ಪುತ್ತೂರು ಒಡೆಯನಿಗೆ ಮಹಾಶಿವರಾತ್ರಿ ಮಹೋತ್ಸವ | ಮುಂಜಾನೆಯಿಂದಲೇ ನಡೆಯುತ್ತಿರುವ ವಿವಿಧ ವೈದಿಕ ಕಾರ್ಯಕ್ರಮಗಳು | ಕಿಕ್ಕಿರಿದು ತುಂಬಿದ ಭಕ್ತ ಸಮೂಹ

ಪುತ್ತೂರು : ಮಹಾಶಿವರಾತ್ರಿ ದಿನವಾದ ಶನಿವಾರ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆಯಿಂದಲೇ ನಡೆಯುತ್ತಿದೆ. ಮಹಾಶಿವರಾತ್ರಿಯಂದು ಶಿವನಿಗೆ ವಿಶಿಷ್ಠ ಸೇವೆಯಾದ 108 ಸುತ್ತು ಪ್ರದಕ್ಷಿಣೆ ಮಾಡಲು ಭಕ್ತಾದಿಗಳು ಮುಂಜಾನೆಯಿಂದಲೇ ತೊಡಗಿಸಿಕೊಂಡಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಕಿಕ್ಕಿರಿದು ಭಕ್ತ ಸಮೂಹ ಸೇರಿದ್ದು, ಏಕಬಿಲ್ಷಂ ಸೇವೆಯಲ್ಲಿ ಪಾಲ್ಗೊಂಡರು. ಶಿವರಾತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6.45 ರಿಂದ ಭಜನೆ, ಕುಣಿತ ಭಜನೆ. 8ರಿಂದ ಮಹಾರುದ್ರಯಾಗ, 9 ರಿಂದ ಶತರುದ್ರಾಭಿಷೇಕ, ಏಕ […]

ಪುತ್ತೂರು ಒಡೆಯನಿಗೆ ಮಹಾಶಿವರಾತ್ರಿ ಮಹೋತ್ಸವ | ಮುಂಜಾನೆಯಿಂದಲೇ ನಡೆಯುತ್ತಿರುವ ವಿವಿಧ ವೈದಿಕ ಕಾರ್ಯಕ್ರಮಗಳು | ಕಿಕ್ಕಿರಿದು ತುಂಬಿದ ಭಕ್ತ ಸಮೂಹ Read More »

ರಾಜ್ಯ ಬಜೆಟಿನಲ್ಲಿ ಅಡಿಕೆ ಕೃಷಿಕರಿಗೆ ನೆರವು: ಕ್ಯಾಂಪ್ಕೋ ಸ್ವಾಗತ

ಪುತ್ತೂರು: ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗದ ಸಂಶೋಧನೆಗಾಗಿ ತೀರ್ಥಹಳ್ಳಿಯ ತೋಟಗಾರಿಕಾ ಇಲಾಖೆಯ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ (1ARDF) 10 ಕೋಟಿ ರೂ. ಅನುದಾನ ಘೋಷಿಸಿರುವ ರಾಜ್ಯ ಸರಕಾರದ ಕ್ರಮವನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಸ್ವಾಗತಿಸಿದ್ದಾರೆ. ರಾಜ್ಯ ಬಜೆಟಿನಲ್ಲಿ ಅಡಿಕೆಗೆ ಅನುದಾನ ಘೋಷಿಸಿರುವ ರಾಜ್ಯ ಸರಕಾರದ ಕ್ರಮ, ಸರಕಾರಕ್ಕೆ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹಾಗೂ ಬದ್ಧತೆಯನ್ನು ತೋರಿಸುತ್ತದೆ ಎಂದಿರುವ ಅವರು, ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ

ರಾಜ್ಯ ಬಜೆಟಿನಲ್ಲಿ ಅಡಿಕೆ ಕೃಷಿಕರಿಗೆ ನೆರವು: ಕ್ಯಾಂಪ್ಕೋ ಸ್ವಾಗತ Read More »

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್‍ ಉದ್ಘಾಟನೆ

ಪುತ್ತೂರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15 ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೋವಿಡ್ ನಂತರ ಎಲ್ಲಾ ಕ್ಷೆತ್ರದಲ್ಲಿಬದಲಾವಣೆ ಆಗುತ್ತಿದೆ. ಮನೆ ಬಾಗಿಲಿಗೆ ಡಾಕ್ಟರ್, ಮನೆ ಬಾಗಿಲಿಗೆ ಆಸ್ಪತ್ರೆ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಕಾರ್ಯಗಳನ್ನು ಸರಕಾರ ಮಾಡುತ್ತಿದೆ. ನಮ್ಮ ಕ್ಲಿನಿಕ್ ಮೂಲಕ ದಿನದ 8 ಗಂಟೆ ನಿಮ್ಮ ಅರೋಗ್ಯ ತಪಾಸಣೆ ಮಾಡುವ ಕೆಲಸ ನಡೆಯಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್‍ ಉದ್ಘಾಟನೆ Read More »

ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

ಪುತ್ತೂರು : ಸಂತಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಸಂತಾನ್ ಡಿ’ಸೋಜ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್‍ ಪದವಿ ನೀಡಿ ಗೌರವಿಸಿದೆ. ಅವರು ಮಂಡಿಸಿದ “ಎ ಸಿಸ್ಟಮ್ಯಾಟಿಕ್ ಆಂಡ್ ಮೆಕ್ಯಾನಿಸ್ಟಿಕ್ ಸ್ಟಡಿ ಅಫ್ ಸಮ್ ಆಫ್ ದ ಬಯೋ ಆಕ್ಟಿವ್ ಮೊಲಿಕ್ಯೂಲ್ಸ್ ಬೈಇಲೆಕ್ಟ್ರೊ ಕೆಮಿಕಲ್ ಸೆನ್ಸರ್ಸ್ : ಎ ವೋಲ್ಟಾ ಮೆಟ್ರಿಕ್ ಸ್ಟಡಿ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಅವರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಡಾ.

ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ Read More »

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ  ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡಸೇವೆ) ಫೆ.19 ಭಾನುವಾರ ನಡೆಯಲಿದೆ. ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳ ನಡೆದ ಬಳಿಕ ಸಂಜೆ 7 ಗಂಟೆಗೆ ಶ್ರೀ ದೈವದ ಒತ್ತೆಕೋಲ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ನಾಳೆ  (ಫೆ.19) : ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ವಾರ್ಷಿಕ ಕ್ರೀಡಾಕೂಟ ಫೆ.19 ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಉದ್ಘಾಟಿಸಲಿದ್ದು, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ತಾಲೂಕು ಪಂಚಾಯಿತಿ

ನಾಳೆ  (ಫೆ.19) : ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ Read More »

ಏಕನಾಥ ಶಿಂಧೆ ಬಣಕ್ಕೆ ಬಿಲ್ಲು ಬಾಣ

ಉದ್ಧವ್‌ ಠಾಕ್ರೆಗೆ ತೀವ್ರ ಮುಖಭಂಗ ಹೊಸದಿಲ್ಲಿ : ಶಿವಸೇನೆಯ ಚುನಾವಣಾ ಚಿಹ್ನೆಯಾದ ಬಿಲ್ಲು ಮತ್ತು ಬಾಣೌನ್ನು ಚುನಾವಣಾ ಆಯೋಗ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ನೀಡುವುದರೊಂದಿಗೆ ಪಕ್ಷದ ಸ್ಥಾಪಕ ಬಾಳಾ ಠಾಕ್ರೆಯವರ ಪುತ್ರ, ಮಾಜಿ ಮುಖ್ಯಮಂತ್ರಿ ಉದ್ಧವ ಟಾಕ್ರೆ ಬಣ ತೀವ್ರ ಮುಖಭಂಗ ಅನುಭವಿಸಿದೆ. ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದೆ.ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲುಬಾಣವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ

ಏಕನಾಥ ಶಿಂಧೆ ಬಣಕ್ಕೆ ಬಿಲ್ಲು ಬಾಣ Read More »

ಪುಣ್ಯಕೋಟಿ ಗೋವು, ಹುಲಿ ಮತ್ತು ಮುಗ್ಧತೆ

ನಾವು ಪ್ರಾಕ್ಟಿಕಲ್ ಆಗಿ ಬದುಕಲು ಕಲಿಯಬೇಕು ಬಾಲ್ಯದಲ್ಲಿ ನಮ್ಮೆಲ್ಲರ ಭಾವಕೋಶದಲ್ಲಿ ಭದ್ರವಾಗಿ ಕುಳಿತಿರುವ ಕಥೆ ಎಂದರೆ ಅದು ಪುಣ್ಯಕೋಟಿಯ ಕಥೆ. ಅದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹೇಳಿದ, ನುಡಿದಂತೆ ನಡೆದ ಪುಣ್ಯಕೋಟಿಯ ಗೋವಿನ ಮುಗ್ಧತೆಯು ನನಗೆ ಇಂದಿಗೂ ವಿಸ್ಮಯವೇ ಆಗಿದೆ.ನಾನು ಅದರ ಕಥೆಯನ್ನು ಮತ್ತೆ ನಿಮಗೆ ಹೇಳಲು ಹೋಗುವುದಿಲ್ಲ. ಯಾಕೆಂದರೆ ಆ ಕಥೆಯು ಪ್ರತಿಯೊಬ್ಬರಿಗೂ ನೆನಪಿದೆ.

ಪುಣ್ಯಕೋಟಿ ಗೋವು, ಹುಲಿ ಮತ್ತು ಮುಗ್ಧತೆ Read More »

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು : ಕಬಕ ಬ್ಯಾಂಕ್ ಒಂದಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಿಟ್ಲ ಮೂಲದ ಆರೋಪಿಯೊಬ್ಬನ್ನು ಪುತ್ತೂರು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಟ್ಲ ಬೋಳಂತಿಮೊಗರು ನಿವಾಸಿ ಅಬ್ದುಲ್ ಗಫೂರ್ ಎಂಬರ ಪುತ್ರ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ. 2017 ರಲ್ಲಿ ಮೊಹಮ್ಮದ್ ಅನ್ವರ್ ಕಬಕದ ಬ್ಯಾಂಕ್ ಒಂದರಲ್ಲಿ ಸಾಲಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಆರೋಪಿ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಅರೋಪಿ ವಿರುದ್ಧ ವಾರಂಟ್ ಮಾಡಿತ್ತು. ಇದೀಗ ಪೊಲೀಸರು ಶುಕ್ರವಾರ ಆರೋಪಿಯನ್ನು ವಿಟ್ಲದಲ್ಲಿ

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಯಕ್ಷರಂಗದ ಬೀಷ್ಮ ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಪ್ರಧಾನಿ ಮೋದಿಯಿಂದ ಸಂತಾಪ

ಪುತ್ತೂರು: ತೆಂಕು ತಿಟ್ಟು ಯಕ್ಷರಂಗದ ಬೀಷ್ಮ ಎಂದೆ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತ(85) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ನಾರಾಯಣ ಅವರ ನಿಧನ ಸಂಬಂಧ ಟ್ವೀಟ್‌ ಮಾಡಿರುವ ಮೋದಿ, ಶ್ರೀ ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಭಾಗವತಿಕೆಗಾಗಿ ತಮ್ಮ ಜೀವನವನ್ನು ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಶೈಲಿಯಿಂದ ಮೆಚ್ಚುಗೆ ಪಡೆದರು. ಅವರ ಕೃತಿಗಳನ್ನು ಮುಂದಿನ ಪೀಳಿಗೆಯವರು ಮೆಚ್ಚುತ್ತಾರೆ. ಅವರ ನಿಧನದಿಂದ ನೋವಾಗಿದೆ ಅವರ ಕುಟುಂಬಕ್ಕೆ

ಯಕ್ಷರಂಗದ ಬೀಷ್ಮ ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಪ್ರಧಾನಿ ಮೋದಿಯಿಂದ ಸಂತಾಪ Read More »

error: Content is protected !!
Scroll to Top