5 ಮತ್ತು 8ನೇ ತರಗತಿಗೆ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ಅನುಮತಿ

ಮಾ.27 ರಿಂದ ಪರೀಕ್ಷೆ- ಫಲಿತಾಂಶ ಬಹಿರಂಗಪಡಿಸುವಂತಿಲ್ಲ ಬೆಂಗಳೂರು : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ಅನುಮತಿ ನೀಡಿದೆ. 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. 10 ದಿನಗಳ ಬಳಿಕ ಮಾ.27 ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದ್ದು, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳವಂತಿಲ್ಲ ಫಲಿತಾಂಶವನ್ನು ಸಾರ್ವಜನಿಕವಾಗಿ […]

5 ಮತ್ತು 8ನೇ ತರಗತಿಗೆ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ಅನುಮತಿ Read More »

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023

ಪುತ್ತೂರು: ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ನಡೆಸಿದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ಸ್ ಮೈಸೂರು 2023 ಇದರಲ್ಲಿ ಬೆಸ್ಟ್ ಬ್ಯಾಂಕರ್ ಇನ್ ರೂರಲ್ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಟೈಮ್ಸ್ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಆವಾರ್ಡ್ ಲಭಿಸಿದೆ. ಮೈಸೂರು ಸೈಲೆಂಟ್ ಸ್ಪಾದಲ್ಲಿ ಮಾ.14 ರಂದು ನಡೆದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ 2023 ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರನಟಿ ರಾಶಿ ಸಿನ್ಹಾರವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟುರವರಿಗೆ ಬೆಸ್ಟ್ ಬ್ಯಾಂಕ್ ಆವಾರ್ಡ್ ವಿತರಿಸಿದರು. ಸಮೀಕ್ಷೆಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023 Read More »

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ

ಕನ್ನಡದಲ್ಲೇ ಮಾತನಾಡಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವದ ಗಮನ ಸೆಳೆಯಲಿರುವ ರಿಷಬ್‌ ಬೆಂಗಳೂರು : ಕಾಂತಾರದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಪ್ರಚಲಿತ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಮಾತನಾಡಲು ರಿಷಬ್‌ ಶೆಟ್ಟಿ ಆಯ್ಕೆಯಾಗಿದ್ದು,

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ Read More »

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ

ಭಾರತದ ಗೆಳೆಯ ಈ ಮಹಾನ್ ಜ್ಞಾನಿ ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ.ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಆತನು ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ. ಆತನ ಒಂದೊಂದು ಸಂಶೋಧನೆ ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು ಜರ್ಮನ್ ಮೂಲದ ಈ ಯುವ ವಿಜ್ಞಾನಿ ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ Read More »

ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದಲ್ಲಿ ಜೈಲಿಗೆ ಹಾಕಲಿ : ಬಿ.ಕೆ. ಹರಿಪ್ರಸಾದ್ ಸವಾಲು

ಪುತ್ತೂರು: . ಕಾಂಗ್ರೆಸ್ ಭ್ರಷ್ಠಾಚಾರ ನಡೆಸಿದ್ದೇ ಆದರೆ ಜೈಲಿಗೆ ಹಾಕಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ  ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ನ ಕರಾವಳಿಯ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗವುದು. ಬಿಜೆಪಿ ಜನಸಾಮಾನ್ಯರ ಜೀವನ ಸುಧಾರಣೆ ಮಾಡದೇ ಲೂಟಿ ಮಾಡಿರುವುದು ಮಾತ್ರ ಅವರ ಸಾಧನೆಯಾಗಿದೆ. ಬಿಜೆಪಿಯವರು ಸಮಾಜಕ್ಕೆ, ಕುಟುಂಬಕ್ಕೆ ಪೂರಕವಾದ ಯಾವುದೇ

ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದಲ್ಲಿ ಜೈಲಿಗೆ ಹಾಕಲಿ : ಬಿ.ಕೆ. ಹರಿಪ್ರಸಾದ್ ಸವಾಲು Read More »

ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ

ವಾಷಿಂಗ್ಟನ್: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮೆಕ್ ಮಹೊನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕಾ ಹೇಳಿದೆ. ಅಮೆರಿಕದ ಉಭಯ ಪಕ್ಷೀಯ ಸೆನೆಟ್ ನಲ್ಲಿ ಸೆನೆಟರ್ ಜೆಫ್ ಮರ್ಕ್ಲಿ ಈ ನಿರ್ಣಯವನ್ನು ಪರಿಚಯಿಸಿದ್ದು ಸೆನೆಟರ್ ಜಾನ್ ಕಾರ್ನಿನ್ ನಿರ್ಣಯವನ್ನು ಸಹ ಪ್ರಾಯೋಜಿಸಿದರು. ಈ ವೇಳೆ ಇಂಡೋ-ಪೆಸಿಫಿಕ್‌ಗೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಅಂತಹ ಸಮಯದಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರ ದೇಶಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವುದು ನಿರ್ಣಾಯಕವಾಗಿದೆ

ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ Read More »

ವಿಧಾನಸಭೆ ಚುನಾವಣೆಗೆ ದಿನಗಣನೆ: ಹೆಚ್ಚುತ್ತಿರುವ ಬಿಟ್ಟಿ ಉಡುಗೊರೆಗಳ ಸುರಿಮಳೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿ ಮಾಡುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಉಡುಗೊರೆಗಳ ಸುರಿಮಳೆಗೈಯುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಇಸಿ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುವ ಸಾಧ್ಯತೆಯಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ಸೀರೆ, ಬೆಳ್ಳಿ, ಬಂಗಾರದ ವಸ್ತುಗಳು, ಪ್ರೆಷರ್ ಕುಕ್ಕರ್, ಮಿಕ್ಸರ್ ಗ್ರೈಂಡರ್, ಟೆಲಿವಿಷನ್ ಸೆಟ್, ಮೊಬೈಲ್‌ಗಳನ್ನು ಹಂಚುತ್ತಿದ್ದಾರೆ. ಹಾವೇರಿ ಜಿಲ್ಲೆಯ

ವಿಧಾನಸಭೆ ಚುನಾವಣೆಗೆ ದಿನಗಣನೆ: ಹೆಚ್ಚುತ್ತಿರುವ ಬಿಟ್ಟಿ ಉಡುಗೊರೆಗಳ ಸುರಿಮಳೆ Read More »

ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ | ಲಯನ್ಸ್ ಸೇವಾ ಮಂದಿರದಲ್ಲಿ ಪ್ರದರ್ಶನ

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು, ರೋಹಿಣಿ ಹೊಲಿಗೆ ಆರ್ಟ್ & ಕ್ರಾಫ್ಟ್ ತರಬೇತಿ ಕೇಂದ್ರದ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ ಲಯನ್ಸ್ ಸೇವಾ ಮಂದಿರದಲ್ಲಿ ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಶುಭಹಾರೈಸಿದರು. ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಶಾಂತಿ ಹೆಗಡೆ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ ಕೆ., ಜಿಲ್ಲಾ ಸಂಪನ್ಮೂಲ

ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ | ಲಯನ್ಸ್ ಸೇವಾ ಮಂದಿರದಲ್ಲಿ ಪ್ರದರ್ಶನ Read More »

ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಡ್ರೋನ್‌ ಹೊಡೆದುರುಳಿಸಿದ ರಷ್ಯಾದ ಯುದ್ಧವಿಮಾನ

ಕೀವ್: ರಷ್ಯಾದ ಫೈಟರ್ ಜೆಟ್ ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಕಣ್ಗಾವಲು ಡ್ರೋನ್‌ನ ಪ್ರೊಪೆಲ್ಲರ್ ಅನ್ನು ಹೊಡೆದುರುಳಿಸಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕಾ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಷ್ಯಾ ತನ್ನ ಯುದ್ಧವಿಮಾನ ಅಮೆರಿಕಾದ ಡ್ರೋನ್ ಅನ್ನು ಹೊಡೆದುರುಳಿಸಿಲ್ಲ. ಬದಲಾಗಿ, ಡ್ರೋನ್ ಅನ್ನು ತಡೆಯಲು ಯತ್ನಿಸಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಡ್ರೋನ್ ಸಮುದ್ರಕ್ಕೆ ಬಿದ್ದಿದೆ ಎಂದು ರಷ್ಯಾ ಹೇಳುತ್ತಿದೆ. ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಇದನ್ನು ಅಂತಾರಾಷ್ಟ್ರೀಯ ಕಾನೂನಿನ

ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಡ್ರೋನ್‌ ಹೊಡೆದುರುಳಿಸಿದ ರಷ್ಯಾದ ಯುದ್ಧವಿಮಾನ Read More »

ಕರಾವಳಿಗೆ ತಂಪೆರೆದ ಮಳೆ | ಪುಣಚ, ಕಬಕ, ನೇರಳಕಟ್ಟೆಯಲ್ಲಿ ಸುರಿದ ಮಳೆ

ಪುತ್ತೂರು: ಪುತ್ತೂರು ಸೇರಿದಂತೆ ಕರಾವಳಿಯ ಹಲವೆಡೆಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದ್ದು, ಕಾದು ಕೆಂಪಗಾಗಿದ್ದ ಕರಾವಳಿಗೆ ಮಳೆ ತುಸು ತಂಪೆರೆದಿದೆ. ಪುಣಚ, ಕಬಕ, ನೇರಳಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಮಳೆಯಾಗಿದೆ. ಬುಧವಾರ ಮಧ್ಯಾಹ್ನ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ ಮಾರ್ದನಿಯೂ ಕೇಳಿಸುತ್ತಿತ್ತು. ಮಳೆಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದ್ದು, ಮುಂದಿನ 5 ದಿನಗಳ ಕಾಲ ಮಳೆ ಬರಲಿದೆ ಎಂದು ವರದಿ ಮಾಡಿತ್ತು.

ಕರಾವಳಿಗೆ ತಂಪೆರೆದ ಮಳೆ | ಪುಣಚ, ಕಬಕ, ನೇರಳಕಟ್ಟೆಯಲ್ಲಿ ಸುರಿದ ಮಳೆ Read More »

error: Content is protected !!
Scroll to Top