ಮಕ್ಕಳ ಮೊಬೈಲ್ ಫೋನ್ ಅಡಿಕ್ಷನ್ ಬಿಡಿಸಲು ರಾಜ್ಯದ ಶಾಲೆಗಳಲ್ಲಿ ‘ಫೋನ್ ಬಿಡಿ-ಪುಸ್ತಕ ಹಿಡಿ’ ಅಭಿಯಾನ

ಬೆಂಗಳೂರು: ಮಕ್ಕಳ ಮೊಬೈಲ್ ಫೋನ್ ಅಡಿಕ್ಷನ್ ಬಿಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಫೋನ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ನಡೆಸಲು ಆರಂಭಿಸಿದೆ. ಮಕ್ಕಳು ಶಾಲೆಯಲ್ಲಿ ಇದ್ದಷ್ಟು ಸಮಯ ಫೋನ್‌ನಿಂದ ದೂರವಿರುತ್ತಾರೆ. ಆದರೆ ಮನೆಗೆ ಹೋದ ತಕ್ಷಣ ಫೋನಿನ ದಾಸರಾಗುವ ಮಕ್ಕಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಈ ಹೊಸ ಕ್ರಮಕ್ಕೆ ಮುಂದಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿ, ಮೊಬೈಲ್ ಬಳಕೆ ನಿಯಂತ್ರಣಕ್ಕೆ ತರುವ […]

ಮಕ್ಕಳ ಮೊಬೈಲ್ ಫೋನ್ ಅಡಿಕ್ಷನ್ ಬಿಡಿಸಲು ರಾಜ್ಯದ ಶಾಲೆಗಳಲ್ಲಿ ‘ಫೋನ್ ಬಿಡಿ-ಪುಸ್ತಕ ಹಿಡಿ’ ಅಭಿಯಾನ Read More »

ಕೆಂಪುಕೋಟೆ ಬಳಿ ಮತ್ತೊಂದು ಭೀಕರ ಸ್ಫೋಟಕ್ಕೆ ಸಂಚು

ಪಾಕಿಸ್ತಾನದ ಉಗ್ರ ಸಂಘಟನೆಯಿಂದ ಭಾರತದಲ್ಲಿ ವಿಧ್ವಂಸ ಕೃತ್ಯಕ್ಕೆ ಹೊಂಚು ನವದೆಹಲಿ: ಹೊಸದಿಲ್ಲಿಯ ಕೆಂಪುಕೋಟೆ ಸಮೀಪ ಸಂಬವಿಸಿದ ಕಾರು ಬಾಂಬ್‌ ಸ್ಫೋಟ ಕೃತ್ಯ ನೆನಪಿನಿಂದ ಮರೆಯಾಗುವ ಮುನ್ನವೇ ಪಾಕಿಸ್ತಾನ ಮೂಲದ ಲಷ್ಕರ್‌-ಎ-ತೋಯ್ಬಾ ಉಗ್ರ ಸಂಘಟನೆ ಕೆಂಪುಕೋಟೆ ಸಮೀಪ ಇನ್ನೊಂದು ಭಾರಿ ಸ್ಫೋಟಕ್ಕೆ ಸಂಚು ರೂಪಿಸಿರುವ ಆಘಾತಕಾರಿ ಅಂಶ ಬಯಲಾಗಿದೆ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆ, ದೆಹಲಿಯ ಕೆಂಪುಕೋಟೆ, ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಮತ್ತು ದೇಶಾದ್ಯಂತದ ಇತರ ಪ್ರಮುಖ ದೇವಾಲಯಗಳ ಬಳಿ ಸ್ಫೋಟಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಭದ್ರತಾ ಸಂಸ್ಥೆಗಳನ್ನು

ಕೆಂಪುಕೋಟೆ ಬಳಿ ಮತ್ತೊಂದು ಭೀಕರ ಸ್ಫೋಟಕ್ಕೆ ಸಂಚು Read More »

30ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ : ದಂಪತಿಗೆ ಮರಣ ದಂಡನೆ

ವಿಡಿಯೋ ಮಾಡಿ ಪೋರ್ನ್‌ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡುತ್ತಿದ್ದ ದಂಪತಿ ಲಖನೌ: 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ಮಾಡಿ ಡಾರ್ಕ್‌ವೆಬ್‌ ಪೋರ್ನ್‌ ಸೈಟಿಗೆ ಮಾರಿದ ಪ್ರಕರಣದಲ್ಲಿ ದಂಪತಿಗೆ ಉತ್ತರ ಪ್ರದೇಶದ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಸಂತ್ರಸ್ತ ಮಕ್ಕಳಲ್ಲಿ ಕೆಲವರು ಮೂರು ವರ್ಷ ವಯಸ್ಸಿನವರಾಗಿದ್ದಾರೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಪೋಕ್ಸೊ ಕಾಯ್ದೆಯ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಆರೋಪಿಗಳಾದ ಉತ್ತರ ಪ್ರದೇಶ ಚಿತ್ರಕೂಟದ ರಾಮಭವನ್ ಮತ್ತು ಆತನ ಪತ್ನಿ ದುರ್ಗಾವತಿಯನ್ನು ಲೈಂಗಿಕ

30ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ : ದಂಪತಿಗೆ ಮರಣ ದಂಡನೆ Read More »

ಪುತ್ತೂರು: ರೈಲು ಹಳಿಯಲ್ಲಿ ಶವಪತ್ತೆ

ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಶಂಕೆ ಪುತ್ತೂರು: ನಗರದ ಹಾರಾಡಿ ಸಮೀಪದ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಹಳಿಯ ಬಳಿ ಶವವನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪುತ್ತೂರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯಂತೆ ರೈಲು ಡಿಕ್ಕಿಯಿಂದಲೇ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪುತ್ತೂರು: ರೈಲು ಹಳಿಯಲ್ಲಿ ಶವಪತ್ತೆ Read More »

ಪುತ್ತೂರು : ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಏಕ ಬಳಕ್ಕ ಪರಿಸರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂನಿಂದ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ.ಸ್ಥಳೀಯರಾದ ಲ್ಯಾನ್ಸಿ ಬಳಕ್ಕ ಅಜಿತ್ ಪ್ರಸಾದ್ ರೈ ಮತ್ತು ಉಮೇಶ್ ದೇವಾಡಿಗ ಅವರಿಗೆ ಸೇರಿದ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಲ್ಯಾನ್ಸಿ ಬಳಕ್ಕ ಅವರಿಗೆ ಸೇರಿದ ಗದ್ದೆಯಲ್ಲಿ 40 ಫೀಟ್ ಉದ್ದದ ಪಿವಿಸಿ ಪೈಪ್‌, ವೀಳ್ಯ ಕೃಷಿಗೆ ಹಾನಿ ಉಂಟಾಗಿದೆ. ಬೆಂಕಿ‌ ನಂದಿಸಲು ಸ್ಥಳೀಯರು ಶ್ರಮಿಸಿದರು.

ಪುತ್ತೂರು : ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ Read More »

ಅನುಮಾನಗಳನ್ನು ಹುಟ್ಟು ಹಾಕಿದ ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ದೂರು ದಾಖಲಾದ ಮರುಕ್ಷಣವೇ ಬಂಧಿಸಿ, ಮನೆಗೆ ದಾಳಿ ಮಾಡಿರುವ ಪೊಲೀಸರು ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಸೈಟ್‌ ಕಬಳಿಕೆ ಪ್ರಕರಣದ ಮುಖ್ಯ ದೂರುದಾರರಾಗಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ದೂರು ನೀಡಿದ ಮರುಕ್ಷಣವೇ ಬಂಧಿಸಿದ್ದಲ್ಲದೆ ಅವರ ಮನೆಗೆ ದಾಳಿ ಮಾಡಿ ಶೋಧ ಕಾರ್ಯ ಮಾಡಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ಹಿಂದೆ ಯಾರ ಕೈವಾಡ ಇದೆ ಎಂದು ಅನುಮಾನ ಈಗ ಉಂಟಾಗಿದೆ.

ಅನುಮಾನಗಳನ್ನು ಹುಟ್ಟು ಹಾಕಿದ ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ Read More »

ಭೀಕರ ಅಪಘಾತ : ಮಗು ಸಹಿತ ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆಕೆರೆ ಸಮೀಪ ಶನಿವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ

ಭೀಕರ ಅಪಘಾತ : ಮಗು ಸಹಿತ ನಾಲ್ವರು ಸ್ಥಳದಲ್ಲೇ ಸಾವು Read More »

ಶಿಬಾಜೆ ಶ್ರೀಧರ ಕೊಲೆ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ

ನಾಲ್ಕು ವರ್ಷದ ಹಿಂದೆ ಶಿಬಾಜೆಯ ತೋಟದಲ್ಲಿ ಕೊಲೆಯಾಗಿದ್ದ ಶ್ರೀಧರ ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣದ‌ ಮರು ತನಿಖೆಗೆ ಎಸ್.ಐ.ಟಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡದಲ್ಲಿ ಉಡುಪಿ ಜಿಲ್ಲಾ ಎಸ್‌ಪಿ ಹರಿರಾವ್ ಶಂಕರ್, ಡಿವೈಎಸ್‌ಪಿ ಎಂ.ಆರ್ ಹರೀಶ್ ಅವರಿದ್ದಾರೆ. 2022ರ ಡಿ‌.18ರಂದು ಶಿಬಾಜೆಯ ತೋಟದ ಒಳಗೆ ಶ್ರೀಧರನ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ

ಶಿಬಾಜೆ ಶ್ರೀಧರ ಕೊಲೆ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ Read More »

ಏ.1ರಿಂದ ಟೋಲ್‌ಗೇಟ್‌ಗಳಲ್ಲಿ ಶುಲ್ಕ ನಗದು ಪಾವತಿ ಇಲ್ಲ

ಡಿಜಿಟಲ್‌ ವಿಧಾನದಲ್ಲಿ ಮಾತ್ರ ಶುಲ್ಕ ಸ್ವೀಕರಿಸಲು ನಿರ್ಧಾರ ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್‌ಗಳಲ್ಲಿ ಮುಂಬರುವ ಏ.1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನದಲ್ಲೇ ಅಂದರೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಟೋಲ್ ಪ್ಲಾಝಾ ದಾಟುವ ವಾಹನಗಳು ಫಾಸ್ಟ್ಯಾಗ್ ಹೊಂದಿಲ್ಲದಿದ್ದಲ್ಲಿ, ನಗದು ರೂಪದಲ್ಲಿ

ಏ.1ರಿಂದ ಟೋಲ್‌ಗೇಟ್‌ಗಳಲ್ಲಿ ಶುಲ್ಕ ನಗದು ಪಾವತಿ ಇಲ್ಲ Read More »

ದೇವಸ್ಥಾನಗಳಲ್ಲಿ ರೀಲ್ಸ್‌ ಶೂಟಿಂಗ್‌ ಮಾಡಲು ತೆರಬೇಕು ಶುಲ್ಕ!

ಯೂಟ್ಯೂಬರ್ಸ್‌, ರೀಲ್ಸ್‌ ಮಾಡುವವರ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮ ಬೆಂಗಳೂರು : ಇನ್ನು ಮುಂದೆ ದೇವಸ್ಥಾನಗಳಲ್ಲಿ ರೀಲ್ಸ್‌ ಮತ್ತಿತರ ಉದ್ದೇಗಳಿಗೆ ಶೂಟಿಂಗ್‌ ಮಾಡಬೇಕಾದರೆ ಶುಲ್ಕ ಪಾವತಿಸಬೇಕು. ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ. ರಾಜ್ಯದ ಎಲ್ಲ ಎ ಮತ್ತು ಬಿ

ದೇವಸ್ಥಾನಗಳಲ್ಲಿ ರೀಲ್ಸ್‌ ಶೂಟಿಂಗ್‌ ಮಾಡಲು ತೆರಬೇಕು ಶುಲ್ಕ! Read More »

error: Content is protected !!
Scroll to Top