ಧರ್ಮಸ್ಥಳ ವಿಚಾರದಲ್ಲಿ ವ್ಯಕ್ತಿ, ಕುಟುಂಬ, ಸಂಸ್ಥೆಗೆ ಭಾರಿ ಹಾನಿ : ಡಿಕೆಶಿ

ಬಿಜೆಪಿ ಆಂತರಿಕ ಕಲಹವೇ ಕಾರಣ ಎಂದ ಉಪಮುಖ್ಯಮಂತ್ರಿ ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ) ಮುಂದಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣ ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ವ್ಯಕ್ತಿ, ಕುಟುಂಬ ಮತ್ತು ಸಂಸ್ಥೆಗೆ ಎಷ್ಟು ಹಾನಿ ಮಾಡಬೇಕೋ ಅದನ್ನು ಈಗಾಗಲೇ ಮಾಡಲಾಗಿದೆ. […]

ಧರ್ಮಸ್ಥಳ ವಿಚಾರದಲ್ಲಿ ವ್ಯಕ್ತಿ, ಕುಟುಂಬ, ಸಂಸ್ಥೆಗೆ ಭಾರಿ ಹಾನಿ : ಡಿಕೆಶಿ Read More »

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನಿಷೇಧಿಸಲ್ಪಟ್ಟಿದ್ದರೂ ಕರಾವಳಿಯಲ್ಲಿ ಈಗಲೂ ಪಿಎಫ್‌ಐ ಗುಪ್ತವಾಗಿ ಸಕ್ರಿಯ ಎಂದು ಮಾಹಿತಿ ಮಂಗಳೂರು: ಮಂಗಳೂರಿನ ಬಜ್ಬೆ ಬಳಿ ಕಳೆದ ಮೇ 1ರಂದು ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಈ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶಗಳನ್ನು ಎನ್ಐಎ ಉಲ್ಲೇಖಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಸದಸ್ಯರ ಕೈವಾಡ

ಸುಹಾಸ್‌ ಶೆಟ್ಟಿ ಹತ್ಯೆ ಮಾಡಿರುವುದು ಪಿಎಫ್‌ಐ : ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ Read More »

ಕಾಡಾನೆಯ ದಾಳಿಗೆ ಸಿಲುಕಿ ಇಬ್ಬರು ಸಾವು

ಸೊಪ್ಪು ತರಲು ಹೋದವರ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಸಲಗ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ ಕಾಡಾನೆಯ ಮಾರಕ ದಾಳಿಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ. ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಲೂಕಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಸಾರ ಸಮೀಪ ಈ ಘಟನೆ ನಡೆದಿದೆ. ಮೃತಪಟ್ಟ ಇಬ್ಬರು ದುರ್ದೈವಿಗಳು ಹಸುವಿನ ಕೊಟ್ಟಿಗೆಗೆ ಸೊಪ್ಪು ತರುವುದಕ್ಕಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ

ಕಾಡಾನೆಯ ದಾಳಿಗೆ ಸಿಲುಕಿ ಇಬ್ಬರು ಸಾವು Read More »

ಇಡೀ ಕುಟುಂಬ ಆತ್ಮಹತ್ಯೆ ಯತ್ನ : ಇಬ್ಬರು ಸಾವು

ಪುರೋಹಿತ ಕುಟುಂಬದ ಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ಮಾಡ್ಕೊಂಡಿದ್ದ ಕುಟುಂಬವೊಂದರ ಎಲ್ಲ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಬ್ರಾಹ್ಮಣ ಸಮುದಾಯದ ಕುಮಾರಪ್ಪ ಎಂಬವರ ಕುಟುಂಬ ಗುರುವಾರ ಆತ್ಮಹತ್ಯೆಗೆ ಯತ್ನಿಸಿರುವುದು ಇಡೀ ಗ್ರಾಮದ ಜನತೆಯನ್ನು ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ದೇವರ ಪೂಜೆ ಮಾಡಿಕೊಂಡು ಇದ್ದ ಕುಟುಂಬದಲ್ಲಿ ಏಕಾಏಕಿ ಅದೇನಾಯಿತೋ ಗೊತ್ತಿಲ್ಲ,

ಇಡೀ ಕುಟುಂಬ ಆತ್ಮಹತ್ಯೆ ಯತ್ನ : ಇಬ್ಬರು ಸಾವು Read More »

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ

ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ ಸತಾಯಿಸಿದ್ದ ಸವಾರ ಬಂಟ್ವಾಳ : ಬಿಸಿಲೆ ಘಾಟ್‌ನಲ್ಲಿ ಗುರುವಾರ ಮಿನಿಬಸ್‌ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್‌ನ ಸಂಚಾರಕ್ಕೆ ತಡೆಯೊಡ್ಡಿದ ಸ್ಕೂಟರ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸ್ಕೂಟರ್ ಸವಾರ ಅಡ್ಡಿಪಡಿಸಿದ ಘಟನೆ ಬಿ.ಸಿ. ರೋಡಿನಲ್ಲಿ ನಡೆದಿದೆ. ಆಂಬುಲೆನ್ಸ್‌ ಹಾರ್ನ್‌ ಮೊಳಗಿಸುತ್ತಿದ್ದರೂ ಸ್ಕೂಟರ್‌ ಸವಾರ ಕೇರ್‌ ಮಾಡದೆ ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿ ಸ್ಕೂಟರ್‌ ಚಲಾಯಿಸುತ್ತಾ ಆಂಬುಲೆನ್ಸ್‌ಗೆ ಸೈಡ್‌ ಕೊಡದೆ ಸತಾಯಿಸಿದ ವಿಡಿಯೋ ಸೋಷಿಯಲ್‌

ಆಂಬುಲೆನ್ಸ್‌ಗೆ ಸೈಡ್‌ ಕೊಡದ ಸ್ಕೂಟರ್‌ ಸವಾರ ಸೆರೆ Read More »

ಸಿಎಂ, ಬಾನು ಮುಷ್ತಾಕ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌ : ವ್ಯಕ್ತಿ ವಶ

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ, ಲೇಖಕಿಯ ಕುರಿತು ಹಾಕಿದ್ದ ಪೋಸ್ಟ್‌ ವಿರುದ್ಧ ದೂರು ಸುಳ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದ ಸಹಾಯದಿಂದ ಸುಳ್ಯ ಪೊಲೀಸರು ಬಂಟ್ವಾಳ ತಾಲೂಕಿನ ನಿವಾಸಿ ಪುರುಷೋತ್ತಮ ಆಚಾರ್ಯ ಬರಿಮಾರು ಎಂಬ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮುಂದಿನ ಕಾನೂನು ಕ್ರಮಗಳು

ಸಿಎಂ, ಬಾನು ಮುಷ್ತಾಕ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌ : ವ್ಯಕ್ತಿ ವಶ Read More »

ಧರ್ಮಸ್ಥಳ ಪ್ರಕರಣ : ಎಸ್‌ಐಟಿ ತನಿಖೆಗೆ ನ.12ರ ತನಕ ತಡೆ

ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್‌ ನೀಡಿದ ಹೈಕೋರ್ಟ್‌ ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಕೇಸ್ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್​ ತಾತ್ಕಾಲಿಕ ರಿಲೀಫ್​ ನೀಡಿದೆ. ಧರ್ಮಸ್ಥಳದ ಠಾಣೆಯ FIR 39/2025 ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಾಲನ್​,

ಧರ್ಮಸ್ಥಳ ಪ್ರಕರಣ : ಎಸ್‌ಐಟಿ ತನಿಖೆಗೆ ನ.12ರ ತನಕ ತಡೆ Read More »

ಗುರಮಠಕಲ್‌ ಪಟ್ಟಣದಲ್ಲಿ RSS ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್

ಯಾದಗಿರಿ: RSS ಪಥಸಂಚಲನವನ್ನು ‌ಗುರಮಠಕಲ್ ಪಟ್ಟಣದಲ್ಲಿ ನಡೆಸಲು ಕೊನೆಗೂ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. RSS ಗೆ 100 ವರ್ಷ ತುಂಬಿದ ಹಿನ್ನೆಲೆ ಕಳೆದ ವಾರವೇ ಪಥಸಂಚಲನ ನಡೆಸಲು ತೀರ್ಮಾನಿಸಲಾಗಿತ್ತು. ಅನುಮತಿಗಾಗಿ ತಹಶೀಲ್ದಾರರಿಗೂ ಅರ್ಜಿ ಸಲ್ಲಿಸಲಾಗಿತ್ತು. ಇದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು. ತಹಶೀಲ್ದಾರ್ ಈ ನಡೆಯಿಂದ ವಿವಾದ ಸೃಷ್ಟಿಯಾಗಿತ್ತು. ಜಿಲ್ಲಾಡಳಿತಕ್ಕೆ ಸಂಘ ಮತ್ತೆ ಅರ್ಜಿ ಸಲ್ಲಿಸಿತ್ತು. ಈಗ ಹತ್ತು ಷರತ್ತುಗಳ ಜೊತೆಗೆ ಜಿಲ್ಲಾಡಳಿತ ಅ.31 ರಂದು ಪಥಸಂಚಲನ ‌ನಡೆಸಲು ಅನುಮತಿ ನೀಡಿದೆ.

ಗುರಮಠಕಲ್‌ ಪಟ್ಟಣದಲ್ಲಿ RSS ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್ Read More »

ಬೆಂಗಳೂರಿನಲ್ಲಿ ಪರವಾನಗಿ ಇಲ್ಲದ ಪಿಜಿಗಳಿಗೆ ಬೀಗ ಜಡಿಯುವ ಎಚ್ಚರಿಕೆ

ಬೆಂಗಳೂರು: ಪೇಯಿಂಗ್ ಗೆಸ್ಟ್ ಉದ್ಯಮ ನಡೆಸುವವರು ಪರವಾನಗಿ ಪಡೆಯುವುದು ಕಡ್ಡಾಯ. ಅನಧಿಕೃತ ಪಿಜಿ ಗಳಿಗೆ ಬೀಗ ಜಡಿಯುವ‌ ಎಚ್ಚರಿಕೆಯನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚರಿಕೆ ನೀಡಿದೆ. ನಗರದಲ್ಲಿ ಹಲವಾರು ಪಿಜಿಗಳು ಪರವಾನಗಿ ಪಡೆಯದೆ, ಸೂಚಿತ ಮಾನದಂಡಗಳನ್ನು ಪಾಲನೆ ಮಾಡದೆ ಕಾರ್ಯನಿರ್ವಹಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಅಗತ್ಯ ಮಾನದಂಡಗಳನ್ನು ಪಾಲಿಸದೆ, ಮೂಲಭೂತ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡದ, ಸಿಸಿ ಕೆಮರಾ ಅಳವಡಿಸದೆ ಕಾರ್ಯ ನಿರ್ವಹಿಸುವ ವಿಷಯ ಪಾಲಿಕೆಯ ಗಮನಕ್ಕೆ ಬಂದಿದೆ. ಅನಧಿಕೃತ ಪಿ ಜಿ ಗಳು ಸಾರ್ವಜನಿಕ

ಬೆಂಗಳೂರಿನಲ್ಲಿ ಪರವಾನಗಿ ಇಲ್ಲದ ಪಿಜಿಗಳಿಗೆ ಬೀಗ ಜಡಿಯುವ ಎಚ್ಚರಿಕೆ Read More »

ಬಿಸಿಲೆ ಘಾಟಿಯಲ್ಲಿ ಮಿನಿಬಸ್‌ ಪಲ್ಟಿ : 20 ಜನರಿಗೆ ಗಾಯ

ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಬರುತ್ತಿದ್ದ ಬಸ್‌ 20 ಅಡಿ ಆಳಕ್ಕೆ ಪಲ್ಟಿ ಸುಬ್ರಹ್ಮಣ್ಯ: ಮದುವೆ ಸಮಾರಂಭದಲ್ಲಿ ಭಾಗವಹಿಸಲು ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಬರುತ್ತಿದ್ದ 30 ಜನರಿದ್ದ ಮಿನಿ ಬಸ್‌ ಬಿಸಿಲೆ ಘಾಟ್ ಡಬಲ್ ಟರ್ನ್‌ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದ್ದಿದ್ದು, 20 ಜನರು ಗಾಯಗೊಂಡು 4 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರಿನ ಯುವಕ ಮತ್ತು ಏನೆಕಲ್ಲಿನ ಯುವತಿ ಮದುವೆ ಇಂದು ನಡೆಯಬೇಕಿತ್ತು.

ಬಿಸಿಲೆ ಘಾಟಿಯಲ್ಲಿ ಮಿನಿಬಸ್‌ ಪಲ್ಟಿ : 20 ಜನರಿಗೆ ಗಾಯ Read More »

error: Content is protected !!
Scroll to Top