26,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯಾದ್ಯಂತ 26,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ನೇಮಕಾತಿ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅ. 23 ರಿಂದ ನ. 9 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಡಿ. 7 ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಶೀಘ್ರವೇ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಯನ್ನೂ ಸರ್ಕಾರ ಹೊರಡಿಸಲಿದೆ. ಹೊಸದಾಗಿ ರಾಜ್ಯದಲ್ಲಿ 800 ಕೆಪಿಎಸ್ ‌ಶಾಲೆಗಳನ್ನೂ ಆರಂಭ ಮಾಡಲಾಗುತ್ತದೆ. ಆರನೇ […]

26,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ Read More »

ಅಡಿಕೆ ಮೇಲೆ ಮತ್ತೆ ವಕ್ರದೃಷ್ಟಿ ಬೀರಿದ ವಿಶ್ವ ಆರೋಗ್ಯ ಸಂಸ್ಥೆ

ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ನೆಪದಲ್ಲಿ ನಿಷೇಧಿಸಲು ಕರೆ ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆ ಮೇಲೆ ಮತ್ತೆ ವಕ್ರದೃಷ್ಟಿ ಬೀರಿದೆ. ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ನೆಪವೊಡ್ಡಿ ಅಡಿಕೆ ನಿಷೇಧ ಮಾಡಲು ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಮೇಲೆ ಅಪವಾದ ಹೊರಿಸುತ್ತಿರುವದು ಇದೇ ಮೊದಲಲ್ಲ. ಕಳೆದ ಸುಮಾರು ಒಂದೂವರೆ ದಶಕದಿಂದ ಅಡಿಕೆಯಿಂದ

ಅಡಿಕೆ ಮೇಲೆ ಮತ್ತೆ ವಕ್ರದೃಷ್ಟಿ ಬೀರಿದ ವಿಶ್ವ ಆರೋಗ್ಯ ಸಂಸ್ಥೆ Read More »

ರಾಷ್ಟ್ರಪತಿ, ಪ್ರಧಾನಿಯಿಂದ ಜನತೆಗೆ ದೀಪಾವಳಿ ಶುಭಾಶಯ

ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಹಬ್ಬವನ್ನು ಸಂಭ್ರಮಿಸಿ ಎಂದು ಕರೆ ನೀಡಿದ ಮೋದಿ ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಈ ಬೆಳಕಿನ ಹಬ್ಬವು ಜನರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಲಿ ಎಂದು ದೀಪಾವಳಿ ಶುಭಾಶಯ ಕೋರಿ ಹಾರೈಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಶುಭಕೋರಿರುವ ಮೋದಿ, ಈ ಬೆಳಕಿನ ಹಬ್ಬವು ನಮ್ಮೆಲ್ಲರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕತೆಯ ಮನೋಭಾವ ಮೇಲುಗೈ

ರಾಷ್ಟ್ರಪತಿ, ಪ್ರಧಾನಿಯಿಂದ ಜನತೆಗೆ ದೀಪಾವಳಿ ಶುಭಾಶಯ Read More »

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನ, ತರೀಕೆರೆಯಲ್ಲಿ, ನಡೆದ 14 ರ ವಯೋಮಾನದ ಬಾಲಕರ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಚಿಕ್ಕಮಗಳೂರು ಜಿಲ್ಲೆ, ತಾಲ್ಲೂಕು ಆಡಳಿತ, ತಾಲ್ಲೂಕು ಚಂಪಾಯಿತಿ ತರೀಕೆರೆ-ಅಜ್ಜಂಪುರ, ಪುರಸಭೆ ತರೀಕೆರೆ, ಪಟ್ಟಣ ಪಂಚಾಯಿತಿ ಅಜ್ಜಂಪುರ, ಉಪನಿರ್ದೇಶಕರ ಕಛೇರಿ (ಆಡಳಿತ), (ಅಭಿವೃದ್ಧಿ), ಚಿಕ್ಕಮಗಳೂರು

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ Read More »

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಶಿಕ್ಷಕಿ ಸಾವು

ಬಹಳ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ನೃತ್ಯ ಶಿಕ್ಷಕಿ ಸುಳ್ಯ : ವಿರಳ ಹಾಗೂ ತೀರ ಅಪರೂಪದ ಕಾಯಿಲೆ Hyper IGE Mediated Mast cell activation syndromeನಿಂದ (ಹೈಪರ್-IgE ಸಿಂಡ್ರೋಮ್‌) ಬಳಲುತ್ತಿದ್ದ ಗಾಂಧಿನಗರ ನಿವಾಸಿ ಚಾಂದಿನಿ ಜೀವನ್ಮರಣ ಹೋರಾಟ ಕೊನೆಗೂ ಫಲಿಸಿಲ್ಲ. ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಇವರಿಗಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಬಹಳ ಸಮಯ ಹಿಡಿದಿತ್ತು. ಅಂತಿಮವಾಗಿ ಇವರಿಗೆ ಇದ್ದಿದ್ದು

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಶಿಕ್ಷಕಿ ಸಾವು Read More »

ಇನ್ನು ಜಾತಿ ಗಣತಿ ಹೊಣೆ ಜಿಲ್ಲಾಡಳಿತ ಸಿಬ್ಬಂದಿಗೆ : ಶಿಕ್ಷಕರಿಗಿಲ್ಲ ಸಮೀಕ್ಷೆ ಹೊರೆ

ಅ.31ರ ವರೆಗೆ ಜಿಲ್ಲೆಯ ವಿವಿಧ ಇಲಾಖೆ ಸಿಬ್ಬಂದಿ ಬಳಸಿ ಗಣತಿ ನಡೆಸಲು ತೀರ್ಮಾನ ಬೆಂಗಳೂರು: ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ತಿಳಿಸಿದ್ದಾರೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲ್ಲ.

ಇನ್ನು ಜಾತಿ ಗಣತಿ ಹೊಣೆ ಜಿಲ್ಲಾಡಳಿತ ಸಿಬ್ಬಂದಿಗೆ : ಶಿಕ್ಷಕರಿಗಿಲ್ಲ ಸಮೀಕ್ಷೆ ಹೊರೆ Read More »

ಅಯೋಧ್ಯೆಯಲ್ಲಿ ಬೆಳಗಿದ 26.17 ಲಕ್ಷ ಮಣ್ಣಿನ ಹಣತೆಗಳು : ಎರಡು ಗಿನ್ನಿಸ್‌ ದಾಖಲೆ ನಿರ್ಮಾಣ

ಅತಿದೊಡ್ಡ ದೀಪಗಳ ಪ್ರದರ್ಶನ, ಅತಿಹೆಚ್ಚು ಜನರು ಏಕಕಾಲದಲ್ಲಿ ದೀಪದ ಆರತಿ ಮಾಡಿದ ದಾಖಲೆ ಅಯೋಧ್ಯೆ : ಅಯೋಧ್ಯೆಯ ದೀಪಾವಳಿ ಮತ್ತೊಮ್ಮೆ ವಿಶ್ವ ದಾಖಲೆ ಮಾಡಿದೆ. ಈ ವರ್ಷ ಸರಯೂ ನದಿಯ ದಡದಲ್ಲಿ 26 ಲಕ್ಷಕ್ಕೂ ಅಧಿಕ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಮಾಡಲಾಗಿದೆ. ಈ ದೀಪಗಳ ಜಗಮಗಿಸುವ ಬೆಳಕಿನಲ್ಲಿ ಅಯೋಧ್ಯೆ ವಿಶಿಷ್ಟವಾಗಿ ಕಂಗೊಳಿಸಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು. ಉತ್ತರ ಪ್ರದೇಶ

ಅಯೋಧ್ಯೆಯಲ್ಲಿ ಬೆಳಗಿದ 26.17 ಲಕ್ಷ ಮಣ್ಣಿನ ಹಣತೆಗಳು : ಎರಡು ಗಿನ್ನಿಸ್‌ ದಾಖಲೆ ನಿರ್ಮಾಣ Read More »

ಸ್ನೇಹಿತೆಯರ ವಿಡಿಯೋ ವೈರಲ್‌ ಮಾಡಿದ್ದ ಯುವತಿ ಸೆರೆ

ಬಟ್ಟೆ ಬದಲಾಯಿವಾಗ ವಿಡಿಯೋ ಮಾಡಿದ್ದ ಯುವತಿ ಮಂಗಳೂರು : ಇಬ್ಬರು ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪದಡಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದ ಪ್ರಸಕ್ತ ನಗರದ ಕಂಕನಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿರೀಕ್ಷಾ ಎಂಬಾಕೆಯನ್ನು ಕದ್ರಿ ಪೋಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿ ನಿರೀಕ್ಷಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿರೀಕ್ಷಾಳ ಸ್ನೇಹಿತೆಯರಾದ ಇಬ್ಬರು ಯುವತಿಯರು ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು

ಸ್ನೇಹಿತೆಯರ ವಿಡಿಯೋ ವೈರಲ್‌ ಮಾಡಿದ್ದ ಯುವತಿ ಸೆರೆ Read More »

ನನ್ನ ತಂದೆ ಶಾಸಕ ಅಲ್ಲ, ನನ್ನ ಪುತ್ರನನ್ನು ಶಾಸಕ ಮಾಡಲ್ಲ : ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ತಿರುಗೇಟು

ಬಾಲ್ಯದಲ್ಲಿ ತಂದೆಯ ಜೊತೆಗೆ ಗಣವೇಷದಲ್ಲಿದ್ದ ಫೋಟೊ ಹಂಚಿಕೊಂಡು ಉತ್ತರ ಕಾರ್ಕಳ: ನಿಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಸೇರಿಸಿದ್ದೀರಾ. ಅವರಿಗೆ ಲಾಠಿ, ಗನ್‌ ಟ್ರೈನಿಂಗ್‌ ಕೊಟ್ಟಿದ್ದೀರಾ ಎಂಬ ಕಾಂಗ್ರೆಸ್‌ ನಾಯಕರ ಟೀಕೆಗೆ ಕಾರ್ಕಳದ ಬಿಜೆಪಿ ಶಾಸಕ, ಮಾಜಿ ಸಚಿವ ಸುನಿಲ್‌ ಕುಮಾರ್‌ ತನ್ನದೇ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುನಿಲ್ ಕುಮಾರ್, ನನ್ನ ತಂದೆಯ ಜೊತೆ ತಾನು ಬಾಲ್ಯದಲ್ಲಿ ಆರ್‌ಎಸ್‌ಎಸ್‌ ಗಣವೇಷದಲ್ಲಿರುವ ಹಾಗೂ ಈಗ ತನ್ನ ಮಗನ ಜೊತೆ ಗಣವೇಷದಲ್ಲಿರುವ ಫೋಟೊ ಹಾಕಿ

ನನ್ನ ತಂದೆ ಶಾಸಕ ಅಲ್ಲ, ನನ್ನ ಪುತ್ರನನ್ನು ಶಾಸಕ ಮಾಡಲ್ಲ : ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ತಿರುಗೇಟು Read More »

ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವ ಸಲಹೆಗಾರರಾಗಿ ಸತೀಶ್ ಕುಮಾರ್ ಕೆಡೆಂಜಿ, ವಿಠಲ್ ಗೌಡ ಕಾಪೆಜಾಲು, ನಝೀರ್ ಕೂರ ಅಧ್ಯಕ್ಷರಾಗಿ ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ, ಪ್ರಗತಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಮಚಂದ್ರ ಬರೆಪ್ಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರೇರಣಾ ಸಂಸ್ಥೆಯ ನಿರ್ದೇಶಕ ನಾಗೇಶ್ ಕೆಡೆಂಜಿ, ಉಪಾಧ್ಯಕ್ಷರಾಗಿ ಬಾಲಚಂದ್ರ ನೂಜಿ, ಜೊತೆ ಕಾರ್ಯದರ್ಶಿಯಾಗಿ ದಾಮೋದರ ನಾಕಿರಣ, ಕೋಶಾಧಿಕಾರಿಯಾಗಿ ಯಶೋಧರ ಕೆಡೆಂಜಿಕಟ್ಟ

ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆ ಕುದ್ಮಾರು: ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ Read More »

error: Content is protected !!
Scroll to Top