ಆರ್ಥಿಕ ವರ್ಷದಲ್ಲಿ ಕೆದಿಲ ವ್ಯ. ಸೇ. ಸ. ಸಂಘ 100% ಸಾಲ ಮರುಪಾವತಿ | ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸನ್ಮಾನ
ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಬಿ. ಪೆರ್ನಾಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಕಾಂತುಕೋಡಿ ಅವರನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರಿ ರತ್ನ ಎಂ.ಎನ್. ರಾಜೇಂದ್ರ ಕುಮಾರ್ ಮಂಗಳೂರಿನಲ್ಲಿ ನಡೆದ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿದರು. 2024-25ರ ಆರ್ಥಿಕ ವರ್ಷದಲ್ಲಿ ಕೆದಿಲ ವ್ಯ. ಸೇ. ಸ. ಸಂಘದ ಸದಸ್ಯರು 100% ಸಾಲ ಮರುಪಾವತಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ […]










