ಸರ್ಕಾರಕ್ಕೆ 80 ಪರ್ಸೆಂಟ್‌ ಕಮಿಷನ್‌ ಕಂಟಕ : ಗುತ್ತಿಗೆದಾರರ ಸಂಘದ ಪತ್ರದಿಂದ ಮುಜುಗರ

33 ಸಾವಿರ ಕೋಟಿ ಬಿಲ್‌ ಬಾಕಿ; ನಿಷ್ಪ್ರಯೋಜಕ ಸರ್ಕಾರ ಎಂದು ಹೇಳಿದ ಸಂಘ ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದರ ದುಪ್ಪಟ್ಟು ಆಗಿದ್ದು, ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿ ಬರೆದಿರುವ ಪತ್ರ ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಈ ಪತ್ರದ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಮುಗಿಬಿದ್ದಿದೆ. ಹಿಂದೆ ಬಿಜೆಪಿ ಸರ್ಕಾರದ ಮೇಲೆ ಶೇ.40 ಕಮಿಷನ್‌ ಸುಳ್ಳು ಆರೋಪ ಹೊರಿಸಿದವರೇ ಇಂದು ನಿರ್ಲಜ್ಜವಾಗಿ ಶೇ.80 ಕಮಿಷನ್‌ ಕಬಳಿಸುತ್ತಿದ್ದಾರೆ ಎಂದು […]

ಸರ್ಕಾರಕ್ಕೆ 80 ಪರ್ಸೆಂಟ್‌ ಕಮಿಷನ್‌ ಕಂಟಕ : ಗುತ್ತಿಗೆದಾರರ ಸಂಘದ ಪತ್ರದಿಂದ ಮುಜುಗರ Read More »

ನೇರ ನೇಮಕಾತಿ ಉದ್ಯೋಗಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ

ಯುವ ಜನತೆಗೆ ರಾಜ್ಯ ಸರ್ಕಾರದಿಂದ ದಸರಾ ಗಿಫ್ಟ್‌ ಬೆಂಗಳೂರು: ಸಿವಿಲ್ ನೇರ ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸುವ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿ ಯುವಕರಿಗೆ ಸರ್ಕಾರ ದಸರಾ ಗಿಫ್ಟ್ ನೀಡಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಯುವ ಸಮೂಹ 5 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಪಿಎಸ್‌ಐ/ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಆದೇಶಕ್ಕೆ

ನೇರ ನೇಮಕಾತಿ ಉದ್ಯೋಗಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ Read More »

ಬೆಂಕಿ ಅವಘಡ : ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆಬರೆ ನಾಶ

ಮಂಗಳೂರು: ನಗರದ ಹಂಪನಕಟ್ಟೆಯ ಟೋಕಿಯೊ ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಬಟ್ಟೆಬರೆಗಳು ಅಗ್ನಿಗೆ ಆಹುತಿಯಾಗಿವೆ. ಕಟ್ಟಡವೊಂದರ ಮೇಲಿನ ಮಹಡಿಯಲ್ಲಿನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

ಬೆಂಕಿ ಅವಘಡ : ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆಬರೆ ನಾಶ Read More »

ಅಪ್ರಾಪ್ತ ವಯಸ್ಸಿನ ಬಾಲಕನೇ ಚಿನ್ನದ ಗಟ್ಟಿ ದರೋಡೆಯ ಸೂತ್ರಧಾರ

ಮಂಗಳೂರಿನಲ್ಲಿ ನಡೆದ ದರೋಡೆ ಕೃತ್ಯ ಭೇದಿಸಿದ ಪೊಲೀಸರು, 5 ಮಂದಿ ಸೆರೆ ಮಂಗಳೂರು : ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರ ಕೆಲಸಗಾರ ಮುಸ್ತಾಫ ಎಂಬವವರನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಐವರು ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಈ ಬಾಲಕನೇ ಇಡೀ ದರೋಡೆ ಕೃತ್ಯದ ಸೂತ್ರಧಾರಿ ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್ ನಿವಾಸಿ ಫಾರಿಶ್(18),

ಅಪ್ರಾಪ್ತ ವಯಸ್ಸಿನ ಬಾಲಕನೇ ಚಿನ್ನದ ಗಟ್ಟಿ ದರೋಡೆಯ ಸೂತ್ರಧಾರ Read More »

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆ

ಅಕ್ಷಯ ಕಾಲೇಜ್ ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಯಂತ ನಡುಬೈಲು, ಅಧ್ಯಕ್ಷರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ, ಪುತ್ತೂರು ವಹಿಸಿದ್ದರು. ಇವರು “NSS ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಬೆಳೆಸುತ್ತವೆ. ಇವರ ಸೇವಾ ಚಟುವಟಿಕೆಗಳು ಸಮಾಜದ ಬೆಳವಣಿಗೆಗೆ ಅಗತ್ಯ. ವಿದ್ಯಾರ್ಥಿಗಳು ತಂಡಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು. NSS ಚಟುವಟಿಕೆಗಳು ಅವರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತವೆ” ಎಂದರು. ಕಾರ್ಯಕ್ರಮಕ್ಕೆ

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ದಿನಾಚರಣೆ Read More »

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ

ಪುತ್ತೂರು: ಎವಿಜಿ ಸಮೂಹ ಸಂಸ್ಥೆಗಳಿಂದ ಪ್ರವರ್ತಿತ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ’ ವೇದಿಕೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಪೂರ್ವಾಹ್ನ ಗಂಟೆ 9.30ಕ್ಕೆ ಖಾಸಗಿ ಬಸ್ ನಿಲ್ದಾಣದ ಎದುರಿನ ಕಚೇರಿಯಲ್ಲಿ ಉದ್ಘಾಟನ ಕಾರ್ಯಗಳು ನಡೆದಾಗ ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಭಾಸ್ಕರ ದೇವಸ್ಯ

ಎ.ವಿ.ಜಿ. ಸೌಹಾರ್ದ ಸೊಸೈಟಿ ಲೋಕಾರ್ಪಣೆ Read More »

ಕನ್ನಡ ಸಿನಿ ಪಯಣಕ್ಕೆ ವಿದಾಯ ಹೇಳಿದ ಯಶವಂತ ಸರದೇಶಪಾಂಡೆ

ಕನ್ನಡ ಚಿತ್ರರಂಗದ ಖ್ಯಾತ ನಟ, ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇಂದು ಹೃದಯಾಘಾತದಿಂದ ನಿಧನರಾದರು. ಅವರ ಆಲ್ ದಿ ಬೆಸ್ಟ್ ನಾಟಕ ಅತ್ಯುತ್ತಮ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ

ಕನ್ನಡ ಸಿನಿ ಪಯಣಕ್ಕೆ ವಿದಾಯ ಹೇಳಿದ ಯಶವಂತ ಸರದೇಶಪಾಂಡೆ Read More »

ಧರ್ಮಸ್ಥಳಕ್ಕೆ ಭಕ್ತರು ಬರುವುದನ್ನು ತಡೆಯಲು ಸಂಚು ರೂಪಿಸಲಾಗಿತ್ತು : ಡಾ.ವೀರೇಂದ್ರ ಹೆಗ್ಗಡೆ

ಎಸ್‌ಐಟಿ ರಚನೆಯಿಂದ ಸತ್ಯ ಹೊರಬಂತು ಎಂದ ಧರ್ಮಾಧಿಕಾರಿ ಮಂಗಳೂರು: ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ತಡೆಯುವ ಸಂಚುಕೋರರ ಉದ್ದೇಶ ಎಸ್ಐಟಿಯಿಂದ ಬಹಿರಂಗವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾನುವಾರ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಚಂಡಿಕಾ ಹೋಮ ನಡೆದ ನಂತರ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಸ್ಥರು ಆಯೋಜಿಸಿದ್ದ ಸತ್ಯ ದರ್ಶನ ಸಮಾವೇಶದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಟಿ ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಎಸ್ಐಟಿ ರಚನೆಯಾಗಿರದಿದ್ದರೆ, ಸತ್ಯ ಹೊರಬರುತ್ತಿರಲಿಲ್ಲ. ಮೊದಲ ದಿನವೇ ಎಸ್‌ಐಟಿ

ಧರ್ಮಸ್ಥಳಕ್ಕೆ ಭಕ್ತರು ಬರುವುದನ್ನು ತಡೆಯಲು ಸಂಚು ರೂಪಿಸಲಾಗಿತ್ತು : ಡಾ.ವೀರೇಂದ್ರ ಹೆಗ್ಗಡೆ Read More »

ಟ್ರೋಫಿ ಜೊತೆ ಹೋಟೆಲ್‌ಗೆ ಹೋದ ಪಾಕ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ : ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್‌

ಸೋತ ದುಃಖ, ಅವಮಾನದಿಂದ ಕಂಗೆಟ್ಟು ಹೋಗಿರುವ ಪಾಕಿಸ್ತಾನೀಯರು ದುಬೈ: ಏಷ್ಯಾ ಕಪ್ 2025ರ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಭಾನುವಾರ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ ಈ ಐತಿಹಾಸಿಕ ಗೆಲುವಿನ ನಂತರ ನಡೆದಿದ್ದು ಮಾತ್ರ ಭಾರಿ ನಾಟಕೀಯ ಬೆಳವಣಿಗೆ. ಭಾರತೀಯ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಕಾರಣ ಅವರು ಟ್ರೋಫಿ ಮತ್ತು ವಿಜೇತರ

ಟ್ರೋಫಿ ಜೊತೆ ಹೋಟೆಲ್‌ಗೆ ಹೋದ ಪಾಕ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ : ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್‌ Read More »

ಏಷ್ಯಾಕಪ್‌ ಕಪ್‌ ಗೆದ್ದ ಟೀಂ ಇಂಡಿಯಾಕ್ಕೆ ಬಿಸಿಸಿಐನಿಂದ ಸಿಕ್ಕಿತು ಭರ್ಜರಿ ಬಹುಮಾನ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೈಡ್ರಾಮಾ ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ ಏಷ್ಯಾ ಕಪ್‌

ಏಷ್ಯಾಕಪ್‌ ಕಪ್‌ ಗೆದ್ದ ಟೀಂ ಇಂಡಿಯಾಕ್ಕೆ ಬಿಸಿಸಿಐನಿಂದ ಸಿಕ್ಕಿತು ಭರ್ಜರಿ ಬಹುಮಾನ Read More »

error: Content is protected !!
Scroll to Top