ಪುತ್ತೂರು ಕಂಬಳದಲ್ಲಿ ನಟಿ ಸಾನಿಯಾ ಅಯ್ಯರ್‍ಗೆ ಅವಮಾನ: ಅಸಹ್ಯವಾಗಿ ವರ್ತಿಸಿದ ಪುಂಡರಿಗೆ ಧರ್ಮದೇಟು

ಪುತ್ತೂರು: ಅವಳಿ ವೀರರ ಹೆಸರಿನಲ್ಲಿ ನಡೆಯುತ್ತಿರುವ ಕೋಟಿ – ಚೆನ್ನಯ ಜೋಡುಕರೆ ಕಂಬಳದಲ್ಲಿ ಮಹಿಳಾ ಅತಿಥಿಯೋರ್ವರನ್ನು ಅವಮಾನಿಸಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಿ. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಂಬಳ, ಈ ವರ್ಷ ಎನ್. ಚಂದ್ರಹಾಸ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದಿತ್ತು. ಆದರೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ. ಮಹಿಳಾ ಪರ ಹೋರಾಟದ ಹಿನ್ನೆಲೆಯಿಂದಲೇ ಬಂದ ಶಾಸಕಿ ಶಕುಂತಳಾ ಶೆಟ್ಟಿ ಅವರು ಮುಂಚೂಣಿಯಲ್ಲಿದ್ದ ಕಾರ್ಯಕ್ರಮದಲ್ಲೇ ಮಹಿಳಾ ಅತಿಥಿಯಾಗಿದ್ದ […]

ಪುತ್ತೂರು ಕಂಬಳದಲ್ಲಿ ನಟಿ ಸಾನಿಯಾ ಅಯ್ಯರ್‍ಗೆ ಅವಮಾನ: ಅಸಹ್ಯವಾಗಿ ವರ್ತಿಸಿದ ಪುಂಡರಿಗೆ ಧರ್ಮದೇಟು Read More »

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ಗೆ ರಸ್ತೆ ಅಪಘಾತ

ಮಂಗಳೂರು: ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೊಳಗಾದ ಘಟನೆ ಮಂಗಳೂರು ಪಂಪ್‌ವೆಲ್ ಬಳಿ ಜ. 30ರಂದು ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತಕ್ಕೊಳಗಾಗಿದೆ. ಚಿಕಿತ್ಸೆಗಾಗಿ ಎನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಪರೇಷನ್‌ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ಗೆ ರಸ್ತೆ ಅಪಘಾತ Read More »

ಪರ್ಪುಂಜ ಸೌಗಂಧಿಕದಲ್ಲಿ ಅಡಿಕೆ ಪತ್ರಿಕೆ 35ನೇ ವರ್ಚಾಚರಣೆ, ಪುಸ್ತಕ ಬಿಡುಗಡೆ

ಪುತ್ತೂರು : ಅಡಿಕೆ ಪತ್ರಿಕೆಯ 35 ನೇ ವರ್ಷಾಚರಣೆ ಹಾಗೂ ಪತ್ರಿಕೆ ಸಂಪಾದಕ ಅಡಿಕೆ ಚೊಗರು ; ಹೊಸ ನಿರೀಕ್ಷೆಗಳ ಚಿಗುರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಪರ್ಪುಂಜದ ಸೌಗಂಧಿಕದಲ್ಲಿ ನಡೆಯಿತು. ಕೇಂದ್ರ ಸರಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಅಡಕೆ ಬೆಳೆಯುವ 11 ಜಿಲ್ಲೆಗಳಲ್ಲಿ ಅಡಿಕೆ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು. ಹಿರಿಯ ಸಾಹಿತಿ, ಕೃಷಿ ಲೇಖಕ ಡಾ.ನರೇಂದ್ರ ರೈ

ಪರ್ಪುಂಜ ಸೌಗಂಧಿಕದಲ್ಲಿ ಅಡಿಕೆ ಪತ್ರಿಕೆ 35ನೇ ವರ್ಚಾಚರಣೆ, ಪುಸ್ತಕ ಬಿಡುಗಡೆ Read More »

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು : ಪುತ್ತೂರಿನ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.೪ ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ವಿತರಣೆ ಮಂಗಳವಾರ ನಡೆಯಲಿದೆ. ನಗರದ ದರ್ಬೆಯಿಂದ ಬೊಳುವಾರು ತನಕ ನಡೆದ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದ್ದು, ಗ್ರಾಮಸ್ಥರು ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಫೆ.೧ : ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ Read More »

ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ, ಫಲಕ ಅನಾವರಣ

ಪುತ್ತೂರು (ವಳಾಲು) : ನೂತನ ಸಾಂದ್ರ ಶೀತಲೀಕರನಣ ಘಟಕ ಉದ್ಘಾಟನೆ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮ ವಳಾಲುನಲ್ಲಿ ಸೋಮವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಘಟಕ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಗೆ ಕೇಂದ್ರ ಸರಕಾರದ ಹಲವು ಯೋಜನೆಗಳು ಜನರಿಗೆ ತಲುಪುವ ಕೆಲಸ ಆಗಿದ್ದು, ಕೃಷಿಯನ್ನು ನಂಬಿ ಬದುಕಿದವರಿಗೆ ಕೃಷಿ ಪೂರಕ ಗೊಬ್ಬರ ಅಗತ್ಯವಾಗಿದ್ದು, ಜತೆಗೆ ದನ ಸಾಕುವವರಿಗೆ ಸಂಘದಿಂದ ಸಾಲ ಸೌಲಭ್ಯ ನೀಡುವ ಕೆಲಸ ಆಗಬೇಕು. ಸ್ಥಳೀಯವಾಗಿ  ಹಾಲಿನ ಉತ್ಪನ್ನಗಳು ಜನರಿಗೆ ಸಿಗುವ ಕೆಲಸ ಆಗಬೇಕು ಎಂದರು.

ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ, ಫಲಕ ಅನಾವರಣ Read More »

ಡಾಕ್ಟರೇಟ್ ಪದವಿ ಪಡೆದ ಕುದ್ಮಾರಿನ ಕುವರಿ ಡಾ|| ಶರ್ಮಿಳಾ ನಟರಾಜ್

ಪುತ್ತೂರು : ಶ್ರೀಮತಿ ಶರ್ಮಿಳಾ ನಟರಾಜ್ ಅವರು ಡಾll ಆರ್. ಬಾಲಸುಬ್ರಮಣಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಯೂಸ್ ಆಂಡ್ ಇಂಪ್ಯಾಕ್ಟ್ ಆಫ್ ಆಕ್ಸೆಸ್ ಟು ಎನ್-ಲಿಸ್ಟ್ ಇ-ರಿಸೋರ್ಸಸ್ ಬೈ ದಿ ಫ್ಯಾಕಲ್ಟಿ ಮೆಂಬರ್ಸ್ ಆಂಡ್ ರಿಸರ್ಚ್ ಸ್ಕೊಲರ್ಸ್ ಆಫ್ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಇನ್  ಬೆಂಗಳೂರು ರೀಜಿಯನ್ ” ಎಂಬ ಪ್ರಬಂಧಕ್ಕೆ ಭಾರತೀಯಾರ್ ಯೂನಿವರ್ಸಿಟಿಯು ಡಾಕ್ಟರೇಟ್ ಪದವಿ ನೀಡಿದೆ.  ಬಾಲ್ಯದಿಂದಲೇ  ನೃತ್ಯ, ಸಂಗೀತ ಹಾಗೂ ಸಾಹಿತ್ಯದಲ್ಲಿ ಪರಿಣತಿ ಹೊಂದಿರುವ ಇವರಿಗೆ ಬೆಳ್ಳಾರೆ ಜೆ.ಸಿ ಸಂಸ್ಥೆಯ ವತಿಯಿಂದ” ಉತ್ತಮ

ಡಾಕ್ಟರೇಟ್ ಪದವಿ ಪಡೆದ ಕುದ್ಮಾರಿನ ಕುವರಿ ಡಾ|| ಶರ್ಮಿಳಾ ನಟರಾಜ್ Read More »

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು : ಜಿಡೆಕಲ್ಲು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಎಲ್ಲಾ ಅನುದಾನಗಳನ್ನು ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಂಬ್ರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದುಗಪ್ಪ ನಾಯ್ಕ್, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ನಳಿನಾಕ್ಷಿ ಎ. ಎಸ್, ಸಾಂಸ್ಕೃತಿಕ ಸಂಘ ಸಂಚಾಲಕಿ

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ Read More »

ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಲು ಸರಕಾರದ ಮೇಲೆ ಒತ್ತಡ

ಪುತ್ತೂರು : ಪುತ್ತೂರಿನಲ್ಲಿ ಈಗಾಗಲೇ ನಿಗದಿಯಾದ ಬನ್ನೂರಿನ ಜಮೀನಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಪ್ರಕ್ರಿಯೆ ಆರಂಭಿಸುವಂತೆ  ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಾಥಾ ಸೋಮವಾರ ದರ್ಬೆ ವೃತ್ತದಿಂದ ಬೊಳುವಾರು ತನಕ ನಡೆಯಿತು. ಜನ ಬೆಂಬಲಕ್ಕಾಗಿ ನಮ್ಮ ನಡಿಗೆ ಘೋಷ ವಾಕ್ಯದೊಂದಿಹೆ ನಡೆದ ಜಾಥಾವನ್ನುದ್ದೇಶಿಸಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಸಾಮಾನ್ಯ ಜನರಿಗೂ ಉಪಯೋಗವಾಗುವ ನಿಟ್ಟಿನಲ್ಲಿ ಸರಕಾರಿ

ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಲು ಸರಕಾರದ ಮೇಲೆ ಒತ್ತಡ Read More »

ಉಚಿತ ಕಣ್ಣಿನ ತಪಾಸಣಾ ಶಿಬಿರ

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಪುತ್ತೂರು ನಗರಸಭೆ ಹಾಗೂ ಸರಕಾರಿ ಆಸ್ಪತ್ರೆ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಸೋಮವಾರ ನಗರಸಭೆ ಕಟ್ಟಡದಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೋವಿಡ್ ಬಳಿಕ ಜನತೆ ತಮ್ಮ ಆರೋಗ್ಯದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ದುಡ್ಡಿದ್ದರೂ ಆರೋಗ್ಯ ಕಾಪಾಡಿಕೊಳ್ಳದ ಸ್ಥಿತಿಯಲ್ಲಿದ್ದು, ಆಹಾರ ಪದ್ಧತಿಯನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ . ಈ ನಿಟ್ಟಿನಲ್ಲಿ ನಗರಸಭೆ

ಉಚಿತ ಕಣ್ಣಿನ ತಪಾಸಣಾ ಶಿಬಿರ Read More »

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು, ಇದರ ನಡುವೆ ನ್ಯೂಸ್ ಪುತ್ತೂರು ನಡೆಸಿದ ಸಮೀಕ್ಷೆಯಲ್ಲಿ ಗೆಲುವಿನ ಅಂತರ ಇನ್ನೂ ಹೆಚ್ಚಳಗೊಳ್ಳುವ ಸುಳಿವು ಲಭಿಸಿದೆ. ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲೂ ಕಣಕ್ಕಿಳಿಯುವುದು ಸಾಮಾನ್ಯ ಸಂಗತಿ. ಇದು ಪುತ್ತೂರಿನ ರಾಜಕೀಯ ವಿದ್ಯಮಾನದಲ್ಲೂ ನಡೆಯಲಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಮತದಾರನೂ ಶಾಸಕ ಸಂಜೀವ ಮಠಂದೂರು ಪರವಾಗಿಯೇ ಬ್ಯಾಟಿಂಗ್ ಮಾಡಿದ್ದು, ಬಿಜೆಪಿಗೆ ಗೆಲುವಿನ ಸರಣಿ ಮುಂದುವರಿಯುವ ಸೂಚನೆ ನಿಚ್ಚಳವಾದಂತಾಗಿದೆ. ಅಭಿವೃದ್ದಿ ಕೆಲಸ,

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ Read More »

error: Content is protected !!
Scroll to Top