ದೂರು ವಜಾಗೊಳಿಸಿ ಎಂದು ಹೈಕೋರ್ಟ್‌ಗೆ ಮೊರೆಯಿಟ್ಟ ಬುರುಡೆ ಗ್ಯಾಂಗ್‌ : ಇಂದು ಅರ್ಜಿ ವಿಚಾರಣೆ

ತಾವೇ ಹೋರಾಟ ಮಾಡಿ, ದುಂಬಾಲು ಬಿದ್ದು ಮಾಡಿಸಿದ್ದ ತನಿಖೆಯೇ ಬೇಡ ಎನ್ನುತ್ತಿರುವ ಹೋರಾಟಗಾರರು ಬೆಂಗಳೂರು : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿರುವ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ಅರ್ಜಿ ವಿಚಾರಣೆ ನಡೆಯಲಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್ […]

ದೂರು ವಜಾಗೊಳಿಸಿ ಎಂದು ಹೈಕೋರ್ಟ್‌ಗೆ ಮೊರೆಯಿಟ್ಟ ಬುರುಡೆ ಗ್ಯಾಂಗ್‌ : ಇಂದು ಅರ್ಜಿ ವಿಚಾರಣೆ Read More »

ಬಾಲಕಿಗೆ ಕಿರುಕುಳ ನೀಡಿದ ಆರೋಪಿ ಬಂಧನ

ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬೆಳ್ಳಾರೆ ಠಾಣಾ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.ಗಿರಿಧರ ರೈ ಪಜಿಂಬಿಲ ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಗಿರಿಧರ ರೈ ಅ.26ರಂದು ಅಪರಾಹ್ನ 2 ಗಂಟೆ ಸುಮಾರಿಗೆ ಮುರುಳ್ಯ ಗ್ರಾಮದ ನಿಂತಿಕಲ್ಲು ಜಂಕ್ಷನ್ ಬಸ್ ತಂಗುದಾಣದಲ್ಲಿ ಕುಳಿತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು

ಬಾಲಕಿಗೆ ಕಿರುಕುಳ ನೀಡಿದ ಆರೋಪಿ ಬಂಧನ Read More »

ಬಿಹಾರ ಚುನಾವಣೆಗೆ ರಾಜ್ಯದಿಂದ 300 ಕೋ. ರೂ. ಕಪ್ಪ : ಶ್ರೀರಾಮುಲು ಆರೋಪ

ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಚಿವರಿಂದ ಹಣ ಸಂಗ್ರಹಸಿ ಕೊಟ್ಟಿದ್ದಾರೆಂದು ಆರೋಪ ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಹಣಕಾಸು ಒದಗಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸಚಿವರಿಂದ 300 ಕೋಟಿ ರೂ. ಸಂಗ್ರಹಿಸಿದ್ದಾರೆ. ಈ ಹಣ ಸಿದ್ದರಾಮಯ್ಯ ಕುರ್ಚಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾಗಿದೆ ಎಂದು ಎಂದು ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಭೋಜನ ಸಭೆಯಲ್ಲಿ ಈ ಮೊತ್ತವನ್ನು ಸಂಗ್ರಹಿಸಲಾಗಿದೆ

ಬಿಹಾರ ಚುನಾವಣೆಗೆ ರಾಜ್ಯದಿಂದ 300 ಕೋ. ರೂ. ಕಪ್ಪ : ಶ್ರೀರಾಮುಲು ಆರೋಪ Read More »

ವಿಸಾ ನೆಪದಲ್ಲಿ ಕೋಟಿಗಟ್ಟಲೆ ರೂ. ವಂಚನೆ : ಇಬ್ಬರು ಸೆರೆ

ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ಪಾಸ್‌ಪೋರ್ಟ್‌, ಹಣ ಪಡೆದು ವಂಚಿಸುತ್ತಿದ್ದ ಜೋಡಿ ಮಂಗಳೂರು : ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ಹಲವಾರು ಮಂದಿಯನ್ನು ನಂಬಿಸಿ ಹಣ ಪಡೆದುಕೊಂಡು ಸುಮಾರು 1 ಕೋಟಿ ರೂಪಾಯಿ ಮೊತ್ತ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರ್ರಕೃತಿ ಯು. (34) ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ

ವಿಸಾ ನೆಪದಲ್ಲಿ ಕೋಟಿಗಟ್ಟಲೆ ರೂ. ವಂಚನೆ : ಇಬ್ಬರು ಸೆರೆ Read More »

ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ : ಖಾದರ್‌ ತಿರುಗೇಟು

ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದರೆ ಕಚೇರಿಗೆ ಬಂದು ಮಾತನಾಡಿ ಎಂದು ಸವಾಲು ಮಂಗಳೂರು : ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಮಾಜಿ ಸ್ಪೀಕರ್​, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಂಗಳೂರು ಉತ್ತರದ ಶಾಸಕ ಡಾ.ಭರತ್‌ ಶೆಟ್ಟಿ ಅವರಿಗೆ ತಿರುಗೇಟು ನೀಡಿರುವ ವಿಧಾನಸಭೆ ಸ್ಪೀಕರ್​ ಯು.ಟಿ.ಖಾದರ್ ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ ಎಂದಿದ್ದಾರೆ. ನಿನ್ನೆಯಷ್ಟೇ ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಖಾದರ್‌ ಮಂಗಳೂರಿನಲ್ಲಿ ಆರೋಪಗಳಿಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ

ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ : ಖಾದರ್‌ ತಿರುಗೇಟು Read More »

ನವೆಂಬರ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮನ

ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವದಲ್ಲಿ ಭಾಗಿಯಾಗಲು ಆಗಮನ ಉಡುಪಿ : ಪ್ರಧಾನಿ ನರೇಂದ್ರ ಮೋದಿ ನವೆಂಬರ್​ 28ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಇದರ ಜೊತೆಗೆ ಇನ್ನಿತರ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಮಂಗಳೂರಿನ ಪಣಂಬೂರಿನಲ್ಲಿ ನಿರ್ಮಾಣವಾಗಿರುವ ಬಂದರು ಕಾರ್ಮಿಕರ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಈ ಕಾರ್ಯಕ್ರಮ ಇನ್ನೂ ದೃಢಪಟ್ಟಿಲ್ಲ. ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ

ನವೆಂಬರ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮನ Read More »

ಉಚಿತ ಬೃಹತ್ ಆರೋಗ್ಯ ಶಿಬಿರ, ಅಂಚೆ ಜನ ಸಂಪರ್ಕ ಅಭಿಯಾನ

ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ವಿಟ್ಲ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ಆಶ್ರಯದಲ್ಲಿ ಸಮುದಾಯ ಕೇಂದ್ರ ವಿಟ್ಲ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಬೃಹತ್ ಅರೋಗ್ಯ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮವು ಮಂಗಳ ಮಂಟಪ ಶ್ರೀ ರಾಮ ನಗರ ಚಂದಳಿಕೆ ವಿಟ್ಲದಲ್ಲಿ ಜರಗಿತು

ಉಚಿತ ಬೃಹತ್ ಆರೋಗ್ಯ ಶಿಬಿರ, ಅಂಚೆ ಜನ ಸಂಪರ್ಕ ಅಭಿಯಾನ Read More »

ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ

ಪುತ್ತೂರು: ಬೆಂಗಳೂರಿನಲ್ಲಿ ಪ್ರತಿಷ್ಠಿತ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (Kempegowda Institute of Medical Sciences – KIMS) ಹಾಗೂ ರಾಜ್ಯಾದಾದ್ಯಂತ ವಿವಿಧ ಸಂಸ್ಥೆ ಮತ್ತು ಆಸ್ತಿಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ಸುಳ್ಯದಲ್ಲಿ ದಿವಂಗತ ಡಾ. ಕುರುಂಜಿ ವೆಂಕಟ್ರಮಣ ಗೌಡರು ಕಟ್ಟಿ ಬೆಳೆಸಿದ Academy of Liberal Education ಇದರ ಬಿ ಟೀಂನ ಅಧ್ಯಕ್ಷ, ಡಾ. ರೇಣುಕಾಪ್ರಸಾದ್ ಕೆ. ವಿ.ಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ದೇವಾರ್ಪಣ ಕಾರ್ಯಕ್ರಮಕ್ಕೆ

ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ Read More »

ಡಿವೈಡರ್‌ಗೆ ಗುದ್ದಿದ ಕಾರು: ಕುದ್ಮಾರಿನ ಯುವಕ ಮೃತ್ಯು

ಬಂಟ್ವಾಳ: ಕಾರ್ ಒಂದು ಪಾಣೆಮಂಗಳೂರು ಫ್ಲೈ ಓವರ್‌ನ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪುತ್ತೂರಿನ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕುದ್ಮಾರು ‌ನಿವಾಸಿ ಕಾರ್ತಿಕ್(24) ಮೃತ ದುರ್ದೈವಿ. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು, ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಪರಿಣಾಮ ಕಾರ್ತಿಕ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಡಿವೈಡರ್‌ಗೆ ಗುದ್ದಿದ ಕಾರು: ಕುದ್ಮಾರಿನ ಯುವಕ ಮೃತ್ಯು Read More »

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವದ ಅಂಗವಾಗಿ ಮಾಣಿ ವಲಯದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಭಟ್ ರವರು ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿದರು. ವಲಯದ 7 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಜನಜಾಗೃತಿ ವಲಯಾಧ್ಯಕ್ಷ ರಾಜಾರಾಮ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಆಳ್ವ, ತನಿಯಪ್ಪಗೌಡ, ವೇಣು ಗೋಪಾಲ್, ಸುರೇಶ್ ಮುಕ್ಕುಡ

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ Read More »

error: Content is protected !!
Scroll to Top