ಫೆ.13-14 : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ | ದೈವಗಳ ನೇಮೋತ್ಸವ

ಪುತ್ತೂರು : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ದೈವಗಳ ನೇಮೋತ್ಸವ ಫೆ.13 ಸೋಮವಾರ ಹಾಗೂ 14 ಮಂಗಳವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಫೆ.13 ಸೋಮವಾರ ಬೆಳಿಗ್ಗೆ 8.45 ಕ್ಕೆ ಗೊನೆಮುಹೂರ್ತ, 9.30 ರಿಂದ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ, 10 ಕ್ಕೆ ತೋರಣ ಮುಹೂರ್ತ, ರಾತ್ರಿ 7.30 ಕ್ಕೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ […]

ಫೆ.13-14 : ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ | ದೈವಗಳ ನೇಮೋತ್ಸವ Read More »

ಕೇಂದ್ರ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರಿಂದ ಹನುಮಗಿರಿ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಣೆ | ಅಮರಗಿರಿ ಉದ್ಘಾಟನೆ | ಭೇಟಿಯ ಸವಿನೆನಪಿಗೆ ಸಂವಿಧಾನ ಮೂಲಪ್ರತಿಯಲ್ಲಿ ಹಸ್ತಾಕ್ಷರ

ಈಶ್ವರಮಂಗಲ : ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಅಮಿತ್ ಶಾ ಅವರು ಕ್ಷೇತ್ರದ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಿಸಿದರು. ಕೇರಳದ ಕಣ್ಣೂರಿನಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಗಜಾನನ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಬಳಿಕ ಪಂಚಮುಖಿ ಆಂಜನೇಯನ ದರ್ಶನ ಪಡೆದು ನವರತ್ನ ಸಹಿತ ರಜತ ಗಧೆ ಅರ್ಪಿಸಿದರು. ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ವಿಶೇಷವಾಗಿ ನೀಡುವ ಪಂಚಮುಖಿ ಆಂಜನೇಯ ರಕ್ಷೆಯನ್ನು ಕ್ಷೇತ್ರದ ಅರ್ಚಕ ರಾಜೇಶ್ ಗಾಂವ್ಕರ್  ಅಮಿತ್ ಶಾ ಅವರ

ಕೇಂದ್ರ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರಿಂದ ಹನುಮಗಿರಿ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಣೆ | ಅಮರಗಿರಿ ಉದ್ಘಾಟನೆ | ಭೇಟಿಯ ಸವಿನೆನಪಿಗೆ ಸಂವಿಧಾನ ಮೂಲಪ್ರತಿಯಲ್ಲಿ ಹಸ್ತಾಕ್ಷರ Read More »

ಪಯಸ್ವಿನಿ ನದಿ ಪಾಲಾದ ಕೌಡಿಚ್ಚಾರಿನ ಯುವಕರು

ಸುಳ್ಯ : ಪುತ್ತೂರಿನ ಕೌಡಿಚ್ಚಾರು ನಿವಾಸಿಗಳಾದ ಇಬ್ಬರು ಯುವಕರು ಸುಳ್ಯದ ಪಯಸ್ವಿನಿ ನದಿ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತದೇಹಗಳನ್ನು ಮೇಲೆತ್ತಿದ್ದು, ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟವರೆಂದು ಗುರುತಿಲಾಗಿದೆ.  ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡೇರಿಯವರೆಗೆ ಹೋಗಿ, ಬಳಿಕ ಪಯಸ್ವಿನಿ ನದಿಗೆ ಈಜಲೆಂದು ತೆರಳಿದ್ದರು. ಅವರಲ್ಲೋರ್ವ ನೀರು ಪಾಲಾದಾಗ, ಜೊತೆಗಿದ್ದ ಇನ್ನೊಬ್ಬಾತ ರಕ್ಷಿಸಲೆಂದು ನೀರಿಗೆ ಧುಮುಕ್ಕಿದ್ದಾನೆ. ನೀರಿನ ಸೆಳೆತಕ್ಕೆ ಗೆಳೆಯನನ್ನು ರಕ್ಷಿಸಲಾಗದೇ,

ಪಯಸ್ವಿನಿ ನದಿ ಪಾಲಾದ ಕೌಡಿಚ್ಚಾರಿನ ಯುವಕರು Read More »

ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ |  ನೊಂದವರ ಬಾಳಿಗೆ  ನೆರವಿನ ಹಸ್ತ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪ್ರಶಾಂತ್ ಲಾವಣ್ಯ ಅವರ ಮಗಳಾದ ಮಾನ್ಯ ಎಂಬ 5 ವರ್ಷದ  ಮಗು ಅಂಗವೈಕಲ್ಯದಿಂದ ಬಳಲುತ್ತಿದ್ದು, ಕುಟುಂಬವು ಚಿಕಿತ್ಸೆಗಾಗಿ ಪರದಾಡುತ್ತಿದೆ. ಇದನ್ನು ಮನಗಂಡು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ವತಿಯಿಂದ ನೊಂದವರ ಬಾಳಿಗೆ ನೆರವಿನ ಹಸ್ತವಾಗಿ 10111 ರೂಪಾಯಿ ಚೆಕ್ಕ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಅರ್ಜುನಗೋಳಿ, ಅಧ್ಯಕ್ಷ ಡಿ. ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು ಉಪಸ್ಥಿತರಿದ್ದರು.

ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ |  ನೊಂದವರ ಬಾಳಿಗೆ  ನೆರವಿನ ಹಸ್ತ Read More »

ಫೆ.15 : ನೂಜಿಬಾಳ್ತಿಲ ಕಾರಣಿಕ ಕ್ಷೇತ್ರ ಬದಿಬಾಗಿಲು ಶ್ರೀ ಹುಲಿಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

ಪುತ್ತೂರು : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಾರಣಿಕ ಕ್ಷೇತ್ರ ಬದಿಬಾಗಿಲು ಶ್ರೀ ಹುಲಿಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಹುಲಿ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.15 ಬುಧವಾರ ಸಂಜೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ಸಂಜೆ 5 ರಿಂದ ಭಜನಾ ಕಾರ್ಯಕ್ರಮ, 6 ಕ್ಕೆ ಭಂಡಾರ ಹಿಡಿಯುವುದು, ರಾತ್ರಿ 8 ರಿಂದ ಕಾಡೆತ್ತಿ ಪಂಜುರ್ಲಿ ದೈವದ ನೇಮೋತ್ಸವ, 8.30 ರಿಂದ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 10

ಫೆ.15 : ನೂಜಿಬಾಳ್ತಿಲ ಕಾರಣಿಕ ಕ್ಷೇತ್ರ ಬದಿಬಾಗಿಲು ಶ್ರೀ ಹುಲಿಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ Read More »

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌

ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ತರಾಟೆ ಬೈಗುಳ ಕೇಳಿಸಿಕೊಂಡೇ ಚುನಾವಣೆ ಗೆಲ್ಲಬೇಕೆಂದು ಪಾಠ ಮಂಗಳೂರು : ಬಿಜೆಪಿ ಕೋರ್‌ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಪುತ್ತೂರಿನ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಬಂದ ಶಾ ರಾತ್ರಿ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರ ಹಾಗೂ ಪದಾಧಿಕಾರುಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಿಷ್ಕ್ರಿಯ ಶಾಸಕರನ್ನು ಮತ್ತು ಸಂಸದರನ್ನು ಸರಿಯಾಗಿ ಜಾಡಿಸಿದ್ದಾರೆ. ಒಂದು

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌ Read More »

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ

ಸಿ.ಟಿ. ರವಿ ಟೀಕೆಗಳಿಗೆ ತಿರುಗೇಟು ಬೆಂಗಳೂರು : ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂ ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ನಾನು ಹಿಂದೂ ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ Read More »

ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಆಗಮನ

ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಬೆಂಗಳೂರು : ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಆರಂಭವಾಗಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸುವ ಸಲುವಾಗಿ ಭಾನುವಾರ ರಾತ್ರಿಯೇ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ನರೇಂದ್ರ ಮೋದಿ ಭಾನುವಾರ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ರಾತ್ರಿ 7.40ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಜಭವನದಲ್ಲಿ ಪ್ರಧಾನಿ ಭಾನುವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ ಅವರು ಯಲಹಂಕಕ್ಕೆ ತೆರಳಲಿದ್ದು, ಬೆಳಗ್ಗೆ 9.30ಕ್ಕೆ ಏರೋ ಇಂಡಿಯಾ-2023 ಉದ್ಘಾಟಿಸಲಿದ್ದಾರೆ.ಏರೋ ಇಂಡಿಯಾ 2023ರ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ

ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಆಗಮನ Read More »

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ

ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ತಪ್ಪು ಮಾಹಿತಿ ಬಂದಿದೆ. ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ ಎಂದರು.ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ Read More »

ಅಡಿಕೆ ರೋಗಗಳ ಪರಿಹಾರಕ್ಕೆ ಬಜೆಟಿನಲ್ಲಿ ಅನುದಾನ | ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಭರವಸೆ

ಪುತ್ತೂರು: ಅಡಕೆಗೆ ಕೆಲವೊಂದು ಸವಾಲುಗಳಿದ್ದು, ಹಳದಿ ರೋಗ, ಎಲೆಚುಕ್ಕಿ ರೋಗ ಬಂದಿರುವುದು ಸಮಸ್ಯೆಯಾಗಿದೆ ಕಾಡಿದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಬಾರಿಯ ಬಜೆಟಿನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಭರವಸೆ ನೀಡಿದರು. ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಸ್ತುತ 6 ಲಕ್ಷ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿದ್ದು, ಸಮಸ್ಯೆಗಳು ಅಷ್ಟೇ ಇದೆ. ಇದನ್ನು ಹೋಗಲಾಡಿಸಲು ಸರಕಾರ

ಅಡಿಕೆ ರೋಗಗಳ ಪರಿಹಾರಕ್ಕೆ ಬಜೆಟಿನಲ್ಲಿ ಅನುದಾನ | ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಭರವಸೆ Read More »

error: Content is protected !!
Scroll to Top