ಸದಸ್ಯರ ಗಮನಕ್ಕೆ ಬಾರದೆ ಬ್ಯಾನರ್ ತೆಗೆಸಿದ ವಿಚಾರ : ಬೆಟ್ಟಂಪಾಡಿ ಗ್ರಾಪಂ ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಸದಸ್ಯರು | ರದ್ದುಗೊಂಡ ಗ್ರಾಮಸಭೆ
ಪುತ್ತೂರು : ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಕಿರುವ ಬ್ಯಾನರ್ ಗಳನ್ನು ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಪಿಡಿಒ ತೆಗೆಸಿದ ವಿಚಾರ ಮುಂದಿಟ್ಟುಕೊಂಡು ಸದಸ್ಯರು ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಘಟನೆ ಶುಕ್ರವಾರ ನಡೆದ ಬೆಟ್ಟಂಪಾಡಿ ಗ್ರಾಪಂನಲ್ಲಿ ನಡೆದಿದೆ. ಪಂಚಾಯಿತಿ ಅಧ್ಯಕ್ಷೆ ಪವಿತ್ರ ಡಿ. ಅಧ್ಯಕ್ಷತೆ ಸಭೆ ಆರಂಭಗೊಂಡು ಪಿಡಿಒ ಸೌಮ್ಯ ಲೆಕ್ಕಪತ್ರ ವರದಿ ಮಂಡಿಸಲು ಆರಂಭಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಸದಸ್ಯೆ ಉಮಾವತಿ, ಬ್ಯಾನರ್ ತೆಗೆಯಲು ಪಂಚಾಯಿತಿಗೆ ಸುತ್ತೋಲೆ ಬಂದಿದೆಯೇ ಎಂದು ಪ್ರಶ್ನಿಸಿ ಬಂದಿದ್ದರೆ ಅದನ್ನು ಸಭೆಯ […]









