ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ

ವಿಟ್ಲ : ಮೇಯಲು ಬಿಟ್ಟಿದ್ದ ಹಸುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಉಳ್ಳಾಲ ನಿವಾಸಿ ಝಲ್ಫಾನ್ ಮಾಲಿಕ್ (30) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಅವಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ್ ಎಂಬವರ ಒಟ್ಟು 4 ದನಗಳನ್ನು ಕಳ್ಳತನ ಮಾಡಿದ ಅರೋಪಿಯಾಗಿದ್ದು, ಈತನನ್ನು ವಿಟ್ಲ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ Read More »

ಆಸ್ಕರ್‌ ಪ್ರಶಸ್ತಿ ರೇಸ್‌ಗೆ ಕಾಂತಾರ-ಚಾಪ್ಟರ್ 1 ಎಂಟ್ರಿ

ʻಮಹಾವತಾರ್‌ ನರಸಿಂಹʼ ಅನಿಮೇಟೆಡ್‌ ವಿಭಾಗದಲ್ಲಿ ಸ್ಪರ್ಧೆ ಬೆಂಗಳೂರು : ಕನ್ನಡದ ಯಶಸ್ವಿಯಾದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರ ಆಸ್ಕರ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ. ʻಮಹಾವತಾರ್‌ ನರಸಿಂಹʼ ಹಾಗೂ ʻಕಾಂತಾರ: ಅಧ್ಯಾಯ 1ʼ ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣವಾಗಿದೆ. ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಜ.22 ರಂದು ಪ್ರಕಟವಾಗಲಿದೆ. ಮಾರ್ಚ್‌ 15 ರಂದು ಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ

ಆಸ್ಕರ್‌ ಪ್ರಶಸ್ತಿ ರೇಸ್‌ಗೆ ಕಾಂತಾರ-ಚಾಪ್ಟರ್ 1 ಎಂಟ್ರಿ Read More »

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು

ವಿಟ್ಲ: ವಿಟ್ಲ ಕಸಬ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬ ಕ್ರಿಮಿನಲ್‌ನನ್ನು ಪೊಲೀಸರು ಚಿಕ್ಕಮಗಳೂರಿಗೆ ಗಡಿಪಾರು ಮಾಡಿದ್ದಾರೆ. ಈತನ ವಿರುದ್ಧ ಹಲ್ಲೆ, ನಿಷೇಧಿತ ಮಾದಕ ವಸ್ತುಗಳ ಸೇವನೆ ಮತ್ತು NDPS ಕಾಯ್ದೆಯಡಿ ಉಲ್ಲಂಘನೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಡಿಪಾರು ಮಾಡಲಾಗಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕಿನ ಅಬ್ದುಲ್‌ ಖಾದರ್‌ ಗಡಿಪಾರು ಆದ ಆರೋಪಿ. ಆರೋಪಿ ವಿರುದ್ಧ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಎನ್‌ಡಿಪಿಎಸ್

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು Read More »

ಪ್ರಸಾರವೇ ಇಲ್ಲದ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಕೋಟಿ ಕೋಟಿ ಜಾಹೀರಾತು : ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ರಾಜ್ಯದ ಖಜಾನೆ ನಿಮ್ಮ ಪಕ್ಷದ ಸ್ವಂತ ಖಜಾನೆಯೇ ಎಂದು ಪ್ರಶ್ನಿಸಿದ ಆರ್‌.ಅಶೋಕ್‌ ಬೆಂಗಳೂರು: ಪ್ರಸಾರವೇ ಇಲ್ಲದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಸರ್ಕಾರ ಕೋಟಿ ಕೋಟಿ ಜಾಹೀರಾತು ಕೊಟ್ಟಿರುವ ವಿಚಾರ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದೆ. ಕಾಂಗ್ರೆಸ್‌ ಮೇಲೆ ಮುಗಿಬಿದ್ದಿರುವ ಬಿಜೆಪಿ ರಾಜ್ಯದ ಖಜಾನೆ ನಿಮ್ಮ ಪಕ್ಷದ ಸ್ವಂತ ಖಜಾನೆಯೇ ಎಂದು ಪ್ರಶ್ನಿಸಿದೆ. ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಖಜಾನೆ ಮಾಡುವುದಕ್ಕೆ ಸರ್ಕಾರ ಹೊರಟಿದೆ ಎಂದು ವಿಪಕ್ಷ ‌ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದಿಂದ ಹೆಚ್ಚು

ಪ್ರಸಾರವೇ ಇಲ್ಲದ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಕೋಟಿ ಕೋಟಿ ಜಾಹೀರಾತು : ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ Read More »

ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆಗೆ ಸಿದ್ದರಾಮಯ್ಯ ವಿರೋಧ

ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯನ್ನು ಹಿಂದೆಗೆದುಕೊಳ್ಳಲು ಒತ್ತಾಯ ಬೆಂಗಳೂರು: ಕೇರಳ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ‘ಮಲಯಾಳಂ ಭಾಷಾ ಮಸೂದೆ 2025’ರಿಂದ ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಒಂದು ವೇಳೆ ಕಾಸರಗೋಡು ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ ಭಾಷೆಯನ್ನು ಹೇರಿದ್ದೇ ಆದಲ್ಲಿ ನಮ್ಮ ಸರ್ಕಾರ ಅವರ ಜತೆಯಲ್ಲಿ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದಿದ್ದಾರೆ.

ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆಗೆ ಸಿದ್ದರಾಮಯ್ಯ ವಿರೋಧ Read More »

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ

ಉಡುಪಿ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯ ಕೃತ್ಯದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪತ್ರದಲ್ಲಿ ಹಿಂದೂ ಸಮಾಜವು ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಪಾಲಿಸುತ್ತಾ ಬಂದಿದೆ. ಯಾರ ಮೇಲೆಯೂ ಹಿಂಸೆಯನ್ನು ಅಸ್ತ್ರವಾಗಿ ಬಳಸಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ Read More »

ಜಮ್ಮು ಕಾಶ್ಮೀರ: ಭಾರೀ ದೊಡ್ಡ ಭಯೋತ್ಪಾದನಾ ಸಂಚು ವಿಫಲಗೊಳಿಸಿದ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದೊಡ್ಡ ಭಯೋತ್ಪಾದನಾ ಸಂಚೊಂದನ್ನು ವಿಫಲಗೊಳಿಸಲಾಗಿದೆ. ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯದ ವೇಳೆ ಸುಮಾರು 4 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಮಾಡಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ. ಭದ್ರತಾ ಪಡೆಗಳು ಕಲ್ಲಾರ್ ಪ್ರದೇಶದ ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ವಾಸನೆ ಬಡಿದಿದ್ದು, ಈ ಹಿನ್ನೆಲೆ ತೀವ್ರ ಶೋಧ ನಡೆಸಿದ್ದವು. ಈ

ಜಮ್ಮು ಕಾಶ್ಮೀರ: ಭಾರೀ ದೊಡ್ಡ ಭಯೋತ್ಪಾದನಾ ಸಂಚು ವಿಫಲಗೊಳಿಸಿದ ಭದ್ರತಾ ಪಡೆ Read More »

ತಾಯಿ ಮತ್ತು ಮಗಳು ನಾಪತ್ತೆ: ದೂರು ದಾಖಲು

ವಿಟ್ಲ: ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರಮ್ಮ ಮತ್ತು ನೆಫಿಸತುಲ್ ಮಿಶ್ರಿಯಾ ಅವರು ನಾಪತ್ತೆಯಾಗಿರುವುದಾಗಿ ‌ಸಾರಮ್ಮ ಅವರ ಪುತ್ರ ಕೊಳ್ಳಾಡು ಅಗರಿ ಮನೆ ಸಾಲೆತ್ತೂರು ನಿವಾಸಿ ಮಹಮ್ಮದ್ ಮುಸ್ತಫಾ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ‘ಜ. 5 ರಂದು ಬೆಳಗ್ಗೆ ತಾನು ನಾಟೆಕಲ್ ಮದ್ರಸಾಗೆ ಪಾಠ ಮಾಡಲು ಹೋಗಿದ್ದು, ಹಿಂದಿರುಗಿ ಬಂದಾಗ ತಾಯಿ ಮತ್ತು ಅಕ್ಕ ಮನೆಯಲ್ಲಿದ್ದರು. ಆದರೆ ಸಂಜೆ ವೇಳೆ ಇರಾದಿಂದ ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು

ತಾಯಿ ಮತ್ತು ಮಗಳು ನಾಪತ್ತೆ: ದೂರು ದಾಖಲು Read More »

ಸಹೋದ್ಯೋಗಿಯ ಕಿರುಕುಳದಿಂದ ನೊಂದು ಠಾಣೆಯಲ್ಲೇ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ಹೆಡ್‌ಕಾನ್‌ಸ್ಟೆಬಲ್‌ ಮುಹಮ್ಮದ್‌ ಝಕ್ರಿಯಾ ಶಿವಮೊಗ್ಗ : ಸಹೋದ್ಯೋಗಿಯ ಕಿರುಕುಳದಿಂದ ನೊಂದು ಶಿವಮೊಗ್ಗ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಮುಹಮ್ಮದ್‌ ಝಕ್ರಿಯಾ (55) ಎಂಬವರು ಡೆತ್‌ನೋಟ್ ಬರೆದಿಟ್ಟು ಪಶ್ಚಿಮ ಸಂಚಾರ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಹಮ್ಮದ್‌ ಝಕ್ರಿಯಾ (55) ಕಳೆದ ಕೆಲವು ದಿನಗಳಿಂದ ರಜೆ ಮೇಲೆ ಇದ್ದು, ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಬುಧವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ನಂತರ

ಸಹೋದ್ಯೋಗಿಯ ಕಿರುಕುಳದಿಂದ ನೊಂದು ಠಾಣೆಯಲ್ಲೇ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ Read More »

16ನೇ ಮಹಡಿಯಿಂದ ಜಿಗಿದು ಮಂಗಳೂರಿನ ಟೆಕ್ಕಿ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಯುವಕ ಬೆಂಗಳೂರು : ನಗರದ ಅಪಾರ್ಟ್‌ಮೆಂಟ್‌ ಕಟ್ಟಡವೊಂದರ 16ನೇ ಫ್ಲೋರ್‌ನಿಂದ ಜಿಗಿದು ಮಂಗಳೂರು ಮೂಲದ ಟೆಕ್ಕಿಯೊಬ್ಬರು ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್ ನಿಕ್ಷೇಪ್ ಬಂಗೇರ (26) ಸಾವಿಗೀಡಾಗಿರುವ ನತದೃಷ್ಟ ಯುವಕ. ನಿಕ್ಷೇಪ್ ಬಗಲಗುಂಟೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅವರು 20ನೇ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದರು, ಆದರೆ ಬುಧವಾರ ಬೆಳಗ್ಗೆ 16ನೇ ಮಹಡಿಗೆ ಬಂದು ಅಲ್ಲಿಂದ ಕೆಳಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ. ನಿಕ್ಷೇಪ್ ವರ್ಕ್ ಫ್ರಂ ಹೋಮ್

16ನೇ ಮಹಡಿಯಿಂದ ಜಿಗಿದು ಮಂಗಳೂರಿನ ಟೆಕ್ಕಿ ಆತ್ಮಹತ್ಯೆ Read More »

error: Content is protected !!
Scroll to Top