ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು

ಹಾಸನ: ಬಂಕ್ ನಿಂದ ಪೆಟ್ರೋಲ್ ಹಾಕಿಸಿಕೊಂಡು ಹೊರಬರುತ್ತಿದ್ದ ಬೈಕ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರನ್ನೊಬ್ಬ ಸಾವನ್ನಪ್ಪಿದ್ದಾನೆ. ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಅಪಘಾತ ಸಂಭವಿಸಿದ್ದು ಚಿಕ್ಕಗಂಡಸಿ ಗ್ರಾಮದ ರಮೇಶ್(45) ಎಂಬುವರು ಮೃತಪಟ್ಟಿದ್ದಾರೆ. ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತ ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತನ ದೇಹವನ್ನು […]

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು Read More »

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ

ಕಾಂಗ್ರೆಸ್‌ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ. ಚುನಾವಣಾ

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ Read More »

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ

ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್‌ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಂಪುಟ ಸಮಿತಿ ಅನುಮೋದನೆಗೆ ಕಳಿಸಲಾಗಿದೆ. ಇದು ದೇಶಿಯವಾಗಿ ತಯಾರಾಗಲಿರುವ ಹೊವಿಟ್ಜರ್‌ಗಳ ಮೊದಲ ಖರೀದಿಯಾಗಿರಲಿದ್ದು, 50 ಕೀ.ಮೀ ವ್ಯಾಪ್ತಿವರೆಗಿನ ಟಾರ್ಗೆಟ್‌ಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಗನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ಸೇನಾಪಡೆಗಳು

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ Read More »

ಮಾ.4 : ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿ ವಾರ್ಷಿಕೋತ್ಸವ, ಮಹಾಸಭೆ

ಪುತ್ತೂರು : ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಮಹಾಸಭೆ ಮಾ. 4 ಶನಿವಾರ ಅಪರಾಹ್ನ 3.30ಕ್ಕೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಅಳದಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಭಾರತಿ ಎಂ.ಎಲ್. ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ವಿಶ್ವಕರ್ಮ ಮಹಿಳಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾ.4 : ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿ ವಾರ್ಷಿಕೋತ್ಸವ, ಮಹಾಸಭೆ Read More »

ಮಾ.5 : ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯುವ ವೈದ್ಯಕೀಯ ಶಿಬಿರಕ್ಕೆ ವರ್ಷ ಸಂಭ್ರಮ | ವಿಶಿಷ್ಟ ಶೈಲಿಯಲ್ಲಿ ಆರೋಗ್ಯ ಮೇಳ

ಪುತ್ತೂರು : ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ವಿವಿಧ ಸಂಘ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರಕ್ಕೆ ವರ್ಷ ಸಂಭ್ರಮ. ಈ ಹಿನ್ನಲೆಯಲ್ಲಿ ಆರೋಗ್ಯ ಮೇಳವನ್ನು ಮಾ.5 ಭಾನುವಾರ ವಿಶಿಷ್ಟ ಶೈಲಿಯಲ್ಲಿ ನಡೆಯಲಿದೆ. ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಢಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಹಕಾರದೊಂದಿಗೆ ವೈದ್ಯಕೀಯ ಶಿಬಿರ ನಡೆಯಲಿದ್ದು, 12 ಪ್ರತ್ಯೇಕ ವಿಭಾಗಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ವೈದ್ಯಕೀಯ ತಪಾಸಣೆ, ಮಕ್ಕಳ ಚಿಕಿತ್ಸೆ

ಮಾ.5 : ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯುವ ವೈದ್ಯಕೀಯ ಶಿಬಿರಕ್ಕೆ ವರ್ಷ ಸಂಭ್ರಮ | ವಿಶಿಷ್ಟ ಶೈಲಿಯಲ್ಲಿ ಆರೋಗ್ಯ ಮೇಳ Read More »

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ

ಪುತ್ತೂರು : ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ ತಗುಲಿದ ಘಟನೆ ಬುಧವಾರ ಸಂಜೆ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮರಗಳು ಸುಟ್ಟು ಹೋಗಿದ್ದು, ಹೆಚ್ಚಿನ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ Read More »

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ

ಪುತ್ತೂರು: ಸರಕಾರಿ ಆಸ್ಪತ್ರೆಗೆ ಹೋದರೆ ಹೊಸ ರೋಗಗಳೇ ಬರಬಹುದು ಎನ್ನುವುದು ಸಾಮಾನ್ಯವಾಗಿ ಜನರು ಹೇಳುತ್ತಿದ್ದ ಮಾತಾಗಿತ್ತು. ಆದರೆ ಪುತ್ತೂರು ಸರಕಾರಿ ಆಸ್ಪತ್ರೆ ಈ ಮಾತಿಗೆ ಅಪವಾದವಾಗಿ ನಿಂತಿದೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಶಿಫಾರಸ್ಸಿನ ಮೇಲೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯ 60 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದೆ. ಈ ಅನುದಾನದಲ್ಲಿ ಡಯಾಲಿಸೀಸ್ ಘಟಕವನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ್ದು, ಇಂದು ಸುವ್ಯವಸ್ಥಿತವಾಗಿ ಎದ್ದು ನಿಂತಿದೆ. ಇದೀಗ ಯಾವುದೇ

ಮೇಲ್ದರ್ಜೆಗೇರಿದ ಡಯಾಲಿಸೀಸ್ ಘಟಕ | ಖಾಸಗಿ ಆಸ್ಪತ್ರೆಗಳಿಗೇನೂ ಕಮ್ಮಿ ಇಲ್ಲ ಪುತ್ತೂರು ಸರಕಾರಿ ಆಸ್ಪತ್ರೆ | 300 ಬೆಡ್ ಆಸ್ಪತ್ರೆಗೆ ಪೂರ್ವಭಾವಿ ತಯಾರಿ Read More »

ಮಾನಸಿಕ, ದೈಹಿಕ ದೃಢತೆಗೆ ಈಜು, ಕ್ರೀಡೆ ಸಹಕಾರಿ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಾರ್ಥ ವಾರಣಾಸಿ

ಪುತ್ತೂರು: ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಸಾಧಿಸಲು ಈಜು ಅಥವಾ ಇನ್ನಿತರ ಕ್ರೀಡಾ ಚಟುವಟಿಕೆಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಈಜು ತರಬೇತುದಾರ, ಸರ್ಫ್ ಲೈವ್ ಸೇವಿಂಗ್ ಇಂಡಿಯಾದ ನಿರ್ದೇಶಕ ಪಾರ್ಥ ವಾರಣಾಸಿ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನರಗಳ ಪುನಶ್ಚೇತನದ ಮೂಲಕ ಜೀವ ಉಳಿಸುವ ಕೌಶಲ್ಯ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಇವರು

ಮಾನಸಿಕ, ದೈಹಿಕ ದೃಢತೆಗೆ ಈಜು, ಕ್ರೀಡೆ ಸಹಕಾರಿ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಾರ್ಥ ವಾರಣಾಸಿ Read More »

ವಿಜ್ಞಾನ ಆಸಕ್ತಿಯ ಕ್ಷೇತ್ರವಾದಾಗ ಸಾಧನೆಗಳು ಸಾಧ್ಯ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಸತ್ಯಜಿತ್ ಉಪಾಧ್ಯಾಯ

ಪುತ್ತೂರು : ವಿಜ್ಞಾನವನ್ನು ಕೇವಲ ಒಂದು ವಿಷಯವಾಗಿ ನೋಡುವುದರ ಬದಲು ಅದನ್ನು ಆಸಕ್ತಿಯ ಕ್ಷೇತ್ರವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಮಾತ್ರವಲ್ಲದೆ ಸಂಶೋಧನೆ ಕೈಗೊಳ್ಳಬೇಕು. ತನ್ಮೂಲಕ ನಮ್ಮ ದೇಶವನ್ನು ಯಶಸ್ಸಿನ ಕಡೆ ಕೊಂಡೊಯ್ಯುಬೇಕು ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು. ಸಿವಿ ರಾಮನ್‌ರವರ ಅಪೂರ್ವ ಸಾಧನೆಯ

ವಿಜ್ಞಾನ ಆಸಕ್ತಿಯ ಕ್ಷೇತ್ರವಾದಾಗ ಸಾಧನೆಗಳು ಸಾಧ್ಯ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಸತ್ಯಜಿತ್ ಉಪಾಧ್ಯಾಯ Read More »

ಮಾ.7 : ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ 24ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್‌ನ 28ನೇ ವರ್ಷದ ಸಂಸ್ಥಾಪನಾ ದಿನಾಚರಣೆ ದ.ಕ.ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳ, ವಲಯಗಳ ಸಹಕಾರದೊಂದಿಗೆ ಮಾ. 7ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕೆ.ಎಸ್.ಟಿ.ಎ. ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಬಜೆಟ್ ಮಂಡನೆ ಮೊದಲು ನಮ್ಮ ಮೂರು ಬೇಡಿಕೆಯಾದ ಪೆನ್ಶನ್, ಟೈಲರ್ ವೃತ್ತಿಯಲ್ಲಿರುವವರ ಮಕ್ಕಳಿಗೆ ಸ್ಕಾಲರ್ ಶಿಪ್ ಹಾಗೂ ಆರೋಗ್ಯ ವಿಮೆ ನೀಡುವಂತೆ ಸಚಿವ ಕೋಟ

ಮಾ.7 : ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ 24ನೇ ವರ್ಷದ ಸಂಸ್ಥಾಪನಾ ದಿನಾಚರಣೆ Read More »

error: Content is protected !!
Scroll to Top