ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕರಿಂದ ಶಿಲಾನ್ಯಾಸ

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಘನ ತ್ಯಾಜ್ಯ ವಿಲೇವಾರಿ ಘಟಕದ ಶಿಲಾನ್ಯಾಸ ಕಾರ್ಯಕ್ರಮ ಡಿ. 24ರಂದು ದೇವಳದ ಆವರಣದಲ್ಲಿ ನಡೆಯಿತು. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರವನ್ನಾಗಿ ಮಾಡಬೇಕೆಂದು ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದರು. ಆ ಕೆಲಸವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಶುರು ಮಾಡಿ, ಇಂದು ಸತ್ಯಮೇವ ಜಯತೇ ಧ್ಯೇಯವಾಕ್ಯದಂತೆ ಸ್ವಚ್ಛ ಭಾರತ ಅಭಿಯಾನ ಶುರು ಮಾಡಿದ್ದಾರೆ. […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕರಿಂದ ಶಿಲಾನ್ಯಾಸ Read More »

ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಮುದಾಯ ಸಮ್ಮಿಲನ, ಧರ್ಮಜಾಗೃತಿ ಯಶಸ್ವಿ: ಡಾ. ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸುಳ್ಯ ತಾಲೂಕಿನ ಧರ್ಮಜಾಗೃತಿ ಹಾಗೂ ಸಮುದಾಯ ಸಮ್ಮಿಲನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹಗಲಿರುಳು ಸೇವೆ ಸಲ್ಲಿಸಿದ ಎಲ್ಲರಿಗೂ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಶುಭ ಅನುಗ್ರಹ ಸಂದೇಶವನ್ನು ರವಾನಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಅನುಗ್ರಹ ಸಂದೇಶದಲ್ಲಿ, ಮಹಾಸ್ವಾಮೀಜಿ ಅವರು ಸಮುದಾಯದ ಸರ್ವಜನರಲ್ಲಿ ಧರ್ಮಜಾಗೃತಿಯ ಸಂಚಲನವನ್ನುಂಟು ಮಾಡಿರುವುದು ಸೌಭಾಗ್ಯವೇ ಸರಿ. ಈ ಕಾರ್ಯಕ್ರಮ

ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಮುದಾಯ ಸಮ್ಮಿಲನ, ಧರ್ಮಜಾಗೃತಿ ಯಶಸ್ವಿ: ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ಕಂದಕಕ್ಕೆ ಉರುಳಿದ ವ್ಯಾನ್‌ : 8 ಅಯ್ಯಪ್ಪ ಭಕ್ತರ ಸಾವು

ಪತ್ತನಂತಿಟ್ಟ : ಶಬರಿಮಲೆ ಯಾತ್ರಿಕರಿದ್ದ ವ್ಯಾನ್‌ ಆಳವಾದ ಕಂದಕಕ್ಕೆ ಉರುಳಿ ಬಿದ್ದು ಎಂಟು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ತೇಕ್ಕಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಮಿಲಿ-ಕುಂಭಂ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಪೈಪ್‌ಲೈನ್‌ ಬಳಿರಾತ್ರಿ 11 ಗಂಟೆಗೆ ಈ ಆಪಘಾತ ಸಂಭವಿಸಿದೆ. ವಿಪರೀತ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಶಬರಿಮಲೆ ದರ್ಶನ ಮುಗಿಸಿ ವಾಪಸಾಗುತ್ತಿದ್ದ ತೇಣಿ-ಅಂಡಿಪಟ್ಟಿಯ ಭಕ್ತರು ಈ ವ್ಯಾನಿನಲ್ಲಿದ್ದರು. ಗಾಯಾಳುಗಳಲ್ಲಿ ಒಂದು ಮಗುವೂ ಸೇರಿದೆ.

ಕಂದಕಕ್ಕೆ ಉರುಳಿದ ವ್ಯಾನ್‌ : 8 ಅಯ್ಯಪ್ಪ ಭಕ್ತರ ಸಾವು Read More »

ಪುನೀತ್‌ ಕೆರೆಹಳ್ಳಿಗೆ ತಂಡದಿಂದ ಹಲ್ಲೆ

ನಟ ರಾಜ್‌ಕುಮಾರ್‌ ಕುಟುಂಬದ ಬಗ್ಗೆ ಮಾತನಾಡಿದ ಆರೋಪ ಬೆಂಗಳೂರು: ವರನಟ ಡಾ. ರಾಜ್‌ಕುಮಾರ್​ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಪುನೀತ್​ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದ್ದು, ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ತಂಡ ಹೇಳಿ ಬಳಿಕ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಶಿವಕುಮಾರ್ ನಾಯ್ಕ್ ಬಣ ಹಲ್ಲೆ ನಡೆಸಿದೆ

ಪುನೀತ್‌ ಕೆರೆಹಳ್ಳಿಗೆ ತಂಡದಿಂದ ಹಲ್ಲೆ Read More »

ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೊನಾ ಆತಂಕ

ಐದು ಬಾರಿ ಮುಂದೂಡಲ್ಪಟ್ಟ ಕನ್ನಡದ ಜಾತ್ರೆ ಬೆಂಗಳೂರು: ಐದು ಬಾರಿ ಮುಂದೂಡಲ್ಪಟ್ಟಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಈಗ ಮತ್ತೆ ಕೊರೊನ ಕರಿ ನೆರಳು ಆವರಿಸಿಕೊಂಡಿದೆ. ಮುಂಬರುವ ಜ.6 ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿಯೇ ಸಮ್ಮೇಳನ ನಡೆದಿಲ್ಲ. ಇದೀಗ ಮತ್ತೆ ಕೋವಿಡ್‌ನಿಂದಾಗಿ ಭೀತಿ ಎದುರಾಗಿದೆ. ಈ ಬಾರಿ ಕನಿಷ್ಠ ಮೂರು ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಜಿಲ್ಲಾ ಸಂಘಟನಾ

ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೊನಾ ಆತಂಕ Read More »

ಕೊರೊನಾ ಭೀತಿ : ಖಾಸಗಿ ಶಾಲೆಗಳಿಗೆ ರುಪ್ಸಾ ಮಾರ್ಗಸೂಚಿ

ಬೆಂಗಳೂರು : ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ತೀವ್ರವಾಗಿ ಹರಡುತ್ತಿರುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಇಂದಿನಿಂದ ಅನ್ವಯವಾಗುವಂತೆ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ರಜೆ ನೀಡಬೇಕು. ಶಾಲಾ ಆವರಣದಲ್ಲಿ ಎರಡು ದಿನಗಳಿಗೊಮ್ಮೆ ಸ್ಯಾನಿಟೈಸ್ ಮಾಡಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲಾ ಆವರಣದಲ್ಲಿ ಮಕ್ಕಳು ಗುಂಪುಗೂಡುವುದನ್ನು

ಕೊರೊನಾ ಭೀತಿ : ಖಾಸಗಿ ಶಾಲೆಗಳಿಗೆ ರುಪ್ಸಾ ಮಾರ್ಗಸೂಚಿ Read More »

ಎಂಆರ್‌ಪಿಎಲ್‌ ನೇಮಕಾತಿಯಲ್ಲಿ ಸ್ಥಳೀಯರಿಗಿಲ್ಲ ಅವಕಾಶ

ಮುನೀರ್‌ ಕಾಟಿಪಳ್ಳ ಆರೋಪ ಮಂಗಳೂರು : ಎಂಆರ್‌ಪಿಎಲ್ ಸಂಸ್ಥೆ ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಿ 96 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಮೂಲಕ ಸರೋಜಿನಿ ಮಹಿಷಿ ವರದಿಯ ಆಶಯಗಳನ್ನು ಕಂಪನಿ ಮತ್ತೊಮ್ಮೆ ಗಾಳಿಗೆತೂರಿ ಕನ್ನಡಿಗರನ್ನು ದೂರವಿಟ್ಟಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.2019-20 ರಲ್ಲಿ ನಡೆದ 234 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸದೆ ಪೂರ್ಣವಾಗಿ ಹೊರಗಿಟ್ಟ ವೇಳೆ ದೊಡ್ಡ ಹೋರಾಟ ನಡೆದಿತ್ತು. ಆ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್,

ಎಂಆರ್‌ಪಿಎಲ್‌ ನೇಮಕಾತಿಯಲ್ಲಿ ಸ್ಥಳೀಯರಿಗಿಲ್ಲ ಅವಕಾಶ Read More »

ಬಡವರಿಗೆ ಒಂದು ವರ್ಷ ಉಚಿತ ಪಡಿತರ

ಕೇಂದ್ರ ಸರಕಾರದಿಂದ 81.35 ಕೋಟಿ ಜನರಿಗೆ ಹೊಸವರ್ಷದ ಉಡುಗೊರೆ ಹೊಸದಿಲ್ಲಿ : ಬಡವರಿಗೆ ಹೊಸ ವರ್ಷದ ಉಡುಗೊರೆಯಾಗಿ ಕೇಂದ್ರ ಸರ್ಕಾರ ಒಂದು ವರ್ಷ ಉಚಿತ ಪಡಿತರ ನೀಡಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಬಡವರು ತಿಂಗಳಿಗೆ 35 ಕೆಜಿ ಆಹಾರ

ಬಡವರಿಗೆ ಒಂದು ವರ್ಷ ಉಚಿತ ಪಡಿತರ Read More »

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ

ಯಕ್ಷಗಾನ ಸಮ್ಮೇಳನದಲ್ಲಿ ನಡೆಯಲಿ ಕಲಾವಿದರ ಅಕಾಲಿಕ ಸಾವಿನ ಬಗ್ಗೆ ಮಂಥನ ಯಕ್ಷಗಾನ ಕಲಾವಿದರು ವೇದಿಕೆಯಲ್ಲೆ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಾವು ಹರಿಪಾದ ಸೇರಿದರು, ಸ್ವಾಯುಜ್ಯ ಹೊಂದಿದರು, ಯಕ್ಷ ಸರಸ್ವತಿಯ ಪಾದ ಸೇರಿದರು ಎಂದೆಲ್ಲ ಷರಾ ಬರೆದು ಈ ಪ್ರಕರಣಗಳನ್ನು ಮುಗಿಸುತ್ತಿದ್ದೇವೆ.ಯಕ್ಷಗಾನ ಕಲಾವಿದರು ಇಂದು ಒತ್ತಡದಲ್ಲಿ ಇದ್ದಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ. ರಾತ್ರಿ ದೇವೇಂದ್ರ, ಕುಬೇರ ಮೊದಲಾದ ಪಾತ್ರಗಳನ್ನು ಮಾಡುವ ಮಹಾನ್‌ ಕಲಾವಿದರು ಬೇರೆ ವೃತ್ತಿಗಳಿಗೆ ಮತ್ತು ಕಲಾವಿದರಿಗೆ ಹೋಲಿಕೆ ಮಾಡಿದರೆ ಇನ್ನೂ ಬಡತನದಲ್ಲಿ

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ Read More »

ಡಿ. 25: ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ

ಪುತ್ತೂರು: ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸಮುದಾಯದ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ ಡಿ. 25ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಸಂಚಾಲಕ ಎ.ವಿ. ನಾರಾಯಣ ಹೇಳಿದರು. ಪ್ರೆಸ್ ಕ್ಲಬ್ಬಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 25ರಂದು ಇಡೀ ದಿನ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9  ಗಂಟೆಗೆ ಕ್ರೀಡಾಕೂಟವನ್ನು ಊರ ಗೌಡರಾದ ಕೊಡಿಪ್ಪಾಡಿಯ

ಡಿ. 25: ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ Read More »

error: Content is protected !!
Scroll to Top