ಪೊಲೀಸ್‌ ಇಲಾಖೆಯ ಆರ್ಡರ್ಲಿ ಪದ್ಧತಿ ಕೊನೆಗೂ ರದ್ದು

ಕಾನ್‌ಸ್ಟೆಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ ಬಳಸುತ್ತಿದ್ದ ವ್ಯವಸ್ಥೆ ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ನಡೆದುಬಂದಿದ್ದ ‘ಆರ್ಡರ್ಲಿ’ ಪದ್ಧತಿ ಕೊನೆಗೂ ಅಂತ್ಯಗೊಂಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ಆದೇಶ ಹಿನ್ನೆಲೆ ಬ್ರಿಟಿಷ್‌ ಯುಗದ ಆರ್ಡರ್ಲಿ ಪದ್ಧತಿ ರದ್ದುಪಡಿಸಲಾಗಿದೆ. ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳನ್ನು ಶಾಲೆಗೆ […]

ಪೊಲೀಸ್‌ ಇಲಾಖೆಯ ಆರ್ಡರ್ಲಿ ಪದ್ಧತಿ ಕೊನೆಗೂ ರದ್ದು Read More »

ವಿಜಯೇಂದ್ರ, ಸುನಿಲ್‌ ಕುಮಾರ್‌ ವಿರುದ್ಧ ಕೀಳು ಟೀಕೆ : ಡಿಕೆಶಿಗೆ ಹೈಕೋರ್ಟ್‌ ರಿಲೀಫ್‌

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಅವಮಾನ ಮಾಡಿದ್ದ ಡಿಸಿಎಂ ಬೆಂಗಳೂರು: ಬಿಜೆಪಿ ನಾಯಕರನ್ನು ಟೀಕಿಸುವ ಉದ್ದೇಶದಿಂದ ಆಕ್ಷೇಪಾರ್ಹ ಬರಹಗಳಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್ ಅವರಿಗೆ ಹೈಕೋರ್ಟಿನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್

ವಿಜಯೇಂದ್ರ, ಸುನಿಲ್‌ ಕುಮಾರ್‌ ವಿರುದ್ಧ ಕೀಳು ಟೀಕೆ : ಡಿಕೆಶಿಗೆ ಹೈಕೋರ್ಟ್‌ ರಿಲೀಫ್‌ Read More »

ಅಮೆರಿಕದ ಜಲಾಂತರ್ಗಾಮಿ ದಾಳಿಗೊಳಗಾದ ಇರಾನ್‌ ಯುದ್ಧನೌಕೆಗೆ ಭಾರತದ ನೌಕಾಪಡೆಯಿಂದ ಸಹಾಯ

ವಿಮಾನ, ಯುದ್ಧನೌಕೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿರುವ ನೌಕಾಪಡೆ ನವದೆಹಲಿ: ಅಮೆರಿಕದ ಸಬ್‌ಮೆರಿನ್‌ ದಾಳಿಯಿಂದ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನಿನ ಯುದ್ಧನೌಕೆಯ ಸಹಾಯಕ್ಕೆ ಭಾರತೀಯ ನೌಕಾಪಡೆ ಧಾವಿಸಿದೆ. ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪೆಡೊ ದಾಳಿಗೆ ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಐರಿಸ್ ದೇನಾದಿಂದ ಬಂದ ಸಂಕಷ್ಟದ ಸಂಕೇತವನ್ನು ಅನುಸರಿಸಿ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮಾರ್ಚ್ 4ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ IRIS ದೇನಾದಿಂದ ಸಂಕಷ್ಟದ ಕರೆ ಬಂತು ಎಂದು ನೌಕಾಪಡೆ

ಅಮೆರಿಕದ ಜಲಾಂತರ್ಗಾಮಿ ದಾಳಿಗೊಳಗಾದ ಇರಾನ್‌ ಯುದ್ಧನೌಕೆಗೆ ಭಾರತದ ನೌಕಾಪಡೆಯಿಂದ ಸಹಾಯ Read More »

ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಆರು ಆರೋಪಿಗಳ ಬಂದನ

ದುಬೈಯಿಂದ ಮಾದಕವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಮಂಗಳೂರು: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಉಡುಪಿ ಜಿಲ್ಲೆ ಕೋಟೇಶ್ವರ ನಿವಾಸಿ ಪ್ರಸ್ತುತ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಮಂಗಳೂರು ಬಲ್ಮಠ ನಿವಾಸಿ ಮಕ್ಸೂದ್

ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಆರು ಆರೋಪಿಗಳ ಬಂದನ Read More »

ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳ ಬದಲಾವಣೆ

ರಾಷ್ಟ್ರಪತಿ ಭವನದಿಂದ ನೂತನ ನೇಮಕಾತಿ ಆದೇಶ ನವದೆಹಲಿ : ರಾಷ್ಟ್ರಪತಿ ಭವನ ಶುಕ್ರವಾರದಂದು ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರ ಹಾಗೂ ಲೆಫ್ಟಿನೆಂಟ್ ಗವರ್ನರ್‌ಗಳ ಪುನರ್‌ವ್ಯವಸ್ಥೆಯನ್ನು ಘೋಷಿಸಿದೆ. ದೆಹಲಿ, ಲಡಾಖ್, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಹಿಮಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ರಾಷ್ಟ್ರಪತಿ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಹಲವು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ವರ್ಗಾವಣೆ ಮಾಡಲಾಗಿದ್ದು, ಕೆಲವರನ್ನು ಹೊಸ

ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳ ಬದಲಾವಣೆ Read More »

ಟಿ20 ವಿಶ್ವಕಪ್‌ ಸೆಮಿಫೈನಲ್‌ : ಕಿರು ಕ್ರಿಕೆಟಿನ ಎಲ್ಲ ರೋಚಕತೆಯನ್ನು ಉಣಬಡಿಸಿದ ಕಾದಾಟ

7 ರನ್‌ನಿಂದ ಆಂಗ್ಲರನ್ನು ಮಣಿಸಿ ಭಾರತ ಫೈನಲ್‌ಗೆ ಮುಂಬೈ: ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ಭಾರತ ಮತ್ತು ಇಂಗ್ಲಂಡ್‌ ನಡುವೆ ನಡೆದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯ 20-20 ಪಂದ್ಯದ ಎಲ್ಲ ರೋಚಕತೆಯನ್ನು ಪ್ರೇಕ್ಷಕರಿಗೆ ಉಣಬಡಿಸಿ ನಿಜವಾದ ಅರ್ಥದಲ್ಲಿ ರಣರೋಚಕ ಎನಿಸಿಕೊಂಡಿತು. ಕೊನೆಯ ಎಸೆತದ ತನಕ ಶತಕೋಟಿ ಕ್ರಿಕೆಟ್‌ ಅಭಿಮಾನಿಗಳು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿದ ಪಂದ್ಯದಲ್ಲಿ ಭಾರತ 7 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶೀಸಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ

ಟಿ20 ವಿಶ್ವಕಪ್‌ ಸೆಮಿಫೈನಲ್‌ : ಕಿರು ಕ್ರಿಕೆಟಿನ ಎಲ್ಲ ರೋಚಕತೆಯನ್ನು ಉಣಬಡಿಸಿದ ಕಾದಾಟ Read More »

ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ

ತಮಿಳುನಾಡು: ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇಲಂ‌ನಲ್ಲಿ ನಡೆದಿದೆ. ಪದವಿ ಓದುತ್ತಿದ್ದ ವಿದ್ಯಾರ್ಥಿನಿ ದಿನಗೂಲಿ ನೌಕರ ಕಾರ್ತಿಕೇಯನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಜಾತಿ ಬೇರೆಯಾಗಿತ್ತು. ಪ್ರೀತಿ ಮಾಡುವಾಗ ಅಡ್ಡ ಬಾರದ ಜಾತಿ ಯುವಕನಿಗೆ ಮದುವೆಯಾಗುವಂತೆ ಯುವತಿ ಹೇಳಿದಾಗ ಅಡ್ಡ ಬಂದಿದೆ. ಅದೇ ವಿಷಯವನ್ನಿಟ್ಟುಕೊಂಡು ಆತ ವಿವಾಹ ನಿರಾಕರಿಸಿದ್ದಾನೆ. ಇದರಿಂದಾಗಿ ನೊಂದ ಯುವತಿ ಆತ್ಮಹತ್ಯೆಗೆ ಫೆ. 21 ರಂದು ಪ್ರಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ

ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ Read More »

ಪೋಕ್ಸೋ ಆರೋಪಿ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರ್

ಯಾದಗಿರಿ: ಬಾಲಕಿಯರ ಜೊತೆ ಅನುಚಿತವಾಗಿ ‌ವರ್ತಿಸಿ ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ‌ಮಲ್ಲಿಕಾರ್ಜುನ ಮುತ್ಯಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಆತ ಬುಧವಾರ ರಾತ್ರಿ ಶಹಾಪುರ ಸಿಪಿಐ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದು, ಬುಧವಾರ ಮಧ್ಯಾಹ್ನ 3 ಗಂಟೆಯ ಬಳಿಕವೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆತನಿಗೆ ಸೂಚಿಸಿದ್ದಾರೆ. ಗುರುವಾರದ ವಿಚಾರಣೆಯ ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ತನಿಖೆಗೆ ಸಹಕರಿಸದೇ ಹೋದಲ್ಲಿ ಆತನ ಬಂಧನದ ಸಾಧ್ಯತೆಗಳೂ ಇವೆ. ಆದ್ದರಿಂದಲೇ ಆತ ವಿಚಾರಣೆಗೆ ಹಾಜರಾಗಿದ್ದಾಗಿ ಹೇಳಲಾಗುತ್ತಿದೆ.

ಪೋಕ್ಸೋ ಆರೋಪಿ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರ್ Read More »

ಡ್ರಿಂಕ್ ಆ್ಯಂಡ್ ಡ್ರೈವ್ ಕಡಿಮೆ ಮಾಡಲು ಬೆಳಗಾವಿ ಪೊಲೀಸರಿಂದ ಮಾದರಿ ಕ್ರಮ

ಬೆಳಗಾವಿ: ಕಾರುಗಳನ್ನನೇ ಬಾರುಗಳನ್ನಾಗಿ ಮಾಡಿಕೊಂಡು ಮಜಾ ಮಾಡುವವರಿಗೆ ಬೆಳಗಾವಿಯ ಪೊಲೀಸರು ಶಾಕ್ ನೀಡಿದ್ದಾರೆ‌. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ನಗರಕ್ಕೆ ಮಾತ್ರವೇ ಸಂಬಂಧಿಸಿದ ಹಾಗೆ ಸುಮಾರು 24 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 24 ಪ್ರಕರಣಗಳಲ್ಲಿ 36 ಜನರ ಮೇಲೆ ಕೇಸು ಜಡಿದಿದ್ದಾರೆ. ಕಾರಿನಲ್ಲಿ ಕುಳಿತು ಪಾರ್ಟಿ ಮಾಡುವವರಿಗೆ, ರಾತ್ರಿ ಸಮಯದಲ್ಲಿ ಕಾರುಗಳಲ್ಲಿ ಮದ್ಯ ಸೇವಿಸಿ ಮೋಜು ಮಾಡುವವರಿಗೆ ತಪಾಸಣೆಗೆ ಒಳಪಡಿಸಲಾಗಿದೆ. ಡ್ರಿಂಕ್ ಆ್ಯಂಡ್

ಡ್ರಿಂಕ್ ಆ್ಯಂಡ್ ಡ್ರೈವ್ ಕಡಿಮೆ ಮಾಡಲು ಬೆಳಗಾವಿ ಪೊಲೀಸರಿಂದ ಮಾದರಿ ಕ್ರಮ Read More »

ಎಲ್ಲಾ ಸಮಸ್ಯೆಗೂ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಪ್ರಧಾನಿ ಮೋದಿ

ನವದೆಹಲಿ: ಯಾವ ಸಮಸ್ಯೆಗೂ ಮಿಲಿಟರಿ ಸಂಘರ್ಷವೇ ಪರಿಹಾರ ನೀಡಲಾರದು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳಿಗೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಫಿನ್‍ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿ ಬಳಿಕ ಈ ಸಂದೇಶವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನೀಡಿರುವುದಾಗಿದೆ. ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫಿನ್ಲೆಂಡ್‌ಗಳೆರಡೂ ಕಾನೂನು ಆಡಳಿತ, ಸಂವಾದ, ರಾಜತಾಂತ್ರಿಕತೆಯಲ್ಲಿ ಗಟ್ಟಿಯಾದ ನಂಬಿಕೆ ಇರಿಸಿವೆ. ಸಂಘರ್ಷಗಳಿಗೆ ಇತಿಶ್ರೀ

ಎಲ್ಲಾ ಸಮಸ್ಯೆಗೂ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಪ್ರಧಾನಿ ಮೋದಿ Read More »

error: Content is protected !!
Scroll to Top