ಹೈಕೋರ್ಟ್ ಮೆಟ್ಟಿಲೇರಿದ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ಜಟಾಪಟಿ
ಅ.24ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಮಾಡಿದ ಕಲಬುರಗಿ ಹೈಕೋರ್ಟ್ ಪೀಠ, ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅಕ್ಟೋಬರ್ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ. ಚಿತ್ತಾಪುರದಲ್ಲಿ ಇಂದು (ಭಾನುವಾರ) ಆರ್‌ಎಸ್‌ಎಸ್ ಪಥ ಸಂಚಲನ ನಡೆಯಬೇಕಿತ್ತು. ಆದರೆ ಅನುಮತಿ ನಿರಾಕರಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ
ಹೈಕೋರ್ಟ್ ಮೆಟ್ಟಿಲೇರಿದ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ಜಟಾಪಟಿ Read More »
ದೀಪಾವಳಿ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಪಟಾಕಿ ಸಿಡಿಸಲು ಹಲವು ನಿರ್ಬಂಧ ; ಮಾಲಿನ್ಯ ತಡೆಯಲು ಸೂಚನೆ ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಹೀಗಾಗಿ ಮಾಲಿನ್ಯ ರಹಿತವಾಗಿ ಆಚರಿಸಲು ಮನವಿ ಮಾಡಲಾಗಿದೆ. ಹಸಿರು ಪಟಾಕಿ ಮಾತ್ರ ಬಳಸಿ. ಪಟಾಕಿ ಬಾಕ್ಸ್‌ಗಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್
ದೀಪಾವಳಿ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ Read More »
ಬರೆಪ್ಪಾಡಿ ಅಂಗನವಾಡಿ: ಹಳೆ ವಿದ್ಯಾರ್ಥಿ ಸಂಘ ರಚನೆ
ಪುತ್ತೂರು: ಸರ್ಕಾರ ದ ಆದೇಶದಂತೆ ಅಂಗನವಾಡಿ ಕೇಂದ್ರಗಳಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆಯ ಬಗ್ಗೆ ಬರೆಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸಭೆ ಕರೆಯಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮೊದಲಾದವರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಯೋಗೀಶ ಬರೆಪ್ಪಾಡಿ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಕಾರ್ಲಾಡಿ, ಸದಸ್ಯರಾಗಿ ರಂಜಿತ್ ಮುದ್ಯ ಬರೆಪ್ಪಾಡಿ, ಉಮೇಶ ಕಾರ್ಲಾಡಿ, ಷಣ್ಮುಖ ಬರೆಪ್ಪಾಡಿ,ಅಕ್ಷಯ್ ಬರೆಪ್ಪಾಡಿ, ಗಣೇಶ ಕಾಪೆಜಾಲು, ಶಿವಪ್ರಸಾದ್ ಹೊಸಹೂಕ್ಲು, ನಿತಿನ್ ಬರೆಪ್ಪಾಡಿ, ಸಂಧ್ಯಾ ಬರೆಪ್ಪಾಡಿ, ಮೀನಾಕ್ಷಿ ಕುವೇತೋಡಿ, ತೃಪ್ತಿ, ಪ್ರತೀಕ್ಷಾ ಬರೆಪ್ಪಾಡಿಅವರನ್ನು ಆಯ್ಕೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಸರಸ್ವತಿ
ಬರೆಪ್ಪಾಡಿ ಅಂಗನವಾಡಿ: ಹಳೆ ವಿದ್ಯಾರ್ಥಿ ಸಂಘ ರಚನೆ Read More »
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಸರ್ಕಾರ
ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಇಂದು ನಡೆಯಬೇಕಿದ್ದ ಪಥಸಂಚಲನ ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥ ಸಂಚನಲನಕ್ಕೆ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ. ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಎಂಬ ಕಾರಣ ನೀಡಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ತಹಸೀಲ್ದಾರ್ ನಾಗಯ್ಯ ಅನುಮತಿ ನೀಡಲು ನಿರಾಕರಿಸಿದ್ದಾರೆ. ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ತವರು ಕ್ಷೇತ್ರದಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಸರ್ಕಾರ Read More »
ದೀಪಾವಳಿಗೆ ದೇಶದಲ್ಲಿ ನಡೆಯುತ್ತಿದೆ ಭರ್ಜರಿ ಖರೀದಿ : ಪ್ರಧಾನಿ ಮೋದಿ ಖುಷ್
ಕಾರು, ಇಲೆಕ್ಟ್ರಾನಿಕ್ಸ್ ವಸ್ತು, ಚಿನ್ನ, ಬೆಳ್ಳಿ ಸೇರಿ ಎಲ್ಲ ವಸ್ತುಗಳು ಭರ್ಜರಿ ಸೇಲ್ ನವದೆಹಲಿ : ಈ ವರ್ಷದ ದೀಪಾವಳಿ ಭಾರತೀಯರ ಪಾಲಿಗೆ ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಇದೆಲ್ಲ ಜಿಎಸ್‌ಟಿ ಇಳಿಕೆ ಪರಿಣಾಮ ಎನ್ನಲಾಗುತ್ತಿದೆ. ಧನತ್ರಯೋದಶಿ ಸಂದರ್ಭದಲ್ಲಿ ಏನಾದರೊಂದು ಹೊಸತು ವಸ್ತು ಖರೀದಿಸುವುದು ಭಾರತೀಯರ ಸಂಪ್ರದಾಯ. ಈ ವರ್ಷ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ ಈಗಾಗಲೇ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆ ವ್ಯಾಪಾರ ನಡೆದಿದೆ. ಚಿನ್ನ, ಬೆಳ್ಳಿ, ವಾಹನಗಳು, ಇಲೆಕ್ಟ್ರಾನಿಕ್ ವಸ್ತುಗಳು
ದೀಪಾವಳಿಗೆ ದೇಶದಲ್ಲಿ ನಡೆಯುತ್ತಿದೆ ಭರ್ಜರಿ ಖರೀದಿ : ಪ್ರಧಾನಿ ಮೋದಿ ಖುಷ್ Read More »
ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು : ಜೊತೆಗಿದ್ದ ಯುವತಿ ಎಸ್ಕೇಪ್
ಒಂದು ವಾರದಿಂದ ಹೋಟೆಲ್ ಕೊಠಡಿಯಲ್ಲಿ ತಂಗಿದ್ದ ಯುವಕ-ಯುವತಿ ಬೆಂಗಳೂರು: ಎಂಟು ದಿನ ಪ್ರೇಯಸಿ ಜೊತೆಗೆ ಹೋಟೆಲಿನಲ್ಲಿ ತಂಗಿದ್ದ ಪುತ್ತೂರಿನ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಡಿವಾಳದ ಲಾಡ್ಜ್‌ವೊಂದರಲ್ಲಿ ಸಂಭವಿಸಿದ್ದು, ಈ ಘಟನೆ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಯುವಕನನ್ನು ಪುತ್ತೂರಿನ ತಕ್ಷಿತ್ (20) ಎಂದು ಗುರುತಿಸಲಾಗಿದೆ. ಅವನ ಜೊತೆಗಿದ್ದ ಯುವತಿ ಎಸ್ಕೇಪ್ ಆಗಿದ್ದಾಳೆ. ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ
ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು : ಜೊತೆಗಿದ್ದ ಯುವತಿ ಎಸ್ಕೇಪ್ Read More »
RSS ನಮ್ಮ ಟಾರ್ಗೆಟ್ ಅಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ. ಯಾವುದೇ ಖಾಸಗಿ ಸಂಘ – ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಬಗ್ಗೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿತ್ತು. ಅದನ್ನು ನಮ್ಮ ಸರ್ಕಾರ ಈಗ ಅನುಷ್ಠಾನಕ್ಕೆ ತಂದಿದೆ. ಅವರು ಕ್ರಮ ಕೈಗೊಂಡ ಸಂದರ್ಭದಲ್ಲಿ ಯಾಕೆ ಆರೆಸ್ಸೆಸ್ ವಿರೋಧ
RSS ನಮ್ಮ ಟಾರ್ಗೆಟ್ ಅಲ್ಲ: ಸಿಎಂ ಸಿದ್ದರಾಮಯ್ಯ Read More »
ಮಾವೋವಾದಿಗಳ ಶರಣಾಗತಿ ದೇಶ ಶಾಂತಿಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿ: ಪ್ರಧಾನಿ ಮೋದಿ
ನವದೆಹಲಿ: ಕಳೆದ ಒಂದು ದಿನದಲ್ಲಿ ಸುಮಾರು 300 ಕ್ಕೂ ಅಧಿಕ ಮಾವೋವಾದಿಗಳು ಶರಣಾಗಿದ್ದು, ಇದು ದೇಶದ ಭದ್ರತಾ ಇತಿಹಾಸದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಈ ಬೆಳವಣಿಗೆಯನ್ನು ಪ್ರಧಾನಿ ಮೋದಿ ಅವರು ಭಾರತ ಶಾಂತಿಯತ್ತ ಇರಿಸುತ್ತಿರುವ ದೊಡ್ಡ ಹೆಜ್ಜೆ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಕಳೆದ 75 ಗಂಟೆಗಳಲ್ಲಿ ಸುಮಾರು 303 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ದಶಕಗಳ ಕಾಲ ಹಿಂಸಾತ್ಮಕ ಪ್ರದೇಶವಾಗಿದ್ದಲ್ಲೆಲ್ಲಾ ಈಗ ಅಭಿವೃದ್ಧಿಯ ಬೆಳಕು ಕಾಣಿಸುತ್ತದೆ. ಭಯವೇ ತುಂಬಿಕೊಂಡಿದ್ದ ಬಸ್ತಾರ್‌ನಲ್ಲಿ ಈಗ ಬಸ್ತಾರ್
ಮಾವೋವಾದಿಗಳ ಶರಣಾಗತಿ ದೇಶ ಶಾಂತಿಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿ: ಪ್ರಧಾನಿ ಮೋದಿ Read More »
ಪ್ರತಾಪ್ ಸಿಂಹ ವಿರುದ್ಧದ ಚು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಮಾಡಿದ ಹೈಕೋರ್ಟ್
ಬೆಂಗಳೂರು: ಅಧಿಕಾರಿಗಳು ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪ ಪಟ್ಟಿ ಸಲ್ಲಿಕೆ ಮಾಡುತ್ತಾರೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಈ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದು ಮಾಡುವಂತೆ ಸಿಂಹ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಪ್ರಕರಣದ ಆರೋಪಗಳು ಐಪಿಸಿ ಸೆಕ್ಷನ್ 171ಎಚ್
ಪ್ರತಾಪ್ ಸಿಂಹ ವಿರುದ್ಧದ ಚು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಮಾಡಿದ ಹೈಕೋರ್ಟ್ Read More »









