ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕಸಾಯಿಖಾನೆ ಸ್ಥಳಗಳು ಜಪ್ತಿ

ಗೋಹತ್ಯೆ ನಡೆಸಿದ ಸ್ಥಳಗಳೆಂದು ಗುರುತಿಸಿ ಮುಟ್ಟುಗೋಲು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಜಾನುವಾರು ಹತ್ಯೆ ಪ್ರಕರಣಗಳ ತನಿಖೆಯ ಭಾಗವಾಗಿ ಕಸಾಯಿಖಾನೆಗಳಿದ್ದ ಸ್ಥಳಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಮತ್ತು ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಪ್ರದೇಶದಲ್ಲಿ ಆರೋಪಿಗಳಾದ ನಾಸೀರ್ ಮತ್ತು ಇತರರು ದನವನ್ನು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕಸಾಯಿಖಾನೆ ಸ್ಥಳಗಳು ಜಪ್ತಿ Read More »

ಉಡುಪಿ: ಮನೆಯಲ್ಲೇ ನೇಣಿಗೆ ಶರಣಾದ ಪ್ರೇಮಿಗಳು

ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಪವಿತ್ರ (17) ಹಾಗೂ ಮಲ್ಲೇಶ (23) ಎಂದು ಗುರುತಿಸಲಾಗಿದೆ. ಪವಿತ್ರ ಅಜ್ಜರಕಾಡು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿ ರಾಯಚೂರಿಗೆ ತೆರಳಿದ್ದ ಮೇಲೆ ಮಲ್ಲೇಶ ಮನೆಗೆ ಬಂದಿದ್ದ ಎನ್ನಲಾಗಿದೆ. ಬಳಿಕ ಇವರಿಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ

ಉಡುಪಿ: ಮನೆಯಲ್ಲೇ ನೇಣಿಗೆ ಶರಣಾದ ಪ್ರೇಮಿಗಳು Read More »

ಡಿಐಜಿ ಮನೆಯಲ್ಲಿತ್ತು 5 ಕೋಟಿ ನಗದು, ಕೆಜಿಗಟ್ಟಲೆ ಚಿನ್ನ

ಭ್ರಷ್ಟ ಅಧಿಕಾರಿಯ ಸಂಪತ್ತು ನೋಡಿ ಸಿಬಿಐ ಅಧಿಕಾರಿಗಳಿಗೆ ಶಾಕ್‌ ಹೊಸದಿಲ್ಲಿ : ಡಿಐಜಿಯೊಬ್ಬರ ಮನೆಯಲ್ಲಿ ಸಂಪತ್ತಿನ ಕೊಪ್ಪರಿಗೆಯೇ ಪತ್ತೆಯಾಗಿದ್ದು, ಇದನ್ನು ನೋಡಿ ಅಧಿಕಾರಿಗಳೇ ದಂಗುಬಡಿದು ಹೋಗಿದ್ದಾರೆ. ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ಚಿನ್ನದ ಆಭರಣಗಳು, ಬೆಲೆಬಾಳುವ ವಾಚ್​​ಗಳು ಸೇರಿದಂತೆ ಸಂಪತ್ತಿನ ಖಜಾನೆಯನ್ನೇ ಸಿಬಿಐ ವಶಕ್ಕೆ ಪಡೆದುಕೊಂಡಿದೆ. 8 ಲಕ್ಷ ರೂ. ಲಂಚ ಪ್ರಕರಣವೊಂದರಲ್ಲಿ ಅಖಾಡಕ್ಕಿಳಿದ ಸಿಬಿಐ ಭ್ರಷ್ಟ ಐಪಿಎಸ್ ಅಧಿಕಾರಿ ಪಂಜಾಬ್‌ನ ರೋಪರ್ ವಲಯ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲಾರ್ ಅವರ

ಡಿಐಜಿ ಮನೆಯಲ್ಲಿತ್ತು 5 ಕೋಟಿ ನಗದು, ಕೆಜಿಗಟ್ಟಲೆ ಚಿನ್ನ Read More »

ನಡುರಸ್ತೆಯಲ್ಲೇ ಬಸ್‌ ಬೆಂಕಿಗಾಹುತಿ : 36 ಪ್ರಯಾಣಿಕರು ಪಾರು

ಟಯರ್‌ ಬ್ಲಾಸ್ಟ್‌ ಆಗಿ ಬಸ್‌ ಬೆಂಕಿಗಾಹುತಿ ಬೆಂಗಳೂರು: ಖಾಸಗಿ ಬಸ್‌ಗೆ ನಡುರಸ್ತೆಯಲ್ಲೇ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿರುವ ಘಟನೆ ಆಂಧ್ರದ ಅನಂತಪುರ ಜಿಲ್ಲೆಗೆ 15 ಕಿಮೀ ದೂರದಲ್ಲಿರುವ ಗರ‍್ಲದಿನ್ನೆ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ಬಸ್‌ ಅನಂತಪುರದ ಬಳಿ ತಲುಪಿದಾಗ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರುಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಬಸ್‌ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೋಗುತ್ತಿರುವಾಗ ಟಯರ್‌ ಬ್ಲಾಸ್ಟ್‌ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಟಯರ್‌ ಬ್ಲಾಸ್ಟ್‌ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು

ನಡುರಸ್ತೆಯಲ್ಲೇ ಬಸ್‌ ಬೆಂಕಿಗಾಹುತಿ : 36 ಪ್ರಯಾಣಿಕರು ಪಾರು Read More »

ಸಿಎಂ ಮನೆಯಲ್ಲೂ ನಡೆಯಿತು ಜಾತಿ ಗಣತಿ

ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆಗಮಿಸಿದ್ದ ಗಣತಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 45 ನಿಮಿಷಗಳ ಕಾಲ ಸಮಾಧಾನದಿಂದ ಗುರುವಾರ ಉತ್ತರ ನೀಡಿದರು. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಗಣತಿದಾರರಿಗೆ ಮಾಹಿತಿ ನೀಡಿದರು. ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳು ಉತ್ತರಿಸಿ ಸಂಪೂರ್ಣ ಮಾಹಿತಿ ನೀಡಿದರು. ಮನೆ ಸಮೀಕ್ಷೆ ಬಳಿಕ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ಸಮೀಕ್ಷೆಗಾಗಿ ನನ್ನ ಮನೆಗೆ

ಸಿಎಂ ಮನೆಯಲ್ಲೂ ನಡೆಯಿತು ಜಾತಿ ಗಣತಿ Read More »

ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತ ದಾಳಿ

ಪ್ರಾಣಿಗಳ ಆಹಾರ ಪೂರೈಕೆ ಸಹಿತ ವಿವಿಧ ವ್ಯವಹಾರಗಳಲ್ಲಿ ಲೋಪದೋಷದ ಆರೋಪ ಮಂಗಳೂರು : ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ಡಾರೆ. ಡಿವೈಎಸ್‌ಪಿ ಡಾ.ಗಾನ ಪಿ ಕುಮಾರ್ ನೇತೃತ್ವದ ತಂಡ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷ ಕಂಡುಬಂದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದೆ. ಅನುದಾನ ದುರುಪಯೋಗ, ಆದಾಯ ಮತ್ತು ವೆಚ್ಚದ ಬಗ್ಗೆ ಪರಿಶೀಲನೆ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ,

ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತ ದಾಳಿ Read More »

ಬಿಹಾರ ಚುನಾವಣೆಗೆ ಹಣ ಹೊಂದಿಸಲು ಸಿ ಎಂ ಸಿದ್ದರಾಮಯ್ಯ ಔತಣಕೂಟ: ಜಗದೀಶ್ ಶೆಟ್ಟರ್

ಬೆಂಗಳೂರು: ಮುಂದಿನ ಬಿಹಾರ ಚುನಾವಣೆಗೆ ಹಣ ಸಂಗ್ರಹ ಮಾಡುವ ಉದ್ದೇಶದಿಂದ ಸಿ ಎಂ ಸಿದ್ದರಾಮಯ್ಯ ಅವರು ಸಹೋದ್ಯೋಗಿಗಳಿಗೆ ಔತಣಕೂಟ ಆಯೋಜನೆ ಮಾಡಿದ್ದರು ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಟಿಎಂ ಕರ್ನಾಟಕ ಎಂಬಂತಾಗಿದೆ. ಆಡಳಿತದಲ್ಲೂ ನಿರಾಸಕ್ತಿ ಹೊಂದಿರುವ ಸಿದ್ದರಾಮಯ್ಯ ಅವರು ಸಿ ಎಂ ಆಗಿ ಕಾರ್ಯ ನಿರ್ವಹಣೆ ಮಾಡುವಲ್ಲಿಯೂ ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬಿಹಾರದ ಮುಂದಿನ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹ ಮಾಡಲು ಕಾಂಗ್ರೆಸ್ ಸಿದ್ದರಾಮಯ್ಯ ಅವರಿಗೆ ಹೇಳಿದೆ. ಹಾಗಾಗಿ ಅವರು ಸಹೋದ್ಯೋಗಿಗಳಿಗೆ ಔತಣ

ಬಿಹಾರ ಚುನಾವಣೆಗೆ ಹಣ ಹೊಂದಿಸಲು ಸಿ ಎಂ ಸಿದ್ದರಾಮಯ್ಯ ಔತಣಕೂಟ: ಜಗದೀಶ್ ಶೆಟ್ಟರ್ Read More »

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ

ಶ್ರೀಶೈಲಂ: ಆಂಧ್ರಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶ್ರೀಶೈಲಂ‌ನ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ಅವರು ಹಸುವಿನ ಹಾಲು, ತುಪ್ಪ, ಸಕ್ಕರೆ, ಜೇನು ತುಪ್ಪ, ಮೊಸರು ಮಿಶ್ರಿತ ರುದ್ರಾಭಿಷೇಕವನ್ನು ಶ್ರೀ ದೇವರಿಗೆ ನೆರವೇರಿಸಿದರು‌. ಆ ಬಳಿಕ ದೇಗುಲದಲ್ಲಿ ಕೊಂಚ ಧ್ಯಾನ ನಡೆಸಿ, ಬಳಿಕ ಪ್ರಾರ್ಥಿಸಿದರು‌. ಒಂದೇ ದೇವಾಲಯದ ಸಂಕೀರ್ಣದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠಗಳೆರಡೂ ಇದ್ದು, ಇದು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ Read More »

ದೀಪಾವಳಿ ಪ್ರಯುಕ್ತ ಜಿ. ಎಲ್. ಆಚಾರ್ಯ ಚಿನ್ನಾಭರಣ ಮಳಿಗೆಯಲ್ಲಿ ಸ್ವರ್ಣ ಹಬ್ಬ: ಗ್ರಾಹಕರಿಗೆ ವಿಶೇಷ ಆಫರ್

ಪುತ್ತೂರು: ದೀಪಾವಳಿಯ ಶುಭ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಸ್ವರ್ಣ ಹಬ್ಬ ನಡೆಯುತ್ತಿದ್ದು ಗ್ರಾಹಕರಿಗೆ ಆಭರಣ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ಗ್ರಾಂ ಖರೀದಿಯ ಮೇಲೆ 400 ರೂ. ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ 7000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ. ಜಿ. ಗೆ 3 ಸಾವಿರ ರೂ. ವರೆಗೆ ರಿಯಾಯಿತಿ ನೀಡುವುದಾಗಿ ಸಂಸ್ಥೆ ತಿಳಿಸಿದೆ. 50 ಸಾವಿರ

ದೀಪಾವಳಿ ಪ್ರಯುಕ್ತ ಜಿ. ಎಲ್. ಆಚಾರ್ಯ ಚಿನ್ನಾಭರಣ ಮಳಿಗೆಯಲ್ಲಿ ಸ್ವರ್ಣ ಹಬ್ಬ: ಗ್ರಾಹಕರಿಗೆ ವಿಶೇಷ ಆಫರ್ Read More »

ಮೈಸೂರಿಗೆ ಎಸಿಪಿ ಆಗಲು ಕೋಟಿ ರೂ.: ಎಚ್. ವಿಶ್ವನಾಥ್ ಆಕ್ರೋಶ

ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮೈಸೂರು ಸಹ ಇದಕ್ಕೆ ಹೊರತಾಗಿಲ್ಲ. ಮೈಸೂರಿಗೆ ಎಸಿಪಿ ಆಗಹೇಕಾದರೆ ಒಂದು ಕೋಟಿ ರೂ. ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಹುದ್ದೆಗೆ 75 ಲಕ್ಷ ರೂ., ಎಸ್‌ಐ ಹುದ್ದೆಗೆ 50 ಲಕ್ಷ ರೂ. ನೀಡಬೇಕು. ಈಗ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಲ್ಲ ಬದಲಾಗಿ ಶಾಸಕರ ಕೃಪಾ ಪೋಷಿತರು. ಸಿಕ್ಕ ಸಿಕ್ಕಲ್ಲೆಲ್ಲಾ ಅಕ್ರಮ, ಅನ್ಯಾಯ ನಡೆಯುತ್ತಿದೆ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯಗೆ

ಮೈಸೂರಿಗೆ ಎಸಿಪಿ ಆಗಲು ಕೋಟಿ ರೂ.: ಎಚ್. ವಿಶ್ವನಾಥ್ ಆಕ್ರೋಶ Read More »

error: Content is protected !!
Scroll to Top