ಹನಿಟ್ರ್ಯಾಪ್‌ ಜಾಲಕ್ಕೆ ಕೆಡವಿ ಹಣ ಕಿತ್ತುಕೊಂಡ ಮಹಿಳೆ ಸಹಿತ ಆರು ಮಂದಿ ಸೆರೆ

ಆರೋಪಿಗಳ 18 ಲ.ರೂ. ಮೌಲ್ಯದ ಎರಡು ಕಾರುಗಳು ವಶ ಉಡುಪಿ: ಕುಂದಾಪುರ ಸಮೀಪ ಕಾರ್ಯಾಚರಿಸುತ್ತಿದ್ದ ಹನಿಟ್ರ್ಯಾಪ್ ಜಾಲವೊಂದನ್ನು ಬೇಧಿಸಿರುವ ಪೊಲೀಸರು ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧಿ ಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26) ಮತ್ತು ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು. […]

ಹನಿಟ್ರ್ಯಾಪ್‌ ಜಾಲಕ್ಕೆ ಕೆಡವಿ ಹಣ ಕಿತ್ತುಕೊಂಡ ಮಹಿಳೆ ಸಹಿತ ಆರು ಮಂದಿ ಸೆರೆ Read More »

ಮಂಗಳೂರು : ಫ್ಲ್ಯಾಟ್‌ನಿಂದ 9.46 ಲ.ರೂ. ಚಿನ್ನಾಭರಣ ಕಳವು

ಮಂಗಳೂರು : ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಿಂದ ಸುಮಾರು 9.46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಜಗದೀಶ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಜಗದೀಶ್‌ ಮತ್ತವರ ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈ ಫ್ಲ್ಯಾಟ್‌ನಲ್ಲಿ ಜಗದೀಶ್‌ರ ಪತ್ನಿ ಒಬ್ಬರೇ ಇದ್ದರು. ಅವರ ಆರೋಗ್ಯ ಸರಿ ಇಲ್ಲದ ಕಾರಣ ಮಹಿಳೆಯೊಬ್ಬರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಮನೆ ಕೆಲಸದಾಕೆ ಕಳೆದ ಜು.21ರಿಂದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು. ಫೋನ್ ಕರೆಗಳನ್ನು ಕೂಡ ಸ್ವೀಕರಿಸುತ್ತಿರಲಿಲ್ಲ. ಬಳಿಕ ಜಗದೀಶ್‌ರ ಪತ್ನಿಯ ಆರೋಗ್ಯದಲ್ಲಿ

ಮಂಗಳೂರು : ಫ್ಲ್ಯಾಟ್‌ನಿಂದ 9.46 ಲ.ರೂ. ಚಿನ್ನಾಭರಣ ಕಳವು Read More »

ಸುಳ್ಯ : ಕಾರು-ಟ್ಯಾಂಕರ್ ಡಿಕ್ಕಿಯಾಗಿ ಮಹಿಳೆ ಸಾವು; ಇಬ್ಬರಿಗೆ ಗಂಭೀರ ಗಾಯ

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಬಳಿಯ ಕಡೇಪಾಲ ಬಳಿ ಬುಧವಾರ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದಿಕೇರಿಯ ನಿವಾಸಿ ಶೋಭಾ (47) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಟ್ಯಾಂಕರ್ ಮಡಿಕೇರಿಯಿಂದ ಸುಳ್ಯದ ಕಡೆಗೆ ಹೋಗುತ್ತಿತ್ತು, ಕಾರು ಮಡಿಕೇರಿ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು. ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ

ಸುಳ್ಯ : ಕಾರು-ಟ್ಯಾಂಕರ್ ಡಿಕ್ಕಿಯಾಗಿ ಮಹಿಳೆ ಸಾವು; ಇಬ್ಬರಿಗೆ ಗಂಭೀರ ಗಾಯ Read More »

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ

ಜಿಎಸ್‌ಟಿ ದರದಲ್ಲಿ ಭಾರಿ ಬದಲಾವಣೆ; ಕೇಂದ್ರದಿಂದ ಜನರಿಗೆ ದೀಪಾವಳಿಗೂ ಮೊದಲೇ ಭರ್ಜರಿ ಉಡುಗೊರೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಕುರಿತು ನೀಡಿದ ವಾಗ್ದಾನವನ್ನು ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು

ತೆರಿಗೆ ಇಳಿಕೆ : ಇಳಿಯಲಿದೆ ಜನಸಾಮಾನ್ಯರ ಹೊರೆ Read More »

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ದೂರುದಾರ ಆರೋಪಿ ಚೆನ್ನಯ್ಯನ SIT ಕಸ್ಟಡಿ ಅಂತ್ಯವಾಗಿದ್ದು, ಆತನನ್ನು ಇಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆತನನ್ನು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಹೆಚ್ಚುವರಿ ಮಾಹಿತಿ ಪಡೆಯಲು ಮತ್ತೆ SIT ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು Read More »

ಕುಂಕುಮ ಹಚ್ಚುವ ಪದ್ದತಿ ಮುಸ್ಲಿಮರಲ್ಲಿಲ್ಲ: ಸಿ ಎಂ ಸಿದ್ದರಾಮಯ್ಯ

ಮೈಸೂರು: ಬಾನು ಮುಷ್ತಾಕ್ ಮುಸ್ಲಿಮ್ ಮಹಿಳೆ ಯಾಗಿದ್ದು, ಅವರ ಧರ್ಮದಲ್ಲಿ ಕುಂಕುಮ ಹಚ್ಚುವ ಪದ್ಧತಿ ಇಲ್ಲ. ನಾವು ದಸರಾವನ್ನು ನಾಡಹಬ್ಬ ಎಂದು ಆಚರಿಸುತ್ತೇವೆ. ಅದಕ್ಕೆ ಬೇರೆ ಧರ್ಮದವರು ಉದ್ಘಾಟಕರಾದರೆ ಕುಂಕುಮ ಹಚ್ಚಿ ಬನ್ನಿ, ಹಿಂದೂಗಳಾಗಿ ಬನ್ನಿ ಎನ್ನುವುದು ಸರಿಯಲ್ಲ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿಯ ವಿರೋಧಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಬಾನು ಮುಷ್ತಾಕ್ ಅವರ ಕುಂಕುಮದ ಬಗ್ಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಕನ್ನಡದ ಬರಹಗಾರ್ತಿ.

ಕುಂಕುಮ ಹಚ್ಚುವ ಪದ್ದತಿ ಮುಸ್ಲಿಮರಲ್ಲಿಲ್ಲ: ಸಿ ಎಂ ಸಿದ್ದರಾಮಯ್ಯ Read More »

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಬುರುಡೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆದಿತ್ತು. ಚೆನ್ನಯ್ಯನ ಮೂಲಕ ಕಾಡಿನಲ್ಲಿ ಕೆಲವು ಸ್ಥಳಗಳನ್ನು ಗುರುತು ಮಾಡಿ ಅಲ್ಲಿ ಗಿಡಗಳನ್ನು ನೆಡಲಾಗಿತ್ತು ಎಂಬ ಅಂಶ SIT ಗೆ ಗೊತ್ತಾಗಿದೆ. ದೂರುದಾರ ಆರೋಪಿ ಚೆನ್ನಯ್ಯ‌ನನ್ನು ಕಳೆದ ಕೆಲ ದಿನಗಳಿಂದಲೂ SIT ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಚೆನ್ನಯ್ಯನ ಪಾತ್ರ ಸೃಷ್ಟಿಯಾದಾಗಿಂದ ಈ ವರೆಗಿನ ಎಲ್ಲಾ ವಿಚಾರಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಗಿರೀಶ್ ಮಟ್ಟಣ್ಣನವರ್ ತಂಡ ಕಳೆದ ಒಂದು ವರ್ಷದ

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್ Read More »

ದರ್ಶನ್‌ಗೆ ಜೈಲಿನಲ್ಲಿ ಕನಿಷ್ಟ ಸೌಲಭ್ಯಗಳನ್ನೂ ನೀಡಲಾಗುತ್ತಿಲ್ಲ: ವಕೀಲರಿಂದ ನ್ಯಾಯಾಲಯಕ್ಕೆ ದೂರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ್ ಅವರು ಜೈಲಿನಲ್ಲಿ ಕನಿಷ್ಟ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ವಕೀಲರು ನ್ಯಾಯಾಲಯದ ಮುಂದೆ ದೂರಿದ್ದಾರೆ. ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಖೈದಿಗೆ ನೀಡಲಾಗುವ ಸಾಮಾನ್ಯ ಸೌಲಭ್ಯಗಳನ್ನು ನೀಡದೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನೂನು ಪ್ರಕಾರ ಈ ಸೌಲಭ್ಯಗಳನ್ನು ನಿರಾಕರಿಸುವ ಹಕ್ಕು ಅಧಿಕಾರಿಗಳಿಗೆ ಇಲ್ಲ ಎಂದು ಹೇಳಿದ್ದಾರೆ. ದರ್ಶನ್ ಧರಿಸಿದ ಶೂ ಬಿಚ್ಚಿಸುತ್ತಾರೆ. ಆಹಾರದ ತಟ್ಟೆಯನ್ನು ಎಸೆದು ಹೋಗುತ್ತಾರೆ‌. ಈ ಬಗ್ಗೆ ಜೈಲಧಿಕಾರಿಗಳಿಗೆ ಮೌಖಿಕ

ದರ್ಶನ್‌ಗೆ ಜೈಲಿನಲ್ಲಿ ಕನಿಷ್ಟ ಸೌಲಭ್ಯಗಳನ್ನೂ ನೀಡಲಾಗುತ್ತಿಲ್ಲ: ವಕೀಲರಿಂದ ನ್ಯಾಯಾಲಯಕ್ಕೆ ದೂರು Read More »

ಧರ್ಮಸ್ಥಳ ಪ್ರಕರಣಕ್ಕೆ ದಿಢೀರ್‌ ತಿರುವು : ಸೌಜನ್ಯಾ ಕೇಸ್‌ನಲ್ಲಿ ಕ್ಲೀನ್‌ಚಿಟ್‌ ಪಡೆದವರಿಗೆ ಎಸ್‌ಐಟಿ ನೋಟಿಸ್‌

ವಿಚಾರಣೆಗೆ ಹಾಜರಾದ ಸೌಜನ್ಯಾ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಉದಯಕುಮಾರ್‌ ಜೈನ್‌ ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ದಿನಕಳೆದಂತೆ ಅನೂಹ್ಯ ತಿರುವುಗಳನ್ನು ಪಡೆಯುತ್ತಿದೆ. ಇಂದು ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಆರೋಪಿಗಳನ್ನು ಎಸ್‌ಐಟಿ ಇಂದು ವಿಚಾರಣೆಗೆ ಕರೆಸಿರುವುದು ಕುತೂಹಲ ಮೂಡಿಸಿದೆ. ಈ ನಡೆಯಿಂದ ಸೌಜನ್ಯಾ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿತಾ ಎಂಬ ಪ್ರಶ್ನೆಯೂ ಮೂಡಿದೆ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ಕ್ಲೀನ್‌ಚಿಟ್‌ ಪಡೆದವರಿಗೆ ವಿಶೇಷ ತನಿಖಾ ತಂಡ ಬುಲಾವ್‌

ಧರ್ಮಸ್ಥಳ ಪ್ರಕರಣಕ್ಕೆ ದಿಢೀರ್‌ ತಿರುವು : ಸೌಜನ್ಯಾ ಕೇಸ್‌ನಲ್ಲಿ ಕ್ಲೀನ್‌ಚಿಟ್‌ ಪಡೆದವರಿಗೆ ಎಸ್‌ಐಟಿ ನೋಟಿಸ್‌ Read More »

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ  ತಯಾರಾಗುತ್ತಿರುವ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರ 2026ರ ಜನವರಿಯಲ್ಲಿ ರಾಜ್ಯಾದ್ಯಂತ ಮತ್ತು ವಿದೇಶಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಇದು ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್  ಮತ್ತು ಆ ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕತೆ ಹೊಂದಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಬಿಗು ಕತೆ ಒಳಗೊಂಡಿದೆ. ಕೀರ್ತನ್ ಭಂಡಾರಿ ಅವರು ಕಥೆ, ಚಿತ್ರಕಥೆ

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ…. Read More »

error: Content is protected !!
Scroll to Top