ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಹೊಸ ಎಫ್‌ಐಆರ್‌ ದಾಖಲು

ನ್ಯಾಷನಲ್‌ ಹೆರಾಲ್ಡ್‌ನ 2 ಸಾವಿರ ಕೋ. ರೂ. ಆಸ್ತಿ ಕಬಳಿಸಿದ ಪ್ರಕರಣ ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಎಫ್‌ಐಆರ್‌ ದಾಖಲಿಸಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಿಸಿದೆ. ಸೋನಿಯಾ, ರಾಹುಲ್‌ ಜೊತೆಗೆ ಇತರ […]

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಹೊಸ ಎಫ್‌ಐಆರ್‌ ದಾಖಲು Read More »

ಹಿರಿಯ ಹಾಸ್ಯನಟ ಉಮೇಶ್‌ ನಿಧನ

300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ನಟ ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಎಂ.ಎಸ್. ಉಮೇಶ್ ಅವರು ಜನಪ್ರಿಯತೆ ಪಡೆದಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ.

ಹಿರಿಯ ಹಾಸ್ಯನಟ ಉಮೇಶ್‌ ನಿಧನ Read More »

ಇಂದು ರಾಂಚಿಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ

ಟೆಸ್ಟ್‌ ಸೋಲಿನ ಸೇಡನ್ನು ಏಕದಿನದಲ್ಲಿ ತೀರಿಸುವ ತವಕದಲ್ಲಿ ಇಂಡಿಯಾ ಟೀಮ್‌ ರಾಂಚಿ : ದಕ್ಷಿಣ ಆಫ್ರಿಕ ಜೊತೆಗಿನ ಟೆಸ್ಟ್‌ ಸರಣಿಯಲ್ಲಿ 2-0 ಅಂತರದಿಂದ ಸೋತು ಸುಣ್ಣವಾಗಿರುವ ಭಾರತ ಇಂದಿನಿಂದ ಏಕದಿನ ಸರಣಿಯನ್ನು ಆಡಲಿದೆ. ಭಾನುವಾರದಿಂದ ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿಯ ಜೆಎಸ್​ಸಿಎ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯು ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ. ಇದಕ್ಕೂ ಮುನ್ನ 1.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಟೆಸ್ಟ್‌ ಸೋಲಿನ ಸೇಡನ್ನು

ಇಂದು ರಾಂಚಿಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ Read More »

ಟೆರರ್‌ ಡಾಕ್ಟರ್‌ ಶಾಹಿನಾ ಕೊಠಡಿಯಲ್ಲಿ ಲಕ್ಷಗಟ್ಟಲೆ ಹಣ ಪತ್ತೆ

ಅಲ್‌-ಫಲಾಹ್‌ ವಿವಿಯ ಕೊಠಡಿಯಲ್ಲೇ ಕಂತೆ ಕಂತೆ ಹಣ ಸಂಗ್ರಹಿಸಿಟ್ಟಿದ್ದ ಶಾಹಿನಾ ನವದೆಹಲಿ: ದೆಹಲಿ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಅಲ್-ಫಲಾಹ್ ವಿಶ್ವವಿದ್ಯಾಲಯದ ಟೆರರ್‌ ಡಾಕ್ಟರ್‌ ಶಾಹಿನಾ ಸಯೀದ್‌ ಕೊಠಡಿಯಲ್ಲಿ 18 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ವಿಶ್ವವಿದ್ಯಾಲಯದ ರೂಮ್‌ ನಂಬರ್‌ 22ರಲ್ಲಿ ಶೋಧ ನಡೆಸಿದಾಗ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಇಟ್ಟಿದ್ದ ಹಣ ಪತ್ತೆಯಾಗಿದೆ. ಶಾಹಿನಾಗೆ ಈ ಪ್ರಮಾಣದ ಹಣ ಎಲ್ಲಿಂದ ಸಿಕ್ಕಿದೆ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 10ರಂದು

ಟೆರರ್‌ ಡಾಕ್ಟರ್‌ ಶಾಹಿನಾ ಕೊಠಡಿಯಲ್ಲಿ ಲಕ್ಷಗಟ್ಟಲೆ ಹಣ ಪತ್ತೆ Read More »

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ

ಟೋಕನ್‌ ವಿಚಾರದಲ್ಲಿ ಜಗಳವಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಪುತ್ತೂರು : ನಗರದ ದರ್ಬೆಯ ಇಎನ್‌ಟಿ ಕ್ಲಿನಿಕ್‌ನಲ್ಲಿ ಶನಿವಾರ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಅಋೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೊಳಗಾದವರು ಶನಿವಾರ ಬೆಳಗ್ಗೆ 6.30ರ ವೇಳೆ ಬಂದ ಇಬ್ರಾಹೀಂ ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ

ಪುತ್ತೂರು : ಕ್ಲಿನಿಕ್‌ನಲ್ಲಿ ದಾಂಧಲೆ ಎಸಗಿದ ಆರೋಪಿ ಬಂಧನ Read More »

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ATI ಅವರು ನವೆಂಬರ್ 30 ರಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. 1989 ರಲ್ಲಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಕಾರ್ಯ ಆರಂಭಿಸಿದ ಅವರು ಆ ಬಳಿಕ ತಮ್ಮ ಉತ್ತಮ ಸೇವೆಯ ಫಲವಾಗಿ ಸಹಾಯಕ ಸಂಚಾರ ನಿಯಂತ್ರಕರಾಗಿ ಮುಂಭಡ್ತಿ ಹೊಂದಿದ್ದರು. ಅವರ ಸೇವಾ ನಿವೃತ್ತಿಗೆ ‌ಶುಭ ಕೋರಿ ಪುತ್ತೂರು ಘಟಕದ ಎಲ್ಲಾ ಚಾಲಕರ ಪರವಾಗಿ ಪುತ್ತೂರು ಘಟಕದ ಚಾಲಕ ಬೋಧಕ ಪಿ. ವಿ.

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI Read More »

ನೇಣಿಗೆ ‌ಶರಣಾದ ರಿಕ್ಷಾ ಚಾಲಕ

ಪುತ್ತೂರು: ಬನ್ನೂರು ನಿವಾಸಿ ರಿಕ್ಷಾ ಚಾಲಕರೊಬ್ಬರು ‌ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ‌ಮೋಹನ್ (57) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಅಳವಡಿಸಲಾಗಿದ್ದ ಶೀಟ್‌ನ ಅಡ್ಡಪಟ್ಟಿಗೆ ‌ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿದೆ.

ನೇಣಿಗೆ ‌ಶರಣಾದ ರಿಕ್ಷಾ ಚಾಲಕ Read More »

ಲಕ್ಷ್ಯ ಡೇ ಕೇರ್ ಸೆಂಟರ್’, ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ರಮೇಶ್ ಅರವಿಂದ್, ಯೋಗರಾಜ ಭಟ್ ಶುಭಹಾರೈಕೆ

ಪುತ್ತೂರು: ಮಕ್ಕಳ ಹಿತಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ‘ಲಕ್ಷ್ಯ ಡೇ ಕೇರ್ ಸೆಂಟರ್’ ಹಾಗೂ ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರು ಶುಭ ಹಾರೈಸಿದ್ದಾರೆ. ಬೊಳ್ವಾರು ಬೈಪಾಸ್ ರಸ್ತೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗಾರ್ಡನ್ಸ್ ಹೋಟೆಲ್ ಮುಂಭಾಗದಲ್ಲಿರುವ ರವಿಂದ ಕಾಂಪ್ಲೆಕ್ಸ್ ನಲ್ಲಿರುವ ಲಕ್ಷ್ಯ ಡೇ ಕೇರ್ ಸಂಸ್ಥೆಯು ಇದೇ ಜನವರಿಯಲ್ಲಿ ಅನಾವರಣಗೊಳ್ಳುತ್ತಿದ್ದು, ಒಂದು ವರ್ಷದಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಶಿಶು ಶಿಕ್ಷಣ

ಲಕ್ಷ್ಯ ಡೇ ಕೇರ್ ಸೆಂಟರ್’, ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ರಮೇಶ್ ಅರವಿಂದ್, ಯೋಗರಾಜ ಭಟ್ ಶುಭಹಾರೈಕೆ Read More »

ಗಡಪಿಲದಲ್ಲಿ ಅಕ್ರಮ ಗೋಸಾಗಾಟ: ರಸ್ತೆ ಬದಿಯಲ್ಲೇ ಗೋವುಗಳನ್ನು ಬಿಟ್ಟು ಪರಾರಿ

ಪುತ್ತೂರು: ಸರ್ವೆಯ ಗಡಪಿಲ ಎಂಬಲ್ಲಿ ಇಂದು ಮುಂಜಾನೆ ಅಕ್ರಮ ಗೋ ಸಾಗಾಟದ ವಾಸನೆ ಮೂಗಿಗೆ ಬಡಿದಿದ್ದು, ರಸ್ತೆ ಬದಿಯಲ್ಲಿ ಗೋಕಳ್ಳರು ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ‌ ಎನ್ನಲಾಗಿದೆ. ರಸ್ತೆ ಬದಿ 5 ಗೋವುಗಳು ಕಂಡು ಬಂದಿವೆ. ತಕ್ಷಣವೇ ಹಿಂದೂ ಸಂಘಟನೆಗಳು ಎಚ್ಚೆತ್ತುಕೊಂಡು, ರಸ್ತೆ ಬದಿಯಲ್ಲಿ ಬಿಡಲಾಗಿದ್ದ ಗೋವುಗಳನ್ನು ಪುತ್ತೂರು ನಗರ ಪೊಲೀಸು ಠಾಣೆಗೆ ಸಾಗಿಸಿ ರಕ್ಷಿಸಿದ್ದಾರೆ. ಈ ಗೋವುಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯಿಂದ ಬೈಹುಲ್ಲಿನ ‌ವ್ಯವಸ್ಥೆ ಮಾಡಲಾಗಿದೆ. ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಕೆಟ್ಟು ನಿಂತ ಪರಿಣಾಮ

ಗಡಪಿಲದಲ್ಲಿ ಅಕ್ರಮ ಗೋಸಾಗಾಟ: ರಸ್ತೆ ಬದಿಯಲ್ಲೇ ಗೋವುಗಳನ್ನು ಬಿಟ್ಟು ಪರಾರಿ Read More »

ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು

ಸುಬ್ರಹ್ಮಣ್ಯ: ವ್ಯಕ್ತಿಯೋರ್ವ ಅಪ್ರಾಪ್ತ ಹುಡುಗನಿಗೆ ಗದರಿಸಿ, ಕೋಲಿನಿಂದ ಹೊಡೆದಿದ್ದು, ಈ ಘಟನೆ ಬಾಲಕನ ತಾಯಿಯ ಗಮನಕ್ಕೆ ಬಂದ ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕ ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದು, ಆರೋಪಿ ಚೇತನ್ ಎಂಬಾತ ಹುಡುಗನಿಗೆ ಕೋಲು ಹಿಡಿದು ಹೊಡೆಯುತ್ತಿರುವ ವಿಡಿಯೋ ಮೊಬೈಲಿನಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿರುವುದಾಗಿದೆ.

ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು Read More »

error: Content is protected !!
Scroll to Top