ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ

ಶ್ರೀ ತತ್ವಮಸಿ ಹೆಸರಿನಲ್ಲಿ ಸಂಸ್ಥೆ ತೆರೆದು ಕೋಟಿಗಟ್ಟಲೆ ರೂ. ಗುಳುಂ ಮಾಡಿದ ಪ್ರಕರಣ ಸುಳ್ಯ : ಸುಳ್ಯದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ಆರ್) ಮತ್ತು ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ಆರ್) ಹೆಸರಿನಲ್ಲಿ ‘ಬೆನಿಫಿಟ್ ಸ್ಕೀಮ್’ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಅಪರಾಧಿಗಳನ್ನು ಕೆ.ಪಿ. ಗಣೇಶ್, ಗೀತಾ ಕೆ.ಎಸ್. ಮತ್ತು ಭಾರತಿ ಎಂದು ಗುರುತಿಸಲಾಗಿದೆ. ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಎನ್.ಇ.ವೈ. ಕಮಲಾಕ್ಷ ಮತ್ತು ಕೆ. […]

ಸುಳ್ಯ : ಬೆನಿಫಿಟ್‌ ಸ್ಕೀಂ ಹೆಸರಿನಲ್ಲಿ ವಂಚಿಸಿದವರಿಗೆ ಜೈಲು ಶಿಕ್ಷೆ Read More »

ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಎಂಟ್ರಿ : ಸಮಗ್ರ ತನಿಖೆಗೆ ಆಗ್ರಹಿಸಿ ಪತ್ರ

ಅಸಹಜ, ಅನುಮಾನಾಸ್ಪದ ಸಾವಿನ ಪ್ರಕರಣಗಳ ತನಿಖೆಗೆ ಒತ್ತಾಯ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನುವಾಗ ಈ ಕೇಸ್‌ನಲ್ಲಿ ಮಹಿಳಾ ಆಯೋಗ ಮಧ್ಯೆ ಪ್ರವೇಶ ಮಾಡಿದೆ. ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಜತೆಗೆ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆಯನ್ನು ನಡೆಸಬೇಕೆಂದು ಕೋರಿ ರಾಜ್ಯ ಮಹಿಳಾ ಆಯೋಗ ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ. ಧರ್ಮಸ್ಥಳದಲ್ಲಿ ಕಳೆದ

ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಎಂಟ್ರಿ : ಸಮಗ್ರ ತನಿಖೆಗೆ ಆಗ್ರಹಿಸಿ ಪತ್ರ Read More »

ಬೆಳ್ಳಿ ರಥದ ಮನೋಜ್ಞ ಪುತ್ತೂರು ಪುರಪ್ರವೇಶ

ಪುತ್ತೂರು: ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ‘ಬಿ’ ಟೀಮ್ ನ ಅಧ್ಯಕ್ಷ ಡಾಕ್ಟರ್ ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಮತ್ತು ಸುಳ್ಯದ ಗುತ್ಯಮ್ಮ ದೇವಿ ದೇವಸ್ಥಾನದ ಧರ್ಮದರ್ಶಿ ಆಗಿರುವ ಅಪ್ರತಿಮ ನಾಗಕ್ಷೇತ್ರದ ಒಡೆಯ ಶ್ರೀ ಸುಬ್ರಹ್ಮಣ್ಯೇಶರನಿಗೆ ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥದ ಧರ್ಮಯಾತ್ರೆಯು ಅಕ್ಟೋಬರ್ 4ರ ಸಂಜೆ ಗಂಟೆ 6.30ಕ್ಕೆ ಪುತ್ತೂರಿನ ಪುರಪ್ರವೇಶ ಮಾಡಿತು. ನೆಹರೂ ನಗರದಲ್ಲಿ ಸ್ವಾಗತಸಾಲಂಕೃತ ಭವ್ಯ ವಾಹನದಲ್ಲಿ ನೂರಾರು ಸಂಖ್ಯೆಯ ವಾಹನಗಳೊಂದಿಗೆ ಕುಂದಾಪುರದ ಕೋಟೇಶ್ವರದಿಂದ

ಬೆಳ್ಳಿ ರಥದ ಮನೋಜ್ಞ ಪುತ್ತೂರು ಪುರಪ್ರವೇಶ Read More »

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನ: ಪ್ರಯಾಣಿಕನ ಬಂಧನ

ವಾರಣಾಸಿ: ಮುಂಬೈಗೆ ವಾರಣಾಸಿಯಿಂದ ಹೊರಟಿದ್ದ ವಿಮಾನ ಟೇಕ್ ಆಫ್ ಆಗುವ ಮುನ್ನ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ‌ಗೆ ಸಂಜೆ ಹೊರಟಿದ್ದ ವಿಮಾನದಲ್ಲಿ ನಡೆದಿರುವುದಾಗಿದೆ. ವಿಮಾನ ರನ್ ವೇ ಕಡೆಗೆ ಚಲಿಸುತ್ತಿದ್ದಾಗ ಪ್ರಯಾಣಿಕ ಸುಜಿತ್ ಸಿಂಗ್ ಎಂಬಾತ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಕುತೂಹಲದಿಂದ ತಾನು

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನ: ಪ್ರಯಾಣಿಕನ ಬಂಧನ Read More »

ಹಿಂದೂ ದೇವರುಗಳ ಅವಹೇಳನ: ಬಾಲಕಿ ಮತ್ತಾಕೆಯ ಪೋಷಕರು ಅರೆಸ್ಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ‌ಮಾಡಿದ ಬಾಲಕಿಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದ್ದು, ಆಕೆಯ ಪೋಷಕರನ್ನು ಬಂಧಿಸಲಾಗಿದೆ. ತನ್ನ ಇನ್ಸ್ಟಾಗ್ರಾಮ್ ಫಾಲೇವರ್ಸ್ ಸಂಖ್ಯೆ ಹೆಚ್ಚಬೇಕು ಎನ್ನುವ ಉದ್ದೇಶದಿಂದ ಬಾಲಕಿ ಈ ಕೃತ್ಯ ಎಸಗಿದ್ದಳು. ಒಂದು ನಿಮಿಷದ ವಿಡಿಯೋದಲ್ಲಿ ಆಕೆ ಹಿಂದೂ ದೇವರನ್ನು ಟೀಕೆ ಮಾಡಿದ್ದಳು. ಅವಳ ಈ ಕೃತ್ಯಕ್ಕೆ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಆಕೆಯ ಮತ್ತು ಅವಳ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ದೂರು

ಹಿಂದೂ ದೇವರುಗಳ ಅವಹೇಳನ: ಬಾಲಕಿ ಮತ್ತಾಕೆಯ ಪೋಷಕರು ಅರೆಸ್ಟ್ Read More »

ಮಹಾಭಾರತ ಸರಣಿಯ 101ನೇ ತಾಳಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್.ರಿ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 101ನೇ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪ್ರಥಮ ನೀಲಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸುಳ್ಯ ತಾಲೂಕಿನ ಹರಿಹರ ಪಳ್ಳತಡ್ಕ ಕೊಂಬೋಟು ಮನೆತನದ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರಥಮ ನೀಲಪದ್ಮ ಪ್ರಶಸ್ತಿಯನ್ನು ನಿಧಿ ಸಹಿತವಾಗಿ ಕಾಳಿಕಾಂಬಾ ಟ್ರಸ್ಟಿನ ಹಿರಿಯ ಅರ್ಥಧಾರಿ ಗೋಪಾಲ ಶೆಟ್ಟಿ

ಮಹಾಭಾರತ ಸರಣಿಯ 101ನೇ ತಾಳಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ Read More »

RJD ವಿರುದ್ಧ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆಕ್ರೋಶ

ಪಾಟ್ನಾ: ಬಿಹಾರದಲ್ಲಿ ‌ಮಹಿಳೆಯರನ್ನು ಅಸಹಾಯಕತೆ ಮತ್ತು ಭಯದ ನೆರಳಿನಿಂದ ಎನ್.ಡಿ.ಎ. ಸರ್ಕಾರ ಮೇಲಕ್ಕೆತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಬಿಹಾರದಲ್ಲಿ RJD ಯು ಮಹಿಳಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಸ್ಥಗಿತ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದು ನೋವಿನ ಸಂಗತಿ. ಬಿಹಾರದಲ್ಲಿ ಜನ ಧನ ಯೋಜನೆಯು 3 ಕೋಟಿಗೂ ಅಧಿಕ ಜನರಿಗೆ ಅನುಕೂಲಗಳನ್ನು ಒದಗಿಸಿದೆ. ಉಜ್ವಲ ಯೋಜನೆಯಡಿ 1.16 ಕೋಟಿಗೂ ಅಧಿಕ ಮಹಿಳೆಯರು ಪ್ರಯೋಜನಗಳನ್ನು ಪಡೆದಿದ್ದಾರೆ. ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಕಾರ್ಯ

RJD ವಿರುದ್ಧ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆಕ್ರೋಶ Read More »

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ

ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಡಾ. ಕೆ ವಿ ರೇಣುಕಾಪ್ರಸಾದ್ ಮತ್ತು ಮನೆಯವರು ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದಾಗ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಶಾಸಕರಾದ ಯಶ್’ಪಾಲ್ ಸುವರ್ಣ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಗಿರಿಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಕುಮಾರ್ ವೈ. ಮತ್ತು ನೂರಾರು ಭಕ್ತರು ಹಾಜರಿದ್ದರು. ಇದಕ್ಕೂ ಮೊದಲು ಕೋಟೇಶ್ವರದಿಂದ ಹೊರಟ ರಥಯಾತ್ರೆಯು ಸಾಸ್ತಾನ, ಬ್ರಹ್ಮಾವರ, ಸಂತೆಕಟ್ಟೆ, ಕರಾವಳಿ

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ Read More »

ರೈತರ ಸಂಕಷ್ಟಕ್ಕೆ ‌ಕಿವಿಯಾಗುತ್ತಿಲ್ಲ ರಾಜ್ಯ ಸರ್ಕಾರ: ಬಿ. ವೈ. ವಿಜಯೇಂದ್ರ ಆರೋಪ

ಬೆಳಗಾವಿ: ರೈತರ ಸಂಕಷ್ಟಗಳನ್ನು ಆಲಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಟನ್‌ಗೆ 3,500 ರೂ. ನೀಡಬೇಕು ಎಂದು ಬೆಳೆಗಾರರು ಗುರ್ಲಾಪುರ ಬಳಿ ಹೋರಾಟ‌ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೇ ಮುಂದಾಳತ್ವ ವಹಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಿಲ್ಲ. ಆದ್ದರಿಂದ ಆ ರೈತರ ನ್ಯಾಯಯುತ ಬೇಡಿಕೆಗಳಿಗೆ ಬೆಂಬಲ ಸೂಚಿಸಲು ತಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು

ರೈತರ ಸಂಕಷ್ಟಕ್ಕೆ ‌ಕಿವಿಯಾಗುತ್ತಿಲ್ಲ ರಾಜ್ಯ ಸರ್ಕಾರ: ಬಿ. ವೈ. ವಿಜಯೇಂದ್ರ ಆರೋಪ Read More »

ನ. 20 ರಂದು ಮುಂಬೈ ವಿಮಾನ ನಿಲ್ದಾಣ 6 ಗಂಟೆಗಳ ಕಾಲ ಬಂದ್: ಯಾಕೆ ಗೊತ್ತಾ?

ಮುಂಬೈ: ರನ್ ವೇ ನಿರ್ವಹಣಾ ಕಾರ್ಯವನ್ನು ಕೈಗೊತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ. 20 ರಂದು 6 ಗಂಟೆಗಳ ಕಾಲ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಿರಂತರ ಸುರಕ್ಷತೆ, ವಿಶ್ವಾಸಾರ್ಹತೆ, ಜಾಗತಿಕ ವಾಯುಯಾನ ಮಾನದಂಡಗಳ ಅನುಸರಣೆಗಳನ್ನು ಖಚಿತಪಡಿಸಿಕೊಳ್ಳುವ ‌ನಿಟ್ಟಿನಲ್ಲಿ ಅದಾನಿ ಗ್ರೂಪ್ -AAI ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನ. 20 ರಂದು ಬೆಳಗ್ಗೆ 11 ಗಂಟೆಯಿಂದ 5 ರ ವರೆಗೆ ಎರಡೂ ರನ್ ವೇ ಗಳು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು

ನ. 20 ರಂದು ಮುಂಬೈ ವಿಮಾನ ನಿಲ್ದಾಣ 6 ಗಂಟೆಗಳ ಕಾಲ ಬಂದ್: ಯಾಕೆ ಗೊತ್ತಾ? Read More »

error: Content is protected !!
Scroll to Top