ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 541ನೇ ನಮ್ಮೂರ ಕೆರೆಗೆ ಭೂಮಿ ಪೂಜೆ | ಶಾಸಕ ಸಂಜೀವ ಮಠಂದೂರು ಅವರಿಂದ ಚಾಲನೆ

ಪುತ್ತೂರು “ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಳಮೊಗ್ರು ಗ್ರಾಪಂ, ಅಜಲಡ್ಕಕೆರೆ ಸಮಿತಿ, ಸಹಯೋಗದಲ್ಲಿ 541ನೇ ನಮ್ಮೂರ ನಮ್ಮ ಕೆರೆ ಹೂಳೆತ್ತುವ, ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮ ಅಜಲಡ್ಕಕೆರೆ ಆವರಣದಲ್ಲಿ ಗುರುವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆರೆ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಬೂಡಿಯರು ವಹಿಸಿದ್ದರು.  ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 541ನೇ ನಮ್ಮೂರ ಕೆರೆಗೆ ಭೂಮಿ ಪೂಜೆ | ಶಾಸಕ ಸಂಜೀವ ಮಠಂದೂರು ಅವರಿಂದ ಚಾಲನೆ Read More »

ಪಿಯು ಪರೀಕ್ಷೆಗೆ ಹಿಜಾಬ್ ಧರಿಸುವಂತಿಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ | ಮಾ. 9ರಿಂದ ನಡೆಯುವ ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ

ಬೆಂಗಳೂರು: ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸುವಂತಿಲ್ಲ. ಪ್ರತಿಯೋರ್ವ ವಿದ್ಯಾರ್ಥಿಯು ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಮಾರ್ಚ್ 9ರಿಂದ ಪಿಯು ಪರೀಕ್ಷೆಗಳು ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹಿಜಾಬ್ ವಿಷಯವು

ಪಿಯು ಪರೀಕ್ಷೆಗೆ ಹಿಜಾಬ್ ಧರಿಸುವಂತಿಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ | ಮಾ. 9ರಿಂದ ನಡೆಯುವ ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ Read More »

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು

ಕೋಹಿಮ: ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಇಂದು ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು. ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಸಲ್ಹೌಟುನೊ ಕ್ರೂಸ್ ಮುನ್ನಡೆಯಲ್ಲಿದ್ದಾರೆ. ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ ಮೂರು

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು Read More »

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ | ಶ್ರೀ ವಿಷ್ಣುಮೂರ್ತಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ

ಪುತ್ತೂರು : ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ೬ನೇ ದಿನವಾದ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ದೇವರ ಪ್ರತಿಷ್ಠೆ ನಡೆಯಿತು. ಬೆಳಗ್ಗೆ ೮ ಗಂಟೆಗೆ ಕ್ಷೇತ್ರದ ತಂತ್ರಿಗಳಾದ ಬ್ರ.ವೇ.ಮೂ. ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ.ಮೂ.ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ೧೦೮ ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ ನಡೆದು ಮಧ್ಯಾಹ್ನ 1.04 ರಿಂದ 3.15 ರ ಮಿಥುನ ಲಗ್ನ ಸುಮುಹೂರ್ತದಲ್ಲಿ

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ | ಶ್ರೀ ವಿಷ್ಣುಮೂರ್ತಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ Read More »

ಆಧ್ಯಾತ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ : ಶ್ರೀ ಗುರುದೇವಾನಂದ ಸ್ವಾಮೀಜಿ | ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಪುತ್ತೂರು : ದೇಹವೆಂಬ ಪಥಕ್ಕೆ ರಥ ಧರ್ಮ. ಸತ್ಯವನ್ನು ಹೇಳುವ ಧರ್ಮ ಚಾಲನಾಶೀಲ. ಮನುಷ್ಯ ಬದುಕಿನ ಸಂವಿಧಾನ ಧರ್ಮ. ಇಲ್ಲಿ ಆತ್ಮ ಸತ್ಯ ಒಂದೇ ಸತ್ಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಐತಿಹಾಸಿಕ ಪಡುಮಲೆ ಕ್ಷೇತ್ರದ ಶ್ರೀ ಕೂವೆ ಶಾಸ್ತರ ದೇವಾಲಯದ ಪ್ರತಿಷ್ಟ ಬ್ರಹ್ಮಕಲಶೋತ್ಸವದ ೫ ನೆ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿದರು. ಅಧ್ಯಾತ್ಮ ಎಂಬುದು ಕೀಲಿ ಕೈ. ಅದರ ಮೂಲಕ ಎಲ್ಲಾ ಸಮಸ್ಯೆಗಳಿಂದ ಬಿಡುಗಡೆ ಪಡೆಯಬಹುದು. ಪಡುಮಲೆಯಲ್ಲಿ ಸುಂದರ ಶ್ರದ್ದಾ

ಆಧ್ಯಾತ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ : ಶ್ರೀ ಗುರುದೇವಾನಂದ ಸ್ವಾಮೀಜಿ | ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ Read More »

ಮಾ. 4: ಮೊಳಹಳ್ಳಿ ಶಿವರಾಯ ರಸ್ತೆಯ ರೈತ ಸೌಧದಲ್ಲಿ “ವಿ ವಾಕ್” ನೂತನ ಫೂಟ್ ವೇರ್ ಶೋರೂಂ ಶುಭಾರಂಭ

ಪುತ್ತೂರು: ನೂತನ ಫೂಟ್ ವೇರ್ ಶೋ ರೂಂ “ವಿ ವಾಕ್” ಮಾ. 4ರ ಶನಿವಾರ ಬೆಳಿಗ್ಗೆ 8ಕ್ಕೆ ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ರೈತ ಸೌಧದಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಶೋ ರೂಂನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ

ಮಾ. 4: ಮೊಳಹಳ್ಳಿ ಶಿವರಾಯ ರಸ್ತೆಯ ರೈತ ಸೌಧದಲ್ಲಿ “ವಿ ವಾಕ್” ನೂತನ ಫೂಟ್ ವೇರ್ ಶೋರೂಂ ಶುಭಾರಂಭ Read More »

ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಾರ್ಯವೈಖರಿಯಿಂದ ಮತ್ತೊಮ್ಮೆ ಬಿಜೆಪಿ ಗೆಲುವು | ಬೂತ್ ವಿಜಯ ಅಭಿಯಾನದಿಂದ ಬಿಜೆಪಿ ಬೂತ್ ಶಕ್ತೀಕರಣ

ಪುತ್ತೂರು: ಮುಂದಿನ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆ ಲೀಡ್‌ಗಿಂತಲೂ ಅಧಿಕ ಮತಗಳಿಂದ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಬಿಜೆಪಿ ಅತ್ಯಂತ ಬಲಿಷ್ಠವಾಗಿದ್ದು, ಯೋಜನೆ ಹಾಗೂ ಯೋಚನೆ ಸಹಿತ ಕಾರ್ಯಬದ್ಧತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಪಕ್ಷದ ಯೋಜನೆ, ಯೋಚನೆಗಳಿಗೆ ಪೂರಕವಾಗಿ ಶಾಸಕ ಸಂಜೀವ ಮಠಂದೂರು ಅವರ ಕಾರ್ಯವೈಖರಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ನಮಗೆ ಗೆಲ್ಲುವುದರಲ್ಲಿ ನಿಶ್ಚಯವಿದೆ ಎಂದ ಅವರು,

ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಾರ್ಯವೈಖರಿಯಿಂದ ಮತ್ತೊಮ್ಮೆ ಬಿಜೆಪಿ ಗೆಲುವು | ಬೂತ್ ವಿಜಯ ಅಭಿಯಾನದಿಂದ ಬಿಜೆಪಿ ಬೂತ್ ಶಕ್ತೀಕರಣ Read More »

ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‍ ಟಿಕೇಟ್ ನೀಡಿ

ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮುದಾಯದ ಕಾಂಗ್ರೆಸ್ ಮುಖಂಡರಿಂದ ಡಿಕೆಶಿಗೆ ಮನವಿ ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಕ್ಕಲಿಗ ಗೌಡ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮಾಜದ ಕಾಂಗ್ರೆಸ್ ಮುಖಂಡರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇದೇ ಸಂದರ್ಭ ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯವನ್ನು ಕಡೆಗಣಿಸಿರುವುದನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಯಿತು. ನಿಯೋಗದ

ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‍ ಟಿಕೇಟ್ ನೀಡಿ Read More »

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ

ಅಂದು ದ್ರಾವಿಡ್ ಮತ್ತು ಲಕ್ಷ್ಮಣ್ ಮೈಯಲ್ಲಿ ಆವೇಶ ಬಂದಿತ್ತು | ಆಸೀಸ್ ವಿರುದ್ಧ ಫಾಲೋ ಆನ್ ಪಡೆದೂ ಭಾರತ ಆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು ಮಂಗಳವಾರ ಮುಗಿದು ಹೋದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ನಡುವಿನ ಟೆಸ್ಟ್ ಪಂದ್ಯ ಎರಡು ಪ್ರಮುಖವಾದ ಕಾರಣಗಳಿಗೆ ದಾಖಲೆಯನ್ನು ಬರೆಯಿತು. ಮೊದಲನೇ ದಾಖಲೆ ಎಂದರೆ ನ್ಯೂಜಿಲೆಂಡ್ ಒಂದು ರನ್ ಅಂತರದಲ್ಲಿ ಆ ಟೆಸ್ಟ್ ಪಂದ್ಯವನ್ನು ಗೆದ್ದದ್ದು. ಇತಿಹಾಸದಲ್ಲಿ ಇದು ಅಂತಹ ಕೇವಲ ಎರಡನೇ ದೃಷ್ಟಾಂತ ಆಗಿತ್ತು!ಅದೇ ರೀತಿ ಫಾಲೋ ಆನ್ ಪಡೆದ ನಂತರವೂ

ಮರೆಯಲು ಸಾಧ್ಯ ಇಲ್ಲ 2001ರ ಆ ಕೊಲ್ಕತ್ತಾ ಟೆಸ್ಟ್ ಪಂದ್ಯ Read More »

ಮಂಗಳೂರು : ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಓರ್ವ ಬಾಲಕಿ ಪಾರು!

ಮಂಗಳೂರು: ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ವಿಜಯಾ(33) ಮತ್ತು ಶೋಭಿತಾ (4) ಮೃತ ದುರ್ದೈವಿಯಾಗಿದ್ದು, ಅದೃಷ್ಟವಶಾತ್ 12 ವರ್ಷದ ಯಜ್ಞಾ ನೇಣು ಕುಣಿಕೆಯಿಂದ ಪಾರಾಗಿದ್ದಾಳೆ. ವಿಜಯಾ ಅವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆ ಉಮೇಶ್ ಎಂಬುವರನ್ನು ಮರು ಮದುವೆಯಾಗಿದ್ದರು. ಆದರೆ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆಸರೆಯಾಗಿದ್ದ ಎರಡನೇ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದರಿಂದ ನೊಂದ ವಿಜಯಾ ತಮ್ಮ

ಮಂಗಳೂರು : ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಓರ್ವ ಬಾಲಕಿ ಪಾರು! Read More »

error: Content is protected !!
Scroll to Top