಿ ಕಾಲೇಜಿನ  ಅದ್ವಯ  ಸಾಹಿತ್ಯ ಸಂಘ ಕಾಲೇಜಿನ  ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಹಭಾಗಿತ್ವದಲ್ಲಿ “ಸಾಹಿತ್ಯ ಮತ್ತು  ಸಾಮಾಜಿಕ ಬದ್ಧತೆ” ವಿಚಾರ   ಗೋಷ್ಠಿಯನ್ನು ಕಾಲೇಜಿನ ಸಭಾಂಗಣದಲ್ಲಿ ಸಂಘಟಿಸಿತು. ಭಾರತ್ ಬೋಧ್ ಮಾಲ ಉಪನ್ಯಾಸ ಸರಣಿ-14 ರ ಶೀರ್ಷಿಕೆ ಸಾಹಿತ್ಯ ಮತ್ತು  ಸಾಮಾಜಿಕ ಬದ್ಧತೆ ಎಂಬ ವಿಷಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸುಳ್ಯ ಇದರ  ಅಧ್ಯಕ್ಷೆ ಅಶ್ವಿನಿ ಕೊಡಿಬೈಲ್ ವಿಚಾರಧಾರೆ ಮಂಡಿಸಿದರು. ಸಾಹಿತ್ಯದ

ಅಕ್ಷಯ ಕಾಲೇಜಿ ನಲ್ಲಿ ಅದ್ವಯ ಸಾಹಿತ್ಯ ಸಂಘದಿಂದ  “ಸಾಹಿತ್ಯ ಮತ್ತು  ಸಾಮಾಜಿಕ ಬದ್ಧತೆ” ವಿಚಾರ ಧಾರೆ  Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

ಕೊಡಗು ಮೂಲದ ರೋಷನ್ ಜೊತೆ ನೆರವೇರಿದ ವಿವಾಹ ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಮಂಗಳೂರು ಮೂಲದ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕಿರುತೆರೆಯಲ್ಲಿ ಆಕರ್ಷಕ ನಿರೂಪಣೆಯಿಂದ ಜನಪ್ರಿಯತೆ ಗಳಿಸಿರುಜವ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10.56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ Read More »

ಬಂಟ್ವಾಳ : ತಲವಾರಿನಿಂದ ಕೊಲ್ಲಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ನೀಡಿದಾತ ಅರೆಸ್ಟ್‌

ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದ ಕೊಲೆಯತ್ನದ ಕಥೆ ಕಟ್ಟಿದ್ದ ಆರೋಪಿ ಬಂಟ್ವಾಳ: ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11ರಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ಎಂಬಾತ ನೀಡಿದ ದೂರು ಸುಳ್ಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಪಾರೂಕ್ (48) ಜೂನ್ 1 ರಂದು ಮುಂಜಾನೆ ಜೀಪಿನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜಿಪನಡು ಗ್ರಾಮದ

ಬಂಟ್ವಾಳ : ತಲವಾರಿನಿಂದ ಕೊಲ್ಲಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ನೀಡಿದಾತ ಅರೆಸ್ಟ್‌ Read More »

ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆಯಲ್ಲಿ ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಉಗ್ರರ ಒಳನುಸುಳುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಸೇನಾ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಭದ್ರತಾ ಪಡೆ ಕೂಡ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ

ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರು ಎನ್‌ಕೌಂಟರ್‌ಗೆ ಬಲಿ Read More »

error: Content is protected !!
Scroll to Top